೧. ‘ಮಗು ಗರ್ಭದಲ್ಲಿದ್ದಾಗಲೇ ಸಾಧನೆಯ ಸಂಸ್ಕಾರಗಳನ್ನು ಮಾಡಿದರೆ ಹಿಂದಿನ ಜನ್ಮಗಳ ಅನಾವಶ್ಯಕ ಸಂಸ್ಕಾರಗಳು ದೂರವಾಗಲು ಸಹಾಯವಾಗುತ್ತದೆ

‘ಮಗುವನ್ನು ಸಾಧಕ ಜೀವವೆಂದು ಬೆಳೆಸಲು ಎಲ್ಲಕ್ಕಿಂತ ಒಳ್ಳೆಯ ಆರಂಭವೆಂದರೆ ತಾಯಿಯು ಮಗು ಗರ್ಭದಲ್ಲಿದ್ದಾಗಲೇ ಸಾಧನೆಯ ಸಂಸ್ಕಾರಗಳನ್ನು ಮಾಡಬೇಕು ! ಮಗುವಿನ ಚಿತ್ತದಲ್ಲಿ ಹಿಂದಿನ ಜನ್ಮಗಳ ಅನಾವಶ್ಯಕ ಸಂಸ್ಕಾರಗಳಿದ್ದರೆ, ಅವುಗಳನ್ನು ದೂರಗೊಳಿಸಲು ಮತ್ತು ಮಗುವಿನ ಮೇಲೆ ರಕ್ಷಣಾಕವಚವನ್ನು ನಿರ್ಮಿಸಲು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಮತ್ತು ತಾಯಿಯು ಮಗುವಿನೊಂದಿಗೆ ಮಾತನಾಡುವುದು ಮಹತ್ವದ್ದಾಗಿದೆ. ಮೊದಲಿನಿಂದಲೂ ಮಗುವಿಗೆ ‘ನಾನು ನಿನ್ನ ತಾಯಿಯಾಗಿದ್ದೇನೆ’, ಎಂದು ಹೇಳುವುದರೊಂದಿಗೆ ‘ಗುರುಗಳೇ ನಿನ್ನ ನಿಜವಾದ ತಾಯಿಯಾಗಿದ್ದಾರೆ. ದೇವರೇ ನಿನ್ನ ತಾಯಿಯಾಗಿದ್ದಾರೆ’, ಎಂಬ ಸಂಸ್ಕಾರಗಳನ್ನು ಅದಕ್ಕೆ ನೀಡಬೇಕು. ಇದರಿಂದ ಮಗುವಿನ ಮನಸ್ಸಿನಲ್ಲಿ ಮಾಯೆಯ ಆಸಕ್ತಿ ಉತ್ಪನ್ನವಾಗುವುದಿಲ್ಲ. ಜನ್ಮಕ್ಕೆ ಬರುವ ಪ್ರತಿಯೊಂದು ಸಾಧಕ-ಜೀವದ ನಿಜವಾದ ತಾಯಿಯು ‘ಗುರುದೇವರೇ ಆಗಿರುತ್ತಾರೆ’.
೨. ಮಗುವಿನ ತಾಯಿ-ತಂದೆಯರು ಸ್ವತಃ ಸಾಧನೆಯನ್ನು ಮಾಡಿದರೆ ಆ ಮಗುವಿಗೆ ಸಾಧನೆಯ ಯೋಗ್ಯ ಸಂಸ್ಕಾರಗಳನ್ನು ನೀಡಲು ಸಾಧ್ಯವಾಗುವುದು
ತಾಯಿಯು ಮಗುವಿಗೆ, ‘ಮಗುವೇ, ನಿನಗೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡಲಿಕ್ಕಿದೆ. ನಿನಗೆ ಗುರುಸೇವೆಯನ್ನು ಮಾಡಿ ‘ಉತ್ತಮ ಶಿಷ್ಯ ಮತ್ತು ಸಂತನಾಗಬೇಕಾಗಿದೆ,’ ಪೃಥ್ವಿಯ ಮೇಲಿನ ಮಾಯೆಯಲ್ಲಿ ಮತ್ತು ಸಂಸಾರದಲ್ಲಿ ಸಿಲುಕಲು ನಿನ್ನ ಜನ್ಮ ಆಗಿಲ್ಲ. ಈಗಿನಿಂದಲೇ ನಿನಗೆ ಇದರ ಅರಿವು ಇರಲಿ. ನಿನ್ನ ಜನ್ಮ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಆಗಿದೆ’ ಎಂದು ಹೇಳಬೇಕು. ಸಾಧನೆಯ ಸಂಸ್ಕಾರಗಳಿಂದ ಸುಸಂಸ್ಕೃತವಾಗಿರುವ ತಾಯಿ-ತಂದೆಯೇ ಮಗುವಿಗೆ ಸಾಧನೆಯ ಯೋಗ್ಯ ಸಂಸ್ಕಾರಗಳನ್ನು ನೀಡಲು ಸಾಧ್ಯವಿದೆ. ಈ ಆಪತ್ಕಾಲದಲ್ಲಿ ಮಗುವಿಗೆ ಜನ್ಮ ನೀಡುವುದಾದರೆ, ತಾಯಿ-ತಂದೆಯರು ದೇವರಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು, ‘ದೇವರೇ, ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ಸೇವೆ, ಹಾಗೆಯೇ ಗುರುಗಳ ಸೇವೆ ಮತ್ತು ಅವರ ಕಾರ್ಯವನ್ನು ಮಾಡಲು ನಮಗೆ ಸಾತ್ತ್ವಿಕ ಜೀವವು ಜನಿಸಲಿ !’
೩. ಮಗುವಿನ ಪೋಷಣೆಯ ಪೂರ್ಣ ಜವಾಬ್ದಾರಿಯನ್ನು ತಂದೆ-ತಾಯಿಯರೇ ವಹಿಸಿಕೊಳ್ಳಬೇಕು !
ಜೀವವು ಜನ್ಮಕ್ಕೆ ಬಂದ ನಂತರ ಅದನ್ನು ಬೆಳೆಸುವ ಎಲ್ಲ ಜವಾಬ್ದಾರಿಯನ್ನು ಅವನ ತಾಯಿ-ತಂದೆ ಇವರೇ ತೆಗೆದು ಕೊಳ್ಳಬೇಕು. ‘ಬೇರೆ ಯಾರಾದರೂ ನನ್ನ ಮಗುವನ್ನು ನೋಡಿ ಕೊಳ್ಳಲು ಸಹಾಯ ಮಾಡಬಹುದು’, ಎಂಬ ಅಪೇಕ್ಷೆಯನ್ನು ಇಡಬಾರದು. ಮಗುವಿನ ಪೋಷಣೆಗಾಗಿ ತಾಯಿಯು ಎಲ್ಲ ರೀತಿಯಿಂದ ಪ್ರಯತ್ನಿಸಬೇಕು. ‘ಮುಂಬರುವ ಆಪತ್ಕಾಲದಲ್ಲಿ ನಮಗೆ ಈ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುವುದೇ ?’, ಎಂಬ ವಿಚಾರವನ್ನೂ ಮಾಡಬೇಕು. ‘ಎಲ್ಲವೂ ಚೆನ್ನಾಗಿದೆ, ಮಗುವಿನ ಪೋಷಣೆಗಾಗಿ ತಂದೆ-ತಾಯಿಯರು ಸಂಪೂರ್ಣ ಸಮರ್ಥರಾಗಿದ್ದಾರೆ’, ಎಂದಾದರೆ ಮಾತ್ರ ಯಾವುದೇ ಅಡಚಣೆ ಇಲ್ಲ; ಆದರೆ ಇದರಿಂದ ಎಲ್ಲರಿಂದಲೂ ಸಾಧನೆ ಆಗುವುದು ಆವಶ್ಯಕವಾಗಿದೆ !’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….