ಮಕ್ಕಳು ಬೆಳೆದು ಉತ್ತಮ ವ್ಯಕ್ತಿಗಳಾಗಲು ಅವರಲ್ಲಿ ಬಾಲ್ಯದಿಂದಲೇ ಸಾಧನೆಯ ಸಂಸ್ಕಾರಗಳನ್ನು ಮಾಡಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ರೋಗ ಬಂದ ಮೇಲೆ ಉಪಚಾರ ಮಾಡುವುದಕ್ಕಿಂತ ‘ರೋಗ ಬರಬಾರದು’, ಎಂದು ಪ್ರಯತ್ನಿಸುವುದು ಮಹತ್ವದ್ದಾಗಿದೆ’ (Prevention is Better Than Cure), ಎಂಬ ಅರ್ಥದ ಒಂದು ಗಾದೆ ಮಾತಿದೆ. ಅದನ್ನು ಕೇವಲ ಹೇಳುವುದಕ್ಕಿಂತ ದೊಡ್ಡವರಾದ ಮೇಲೆ ಕೆಟ್ಟ ಗುಣಗಳು ಇರಬಾರದು, ಅದಕ್ಕಾಗಿ ಚಿಕ್ಕಂದಿನಿಂದಲೇ ಸಾತ್ತ್ವಿಕ ಸಂಸ್ಕಾರಗಳನ್ನು ಮಾಡುವುದು ಆವಶ್ಯಕವಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ‘ಕಸ ಮಾಡಬೇಡ, ಸುಳ್ಳು ಹೇಳಬೇಡ, ಯಾರಿಗೂ ಹೊಡೆಯಬೇಡ’, ಎಂಬ ಮಾನಸಿಕ ಸ್ತರದ ವಿಷಯಗಳನ್ನು ಕಲಿಸುವುದರೊಂದಿಗೆ ಅವರಿಂದ ಆಧ್ಯಾತ್ಮಿಕ ಸ್ತರದ ಸಾಧನೆಯನ್ನು ಮಾಡಿಸಿಕೊಂಡರೆ, ಆ ಮಕ್ಕಳು ಕ್ರಮೇಣ ಸಾತ್ತ್ವಿಕರಾಗುತ್ತಾರೆ. ಆಗ ಅವರು ಅಯೋಗ್ಯ ವಿಷಯಗಳನ್ನು ತಾವಾಗಿ ಮಾಡಲಾರರು. ಅದರ ಲಾಭವು ದೊಡ್ಡವರಾದ ಮೇಲೆಯೂ ಸಿಗುತ್ತದೆ. ಅವರು ಭ್ರಷ್ಟಾಚಾರ ಮಾಡುವುದು, ಅನೀತಿಯಿಂದ ವರ್ತಿಸುವುದು, ಗೂಂಡಾಗಿರಿ ಮಾಡುವುದು ಮುಂತಾದ ವಿಷಯಗಳನ್ನು ಮಾಡುವುದಿಲ್ಲ. ಎಲ್ಲರೂ ಈ ರೀತಿ ನಡೆದುಕೊಂಡಾಗ, ‘ಪೃಥ್ವಿಯಲ್ಲಿ ರಾಮರಾಜ್ಯದ ಸ್ಥಾಪನೆ ಆಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ