ಪಾರಿವಾಳ ಗೂಡುಗಳ (ಕಬೂತರ್ ಖಾನಾ) ಮೇಲೆ ನಿಷೇಧ ಹೇರುವ ನಿರ್ಧಾರಕ್ಕೆ ವಿರೋಧ!

ಮುಂಬಯಿ – ಇಲ್ಲಿನ ಪಾರಿವಾಳ ಗೂಡುಗಳ (ಕಬೂತರ್ ಖಾನಾ) ಮೇಲೆ ನಿಷೇಧ ಹೇರುವುದಕ್ಕೆ ವಿರೋಧಿಸಿ, ಜೈನ ಮುನಿ ನೀಲೇಶ ಚಂದ್ರ ವಿಜಯ ಅವರ ನೇತೃತ್ವದಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ ಬರುವ ನವೆಂಬರ್ 3 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಮುನಿ ನೀಲೇಶ ಚಂದ್ರ ವಿಜಯ ಅವರು ನವೆಂಬರ್ 1 ರಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಘೋಷಿಸಿದ್ದರು; ಆದರೆ ಮುಂಬಯಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರು. ಹಾಗಾಗಿ, ನವೆಂಬರ್ 3 ರಿಂದ ಪ್ರತಿಭಟನೆ ನಡೆಸಲಾಗುವುದು.

ನವೆಂಬರ್ 1 ರಂದು ರಜೆ ಇರುವ ಕಾರಣ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹೆಚ್ಚು ಸವಾಲಾಗಿ ಪರಿಣಮಿಸಬಹುದು, ಅಲ್ಲದೆ ಇದೇ ದಿನದಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮತ್ತು ಮಹಾ ವಿಕಾಸ್ ಅಘಾಡಿ ಸಹ ಮತದಾರರ ಪಟ್ಟಿಯನ್ನು ಸರಿಪಡಿಸುವ ಬೇಡಿಕೆಯೊಂದಿಗೆ ಮೆರವಣಿಗೆಯನ್ನು ಆಯೋಜಿಸಿವೆ. ಒಂದೇ ದಿನ ಎರಡು ದೊಡ್ಡ ರಾಜಕೀಯ ಪಕ್ಷಗಳ ಮೆರವಣಿಗೆಗಳು ಮತ್ತು ಜೈನ ಸಮುದಾಯದ ಪ್ರತಿಭಟನೆಯಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಅನುಮತಿಯನ್ನು ನಿರಾಕರಿಸಲಾಗಿದೆ.
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ
ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಗೋರಕ್ಷಣೆಗಾಗಿ ‘ಗೋ-ಎಲ್ಎಕ್ಸ್’ ಎಂಬ ಹೆಸರಿನ ಜಾಲತಾಣ ಆರಂಭಿಸಲಿದ್ದಾರೆ !
ಬಾಂದ್ರಾದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ೧೦೦ ರಿಂದ ೧೫೦ ಜನರ ವಿರುದ್ಧ ಪ್ರಕರಣ ದಾಖಲು : ೧೬ ಜನರ ಬಂಧನ
ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ದೇಶಾದ್ಯಂತ ಗೋ ಹತ್ಯೆ ನಿಷೇಧಿಸಿ ! – ಹಾಜಿ ಮೊಹಮ್ಮದ್ ಪರ್ವೇಜ್ ಸಿದ್ದಿಕಿ