
೧. ಸಂತರ ಶರೀರದಿಂದ ಆನಂದ ಪ್ರಕ್ಷೇಪಿಸುತ್ತಿರುವುದರಿಂದ ಅವರ ಸೇವೆಯನ್ನು ಮಾಡುವಾಗ ಆನಂದ ಸಿಗುತ್ತದೆ !
ಕು. ಗುಲಾಬಿ ಧುರಿ : ನಮಸ್ಕಾರ, ನಾನು ವಸತಿವ್ಯವಸ್ಥೆ, ರೋಗಿ ಸಾಧಕರ ಸೇವೆ ಮತ್ತು ಸಂತರ ಸೇವೆಯನ್ನು ಮಾಡುತ್ತೇನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಎಷ್ಟು ಯುವಾವಸ್ಥೆಯ ಹುಡುಗಿಯರು ಈ ರೀತಿಯ ಸೇವೆಯನ್ನು ಮಾಡುತ್ತಿದ್ದಾರಲ್ಲ ? ತುಂಬಾ ಆಶ್ಚರ್ಯವಾಗಿದೆ !
ಕು. ಗುಲಾಬಿ ಧುರಿ : ನಾನು ವಸತಿವ್ಯವಸ್ಥೆಯನ್ನು ನೋಡುತ್ತೇನೆ ಮತ್ತು ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಪ್ರಿಯಾಂಕಾ ರಾಜಹಂಸ (ವಯಸ್ಸು ೩೮ ವರ್ಷ) ಇವರೊಂದಿಗೆ ಸೇವೆ ಮಾಡುತ್ತೇನೆ, ಹಾಗೂ ನಾನು ಪೂ. (ಶ್ರೀಮತಿ) ಸುಧಾ ಸಿಂಗಬಾಳಅಜ್ಜಿ (ಸನಾತನದ ೧೧೭ ನೇ (ವ್ಯಷ್ಟಿ) ಸಂತರು, ವಯಸ್ಸು ೮೫ ವರ್ಷ) ಇವರ ಸೇವೆಯನ್ನು ಮಾಡುತ್ತೇನೆ. ಪ.ಪೂ. ಡಾಕ್ಟರ್, ನಾನು ೨ ವರ್ಷಗಳಿಂದ ಸಂತರ ಸೇವೆಯನ್ನು ಮಾಡುತ್ತಿದ್ದೇನೆ. ಪೂ. ಸಿಂಗಬಾಳಅಜ್ಜಿಯವರ ಸೇವೆಯನ್ನು ಮಾಡುವಾಗ ನನಗೆ ಒಂದು ರೀತಿಯ ಬೇರೆ ಆನಂದವೇ ಸಿಗುತ್ತದೆ ಅಥವಾ ಅವರ ಸೇವೆಯನ್ನು ಮಾಡಲು ನನಗೆ ಒಂದು ಬೇರೆಯೇ ಸೆಳೆತವಿರುತ್ತದೆ. ನನಗೆ ಅವರ ಸೇವೆಯನ್ನು ಪ್ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಂತರ ದೇಹದಿಂದ ಪ್ರಕ್ಷೇಪಿಸುವ ಆನಂದವನ್ನು ನಿನಗೆ ಗ್ರಹಿಸಲು ಸಾಧ್ಯವಾಗುತ್ತಿದೆ. ಒಳ್ಳೆಯದಿದೆ.
೨. ಸೇವೆಯನ್ನು ಮಾಡುವಾಗ ನಾಮಜಪ ಮಾಡಿದ ನಂತರ ಆನಂದ ಸಿಗುತ್ತದೆ !

ಕು. ಗುಲಾಬಿ ಧುರಿ : ಪ.ಪೂ. ಡಾಕ್ಟರ್, ಪೂ. ಸಿಂಗಬಾಳಅಜ್ಜಿಯವರ ಸೇವೆಯನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಸೆಳೆತವಿರುತ್ತದೆ. ಆ ಸೆಳೆತವು ವಸತಿವ್ಯವಸ್ಥೆ ಮಾಡುವಾಗ ಇರುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು ಅಲ್ಲಿ ಸಂತರ ಸೇವೆ ಇರುತ್ತದೆ ಮತ್ತು ಇಲ್ಲಿ ಸಂತರು ಇರುವುದಿಲ್ಲ. ವ್ಯತ್ಯಾಸವಿದೆಯಲ್ಲ ?
ಕು. ಗುಲಾಬಿ ಧುರಿ : ವಸತಿವ್ಯವಸ್ಥೆಯನ್ನು ಮಾಡುವಾಗ ಒಮ್ಮಿಂದೊಮ್ಮೆಲೆ ಕೆಲವು ಅಡಚಣೆಗಳು ಬಂದರೆ ಆ ಸಮಯದಲ್ಲಿ ನನ್ನ ಮನಸ್ಸು ಅಸ್ಥಿರವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಆ ಸಮಯದಲ್ಲಿ ನಾಮಜಪ ಮಾಡುತ್ತಿರಬೇಕು. ನಾಮಜಪ ಮಾಡಿದರೆ, ಹಾಗೆ ಆನಂದ ಸಿಗುತ್ತದೆ.
೩. ನಾಮಜಪ ಭಾವಪೂರ್ಣವಾಗಿ ಆಗಬೇಕು ಮತ್ತು ‘ಸ್ವಭಾವದೋಷಗಳು ಹೋಗುವ ವರೆಗೆ ನಾಮಜಪ ಮಾಡುತ್ತಿರಬೇಕು’, ಇದು ನಮ್ಮ ಧ್ಯೇಯವಾಗಿರಬೇಕು !
ಕು. ಗುಲಾಬಿ ಧುರಿ : ಪ.ಪೂ. ಡಾಕ್ಟರ್, ನಾನು ನೀವು ಹೇಳಿದಂತೆ ನಾಮಜಪ ಮಾಡುತ್ತೇನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾಮಜಪವನ್ನು ಇನ್ನೂ ಭಾವಪೂರ್ಣ ಮತ್ತು ಶೀಘ್ರಗತಿಯಲ್ಲಿ ಮಾಡಬೇಕು.
ಕು. ಗುಲಾಬಿ ಧುರಿ : ಪ.ಪೂ. ಡಾಕ್ಟರ್, ನನ್ನ ಮನಸ್ಸಿನಲ್ಲಿ ‘ನನಗೆ ಈ ಸೇವೆಯನ್ನು ಮಾಡಲು ಆಗುವುದಿಲ್ಲ’, ಎಂಬ ವಿಚಾರ ಬರುತ್ತದೆ ಮತ್ತು ಆಗ ನಿರಾಶೆ ಬರುತ್ತದೆ. ಈ ಕುರಿತು ನಾನು ಜವಾಬ್ದಾರ ಸಾಧಕಿಯ ಬಳಿ ಮಾತನಾಡಿದೆನು. ಆಗ ಅವಳು, “ನಿನಗೆ ಸಾಧನೆಯ ಮುಂದಿನ ಹಂತವನ್ನು ಕಲಿಸಲು ದೇವರು ಈ ಸೇವೆಯನ್ನು ನೀಡಿದ್ದಾನೆ,” ಎಂದು ಹೇಳಿದಳು. ಆದರೆ ಅದನ್ನು ಸ್ವಲ್ಪ ಮಟ್ಟಿಗೆ ಮನಸ್ಸಿನಿಂದ ಸ್ವೀಕರಿಸಲಾಗುತ್ತದೆ; ಆದರೆ ನನಗೆ ಸತತವಾಗಿ ‘ಈ ಸೇವೆಯು ನನಗೆ ಆಗುವುದಿಲ್ಲ’, ಎಂದು ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾಮಜಪ ಮಾಡಿದರೂ, ‘ಮನಸ್ಸಿನಲ್ಲಿನ ಆ ವಿಚಾರಗಳು ಹೋಗಲು ಎಷ್ಟು ವಾರಗಳು, ಎಷ್ಟು ತಿಂಗಳು ಅಥವಾ ವರ್ಷಗಳು ಬೇಕಾಗುತ್ತವೆ’, ಎಂಬುದು ನಿನಗೆ ಗೊತ್ತಿಲ್ಲ. ಆ ಸ್ವಭಾವದೋಷವು ಕಳೆದ ಅನೇಕ ಜನ್ಮಗಳಿಂದ ಬಂದಿದೆ. ‘ಆ ಸ್ವಭಾವದೋಷವು ಹೋಗುವವರೆಗೆ ನಾಮಜಪವನ್ನು ಮಾಡುತ್ತಿರಬೇಕು’, ಇದು ನಮ್ಮ ಧ್ಯೇಯವಾಗಿರಬೇಕು. ‘ಇನ್ನೂ ಹೋಗುವುದಿಲ್ಲ, ಇನ್ನೂ ಹೋಗುವುದಿಲ್ಲ’, ಎಂದು ಹೇಳಬಾರದು.’ ಈ ವಾರದ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !