ವಿಜಯದಶಮಿಯಂದು ಫಲಕ ಹಾಕಿ, ಗಾಂಧಿಯವರು ವಿವಿಧ ಸಮಸ್ಯೆಗಳ ರಾವಣನೊಂದಿಗೆ ಹೋರಾಡುತ್ತಿರುವುದನ್ನು ತೋರಿಸಲಾಗಿದೆ!

ಲಖನೌ (ಉತ್ತರ ಪ್ರದೇಶ) – ಇಲ್ಲಿನ ಕಾಂಗ್ರೆಸ್ ಕಚೇರಿಯ ಹೊರಗೆ ವಿಜಯದಶಮಿಯ ದಿನದಂದು ಒಂದು ಫಲಕವನ್ನು ಹಾಕಲಾಗಿತ್ತು. ಅದರಲ್ಲಿ ರಾಹುಲ್ ಗಾಂಧಿಯವರನ್ನು ಬಿಲ್ಲು-ಬಾಣ ಹಿಡಿದಿರುವ ಪ್ರಭು ಶ್ರೀರಾಮಚಂದ್ರನ ರೂಪದಲ್ಲಿ ತೋರಿಸಲಾಗಿತ್ತು. ಹಾಗೆಯೇ ಕಾಂಗ್ರೆಸ್‌ನ ಪ್ರದೇಶಾಧ್ಯಕ್ಷ ಅಜಯ ರಾಯ್ ಅವರು ಲಕ್ಷ್ಮಣನ ರೂಪದಲ್ಲಿ ಇದ್ದರು. ಇಬ್ಬರೂ ರಾವಣನನ್ನು ವಧೆ ಮಾಡುತ್ತಿರುವುದನ್ನು ತೋರಿಸಲಾಗಿತ್ತು. ರಾವಣನ ಒಂದು ತಲೆಯ ಮೇಲೆ ‘ಮತಚೋರ’ ಎಂದು ಬರೆದಿದ್ದರೆ, ಇತರ ತಲೆಗಳ ಮೇಲೆ ‘ಇ.ಡಿ.’ (ಜಾರಿ ನಿರ್ದೇಶನಾಲಯ), ಭ್ರಷ್ಟಾಚಾರ, ಹಣದುಬ್ಬರ ಮತ್ತು ಚುನಾವಣಾ ಆಯೋಗ ಎಂದು ಬರೆಯಲಾಗಿತ್ತು. (ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಯಾದ ಚುನಾವಣಾ ಆಯೋಗವನ್ನು ರಾವಣನ ತಲೆಯೆಂದು ತೋರಿಸುವುದು, ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ಮನೋಭಾವವನ್ನು ತೋರಿಸುತ್ತದೆ. ೬ ದಶಕಗಳ ಕಾಲ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಎಷ್ಟು ಬಾರಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದೆ ಎಂಬುದನ್ನು ಊಹಿಸದಿರುವುದೇ ಉತ್ತಮ! – ಸಂಪಾದಕರು)
| ಈ ಮೇಲೆ ಪ್ರಕಾಶಿಸಿದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೇ ನೈಜಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ಭಾಝಪದಿಂದ ವಿರೋಧ ವ್ಯಕ್ತ!
೧. ಕಾಂಗ್ರೆಸ್ ಹಾಕಿದ ಈ ಫಲಕದ ಬಗ್ಗೆ ಭಾಜಪ ಆಕ್ರೋಶ ವ್ಯಕ್ತಪಡಿಸಿದೆ. ಭಾಜಪ ವಕ್ತಾರ ರಾಕೇಶ್ ತ್ರಿಪಾಠಿ ಅವರು, ಸನಾತನ ಧರ್ಮವನ್ನು ಗೌರವಿಸಲು ಗೊತ್ತಿಲ್ಲದವರು, ರಾಮನ ದರ್ಶನ ಪಡೆಯಲು ಕೂಡ ಅಯೋಧ್ಯೆಗೆ ಹೋಗದವರು, ಇಂದು ತಮ್ಮನ್ನು ರಾಮನ ರೂಪದಲ್ಲಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳ ದೇವತೆಗಳಿಗೆ ನಿರಂತರವಾಗಿ ಅವಮಾನ ಮಾಡುತ್ತಿರುವ ಕಾಂಗ್ರೆಸ್‌ಗೆ ಜನರು ಖಂಡಿತವಾಗಿಯೂ ಪಾಠ ಕಲಿಸುತ್ತಾರೆ!, ಎಂದು ಹೇಳಿದರು.
೨. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು, ಕಾಂಗ್ರೆಸ್ಸಿಗರು ಯಾವ ಆಧಾರದ ಮೇಲೆ ರಾಹುಲ್ ಗಾಂಧಿಯವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಸುತ್ತಿದ್ದಾರೆ? ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದ್ದು, ಕಾಂಗ್ರೆಸ್ ನಾಯಕರು ತಕ್ಷಣ ದೇಶದ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
‘ರಾಹುಲ್ ಗಾಂಧಿಯವರು ಸಹ ದೇಶದಲ್ಲಿ ರಾಮರಾಜ್ಯ ತರಲು ಕೆಲಸ ಮಾಡುತ್ತಿದ್ದಾರಂತೆ!’ – ಕಾಂಗ್ರೆಸ್
ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ‘ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ದ ಉಪಾಧ್ಯಕ್ಷ ಆರ್ಯನ್ ಮಿಶ್ರಾ ಅವರು, ನೀವಷ್ಟೇ (ಭಾಜಪ) ಹಿಂದೂ ಧರ್ಮದ ಏಕೈಕ ಗುತ್ತಿಗೆದಾರರಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ದೇಶದಲ್ಲಿ ರಾಮರಾಜ್ಯ ತರಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಈ ವಿಚಿತ್ರ ಶೋಧನೆಗಾಗಿ ಮಿಶ್ರಾ ಅವರಿಗೆ ಪ್ರಶಸ್ತಿಯನ್ನೇ ನೀಡಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಕಾಂಗ್ರೆಸ್ನ ವೈಚಾರಿಕ ದಿವಾಳಿತನವನ್ನು ತೋರಿಸುವ ಹೇಳಿಕೆ! |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್‌ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ