
ಕರ್ತೃತ್ವಭಾವನೆ ಮೂಡಿದಾಗ, ಸಾಧಕರು ‘ನಮ್ಮ ತುಲನೆಯಲ್ಲಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಎಷ್ಟೆಲ್ಲ ಸೇವೆಗಳನ್ನು ನಿರ್ವಹಿಸುತ್ತಾರೆ ?’ ಎಂಬುದನ್ನು ನೆನಪಿಸಿಕೊಳ್ಳಬೇಕು !

ಓರ್ವ ಸಾಧಕ : ಸದ್ಯ ವಿಭಾಗದ ಸೇವಕರು ತಮ್ಮ ಇತರ ಸೇವೆಗಳಿಂದಾಗಿ ತಮ್ಮ ಸೇವೆಗಳನ್ನು ನನಗೆ ಹಸ್ತಾಂತರಿಸಿದ್ದಾರೆ. ಅವುಗಳನ್ನು ಮಾಡುವಾಗ ನನಗೆ ಕೆಲವೊಮ್ಮೆ ಒತ್ತಡವಾಗುತ್ತದೆ ಮತ್ತು ಕೆಲವೊಮ್ಮೆ ಕರ್ತೃತ್ವ ಭಾವನೆಯು ಜಾಗೃತಗೊಳ್ಳುತ್ತದೆ, ‘ನಾನು ಬಹಳಷ್ಟು ಸೇವೆ ಮಾಡುತ್ತಿದ್ದೇನೆ, ಅಂದರೆ ನಾನು ಒಂದೇ ಸಮಯದಲ್ಲಿ ಬಹಳಷ್ಟು ವಿಷಯಗಳನ್ನು ನಿಭಾಯಿಸುತ್ತಿದ್ದೇನೆ. ನಾನು ಅವುಗಳ ಸಮನ್ವಯ ಮಾಡುತ್ತಿದ್ದೇನೆ.’ ಎಂದು ಎನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು; ಆದರೆ ‘ನಾನು ಬಹಳಷ್ಟು ಮಾಡುತ್ತಿದ್ದೇನೆ’ ಎಂದು ಅನಿಸಿದರೆ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಷ್ಟು ಮಾಡುತ್ತಾರೆ ? ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಎಷ್ಟು ಮಾಡುತ್ತಾರೆ ?’ ಎಂಬುದನ್ನು ನೆನಪಿಸಿಕೋ. ಆಗ ‘ಅವರ ತುಲನೆಯಲ್ಲಿ ನಿನ್ನದು ಏನೂ ಅಲ್ಲ’ ಎಂಬುದು ನಿನ್ನ ಗಮನಕ್ಕೆ ಬರುತ್ತದೆ ಮತ್ತು ಈಶ್ವರನು ಏನು ಮಾಡುತ್ತಾನೆ ? ಅನಂತ ಕೋಟಿ ಬ್ರಹ್ಮಾಂಡಗಳನ್ನು ನೋಡಿಕೊಳ್ಳುತ್ತಾನೆ, ಆದರೆ ನಾವಿರುವುದು ಒಂದು ಸಣ್ಣ ಆಶ್ರಮದ ಸಣ್ಣ ಸಣ್ಣ ಸೇವೆಗಳನ್ನು ನೋಡಿಕೊಳ್ಳಲು. ಅರ್ಥವಾಯಿತೇ ? ಈ ಭಾವನೆ ದೂರವಾಗುತ್ತದೆ ಮತ್ತು ನಂತರ ನೀನು ಮತ್ತಷ್ಟು ಮತ್ತಷ್ಟು ಸೇವೆ ಮಾಡುತ್ತೀಯ. ಸಾಧಕರೇ, ನೀವೂ ಇವನಿಗೆ ನೆನಪಿಸಿಕೊಡಿ.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !