ಜವಾಬ್ದಾರಿ ಯಾರದ್ದು ?

ಕೆಲವರಿಗೆ ತಮ್ಮ ದುರ್ಗುಣಗಳಿಂದಾಗಿ ಸುಧಾರಣೆಗಳನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ‘ಬಯೋಕಾನ್’ ಸಂಸ್ಥೆಯ ಅಧ್ಯಕ್ಷೆ ಮಜುಮದಾರ್‌-ಶಾ ಅವರು ರಸ್ತೆಗಳ ಬಗ್ಗೆ ನೀಡಿದ ಸಲಹೆಗಳು ಉಪಮುಖ್ಯಮಂತ್ರಿಗಳಿಗೆ ತುಂಬಾ ಕಿರಿಕಿರಿ ಉಂಟು ಮಾಡಿದವು. ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಿದ್ದರೆ, ಅವರೇ ಮಾಡಲಿ ಎಂದು ಡಿ.ಕೆ. ಶಿವಕುಮಾರ ಅವರು ಮಜುಮದಾರ್‌-ಶಾ ಅವರಿಗೆ ಉದ್ಧಟತನದ ಹೇಳಿಕೆ ನೀಡಿದರು. ಇದು ‘ಅವರಿಂದಲೇ ಆಯಿತು’ ಎಂದು ಹೇಳಬೇಕಾಗಿದೆ; ಏಕೆಂದರೆ ಈ ಹೇಳಿಕೆಯು ಕಾಂಗ್ರೆಸ್ಸಿಗರ ಮನೋವೃತ್ತಿ ಮತ್ತು ಕಾರ್ಯವೈಖರಿಯನ್ನು ಸೂಚಿಸುತ್ತದೆ. ಭಾರತದಲ್ಲಿ ನಡೆಯದ ಘಟನೆಗಳನ್ನು ಪ್ರಜಾಪ್ರಭುತ್ವವಿರೋಧಿ ಎಂದು ಬಹಳ ರಸವತ್ತಾಗಿ ಉಲ್ಲೇಖಿಸುವ ಕಾಂಗ್ರೆಸ್ಸಿನ ಗಾಂಧಿ ಕುಟುಂಬದ ಹೆಜ್ಜೆಗಳನ್ನು ಶಿವಕುಮಾರ ಅನುಸರಿಸಿದ್ದಾರೆ ಮತ್ತು ಅವರ ಸರಕಾರದ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಎಂ.ಬಿ. ಪಾಟೀಲರು ಅವರನ್ನೇ ಅನುಕರಿಸಿದ್ದಾರೆ. ರಸ್ತೆಗಳು ಹೇಗೇ ಇರಲಿ, ಪರವಾಗಿಲ್ಲ; ಆದರೆ ಕರ್ನಾಟಕದಲ್ಲಿ ಸಂಘದ ಪಥಸಂಚಲನ ನಡೆಸಲು ಬಿಡುವುದಿಲ್ಲ, ಪಥಸಂಚಲನಕ್ಕೆ ಹೋಗುವ ಸರಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ದೇಶಭಕ್ತಿಯನ್ನು ಕಲಿಸುವ ಸನಾತನಿಗಳ ಸಹವಾಸದಿಂದ ದೂರವಿರಲು ಸಲಹೆ ನೀಡುತ್ತೇವೆ, ಹೀಗೆ ಯಾವುದು ತಪ್ಪಿದೆಯೋ ಅದನ್ನೇ ಮಾಡುತ್ತಾ ಹೋಗುತ್ತೇವೆ, ಇದು ಕಾಂಗ್ರೆಸ್ಸಿಗರ ಅಭ್ಯಾಸ. ರಸ್ತೆ ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ ಮತ್ತು ದೇಶ ಒಳ್ಳೆಯದಾದರೆ ಇವರ ಖಜಾನೆಯನ್ನು ಯಾರು ತುಂಬುತ್ತಾರೆ ? ಅದು ತುಂಬುತ್ತಿರಲಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರ ಮುಂದೆ ವಾಚಾಳಿತನವನ್ನು ಪ್ರದರ್ಶಿಸುತ್ತಾರೆ.

ರಾಜ್ಯದ ಎಲ್ಲ ಮೂಲಭೂತ ಸೌಕರ್ಯಗಳು ಪರಿಪೂರ್ಣವಾಗಿವೆ ಎಂದು ಬಿಂಬಿಸುತ್ತಾ ಲಂಡನ್‌ನ ಸಂಸ್ಥೆಗಳಿಂದ ಪ್ರಮಾಣಪತ್ರಗಳನ್ನು ಪಡೆದಿದ್ದೇವೆ ಎಂದು ಬೀಗ ಬೇಕು; ಆದರೆ ಯಾರಾದರೂ ಸುಧಾರಣೆಗಳನ್ನು ಹೇಳಿದರೆ, ನಾವು ಇದನ್ನು ಮಾಡುತ್ತಿದ್ದೇವೆ, ನೀವು ಯಾವ ಭಾಗವನ್ನು ನೋಡಿದ್ದೀರಿ ಎಂದು ತಿಳಿದಿಲ್ಲ ಎಂದು ನುಣುಚಿಕೊಳ್ಳುವುದು. ಪ್ರಮಾಣಪತ್ರ ಸುಳ್ಳಾಗಿದೆಯೆಂದು ಕಂಡು ಬಂದಿದ್ದರೂ, ಉದ್ಧಟತನ ಕಡಿಮೆಯಾಗುವ ಸಾಧ್ಯತೆ ಶೂನ್ಯವೇ ಆಗಿದೆ. ಹುಬ್ಬಳ್ಳಿಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ನಮಾಜು ಪಠಣಕ್ಕೆ ಅವಕಾಶ ನೀಡಬೇಕು; ಆದರೆ ಸಂಘದ ಪಥಸಂಚಲನದ ಸಮಯದಲ್ಲಿ ಸಾರ್ವಜನಿಕ ಭೂಮಿಯ ಬಳಕೆಗೆ ತಕ್ಷಣ ದಂಡ ವಿಧಿಸಲು ಆತುರ ತೋರಬೇಕು. ಕಾಂಗ್ರೆಸ್‌ ಸರಕಾರವು ಅಭಿವೃದ್ಧಿ ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಂದ ದುಪ್ಪಟ್ಟು ಶೇಕಡಾವಾರು ಹಣವನ್ನು ಪಡೆದಿರುವುದು ನಿಜ; ಆದರೆ ‘ಸಿಎಜಿ’ ವರದಿಯಲ್ಲಿ ಬೇರೆಯೇ ಚಿತ್ರಣವಿದೆ. ಬಂಡವಾಳ ವೆಚ್ಚದಲ್ಲಿ ಕಡಿತಗೊಳಿಸಿದ್ದರಿಂದ ಕರ್ನಾಟಕದಲ್ಲಿ ಅಪೂರ್ಣ ಯೋಜನೆಗಳ ಸಂಖ್ಯೆ ೧ ಸಾವಿರದ ೮೬೪ ರಿಂದ ೩ ಸಾವಿರದ ೧೪೦ ಕ್ಕೆ ಏರಿದೆ ಮತ್ತು ಒಟ್ಟು ೪ ಸಾವಿರದ ೪೮೨ ಕೋಟಿ ರೂಪಾಯಿಗಳ ನಿಧಿ ಅಪೂರ್ಣ ಯೋಜನೆಗಳಲ್ಲಿ ಸಿಲುಕಿದೆ. ೨೦೨೩-೨೪ ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯವು ೯ ಸಾವಿರದ ೨೭೧ ಕೋಟಿ ರೂಪಾಯಿಗಳ ರಾಜಸ್ವ ಕೊರತೆಯನ್ನು ಅನುಭವಿಸಿದೆ. ಈ ವರ್ಷದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ವರದಿಯನ್ನು ಸ್ವತಃ ಮಂಡಿಸಿದ್ದಾರೆ. ವರ್ತೂರು, ಬಾಲಾಗೆರೆ ಮತ್ತು ಪಣತ್ತೂರು ನಿವಾಸಿಗಳು ಕರ್ನಾಟಕದ ಮುಖ್ಯಮಂತ್ರಿಗಳಿಗೆ, ಅಪೂರ್ಣ ಮತ್ತು ಅನುಚಿತ ಯೋಜನೆಗಳ ರಸ್ತೆಗಳು ಮತ್ತು ಒಳಚರಂಡಿ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಮತ್ತು ಮೂಲಭೂತ ನಾಗರಿಕ ಮೂಲಸೌಕರ್ಯಗಳನ್ನು ಒದಗಿಸುವವರೆಗೆ ಆಸ್ತಿ ತೆರಿಗೆಯನ್ನು ತಡೆಹಿಡಿಯುವುದಾಗಿ ಎಚ್ಚರಿಕೆ ನೀಡಿದ ಘಟನೆಯೂ ಕೆಲವು ದಿನಗಳ ಹಿಂದೆ ನಡೆದಿದೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರನ್ನು ‘ಗುಂಡಿಗಳ ನಗರ’ ಎಂದು ಕರೆದಿದ್ದರು. ಅದಕ್ಕೆ ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡಿದರು. ಇತ್ತೀಚಿನ ೨-೩ ತಿಂಗಳ ಮೂಲಸೌಕರ್ಯಗಳ ಕುರಿತಾದ ಸುದ್ದಿಗಳನ್ನು ಮಾತ್ರ ನೋಡಿದರೂ, ಕರ್ನಾಟಕದ ಶೋಚನೀಯ ಸ್ಥಿತಿ ಗೋಚರಿಸುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರಕಾರಕ್ಕೆ ಮೂಲಸೌಕರ್ಯಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದಕ್ಕೆ ಇವು ಪುರಾವೆಗಳು. ಸುಳ್ಳು ಪ್ರಮಾಣಪತ್ರಗಳನ್ನು ತೋರಿಸಿ ಜನರನ್ನು ಮೂರ್ಖರನ್ನಾಗಿಸುವುದು ಮತ್ತು ಗಣ್ಯ ವ್ಯಕ್ತಿಗಳಿಗೆ ಉದ್ಧಟವಾಗಿ ಉತ್ತರಿಸುವುದು ಎಂದರೆ ಮದ ನೆತ್ತಿಗೇರಿರುವುದೇ ಕಾರಣವಾಗಿದೆ. ಪಕ್ಷ, ನಾಯಕರು, ಸರಕಾರ ಹೇಗೆ ಇರಬಾರದು ಎಂಬುದಕ್ಕೆ ಜ್ವಲಂತ ಉದಾಹರಣೆ ಎಂದರೆ ಕಾಂಗ್ರೆಸ್ಸಿಗರು.