
೧. ಯಾವಾಗ ಸ್ವತಃ ವಿಷಯದ ಹಾಗೂ ಸ್ವಾರ್ಥದ ವಿಷಯದ ಯಾವುದೇ ವಿಚಾರವು ತನ್ನ ಮನಸ್ಸಿನೊಳಗೆ ಸುಳಿಯುವುದಿಲ್ಲವೋ ಆಗಲೇ ನಮ್ಮ ಕೈಯಿಂದ ಸರ್ವೋತ್ಕ್ರಷ್ಟ ಕಾರ್ಯವು ನಡೆಯುತ್ತದೆ. ಆಗಲೇ ನಮಗೆ ಎಲ್ಲಕ್ಕಿಂತ ಹೆಚ್ಚು ಪ್ರಭಾವ ಬೀಳುತ್ತದೆ. ಪೂರ್ಣವಾಗಿ ನಿರಪೇಕ್ಷರಾಗಿರಿ, ಫಲದ ಬಗ್ಗೆ ಪೂರ್ಣ ಉದಾಸೀನರಾಗಿರಿ ಆಗಲೇ ನೀವು ಯಥಾರ್ಥ ಕಾರ್ಯ ಮಾಡಬಲ್ಲಿರಿ.
೨. ಅಶುದ್ಧ ವಿಚಾರ ಅಥವಾ ಅಶುದ್ಧ ಕಲ್ಪನೆಯು ಅಶುದ್ಧ ಕಾರ್ಯದಷ್ಟೇ ಕೆಟ್ಟದ್ದಾಗಿದೆ. ನಮ್ಮ ಇಚ್ಛೆಯ ಮೇಲೆ ಪ್ರಭುತ್ವವಿದ್ದರೆ ಅದರಿಂದ ಯಾವಾಗಲೂ ಉತ್ತಮವಾದ ಫಲದ ಪ್ರಾಪ್ತಿಯಾಗಬಹುದು.
೩. ತಮ್ಮ ಒಳ್ಳೆಯ ಹಾಗೂ ಕೆಟ್ಟ ಎರಡೂ ಕರ್ಮಗಳನ್ನು ಮರೆತುಬಿಡಿ ಹಾಗೂ ಅದನ್ನು ಪುನಃ ಯಾವತ್ತು ಯೋಚಿಸಬೇಡಿ. ಏನಾಯಿತೋ ಅದು ಆಗಿದೆ ಅದರ ಕಡೆಗೆ ಪುನಃ ನೋಡಬೇಡಿ. ಹುಚ್ಚುನಂಬಿಕೆಗಳನ್ನು ತ್ಯಜಿಸಿ. ಸಾಕ್ಷಾತ್ ಮರಣವು ನಿಮ್ಮ ಎದುರು ಇದ್ದರೂ ದೌರ್ಬಲ್ಯಕ್ಕೆ ಜಾಗವನ್ನು ನೀಡಬೇಡಿರಿ. ಪಶ್ಚಾತ್ತಾಪ ಪಡುತ್ತಾ ಇರಬೇಡಿ; ನಡೆದು ಹೋದ ಕಾರ್ಯದ ಬಗೆಗೆ ಯೋಚಿಸುತ್ತಾ ಇರಬೇಡಿರಿ. ‘ಮುಕ್ತರಾಗಿರಿ’.
(ಸೌಜನ್ಯ : ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….