
ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ, ೨೭.೯.೨೦೨೫ ರಂದು ಆಶ್ವಯುಜ ಶುಕ್ಲ ಷಷ್ಠಿ ತಿಥಿಯಂದು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಗುರುದೇವರಿಗೆ ಆರತಿ ಬೆಳಗಿದರು. ಅದರ ನಂತರ, ಸಪ್ತರ್ಷಿ ಜೀವನಾಡಿಪಟ್ಟಿ ಓದುವ ಚೆನ್ನೈಯ ಪೂ. ಡಾ. ಓಂ ಉಲಗನಾಥನ್ ಇವರು ನಾಡಿವಾಚನ ಮಾಡಿದರು. ಅದರಲ್ಲಿ ಮಹರ್ಷಿಗಳು ಈ ಕೆಳಗಿನ ಉಲ್ಲೇಖವನ್ನು ಮಾಡಿದ್ದಾರೆ.

‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಈಶ್ವರನ ಭೂಮಿಯ ಮೇಲಿನ ಸಗುಣ ರೂಪವಾಗಿದ್ದಾರೆ. ಹೇಗೆ ತಿರುಪತಿಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶ್ರೀ ವೆಂಕಟೇಶ್ವರನು ಜಗತ್ತಿನ ಎಲ್ಲ ಭಕ್ತರ ಪ್ರಾರ್ಥನೆಗಳನ್ನು ಪೂರ್ಣಗೊಳಿಸುತ್ತಾನೋ, ಅದೇ ರೀತಿ, ಗೋವಾದ ರಾಮನಾಥಿಯ ಸನಾತನದ ಆಶ್ರಮರೂಪಿ ಗರ್ಭಗುಡಿಯಲ್ಲಿ ನೆಲೆಸಿರುವ ಗುರುದೇವರು ಎಲ್ಲ ಸಾಧಕರ ಪ್ರಾರ್ಥನೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ೧೯೪೨ ರಲ್ಲಿ ಭೂಮಿಯ ಮೇಲೆ ಜನಿಸಿದ ವಿಷ್ಣುವಿನ ಅಂಶಾವತಾರರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಭೂಮಿಯ ಮೇಲಿರುವಾಗ ಇಲ್ಲಿಯವರೆಗೆ ಈ ಕೆಳಗಿನ ಘಟನೆಗಳು ನಡೆದಿವೆ.
೧. ೨೦೧೪ ನೆಯ ವರ್ಷದಲ್ಲಿ ಪವಿತ್ರ ಭಾರತಭೂಮಿಯ ಸಿಂಹಾಸನವು ಬದಲಾಯಿತು.
೨. ೨೦೧೯ ನೆಯ ವರ್ಷದಲ್ಲಿ ೫೦೦ ವರ್ಷಗಳಿಂದ ಬಾಕಿ ಉಳಿದಿದ್ದ ಶ್ರೀರಾಮಜನ್ಮಭೂಮಿಯ ವಿವಾದವು ನಿರ್ವಿವಾದವಾಗಿ ಬಗೆಹರಿಯಿತು.
೩. ೨೦೨೩ ನೆಯ ವರ್ಷದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯವು ನಿರ್ವಿಘ್ನವಾಗಿ ಪೂರ್ಣಗೊಂಡಿತು.
೪. ೨೦೨೪ ನೆಯ ವರ್ಷದಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಮಹತ್ವ ಹೆಚ್ಚಿತು ಮತ್ತು ಭಾರತವು ‘ವಿಶ್ವಗುರು’ ಆಗುವ ದಿಕ್ಕಿನಲ್ಲಿ ಸಾಗಲು ಪ್ರಾರಂಭಿಸಿತು.
ಗುರುದೇವರ ಅವತಾರಿ ಜೀವನದಲ್ಲಿ ಮತ್ತು ವಿಶ್ವದ ಇತಿಹಾಸದಲ್ಲಿ ಅತ್ಯಂತ ಅದ್ಭುತವಾದ ಕ್ಷಣವೆಂದರೆ, ಮೇ ೨೦೨೫ ರಲ್ಲಿ ಸನಾತನ ಸಂಸ್ಥೆಯು ಗೋವಾದಲ್ಲಿ ಆಯೋಜಿಸಿದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ! ಗುರುದೇವರು ಸರಿಯಾದ ಸಮಯದಲ್ಲಿ ಶಂಖನಾದ ಮಾಡಿದರು. ಮೂರನೇ ಮಹಾಯುದ್ಧ ಹತ್ತಿರ ಬರದಿದ್ದರೆ, ಗುರುದೇವರು ಶಂಖನಾದ ಮಾಡುತ್ತಿರಲಿಲ್ಲ.
ಈಗ ಡಿಸೆಂಬರ್ ತಿಂಗಳಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲಿರುವ ‘ಭಾರತ ಮಂಟಪಂ’ನಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಲಿದೆ. ಒಂದು ರೀತಿಯಲ್ಲಿ, ಈ ಶಂಖನಾದ ಮಹೋತ್ಸವವು ಹಿಂದೂ ರಾಷ್ಟ್ರ-ಸ್ಥಾಪನೆಯ ಬುನಾದಿಯಾಗಲಿದೆ. ಈ ಶಂಖನಾದ ಮಹೋತ್ಸವದಲ್ಲಿ ಗುರುದೇವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಪಸ್ಥಿತರಿರುತ್ತಾರೆ.
ಮುಂಬರುವ ಮೂರನೇ ಮಹಾಯುದ್ಧದಲ್ಲಿ ಭೂಮಿಯ ಒಂದು ತೃತೀಯಾಂಶ ಭಾಗವು ನಾಶವಾಗಲಿದೆ ಮತ್ತು ಮನುಕುಲದ ಒಂದು ತೃತೀಯಾಂಶ ಭಾಗವು ನಾಶವಾಗಲಿದೆ. ‘ಇಂತಹ ಭೀಕರ ಯುದ್ಧದ ಸಮಯದಲ್ಲಿ ಎಲ್ಲ ಸಾಧಕರು ಮತ್ತು ಭಕ್ತರ ರಕ್ಷಣೆಯಾಗಲಿ’, ಎಂದು ಶ್ರೀಮನ್ನಾರಾಯಣ ಸ್ವರೂಪಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಚರಣಗಳಲ್ಲಿ ನಾವು ಸಪ್ತರ್ಷಿಗಳು ಮತ್ತು ೮೮ ಸಾವಿರ ಋಷಿಮುನಿಗಳು ಪ್ರಾರ್ಥಿಸುತ್ತೇವೆ.’ – ಸಪ್ತರ್ಷಿ ಜೀವನಾಡಿ (ಪೂ. ಡಾ. ಓಂ ಉಲಗನಾಥನ್ ಇವರು ಮಾಡಿದ ನಾಡಿವಾಚನ), ಚೆನ್ನೈ, ತಮಿಳುನಾಡು. (೨೭.೯.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪೈಕಿ 97 ನಗರಗಳು ಭಾರತದಲ್ಲಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !