‘ಎನ್.ಸಿ.ಇ.ಆರ್.ಟಿ. ಯು ‘ಆರ್ಯರ ಆಕ್ರಮಣದ ಸಿದ್ಧಾಂತ ಕಪೋಲಕಲ್ಪಿತ’, ಎಂದು ಹೇಳಿರುವ ಪ್ರಕರಣ

‘೧೨ ನೇ ತರಗತಿಯ ಪಠ್ಯಪುಸ್ತಕದಿಂದ ಇಷ್ಟು ವರ್ಷ ಕಲಿಸಿರುವ ‘ಆರ್ಯರ ಆಕ್ರಮಣದ ಸಿದ್ಧಾಂತ’ವು ಕಾಲ್ಪನಿಕ, ಎಂದು ‘ರಾಷ್ಟ್ರೀಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಪರಿಷತ್ತು’ (ಎನ್.ಸಿ.ಇ.ಆರ್.ಟಿ.) ನಮೂದಿಸಲಿದೆ, ಇದು ಆನಂದದ ವಾರ್ತೆಯಾಗಿದೆ ! ಅದನ್ನು ಸ್ವಾಗತಿಸಬೇಕು. ಈ ವಿಷಯದಲ್ಲಿ ವಿಚಾರವಿನಿಮಯ ಮಾಡುವ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.
೧. ‘ಆರ್ಯರ ಆಕ್ರಮಣ’ದ ಸಿದ್ಧಾಂತದ ಉಗಮ
ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಆರ್ಯರ ಆಕ್ರಮಣದ ಬಗ್ಗೆ ಭಾರತದಲ್ಲಿ ಯಾವತ್ತೂ ಉಲ್ಲೇಖವಾಗಿರಲಿಲ್ಲ. ಇಷ್ಟೇ ಅಲ್ಲದೇ ಭಾರತದ ಪ್ರಾಚೀನ ಸಾಹಿತ್ಯ ಮತ್ತು ಪರಂಪರೆಯಲ್ಲಿ ಪ್ರಾಚೀನ ಕಾಲದಲ್ಲಿ ಪಶ್ಚಿಮದಿಂದ ಭಾರತದ ಮೇಲೆ ದೊಡ್ಡ ಆಕ್ರಮಣವಾಗಿರುವ ಯಾವುದೇ ಉಲ್ಲೇಖ ಕಾಣುವುದಿಲ್ಲ. ೧೬೧೪ ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ಅಧಿಕಾರಿ ಸರ್ ಥಾಮಸ್ ರೋ ಇವನು ಜಹಾಂಗೀರ ಬಾದಶಾಹನ ದರ್ಬಾರಿಗೆ ಬಂದನು ಮತ್ತು ಅವನು ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ಪಡೆದನು. ಹೀಗೆ ವ್ಯಾಪಾರದ ನಿಮಿತ್ತ ಅನೇಕ ಬ್ರಿಟಿಷರು ಭಾರತಕ್ಕೆ ಬರಲು ಆರಂಭಿಸಿದರು. ಆಗ ವಿವಿಧ ವಿಷಯಗಳ ಜ್ಞಾನವನ್ನು ಪಡೆಯುವ ತೀವ್ರ ಇಚ್ಛೆ ಮತ್ತು ಕುತೂಹಲವಿರುವ ಯುರೋಪಿಯನ್ ಜನರು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ ಇತ್ಯಾದಿ ವಿವಿಧ ಕ್ಷೇತ್ರಗಳಿಗೆ ದೊಡ್ಡ ಪ್ರಮಾಣದಲ್ಲಿ ಬಂದರು. ಹಾಗೆಯೆ ಕೆಲವು ಜನರು ಈಸ್ಟ್ ಇಂಡಿಯಾ ಕಂಪನಿಯ ಜೊತೆಗೆ ಭಾರತಕ್ಕೆ ಬಂದರು. ಯಾವಾಗ ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅಭ್ಯಾಸ ಮಾಡಲು ಆರಂಭಿಸಿದರೋ, ಆಗ ಭಾರತೀಯ ಸಂಸ್ಕೃತಿಯ ಪ್ರಾಚೀನತೆ ಮತ್ತು ವೈಭವದ ದರ್ಶನದಿಂದ ಅವರು ಆಶ್ಚರ್ಯಚಕಿತರಾದರು.
ಒಂದು ವಿಶೇಷ ವಿಷಯ ಅವರ ಗಮನಕ್ಕೆ ಬಂದಿತ್ತು. ಅದೇನೆಂದರೆ, ಭಾರತೀಯ ಭಾಷೆ, ಅದರಲ್ಲಿಯೂ ವಿಶೇಷವಾಗಿ ಸಂಸ್ಕೃತಭಾಷೆಯ ಯುರೋಪ್‌ನಲ್ಲಿನ ವಿವಿಧ ಭಾಷೆಗಳೊಂದಿಗಿರುವ ವಿಲಕ್ಷಣ ಹೋಲಿಕೆ. ಈ ಹೋಲಿಕೆ ಕೇವಲ ಮೇಲ್ನೋಟದ್ದಾಗಿರಲಿಲ್ಲ, ಅದು ಎಷ್ಟು ಮೂಲಭೂತವಾಗಿತ್ತೆಂದರೆ, ದಕ್ಷಿಣಕ್ಕೆ ಶ್ರೀಲಂಕೆಯಿಂದ ಯುರೋಪ್‌ನ ಉತ್ತರಕ್ಕಿರುವ ಐರ್ಲೇಂಡ್‌ನ ವರೆಗೆ ಮಾತನಾಡುವ ಅನೇಕ ಭಾಷೆಗಳಿಗೆ ಪರಸ್ಪರ ಸಂಬಂಧವಿದೆ, ಎಂಬುದು ಅವರ ಗಮನಕ್ಕೆ ಬಂದಿತು. ಭಾಷೆಗಳ ಈ ಗುಂಪಿಗೆ ಅವರು ‘ಇಂಡೋ-ಯುರೋಪಿಯನ್ ಭಾಷೆ’ ಎಂದು ಹೆಸರಿಟ್ಟರು. ಈ ವಿಷಯದಲ್ಲಿ ಪ್ರಾ. ಮ್ಯಾಕ್ಸ್‌ಮುಲ್ಲರ್ ಕೂಡ ಹೇಳಿದ ಅಂಶವೆಂದರೆ, ಯುರೋಪ್‌ನಲ್ಲಿನ ಭಾಷೆಗಳಲ್ಲಿ ಬಹಳಷ್ಟು ಸಮಾನತೆಯಿದೆ, ಇದು ನಮಗೆ ಅರಿವಾಗುತ್ತಿತ್ತು, ಆದರೆ ಆ ಸಾಮ್ಯ ಹೇಗೆ ಮತ್ತು ಎಲ್ಲಿಂದ ಬಂದಿತು ಎಂಬುದು ನಮಗೆ ತಿಳಿಯುತ್ತಿರಲಿಲ್ಲ. ಯಾವಾಗ ನಾವು ಭಾರತಕ್ಕೆ ಬಂದು ಸಂಸ್ಕೃತದ ಅಭ್ಯಾಸ ಮಾಡಿದೆವೋ, ಆಗ ನಮ್ಮ ಗಮನಕ್ಕೆ ಬಂದಿತೇನೆಂದರೆ, ಯುರೋಪಿಯನ್ ಭಾಷೆಯಲ್ಲಿನ ಸಾಮ್ಯವು ಅವುಗಳಿಗೆ ಸಂಸ್ಕೃತದೊಂದಿಗಿರುವ ಸಂಬಂಧದಿಂದ ನಿರ್ಮಾಣವಾಗಿದೆ. ಇದರ ಅರ್ಥ, ಯುರೋಪ್‌ನಲ್ಲಿನ ಭಾಷೆಗಳು ಪ್ರಾಚೀನ ಸಂಸ್ಕೃತದಿಂದಲೇ ಬಂದಿವೆ, ಎಂಬುದನ್ನು ಅವನು ಮನಸ್ಸಿನಲ್ಲಿ ಒಪ್ಪಿಕೊಂಡನು.
ಎಲ್ಲಿಯವರೆಗೆ ಭಾರತದಲ್ಲಿನ ಅವರ ಮಹತ್ವಾಕಾಂಕ್ಷೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿತ್ತೋ, ಅಲ್ಲಿಯವರೆಗೆ ಈ ಸಾಕ್ಷಾತ್ಕಾರದಿಂದ ಅವರಿಗೆ ಅಡಚಣೆ ಇರಲಿಲ್ಲ; ಆದರೆ ಹೇಗೆ ಅವರ ರಾಜಕೀಯ ಮಹತ್ವಾಕಾಂಕ್ಷೆ ಜಾಗೃತವಾಗಲು ಆರಂಭವಾಯಿತೋ ಮತ್ತು ನಾವು ಭಾರತದಲ್ಲಿ ದೀರ್ಘಕಾಲದ ವರೆಗೆ ಆಡಳಿತ ನಡೆಸಬಹುದೆಂಬುದು ಅವರಿಗೆ ತಿಳಿಯಿತೋ, ಆಗ ಅವರಿಗೆ ಈ ವಿಷಯ ಅಡಚಣೆಯನ್ನುಂಟು ಮಾಡಲು ಪ್ರಾರಂಭಿಸಿತು. ‘ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಉಗಮ ನಮ್ಮ ಗುಲಾಮರ ಭಾಷೆಯಿಂದ ಆಗಿದೆ’, ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಇದರ ಜೊತೆಗೆ ಅವರಿಗೆ ಇನ್ನೊಂದು ವಿಷಯ ತಿಳಿದಿತ್ತು, ಅದೇನೆಂದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಈ ಖಂಡಪ್ರಾಯ ದೇಶವನ್ನು ನಾವು ಕೇವಲ ಸೇನಾಬಲದಿಂದ ಹೆಚ್ಚು ಕಾಲ ಆಳಲು ಸಾಧ್ಯವಿಲ್ಲ. ಈ ಎರಡೂ ಅಡಚಣೆಗಳನ್ನು ಜಯಿಸಲು ಈ ಚಾಣಾಕ್ಷ ಆಂಗ್ಲರು ನಿರ್ಧರಿಸಿದ್ದೇನೆಂದರೆ, ಭಾರತೀಯರ ಆತ್ಮಸನ್ಮಾನ ಮತ್ತು ಆತ್ಮವಿಶ್ವಾಸವನ್ನು ನಾಶಗೊಳಿಸುವುದು, ಅಂದರೆ ಅವರು ಕುರಿಗಳ ಹಾಗೆ ನಮ್ಮ ಹಿಂದೆ ಬರುವಂತಾಗಬೇಕು ಮತ್ತು ‘ಆಂಗ್ಲರ ಆಡಳಿತವು ನಮಗೆ ಈಶ್ವರನ ವರವಾಗಿದೆ’, ಎಂದು ತಿಳಿದು ಗುಲಾಮಗಿರಿಯಲ್ಲಿಯೇ ಆನಂದ ಅನಿಸಬೇಕು. ಇದನ್ನು ಸಾಧಿಸಲು ಅವರು ಮಾಡಿದ ಒಂದು ಯುಕ್ತಿಯೆಂದರೆ, ‘ಆರ್ಯರ ಆಕ್ರಮಣದ ಸಿದ್ಧಾಂತ’,
೨. ‘ಆರ್ಯರ ಆಕ್ರಮಣದ ಪ್ರಮುಖ ಸೂತ್ರದಾರ ಮ್ಯಾಕ್ಸ್‌ಮುಲ್ಲರ್ ಮತ್ತು ಅವನು ಮಾಡಿದ ಷಡ್ಯಂತ್ರ !
ಈ ಸಿದ್ಧಾಂತ ಏನು ಹೇಳುತ್ತದೆಯೆಂದರೆ, ರಷ್ಯಾದ ದಕ್ಷಿಣಕ್ಕಿರುವ ‘ಯುರೇಶಿಯನ್ ಸ್ಟೆಪ್ಸ್’ ಈ ಗುಡ್ಡಗಾಡು ಮತ್ತು ಹುಲ್ಲುಗಾವಲು ಪ್ರದೇಶದಿಂದ ಹಳದಿ ಕೂದಲಿನ, ನೀಲಿ ಕಣ್ಣುಗಳ ಬಿಳಿಬಣ್ಣದ ಆರ್ಯರು ಮಧ್ಯ ಏಶಿಯಾ, ಇರಾನಿನ ಮಾರ್ಗದಿಂದ ಭಾರತಕ್ಕೆ ಬಂದರು ಮತ್ತು ಅವರು ಇಲ್ಲಿ ಸಂಸ್ಕೃತ ಭಾಷೆ ಮತ್ತು ವೈದಿಕ ಸಂಸ್ಕೃತಿಯನ್ನು ನಿರ್ಮಾಣ ಮಾಡಿದರು. ಇದರ ಅರ್ಥ ಏನೆಂದರೆ, ‘ಋಗ್ವೇದ’ ಇದು ಜಗತ್ತಿನ ಎಲ್ಲಕ್ಕಿಂತ ಪ್ರಾಚೀನ ಗ್ರಂಥವಾಗಿದ್ದರೂ ಮತ್ತು ಸಂಸ್ಕೃತವು ಶ್ರೇಷ್ಠ ಭಾಷೆಯಾಗಿದ್ದರೂ, ಅವುಗಳನ್ನು ಭಾರತೀಯರು ನಿರ್ಮಾಣ ಮಾಡಿರದೆ ಪಶ್ಚಿಮದಿಂದ ಬಂದಿರುವ ಬಿಳಿಯರು ಮಾಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ನೌಕರನಾಗಿದ್ದ ಮ್ಯಾಕ್ಸ್‌ಮುಲ್ಲರ್ ಎಂಬ ಜರ್ಮನ್ ವಿದ್ವಾಂಸನು ಈ ಸಿದ್ಧಾಂತದ ಒಬ್ಬ ಪ್ರಮುಖ ಸೂತ್ರಧಾರನಾಗಿದ್ದನು. ಅವನು ‘ಆರ್ಯರ ಈ ಆಕ್ರಮಣವು ಕ್ರಿ.ಪೂ. ೧೫೦೦ ರಲ್ಲಿ ನಡೆಯಿತು, ಆದರೆ ‘ಋಗ್ವೇದ’ ಕ್ರಿ.ಪೂ. ೧೨೦೦ ರಲ್ಲಿ ರಚನೆಯಾಯಿತು’, ಎಂದು ನಿರ್ಧರಿಸಿದನು. ಗೌತಮ ಬುದ್ಧನ ಕಾಲ ಕ್ರಿ.ಪೂ. ೫೫೦ ಎಂದು ತಿಳಿದಿತ್ತು. ಅದರಿಂದ ಕ್ರಿ.ಪೂ. ೧೨೦೦ ರಿಂದ ೫೫೦ ಈ ಕಾಲ ಇತರ ವೇದ, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು, ಸೂತ್ರಗಳು ಈ ವೈದಿಕ ವಾಙ್ಮಯಗಳಿಗಾಗಿ ಸಾಕಾಗುತ್ತಿರಲಿಲ್ಲ. ಇತರ ಪ್ರಾಚೀನ ಭಾರತೀಯ ವಾಙ್ಮಯ, ಪರಂಪರೆ ಮತ್ತು ನಮ್ಮ ಸಂಸ್ಕೃತಿಯಲ್ಲಿ ಅದನ್ನು ಇತಿಹಾಸವೆಂದು ಪರಿಗಣಿಸಲಾಗುತ್ತದೆಯೋ, ಆ ‘ರಾಮಾಯಣ’ ಮತ್ತು ‘ಮಹಾಭಾರತ’ ಇವುಗಳಿಗಾಗಿ ಸಮಯವೇ ಉಳಿಯಲಿಲ್ಲ. ಆದ್ದರಿಂದ ‘ಈ ಎಲ್ಲ ವೈಭವಶಾಲಿ ಪರಂಪರೆಗಳು ಕಟ್ಟುಕಥೆ’ (ಮೈಥೋಲಾಜಿ) ಎಂದು ನಿರ್ಣಯಿಸಲಾಯಿತು.

ಮುಂದೆ ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ಅಲೆಕ್ಸ್ಝಾಂಡರ್‌ನ ಆಕ್ರಮಣದ ಸಮಯದಲ್ಲಿ ಯಾವಾಗ ನಿಮ್ಮ ಸಂಬಂಧ ಗ್ರೀಕ್ ಜನರೊಂದಿಗೆ ಬಂದಿತೋ, ಆಗ ವಿಜ್ಞಾನ, ತತ್ತ್ವಜ್ಞಾನ, ಸಾಹಿತ್ಯ, ಕಲೆ ಇವುಗಳೊಂದಿಗೆ ನಿಮ್ಮ ಪರಿಚಯವಾಯಿತು, ಎಂದು ಹೇಳಲಾಯಿತು.’ ಇದರ ಅರ್ಥ ನಿಮ್ಮಲ್ಲಿ ಏನೆಲ್ಲ ಒಳ್ಳೆಯ ವಿಷಯ ಇದೆಯೊ, ಅದು ನಿಮಗೆ ಪಶ್ಚಿಮದಿಂದ ಬಂದಿರುವ ಬಿಳಿಯರ ಕೊಡುಗೆಯೇ ಆಗಿದೆ. ಇದೇ ನಿಮ್ಮ ಪರಂಪರೆ, ಇತಿಹಾಸವಾಗಿದೆ. ಈಗ ಪಶ್ಚಿಮದಿಂದ ಬಿಳಿಯ ಬ್ರಿಟಿಷರು ಬಂದಿದ್ದಾರೆ. ಅವರ ಆಡಳಿತ ಮತ್ತು ವರ್ಚಸ್ವವನ್ನು ಸ್ವೀಕರಿಸುವುದರಲ್ಲಿಯೇ ನಿಮ್ಮ ಹಿತವಿದೆ. ಭಾರತದ ಸಂಸ್ಕೃತಿ ಮತ್ತು ಆತ್ಮಸನ್ಮಾನದ ಮೇಲಾದ ದೊಡ್ಡ ಆಘಾತ ಇದಾಗಿತ್ತು, ಇದರಿಂದ ಭಾರತೀಯರ ಮನಸ್ಸಿನಲ್ಲಿ ಕೀಳರಿಮೆಯ ಭಾವನೆ ಮತ್ತು ಬ್ರಿಟಿಷರ ಸೇವೆ ಮಾಡುವುದರಲ್ಲಿಯೆ ಧನ್ಯತೆಯೆನಿಸುವ ಮಾನಸಿಕತೆ ತಯಾರವಾಯಿತು.
೩. ಆರ್ಯರ ಆಕ್ರಮಣದ ಸಿದ್ದಾಂತ ಕಾಲ್ಪನಿಕವಾಗಿದೆ ಎಂದು ಸ್ವತಃ ಮ್ಯಾಕ್ಸ್‌ಮುಲ್ಲರ್‌ನಿಂದ ಒಪ್ಪಿಗೆ
ಮಹತ್ವದ ವಿಷಯವೆಂದರೆ, ಭಾರತದ ಇತಿಹಾಸವನ್ನೇ ಬುಡಮೇಲು ಮಾಡುವ ಈ ಸಿದ್ಧಾಂತವು ಸಂಪೂರ್ಣ ಕಾಲ್ಪನಿಕ ವಾಗಿದ್ದು ಅದನ್ನು ಪ್ರಸ್ತುತಪಡಿಸುವಾಗ ಅದಕ್ಕೆ ಯಾವುದೇ ಸಾಕ್ಷಿಯನ್ನು ನೀಡಿರಲಿಲ್ಲ ಮತ್ತು ಇಂದಿನ ವರೆಗೆ ಈ ಸಿದ್ಧಾಂತದ ಸಮರ್ಥಕರಿಗೆ ಒಂದೇ ಒಂದು ಸಾಕ್ಷಿಯನ್ನೂ ನೀಡಲು ಸಾಧ್ಯವಾಗಿಲ್ಲ, ಅದೇ ರೀತಿ ‘ಆರ್ಯರ ಈ ಆಕ್ರಮಣದ ಕಾಲಘಟ್ಟ ಕ್ರಿ.ಪೂ. ೧೫೦೦ ಎಂಬುದು ಸಂಪೂರ್ಣ ಕಾಲ್ಪನಿಕ’, ಎಂದು ಸ್ವತಃ ಮ್ಯಾಕ್ಸಮುಲ್ಲರ್ ಒಪ್ಪಿಕೊಂಡಿದ್ದಾನೆ. ಅವನು ಹೇಳುತ್ತಾನೆ, ‘ವೈದಿಕ ವಾಙ್ಮಯದೊಂದಿಗೆ ನಾನು ಜೋಡಿಸಿರುವ ದಿನಾಂಕಗಳು ಸಂಪೂರ್ಣ ಕಾಲ್ಪನಿಕವಾಗಿದ್ದವು, ಎಂದು ನಾನು ಪದೇ ಪದೇ ಹೇಳಿದ್ದೇನೆ. ವೈದಿಕ ಮಂತ್ರಗಳನ್ನು ಕ್ರಿ.ಪೂ. ೧೦೦೦, ೧೫೦೦, ೨೦೦೦ ಅಥವಾ ೩೦೦೦ ದಲ್ಲಿ ರಚಿಸಲಾಗಿದೆ ಎಂಬುದನ್ನು ಜಗತ್ತಿನ ಯಾವುದೇ ಶಕ್ತಿ ನಿರ್ಧರಿಸಲು ಸಾಧ್ಯವಿಲ್ಲ.’
ಆದರೂ ಆರ್ಯರ ಆಕ್ರಮಣದ ಸುಳ್ಳು ಸಿದ್ಧಾಂತ ಮತ್ತು ಅದರ ಕ್ರಿ.ಪೂ. ೧೫೦೦ ಈ ಕಾಲ್ಪನಿಕ ಕಾಲಖಂಡವನ್ನು ‘ಅಧಿಕೃತ ಇತಿಹಾಸ’ ಎಂದೇ ಇಂದಿಗೂ ಕಲಿಸಲಾಗುತ್ತಿದೆ, ಇಂತಹ ದೌರ್ಭಾಗ್ಯ ಇನ್ನೇನಿರಬಹುದು ?
೪. ‘ಭಾರತೀಯ ಸಮಾಜ ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯನ್ನು ಮಾಡಬಾರದು’ ಎಂದು ಆರ್ಯ-ಅನಾರ್ಯ ವಾಗ್ವಾದ ಹುಟ್ಟುಹಾಕಿದ ಬ್ರಿಟಿಷರು
ಯಾವಾಗ ಈ ಸಿದ್ಧಾಂತವನ್ನು ಮಂಡಿಸಲಾಯಿತೋ, ಆಗ ಸಿಂಧೂ-ಸರಸ್ವತೀ ಸಂಸ್ಕೃತಿಯ, ಅಂದರೆ ಹಡಪ್ಪಾ ಸಂಸ್ಕೃತಿಯ ಶೋಧ ಆಗಿರಲಿಲ್ಲ. ೧೯೨೨ ರಲ್ಲಿ ಮೊಹೆಂಜೋದಾರೋ ಮತ್ತು ಹಡಪ್ಪಾದಲ್ಲಿ ಈ ಪ್ರಾಚೀನ ಸಂಸ್ಕೃತಿಯ ಶೋಧವಾಯಿತು. ಅನಂತರ ಈ ಸಂಸ್ಕೃತಿಯ ಶೋಧವನ್ನು ಸುಮಾರು ೨ ಸಾವಿರದ ೫೦೦ ಸ್ಥಳಗಳಲ್ಲಿ ಮಾಡಲಾಯಿತು ಮತ್ತು ‘ಈ ಸಂಸ್ಕೃತಿ ೨೦ ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ, ಸುಮಾರು ೧೦ ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಜಗತ್ತಿನ ಒಂದು ಪ್ರಾಚೀನ ಸಂಸ್ಕೃತಿಯಾಗಿದೆ’, ಎಂದು ಸಿದ್ಧವಾಗಿದೆ. ಈ ಸಂಸ್ಕೃತಿಯು ಸುಮಾರು ಕ್ರಿ.ಪೂ. ೧೫೦೦ ರಲ್ಲಿ ನಾಶ ಆಗಿರಬಹುದು, ಎಂಬುದು ಗಮನಕ್ಕೆ ಬಂದಿತು. ಈ ಕಾಲ ಮ್ಯಾಕ್ಸ್‌ಮುಲ್ಲರ್ ಹೇಳಿದ ಆರ್ಯರ ಆಕ್ರಮಣದ ಕಾಲ್ಪನಿಕ ಕಾಲಖಂಡದೊಂದಿಗೆ ಹೋಲುತ್ತದೆ. ಆದ್ದರಿಂದ ‘ಇದು ಆರ್ಯರ ಆಕ್ರಮಣದ ಅಂತಿಮ ಸಾಕ್ಷಿಯಾಗಿದೆಯೆಂದು ಹೇಳಿ ಅವರೇ ಈ ಪ್ರಾಚೀನ ಸಂಸ್ಕೃತಿಯನ್ನು ನಾಶಗೊಳಿಸಿದರು’, ಎಂದು ಹೇಳಲಾಯಿತು. ಇದನ್ನು ಭಾರತದಲ್ಲಿ ಹೆಚ್ಚೆಚ್ಚು ಬಿರುಕನ್ನುಂಟು ಮಾಡಲು ಉಪಯೋಗಿಸಲಾಯಿತು. ‘ಸಿಂಧೂ-ಸರಸ್ವತೀ ಸಂಸ್ಕೃತಿಯು ದ್ರಾವಿಡ ಸಂಸ್ಕೃತಿಯಾಗಿತ್ತು, ಅದನ್ನು ಆಕ್ರಮಕ ಆರ್ಯರು ನಾಶ ಮಾಡಿದರು ಮತ್ತು ದ್ರಾವಿಡ ವಂಶದ ಜನರನ್ನು ದಕ್ಷಿಣದ ಕಡೆಗೆ ತಳ್ಳಲಾಯಿತು’, ಎಂದು ಹೇಳಲಾಯಿತು. ಅದೇ ರೀತಿ ಆಕ್ರಮಕ ಆರ್ಯರು, ಅಂದರೆ ಉತ್ತರ ಭಾರತೀಯ ಮೇಲ್ಜಾತಿಯ ಜನರು, ದಕ್ಷಿಣ ಭಾರತೀಯರು ಮತ್ತು ಬಹುಜನ ಸಮಾಜದಲ್ಲಿನ ಜನರು ಅಂದರೆ ಭಾರತದ ಮೂಲನಿವಾಸಿಗಳು ಎನ್ನುವ ಸಿದ್ಧಾಂತವನ್ನು ಮಂಡಿಸಲಾಯಿತು.
ಆದುದರಿಂದ ‘ಭಾರತದಲ್ಲಿ ಉತ್ತರದ ವಿರುದ್ಧ ದಕ್ಷಿಣ, ಸಂಸ್ಕೃತದ ವಿರುದ್ಧ ತಮಿಳು, ಹಿಂದಿಯ ವಿರುದ್ಧ ತಮಿಳು, ಮೇಲ್ಜಾತಿಯ ವಿರುದ್ಧ ಬಹುಜನ ಸಮಾಜ ಹೀಗೆ ಅನೇಕ ಸಂಘರ್ಷಗಳನ್ನು ನಿರ್ಮಾಣ ಮಾಡಿ ಈ ಸಂಘರ್ಷವು ನಿರಂತರ ಉದ್ರೇಕವಾಗುತ್ತಿರಬೇಕು ಮತ್ತು ಭಾರತೀಯ ಸಮಾಜ ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಬಂಡಾಯ ಹೂಡದಂತೆ ಪ್ರಯತ್ನ ಮಾಡಲಾಯಿತು. ಇಂದು ಕೂಡ ‘ಭಾರತ್ ತೋಡೋ’ ಈ ಅಜೆಂಡಾಕ್ಕಾಗಿ (ಕಾರ್ಯಸೂಚಿಗಾಗಿ) ಕಾರ್ಯನಿರತವಾಗಿರುವ ವಿವಿಧ ಶಕ್ತಿಗಳು ಆರ್ಯರ ಆಕ್ರಮಣದ ಕಾಲ್ಪನಿಕ ಸಿದ್ಧಾಂತದ ಆಧಾರವನ್ನೇ ತಮ್ಮ ಕಾರ್ಯಕ್ಕಾಗಿ ಉಪಯೋಗಿಸುತ್ತವೆ; ಆದರೆ ಸಿಂಧೂ-ಸರಸ್ವತೀ ಸಂಸ್ಕೃತಿಯ ಉತ್ಖನನದಲ್ಲಿ ಕಂಡುಬಂದಿರುವ ಪುರಾವೆಗಳು ಮಾತ್ರ ಈ ಎಲ್ಲ ವಿವರಗಳು ಸಂಪೂರ್ಣ ಕಾಲ್ಪನಿಕ ಎಂದು ಸಿದ್ಧ ಮಾಡುತ್ತವೆ. ಈ ಉತ್ಖನನದಲ್ಲಿ ಸಿಕ್ಕಿರುವ ಪುರಾವೆಗಳಿಂದ ಸಿದ್ಧವಾಗುವ ಅಂಶವೆಂದರೆ, ಜೀವನಶೈಲಿ, ಊಟ-ತಿಂಡಿ-ಉಡುಗೆ, ಧಾರ್ಮಿಕ ರೀತಿ-ಪರಂಪರೆ ಈ ಪ್ರತಿಯೊಂದು ವಿಷಯದಲ್ಲಿ ಕಳೆದ ೧೦ ಸಾವಿರ ವರ್ಷಗಳಿಂದ ಒಂದು ವಿಲಕ್ಷಣ ಸಾತತ್ಯ ಭಾರತದಲ್ಲಿ ಕಂಡುಬರುತ್ತದೆ. ಇದರಲ್ಲಿ ಪರಕೀಯರು ಹೊಸ ಸಂಸ್ಕೃತಿಯನ್ನು ಹೇರಿ ದೊಡ್ಡ ಸಾಂಸ್ಕೃತಿಕ ಬದಲಾವಣೆ ಮಾಡಿರುವ ಯಾವುದೇ ಸಂಕೇತ ಎಲ್ಲಿಯೂ ಕಂಡುಬರುವುದಿಲ್ಲ.
೫. ‘ಋಗ್ವೇದ’ದಲ್ಲಿನ ‘ಮಹಾಶಕ್ತಿಶಾಲಿ’ ಸರಸ್ವತೀ ನದಿಯ ಉಲ್ಲೇಖವು ಆರ್ಯರ ಆಕ್ರಮಣದ ಸಿದ್ಧಾಂತವು ಕಾಲ್ಪನಿಕವೆಂದು ಹೇಳಲು ಸಾಕಾಗುತ್ತದೆ !

ಈ ಸಾಂಸ್ಕೃತಿಕ ವಿಲಯ (ನಾಶ) ಕ್ರಿ.ಪೂ. ೨೨೦೦ ರಿಂದ ೧೯೦೦ ಈ ಅವಧಿಯಲ್ಲಿ ಬಿದ್ದಿರುವ ಬರಗಾಲದಿಂದ ಆಗಿದೆ; ಏಕೆಂದರೆ, ಈ ಬರಗಾಲದಲ್ಲಿ ಸರಸ್ವತೀ ನದಿ ಸಂಪೂರ್ಣ ಒಣಗಿ ಹೋಗಿ ಲುಪ್ತವಾಗಿತ್ತು, ಎಂದು ಈಗ ಸಿದ್ಧವಾಗಿದೆ. ‘ಋಗ್ವೇದದ’ಲ್ಲಿ ಮಾತ್ರ ಸರಸ್ವತೀ ನದಿಯನ್ನು ‘ಅತಿ ವಿಶಾಲ’ ಮತ್ತು ‘ಮಹಾಶಕ್ತಿಶಾಲಿ ನದಿ’ ಎಂದು ವರ್ಣಿಸಲಾಗಿದೆ. ಈ ಸಿದ್ಧಾಂತಕ್ಕನುಸಾರ ಋಗ್ವೇದವನ್ನು ಕ್ರಿ.ಪೂ. ೧೨೦೦ ರಲ್ಲಿ ಬರೆಯಲಾಗಿದ್ದರೆ ಅದಕ್ಕಿಂತ ೭೦೦ ವರ್ಷ ಹಿಂದೆ, ಅಂದರೆ ಕ್ರಿ.ಪೂ. ೧೯೦೦ ರಲ್ಲಿ ಲುಪ್ತವಾಗಿರುವ ಸರಸ್ವತಿಯ ಉಲ್ಲೇಖ ‘ಮಹಾಶಕ್ತಿಶಾಲಿ’ ಎಂದು ಮಾಡಿರುವುದು, ಅಸಾಧ್ಯವೇ ಆಗಿದೆ. ಇದೊಂದೇ ಸಾಕ್ಷಿ ಆರ್ಯರ ಆಕ್ರಮಣದ ಸಿದ್ಧಾಂತ ಸುಳ್ಳಾಗಿದೆಯೆಂಬುದನ್ನು ಸಿದ್ಧಪಡಿಸಲು ಸಾಕಾಗುತ್ತದೆ. ಇದರ ಹೊರತು ‘ಋಗ್ವೇದ’ದಲ್ಲಿ ಆರ್ಯರು ಹೊರಗಿನಿಂದ ಬಂದಿರುವ, ಅದಕ್ಕಾಗಿ ಅವರು ಮಾಡಿದ ಸಾವಿರಾರು ಕಿ.ಮೀ. ಪ್ರವಾಸದ, ಭಾರತದ ಹೊರಗಿನ ಅವರ ವಾಸ್ತವ್ಯದ ಒಂದು ಉಲ್ಲೇಖವೂ ಕಂಡುಬರುವುದಿಲ್ಲ. ರಾಖೀಗಡಿಯಲ್ಲಿ ಅಗೆಯುವಾಗ ಸಿಕ್ಕಿದ ಅಸ್ಥಿಪಂಜರಗಳ ‘ಡಿ.ಎನ್.ಎ.’ಯ (ಅನುವಂಶಿಕತೆ) ವಿಶ್ಲೇಷಣ ಮಾಡಿದಾಗ ಸಿಂಧು-ಸರಸ್ವತೀ ಸಂಸ್ಕೃತಿಯ ಜನರ ಮತ್ತು ಇಂದಿನ ಭಾರತದಲ್ಲಿನ ಎಲ್ಲ ಜಾತಿಗಳ ಮತ್ತು ಆದಿವಾಸಿಗಳ ‘ಡಿ.ಎನ್.ಎ.’ ಒಂದೇ ಆಗಿರುವುದು ಕಂಡುಬಂದಿದೆ.
೬. ದೇಶವನ್ನು ವಿಭಜಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಸಾಮ್ಯವಾದಿಗಳಿಂದ ಸುಳ್ಳು ಇತಿಹಾಸದ ಶಿಕ್ಷಣ !
ಇಂತಹ ಅಸಂಖ್ಯಾತ ಪುರಾವೆಗಳಿಂದ ಆರ್ಯರ ಆಕ್ರಮಣದ ಸಿದ್ಧಾಂತವು ಸಂಪೂರ್ಣ ಕಾಲ್ಪನಿಕ ಮತ್ತು ಸುಳ್ಳು ಆಗಿರುವುದು ಈಗ ನಿರ್ವಿವಾದ ಸಿದ್ಧವಾಗಿದೆ. ಈ ಸಿದ್ಧಾಂತವನ್ನು ‘ಎನ್.ಸಿ.ಇ. ಆರ್.ಟಿ.’ಯ ಪಠ್ಯಪುಸ್ತಕಗಳಿಂದ ಕಲಿಸಲಾಗುತ್ತಿತ್ತು; ಏಕೆಂದರೆ ಬ್ರಿಟಿಷರು ಹೋದರೂ, ಸ್ವತಂತ್ರ ಭಾರತದಲ್ಲಿ ‘ಇತಿಹಾಸ’ದ ಕ್ಷೇತ್ರವು ಸಾಮ್ಯವಾದಿಗಳ ಹಿಡಿತದಲ್ಲಿತ್ತು. ‘ಭಾರತವನ್ನು ತುಂಡು ಮಾಡುವುದೇ’, ಅವರ ಮೂಲ ಉದ್ದೇಶವಾಗಿದ್ದ ಕಾರಣ ಈ ಸಿದ್ಧಾಂತವು ಅವರಿಗೆ ಅನುಕೂಲಕರವಾಗಿತ್ತು. ಹಿಂದೂ ಸಮಾಜ ಜಾತಿ ಜಾತಿಗಳಲ್ಲಿ ವಿಭಜಿಸಿರುವುದು ಅಧಿಕಾರರೂಢ ಕಾಂಗ್ರೆಸ್ಸಿಗೂ ಅನುಕೂಲಕರವೇ ಆಗಿತ್ತು, ಆದ್ದರಿಂದ ಅವರು ಅದನ್ನು ಹಾಗೆಯೆ ಮುಂದುವರಿಸಿದರು.’
– ಶ್ರೀ. ಅಭಿಜಿತ ಜೋಗ, ‘ಅಸತ್ಯಮೇವ ಜಯತೆ’ ಆಣಿ ಡಾವ್ಯಾಂಚಾ ವಾಳವಿ ‘ ಈ ಮರಾಠಿ ಪುಸ್ತಕದ ಲೇಖಕ, ಪುಣೆ. (೫.೪.೨೦೨೪)
(ಆಧಾರ : ಸಾಪ್ತಾಹಿಕ ‘ವಿವೇಕ’ ಮತ್ತು ಶ್ರೀ. ಅಭಿಜಿತ ಜೋಗ ಇವರ ಫೇಸ್‌ಬುಕ್)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !