ಇಂದಿನ ಯುವಕರ ಸ್ಥಿತಿ ಮತ್ತು ಅವರನ್ನು ಸಾಮರ್ಥ್ಯಶಾಲಿಗಳನ್ನಾಗಿಸುವ ಅನಿವಾರ್ಯತೆ !

ಸದ್ಯ ಎಲ್ಲ ಕಡೆಗಳಲ್ಲಿ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆ. ಈ ಸ್ಥಿತಿ ಒಂದೆಡೆ ಇದ್ದರೂ ಇಂದಿನ ಯುವಕರ ಮುಂದೆ ಅನೇಕ ಸಮಸ್ಯೆಗಳು ಮತ್ತು ಅಡಚಣೆಗಳಿವೆ; ಆದರೆ ಅವುಗಳನ್ನು ದುರ್ಲಕ್ಷಿಸಲಾಗುತ್ತಿದೆ. ನಾವು ಹೇಳುತ್ತೇವೆ, ‘ದೇಶದ ಪ್ರಗತಿ ಯುವಕರ ಕೈಯಲ್ಲಿದೆ.’ ಭಾರತ ಜಗತ್ತಿನ ಅತಿ ಹೆಚ್ಚು ಯುವಕರಿರುವ ದೇಶವಾಗಿದೆ. ಭಾರತದಲ್ಲಿ ಯುವಕರ ಸಂಖ್ಯೆ ಶೇ. ೬೫ ರಷ್ಟಿದೆ. ಅದ್ದರಿಂದ ಯುವಪೀಳಿಗೆಯ ಕ್ಷಮತೆ ಹಾಗೂ ಸಾಮರ್ಥ್ಯದಿಂದ ಭಾರತ ವೈಶ್ವಿಕ ಮಹಾಶಕ್ತಿಶಾಲಿಯಾಗುವ ಕನಸು ಕಾಣುತ್ತಿದೆ. ಯುವಪೀಳಿಗೆಯಲ್ಲಿನ ಕೆಲವು ನಿರ್ದಿಷ್ಟ ಜನರಲ್ಲಿಯೆ ನಾವೀನ್ಯಪೂರ್ಣ ಆಸಕ್ತಿ ಹಾಗೂ ಛಲವಿದೆ. ಆದ್ದರಿಂದ ದೇಶದ ವಿಕಾಸದಲ್ಲಿ ಅವರ ಸಹಭಾಗ ನಿಶ್ಚಿತವಾಗಿ ಇದೆ. ಇಂದು ದೇಶದ ಗಡಿಗೆ ಹೋಗಿ ನಮ್ಮ ದೇಶವನ್ನು ರಕ್ಷಿಸುವವರೂ ದೇಶದ ಯುವಕರೇ ಆಗಿದ್ದಾರೆ. ನಮಗೆ ಅವರ ಅಭಿಮಾನವೆನಿಸುತ್ತದೆ. ಆದರೆ ಯುವಕರಿಗೆ ಹಾನಿಯಾಗುವುದನ್ನೂ ದುರ್ಲಕ್ಷಿಸುವಂತಿಲ್ಲ. ಈ ವಿಷಯದಲ್ಲಿಯೂ ವಿಚಾರ ಮಾಡಬೇಕಾಗಿದೆ.

೧. ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಿಗೆ ನ್ಯಾಯವನ್ನು ಕೊಡಿಸಬೇಕು !

ಮಹಾವಿದ್ಯಾಲಯದ ಸ್ತರದಲ್ಲಿ ಯುವಕರ ವಿದ್ಯಾರ್ಥಿ ಸಂಘಟನೆಗಳಿರುತ್ತವೆ. ಅವುಗಳು ಒಂದಲ್ಲ ಒಂದು ಪಕ್ಷದ ಅಧೀನ ದಲ್ಲಿ ಕಾರ್ಯನಿರತವಾಗಿರುತ್ತವೆ. ಆದ್ದರಿಂದ ಪಕ್ಷಪಕ್ಷಗಳಲ್ಲಿನ ಭಿನ್ನಾಭಿಪ್ರಾಯಗಳು ಅವುಗಳಲ್ಲಿಯೂ ಕಾಣಿಸುತ್ತವೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿವಾರಿಸುವುದು, ಪ್ರವೇಶ ಪ್ರಕ್ರಿಯೆಗಳು, ಶುಲ್ಕ ಪ್ರಕ್ರಿಯೆ ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಈ ಸಂಘಟನೆಗಳು ಮಾಡುತ್ತವೆ; ಆದರೆ ಅನೇಕ ವೇಳೆ ವಿವಾದಗಳಲ್ಲಿ ಅವರ ಸಮಯ ವ್ಯರ್ಥವಾಗುತ್ತದೆ.

೨. ಸ್ವಾರ್ಥಕ್ಕಾಗಿ ಯುವಕರನ್ನು ಉಪಯೋಗಿಸುವ ರಾಜಕೀಯ ಪಕ್ಷಗಳು !

ರಾಜಕೀಯ ಪಕ್ಷಗಳ ಯುವಸಂಘಟನೆಗಳಲ್ಲಿ ಕೆಲವರನ್ನು ಮಾತ್ರ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಉಳಿದ ಯುವಕರು ಕೇವಲ ಆಧಾರಸ್ತಂಭವಾಗಿರುತ್ತಾರೆ. ಅವರನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಈ ಆಧಾರಸ್ತಂಭ ಅರ್ಧದಲ್ಲಿಯೆ ನಿಲ್ಲುತ್ತದೆ. ಅವರ ಭವಿಷ್ಯದ ಬಗ್ಗೆ ಯಾವುದೇ ವಿಚಾರ ಅವರಲ್ಲಿರುವುದಿಲ್ಲ.

೨ ಅ. ಯುವಕರೇ, ಮುಖಂಡರ ಹಿಂದೆ ಹೋಗಿ ದಿಕ್ಕು ಕಾಣದಂತಾಗ ಬೇಡಿ ! : ರಾಜಕೀಯ ಪಕ್ಷಗಳು ಯುವಕರನ್ನು ಚುನಾವಣೆಯ ಸಮಯದಲ್ಲಿ ಸಾಕಷ್ಟು ಉಪಯೋಗಿಸಿಕೊಳ್ಳುತ್ತವೆ, ಅದರ ಬದಲಿಗೆ ಅವರಿಗೆ ಏನು ಸಿಗುತ್ತದೆ ? ಡಾಬಾಗಳಲ್ಲಿನ ರುಚಿಕರ ಭೋಜನ, ಅಂದರೆ ತಿನ್ನುವುದು, ಕುಡಿಯುವುದು. ಇದೆಲ್ಲವೂ ಉಚಿತವಾಗಿ ಸಿಗುವುದರಿಂದ ಯುವಕರು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಿಗಳಾಗುತ್ತಾರೆ. ಅನೇಕ ಯುವಕರು ವ್ಯಸನಾಧೀನರಾಗಿ ಮುಖಂಡರ ಹಿಂದೆ ಓಡುವುದರಲ್ಲಿಯೇ ತಮ್ಮ ಜೀವನವನ್ನು ಸವೆಸುತ್ತಾರೆ. ಇದರಿಂದ ಅನೇಕರ ಜೀವನ ದಿಕ್ಕುಕಾಣದಂತಾಗಿದೆ. ಸಾಮಾಜಿಕ ಅನುಭವದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿನ ಅತ್ಯಾಚಾರ ಆಥವಾ ಭ್ರಷ್ಟಾಚಾರದ ವಿಷಯದಲ್ಲಿ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರು ರೊಚ್ಚಿಗೇಳುವುದಿಲ್ಲ. ಅವರ ಬುದ್ಧಿವಂತಿಕೆ ಮಬ್ಬಾಗಿರುತ್ತದೆ. ಮನೆಗಳಲ್ಲಿಯೇ ಕೊಲೆ ಪ್ರಕರಣಗಳು ನಡೆಯುತ್ತಿವೆ. ಎಲ್ಲಿಂದ ಬಂದಿದೆ ಈ ಅಸ್ವಸ್ಥತೆ ? ಉದ್ಯೋಗದ ಅಭಾವದಿಂದ ಈ ಯುವಜನಾಂಗ ದೊಡ್ಡ ಪ್ರಮಾಣದಲ್ಲಿ ಅಸ್ವಸ್ಥವಾಗಿದೆ. ಅವರು ಧೂಮ್ರಪಾನ, ಮದ್ಯಪಾನಗಳಿಗೆ ಬಲಿಯಾಗಿದ್ದಾರೆ. ಯುವಪೀಳಿಗೆಯು ಇದರ ಮೂಲಕವೂ ನಾಶವಾಗುತ್ತಿದೆ.

೩. ವೈಚಾರಿಕದೃಷ್ಟಿಯಲ್ಲಿ ಕ್ಷೀಣಿಸುತ್ತಿರುವ ಯುವಕರು !

ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳು, ಗಣಕಜ್ಞಾನ ಜಾಲದಲ್ಲಿ ವಿಪರೀತ ಪ್ರಮಾಣದಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಅವನು ಅದರಲ್ಲಿಯೆ ಮೈಮರೆತಿದ್ದಾನೆ. ಇಂದಿನ ಮಾಧ್ಯಮಗಳನ್ನು ಅಯೋಗ್ಯ ಮಾರ್ಗದಲ್ಲಿ ಉಪಯೋಗಿಸ ಲಾಗುತ್ತದೆ. ಕಲಾವಿದರಿಗೆ, ಆಟಗಾರರಿಗೆ, ನಟ-ನಟಿಯರಿಗೆ, ದೊಡ್ಡ ಮೊತ್ತವನ್ನು ನೀಡಿ ‘ಆನ್‌ಲೈನ್‌ ಆಟಗಳ’ ಜಾಹೀರಾತು ಗಳನ್ನು ನೀಡಲಾಗುತ್ತದೆ. ಅದರ ಮೂಲಕ ಯುವಕರನ್ನು ಆಕರ್ಷಿಸಲಾಗುತ್ತದೆ. ಯುವಕರನ್ನು ರಚನಾತ್ಮಕ ಕಾರ್ಯದ ಕಡೆಗೆ ಸೆಳೆಯುವ ಬದಲು ಈ ರೀತಿ ಸೆಳೆಯುವುದರಿಂದ ಅವರ ದಿಕ್ಕು ಬದಲಾಗುತ್ತಿದೆ. ಅದರಲ್ಲಿ ಯುವಕರ ಜೀವನ ನಾಶವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಹಾಗೂ ಇಂತಹ ಚಟುವಟಿಕೆಗಳಿಗೆ ಬೇಗ ಕಡಿವಾಣ ಹಾಕಬೇಕು. ಇಂದಿನ ಯುವಕರಲ್ಲಿ ಸಂವಾದ ಕಡಿಮೆಯಾಗುತ್ತಿದ್ದು ವಾಚನದ ಪ್ರಮಾಣವೂ ಕಡಿಮೆಯಾಗಿದೆ. ಯುವಕರಲ್ಲಿ ವೈಚಾರಿಕತೆ ಕ್ಷೀಣಿಸು ತ್ತಿರುವುದು ಅರಿವಾಗುತ್ತದೆ. ಹೊಸ ತಂತ್ರಜ್ಞಾನಗಳು ನಿರ್ಮಾಣವಾಗು ತ್ತಿದ್ದರೂ, ಅದರಲ್ಲಿ ಮಾನವ ಕಾಣೆ ಯಾಗುತ್ತಿದ್ದಾನೆ. ಆದ್ದರಿಂದ ಇಂದಿನ ಯುವಕರಿಗೆ ರಚನಾತ್ಮಕ ತಿರುವನ್ನು ನೀಡಬೇಕು.

೪. ಯುವಕರ ‘ಮನಸ್ಸನ್ನು ಗುರುತಿಸಿರಿ !

ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ತುಂಬಾ ವಿಶ್ವಾಸವಿತ್ತು. ಯುವ ಶಬ್ದವನ್ನು ತಿರುಗಿಸಿ ಓದಿದರೆ ‘ವಾಯು’ ಎಂದಾಗುತ್ತದೆ. ವಾಯು ಎಂದರೆ ವೇಗ ! ಸ್ವಾಮಿ ವಿವೇಕಾನಂದ ರಿಗೆ ಸಂಸ್ಕಾರವುಳ್ಳ, ಪ್ರಖರ ಹಾಗೂ ರಾಷ್ಟ್ರ, ಸಮಾಜದ ಕುರಿತು ಪ್ರೀತಿ ಇರುವ ಮತ್ತು ನಿರ್ವ್ಯಸನಿ ಯುವಕರು ಇಷ್ಟವಾಗುತ್ತಿದ್ದರು. ಯುವಕರ ಮನಸ್ಸನ್ನು ಗುರುತಿಸಬೇಕು. ಅವರಿಗೆ ಉದ್ಯೋಗ ಕೊಡಿಸಿ ಹೊಸ ಹೊಸ ಅವಕಾಶಗಳನ್ನು ನೀಡಬೇಕು.

೫. ಯುವ ಪೀಳಿಗೆಯನ್ನು ಅಂದರೆ ರಾಷ್ಟ್ರದ ಸಾಮರ್ಥ್ಯವನ್ನು ವ್ಯರ್ಥಗೊಳಿಸದಿರಿ !

ಯುವ ಪೀಳಿಗೆಯೆಂದರೆ ರಾಷ್ಟ್ರದ ಸಾಮರ್ಥ್ಯವಾಗಿದೆ. ಈ ಸಾಮರ್ಥ್ಯವನ್ನು ವ್ಯರ್ಥಗೊಳಿಸಬಾರದು. ಯುವಕರೇ ದೇಶದ ನಿಜವಾದ ಬಂಡವಾಳವಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಯುವಕರಿಗೆ ಅಥವಾ ಯುವ ಸಂಘಟನೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡಬೇಕು. ಅವರಿಗೆ ರಚನಾತ್ಮಕ ತಿರುವನ್ನು ನೀಡಬೇಕು. ಹಾಗೆ ಮಾಡಿದರೆ ಯುವಕರು ವಿದೇಶದಲ್ಲಿನ ಶಿಕ್ಷಣದ ಕಡೆಗೆ ಆಕರ್ಷಿತ ರಾಗದೆ ಭಾರತದಲ್ಲಿಯೆ ಉಳಿಯುವರು ಹಾಗೂ ನಮಗೆ ಅವರ ಜ್ಞಾನದ ಲಾಭವಾಗುವುದು. ಅಲ್ಲಲ್ಲಿ ಯುವಕರ ಸಮ್ಮೇಳನಗಳನ್ನು ಆಯೋಜಿಸಿ ಅವರ ಸಮಸ್ಯೆಗಳನ್ನು ನಿವಾರಿಸಬೇಕು !

– ಶ್ರೀ. ದಿಲೀಪ ದೇಶಪಾಂಡೆ.