
ಮಕ್ಕಳು ದೇಶದ ಸಂಪತ್ತು. ಅವರನ್ನು ಒಳ್ಳೆಯ ರೀತಿಯಿಂದ ಬೆಳೆಸುವುದರಲ್ಲಿ ಶಿಕ್ಷಕರೊಂದಿಗೆ ತಾಯಿ-ತಂದೆಯರ ಪಾಲು ದೊಡ್ಡದಾಗಿದೆ. ಪಾಲಕರು ಮಕ್ಕಳಿಗಾಗಿ ಎಷ್ಟು ಸಮಯವನ್ನು ಕೊಟ್ಟು ಒಳ್ಳೆಯ ರೀತಿಯಿಂದ ಅವರನ್ನು ಬೆಳೆಸುತ್ತಾರೆಯೋ, ಅಷ್ಟು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ, ಇದು ಸತ್ಯ. ಪ್ರಸ್ತುತ ತಾಯಿಯು ತನ್ನ ‘ಕರಿಯರ್’ ಕಡೆಗೆ ಗಮನ ಕೊಡುವುದರಿಂದ ಮಕ್ಕಳ ಕಡೆಗೆ ಗಮನ ಕೊಡಲು ಅವಳಲ್ಲಿ ಸಮಯವಿಲ್ಲ. ಅದರ ಪರಿಣಾಮ ಮಕ್ಕಳ ಕಡೆಗೆ ಪಾಲಕರ ಗಮನವಿಲ್ಲ, ಇಂತಹ ಸ್ಥಿತಿಯಾಗಿದೆ. ಮಕ್ಕಳನ್ನು ಬೆಳೆಸುವುದು ಮಕ್ಕಳು, ಕುಟುಂಬ, ಸಮಾಜ ಮತ್ತು ರಾಷ್ಟ್ರ ಇವುಗಳಿಗಾಗಿ ಅತ್ಯಂತ ಆವಶ್ಯಕವಾಗಿದೆ. ಒಬ್ಬ ಮಗ ಕುಟುಂಬ, ಸಮಾಜ ಮತ್ತು ರಾಷ್ಟ್ರ ಇವುಗಳ ಆಸ್ತಿಯಾಗಿದ್ದು ಅವನನ್ನು ಉತ್ತಮವನ್ನಾಗಿಸುವ ಜವಾಬ್ದಾರಿಯು ಪಾಲಕರ ಮತ್ತು ಶಿಕ್ಷಕರ ಮೇಲಿದೆ. ಇದರಲ್ಲಿ ಕನಿಷ್ಟಪಕ್ಷ ಮುಂದಿನ ವಿಷಯಗಳನ್ನು ಮಾಡಬಹುದು.

೧. ಬಾಲ್ಯದಿಂದಲೇ ಮಕ್ಕಳಿಗೆ ಸಮಯ ಕೊಡಿ.
೨. ಮಕ್ಕಳೊಂದಿಗೆ ಮನಃಪೂರ್ವಕವಾಗಿ ಮಾತನಾಡಿರಿ. ಅವರ ಒಂದೊಂದು ವಿಚಾರವನ್ನು ತಿಳಿದುಕೊಳ್ಳಿರಿ. ಅದರಲ್ಲಿನ ಅಯೋಗ್ಯ ವಿಚಾರಗಳಿಗೆ ಶಾಂತರೀತಿಯಿಂದ ಮತ್ತು ಸಮಾಧಾನದಿಂದ ಉತ್ತರ ಕೊಡಿ.
೩. ಅವರ ಮಾನಸಿಕತೆಯನ್ನು ತಿಳಿದುಕೊಂಡು ಅವರಿಗೆ ಯೋಗ್ಯ ರೀತಿಯಲ್ಲಿ ವಿಚಾರ ಮಾಡುವ ರೂಢಿಯನ್ನು ಹಚ್ಚಿರಿ.
೪. ಮಕ್ಕಳಿಗೆ ಕೇವಲ ಶಾಲೆಯ ಅಭ್ಯಾಸ ಮಾಡಲು ಅವರ ಹಿಂದೆ ಬೀಳದೇ ಅವರಲ್ಲಿನ ಅನೇಕ ಗುಣಗಳನ್ನು ಹೇಗೆ ಬೆಳೆಸಬಹುದು ?ಎಂಬುದಕ್ಕಾಗಿ ಪ್ರಯತ್ನಿಸಿರಿ. ಇದಕ್ಕಾಗಿ ಬಾಲ್ಯದಿಂದಲೇ ಮಗುವಿನ ಪ್ರಕೃತಿಗೆ ತಕ್ಕಂತೆ ಅವನಿಗೆ ಕುಳಿತುಕೊಳ್ಳಲು, ಹಾಗೆಯೇ ಮೈದಾನದಲ್ಲಿನ ವಿವಿಧ ರೀತಿಯ ಆಟಗಳನ್ನು ಆಡುವುದು, ಚಿತ್ರಗಳನ್ನು ಬಿಡಿಸುವುದು, ಎಲ್ಲರೊಂದಿಗೆ ಬೆರೆಯುವುದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವುಗಳಿಗಾಗಿ ಪ್ರೋತ್ಸಾಹ ನೀಡಿ.
೫. ವಯಸ್ಸಿಗೆ ಬಂದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಕಾಲದಲ್ಲಿ ಶರೀರ ಮತ್ತು ಮನಸ್ಸು ಇವುಗಳಲ್ಲಿ ಆಗುವ ಬದಲಾವಣೆಯನ್ನು ತಿಳಿಸಿ ಹೇಳಬೇಕು. ಒಟ್ಟಿನಲ್ಲಿ ಹುಡುಗರು-ಹುಡುಗಿಯರಲ್ಲಿನ ಆಕರ್ಷಣೆಗೆ ಬಲಿ ಬೀಳದಂತೆ, ಅವರತ್ತ ಯಾವ ರೀತಿಯಿಂದ ನೋಡಬೇಕು ? ಎಂಬುದನ್ನು ಮಕ್ಕಳು ಕಲಿಯಬೇಕು.
೬. ವಿವಿಧ ರೀತಿಯ ವಿಷಯಗಳ ಪುಸ್ತಕಗಳನ್ನು ಓದಲು ಕಲಿಸಬೇಕು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ. ಯಾವ ಪ್ರಸಂಗದಲ್ಲಿ ಹೇಗೆ ವಿಚಾರ ಮಾಡಬೇಕು ? ಇತರರೊಂದಿಗೆ ಹೇಗೆ ಮಾತನಾಡಬೇಕು ? ಹೇಗೆ ವರ್ತಿಸಬೇಕು ? ಈ ಎಲ್ಲವನ್ನು ತನ್ನಿಂದ ತಾನೆ ಕಲಿಯಲು ಸಾಧ್ಯವಾಗುತ್ತದೆ.
೭. ಮಕ್ಕಳು ದೂರದರ್ಶನದಲ್ಲಿ ಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ? ಎಂಬುದರ ಕಡೆಗೆ ಗಮನ ಕೊಡಬೇಕು. ಅವರು ಯಾವ ಕಾರ್ಯಕ್ರಮ ಮತ್ತು ಎಷ್ಟು ಸಮಯ ನೋಡಬೇಕು ? ಎಂಬುದನ್ನು ತಿಳಿಸಿ ಹೇಳಬೇಕು.
೮. ಮಕ್ಕಳಿಂದ ಎಷ್ಟೇ ತಪ್ಪುಗಳಾದರೂ ಅವರನ್ನು ಪ್ರೋತ್ಸಾಹಿಸಿ ಪ್ರೇರೇಪಿಸುವುದರ ಕಡೆಗೆ ಗಮನ ಕೊಡಬೇಕು.
೯. ಯಾವ ವಿಷಯಕ್ಕೆ ಎಷ್ಟು ಸಮಯವನ್ನು ಕೊಡಬೇಕು ? ಇದರ ಆಯೋಜನೆಯನ್ನು ಮಾಡಿಕೊಡಿ
– ವೈದ್ಯೆ (ಸುಶ್ರೀ.) ಮಾಯಾ ಪಾಟೀಲ, ಸನಾತನ ಆಶ್ರಮ, ಪನವೇಲ. (೧೫.೬.೨೦೨೨)
ಆಲದ ಮರದ ಮಹಾತ್ಮೆ
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !