
ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರಿಗೆ ಆಧ್ಯಾತ್ಮಿಕ ಮಟ್ಟಕ್ಕನುಸಾರ ಪ್ರಾರಬ್ಧ ಕರ್ಮ, ಕ್ರಿಯಮಾಣ ಕರ್ಮ ಮತ್ತು ಸಂಚಿತ ಕರ್ಮ ಇವುಗಳ ಪ್ರಮಾಣದ ಬಗ್ಗೆ ದೊರಕಿದ ಸೂಕ್ಷ್ಮಜ್ಞಾನವನ್ನು ಇಲ್ಲಿ ಕೊಡಲಾಗಿದೆ.

ಟಿಪ್ಪಣಿ ೧ – ಸಂಚಿತ ಕರ್ಮ : ಈ ಕರ್ಮವು ಜೀವದ ಇದುವರೆಗಿನ ವಿವಿಧ ಜನ್ಮಗಳಲ್ಲಿನ ಒಳ್ಳೆಯ ಮತ್ತು ಕೆಟ್ಟ ಎಲ್ಲ ಕರ್ಮಗಳ ಗಂಟು ಇರುತ್ತದೆ. ಯಾವಾಗ ಸಾಧನೆ ಮಾಡುವ ಜೀವದ ಮನುಷ್ಯನ ಜನ್ಮವು ಕೊನೆಯದಾಗಿರುತ್ತದೆಯೋ, ಆಗ ಮೊದಲು ಅವನ ಪ್ರಾರಬ್ಧಕರ್ಮವನ್ನು ಭೋಗಿಸಿ ಮುಗಿಯುತ್ತದೆ ಮತ್ತು ಅದರ ನಂತರ ಅವನ ಸಂಚಿತ ಕರ್ಮ ಭೋಗಿಸಿ ಮುಗಿಯತೊಡಗುತ್ತದೆ.
ಉದಾಹರಣೆ
ಭಕ್ತ ಸುದಾಮನು ಅತ್ಯಂತ ಬಡವನಾಗಿದ್ದನು; ಆದರೂ ಅವನು ಕಠೋರ ಧರ್ಮಾಚರಣಿ ಆಗಿದ್ದು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದನು. ಅವನಿಗೆ, ನಾನು ಸಂಚಿತ ಕರ್ಮವನ್ನು ಅನುಭವಿಸುತ್ತಿದ್ದೇನೆ, ಎಂದು ಗೊತ್ತಿತ್ತು. ಆದ್ದರಿಂದ ಅವನಿಗೆ ಎಷ್ಟೇ ಕಷ್ಟಗಳನ್ನು ಅನುಭವಿಸಿದರೂ, ಅವನು ತನ್ನ ಧರ್ಮವನ್ನು ಎಂದಿಗೂ ಬಿಡಲಿಲ್ಲ. ಆದ್ದರಿಂದ ಭಗವಾನ ಶ್ರೀಕೃಷ್ಣನು ಸುದಾಮನ ಅವಲಕ್ಕಿಯನ್ನು ಸ್ವೀಕರಿಸಿ ಅವನ ಸಂಪೂರ್ಣ ಸಂಚಿತ ಕರ್ಮವನ್ನು ಮುಗಿಸಿದನು ಮತ್ತು ಅವನನ್ನು ಶ್ರೀಮಂತನನ್ನಾಗಿ ಮಾಡಿದನು.
ಟಿಪ್ಪಣಿ ೨ – ಪ್ರಾರಬ್ಧ ಕರ್ಮ : ಸಾಮಾನ್ಯ ಜೀವಕ್ಕೆ ಒಂದು ಜನ್ಮದಲ್ಲಿ ಸಂಚಿತ ಕರ್ಮದಲ್ಲಿನ ಸ್ವಲ್ಪ ಭಾಗವನ್ನು ಮಾತ್ರ ಭೋಗಿಸಬೇಕಾಗುತ್ತದೆ. ಇದಕ್ಕೇ ‘ಪ್ರಾರಬ್ಧ ಕರ್ಮ’ ಎಂದು ಹೇಳುತ್ತಾರೆ. ಸಾಮಾನ್ಯ ಮನುಷ್ಯನಿಗೆ ಕೇವಲ ಪ್ರಾರಬ್ಧ ಕರ್ಮವನ್ನೇ ಭೋಗಿಸಬೇಕಾಗುತ್ತದೆ.
ಉದಾಹರಣೆ
ಶ್ರೀ ಜಗನ್ನಾಥನ ಭಕ್ತ ಮಾಧವದಾಸನಿಗೆ ೧ ತಿಂಗಳ ಕಾಯಿಲೆಯ ಪ್ರಾರಬ್ಧದ ಭೋಗವನ್ನು ಭೋಗಿಸಲು ಬಾಕಿ ಇತ್ತು. ಅದಕ್ಕಾಗಿಯೇ ಶ್ರೀ ಜಗನ್ನಾಥ ದೇವರು ಅವನಿಗೆ ಪ್ರಾರಬ್ಧ ಭೋಗವನ್ನು ಭೋಗಿಸಲು ಶಕ್ತಿಯನ್ನು ನೀಡುತ್ತಿದ್ದನು. ಆದರೂ, ಅವನಿಗೆ ಅದನ್ನು ಭೋಗಿಸಲು ಆಗದಿದ್ದಾಗ, ಉಳಿದ ೧೫ ದಿನಗಳ ಪ್ರಾರಬ್ಧವನ್ನು ಶ್ರೀ ಜಗನ್ನಾಥನು ತನ್ನ ಮೇಲೆ ತೆಗೆದುಕೊಂಡು ಅದನ್ನು ಭೋಗಿಸಿದನು. ಆದ್ದರಿಂದ ಈಗಲೂ ಶ್ರೀಜಗನ್ನಾಥಪುರಿಯಲ್ಲಿ ವರ್ಷದಲ್ಲಿನ ೧೫ ದಿನ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ.
ಟಿಪ್ಪಣಿ ೩ – ಕ್ರಿಯಮಾಣ ಕರ್ಮ : ತನ್ನ ಬುದ್ಧಿ ಯನ್ನು ಉಪಯೋಗಿಸಿ ಹೊಸ ಕರ್ಮವನ್ನು ಮಾಡುವುದು ಅಂದರೆ ‘ಕ್ರಿಯಮಾಣ ಕರ್ಮ’. ಯಾರ ಪ್ರಾರಬ್ಧಕರ್ಮವು ತೀವ್ರವಾಗಿರುತ್ತದೆಯೋ, ಅವರ ಕ್ರಿಯಮಾಣ ಕರ್ಮ ಕಡಿಮೆ ಇರುತ್ತದೆ. ತದ್ವಿರುದ್ಧ ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತರ ಪ್ರಾರಬ್ಧಕರ್ಮವನ್ನು ಭೋಗಿಸಿ ಮುಗಿಸಿದ ನಂತರ ಸಂಚಿತ ಕರ್ಮವನ್ನು ಭೋಗಿಸಲು ಪ್ರಾರಂಭಿಸಿದಾಗ ಅವರ ಸಾಧನೆಯಿಂದ ಅವರ ಕ್ರಿಯಮಾಣ ಕರ್ಮದ ಪ್ರಮಾಣವೂ ಸಾಮಾನ್ಯ ಮನುಷ್ಯನ ತುಲನೆಯಲ್ಲಿ ಹೆಚ್ಚಾಗುತ್ತದೆ. ಇದೇ ಕ್ರಿಯಮಾಣ ಕರ್ಮದ ಬಲದಿಂದ ಸಾತ್ತ್ವಿಕ ಜೀವವು ಹೆಚ್ಚೆಚ್ಚು ಸಾಧನೆ ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುತ್ತದೆ ಮತ್ತು ಸಂಚಿತ ಕರ್ಮವನ್ನೂ ಭೋಗಿಸಿ ಮುಗಿಸಿರುವುದರಿಂದ ಅವನಿಗೆ ಈಶ್ವರಪ್ರಾಪ್ತಿ, ಅಂದರೆ ಮೋಕ್ಷ ಸಿಗುತ್ತದೆ.
ಉದಾಹರಣೆ
ಅ. ಭಕ್ತ ಪ್ರಹ್ಲಾದ : ಭಕ್ತ ಪ್ರಹ್ಲಾದನ ಸಂಚಿತ ಕರ್ಮವು ಕಠಿಣವಾಗಿರುವುದರಿಂದ ಅವನಿಗೆ ಅವನ ತಂದೆಯ ಆಜ್ಞೆಯಂತೆ ಒಂದರ ಹಿಂದೆ ಒಂದು ಸಂಚಿತ ಪ್ರಾರಬ್ಧರೂಪಿ ಮೃತ್ಯುಯೋಗವು ಎಳೆಯುತ್ತಿತ್ತು. ಆದರೂ ಭಕ್ತ ಪ್ರಹ್ಲಾದನು ಎದೆಗುಂದದೆ ಪ್ರತಿಬಾರಿ ಭಗವಂತನನ್ನು ಶ್ರದ್ಧೆಯಿಂದ ಮತ್ತು ಭಕ್ತಿಯಿಂದ ಸ್ಮರಿಸುತ್ತ ಸಂಚಿತ ಪ್ರಾರಬ್ಧವನ್ನು ಜಯಿಸಿದನು.
ಆ. ಮಾರ್ಕಂಡೇಯಋಷಿಗಳು : ಅದೇ ರೀತಿ ಮಾರ್ಕಂಡೇಯನೂ ಅಲ್ಪಾಯುಷಿಯಾಗಿದ್ದನು; ಆದರೆ ಅವನು ಕೊನೆಯ ಕ್ಷಣದ ವರೆಗೆ ಭಕ್ತಿಭಾವದಿಂದ ಶಿವನನ್ನು ಆರಾಧಿಸಿ ಅವನ ಕೃಪೆಯನ್ನು ಸಂಪಾದಿಸಿದನು. ಇದರಿಂದ ಮಾರ್ಕಂಡೇಯನ ಅಕಾಲ ಮೃತ್ಯುಯೋಗವು ದೂರವಾಗಿ ಅವನು ಸಪ್ತ ಕಲ್ಪಗಳ ವರೆಗೆ ಜೀವಂತವಾಗಿದ್ದನು. ಇಲ್ಲಿ ಭಕ್ತ ಪ್ರಹ್ಲಾದ ಮತ್ತು ಮಾರ್ಕಂಡೇಯಋಷಿ ಈ ಇಬ್ಬರೂ ಕ್ರಿಯಮಾಣ ಕರ್ಮವನ್ನು ಯೋಗ್ಯ ರೀತಿಯಲ್ಲಿ ಬಳಸಿ ಸಂಚಿತ ಕರ್ಮದ ಮೇಲೆ ವಿಜಯವನ್ನು ಸಾಧಿಸಿದರು.
ಇ. ಕರ್ಣ : ಆದರೆ ಮಹಾಭಾರತದ ಯುದ್ಧದ ಸಮಯದಲ್ಲಿ ಕರ್ಣನಿಗೆ, ತಾನು ಜೇಷ್ಠ ಕುಂತಿ ಪುತ್ರ, ಎಂದು ತಿಳಿದರೂ ಅವನು ತನ್ನ ಕ್ರಿಯಮಾಣ ಕರ್ಮವನ್ನು ಅಯೋಗ್ಯವಾಗಿ ಬಳಸಿ ದುರ್ಯೋಧನ ರೂಪಿ ಅಧರ್ಮದ ಪಕ್ಷವನ್ನು ಸ್ವೀಕರಿಸಿದನು.
ಈ. ಯುಯುತ್ಸು : ಇದರ ವಿರುದ್ಧ ಮಹಾಭಾರತ ಯುದ್ಧ ಆರಂಭದ ಮೊದಲು ‘ಯುಯುತ್ಸು’ ಎಂಬ ಕೌರವನು ಕೌರವರ ಅಧರ್ಮಿ ಪಕ್ಷವನ್ನು ತ್ಯಜಿಸಿ ಪಾಂಡವರ, ಅಂದರೆ ಧರ್ಮದ ಪಕ್ಷದಿಂದ ಹೋರಾಡುವ ನಿರ್ಧಾರವನ್ನು ತೆಗೆದುಕೊಂಡು ಯೋಗ್ಯ ಕ್ರಿಯಮಾಣ ಕರ್ಮವನ್ನು ಬಳಸಿದನು.’ – ಸುಶ್ರೀ (ಕು.) ಮಧುರಾ ಭೋಸಲೆÉ, ಸನಾತನ ಆಶ್ರಮ, ಗೋವಾ. (೧೫.೧೦.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !