ಅಕ್ಟೋಬರ್ ೧೦ ರಂದು (ಆಶ್ವಯುಜ ಕೃಷ್ಣ ಚತುರ್ಥಿಯಂದು) ಪೂ. ವಿನಾಯಕ ಕರ್ವೆ ಇವರ ೮೩ ನೆಯ ಹುಟ್ಟುಹಬ್ಬವಿದೆ. ಈ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು ! |

೧. ಅಧ್ಯಯನಶೀಲ ಮತ್ತು ಉತ್ತಮ ಜ್ಞಾಪಕಶಕ್ತಿ : ‘ಪೂ. ಕರ್ವೆಮಾಮಾ ಇವರು ಆಧ್ಯಾತ್ಮಿಕ ಗ್ರಂಥಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಅವರಿಗೆ ಸಂಸ್ಕೃತ ಶ್ಲೋಕಗಳ ಅರ್ಥ ತಿಳಿದಿದೆ ಮತ್ತು ಅವರಿಗೆ ಸಂಸ್ಕೃತ ಶ್ಲೋಕಗಳೂ ಬಾಯಿಪಾಠ ಇವೆ. ಅವರಿಗೆ ಯಾವುದೇ ಪ್ರಶ್ನೆ ಕೇಳಿದರೆ ಅವರು ಅದರ ವಿಶ್ಲೇಷಣೆಯನ್ನು ಅಧ್ಯಯನಪೂರ್ವಕವಾಗಿ ಮತ್ತು ಸರಳ ರೀತಿಯಲ್ಲಿ ಹೇಳುತ್ತಾರೆ.
೨. ಉತ್ಸಾಹಿ : ಪೂ. ಮಾಮಾ ಇವರಿಗೆ ೮೩ ವರ್ಷ ವಯಸ್ಸಾಗಿದ್ದು ಅವರ ಎಲ್ಲ ಚಟುವಟಿಕೆಗಳು ಯುವಕರನ್ನು ನಾಚಿಸುವಂತಿದೆ. ನಿಗದಿತ ಸಮಯಕ್ಕೆ ಸೇವೆಯ ಸ್ಥಳಕ್ಕೆ ಹೋಗಲು ಇರುವ ಅವರ ತತ್ಪರತೆ ಮೆಚ್ಚುವಂತಿದೆ.
೩. ಸ್ವಾವಲಂಬಿ : ಅವರು ತಮ್ಮ ಬಟ್ಟೆಗಳನ್ನು ತಾವೇ ತೊಳೆದು ಇಸ್ತ್ರಿ ಮಾಡುತ್ತಾರೆ. ಈ ವಯಸ್ಸಿಯಲ್ಲಿಯೂ ಅವರು ದ್ವಿಚಕ್ರವಾಹನದಲ್ಲಿ ಹೊರಗೆ ಬರುತ್ತಾರೆ.
೪. ಇತರರ ವಿಚಾರ ಮಾಡುವುದು : ಪೂ. ಮಾಮಾ ಇವರು ನಿಗದಿತ ಸಮಯದಲ್ಲಿ ಮಹಾಪ್ರಸಾದ ಸೇವಿಸುತ್ತಾರೆ. ಒಂದು ಬಾರಿ ಅವರು ಮಹಾಪ್ರಸಾದ ಸೇವಿಸಲು ಸ್ವಲ್ಪ ತಡವಾಗಿ ಬಂದರು. ಆಗ ಅವರಿಗೆ ಈ ಬಗ್ಗೆ ಕೇಳಿದಾಗ ಅವರು, “ನಾನು ಸಾಧಕರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದೆನು”, ಎಂದು ಹೇಳಿದರು. ಅವರು ಸಾಧಕರ ಸಲುವಾಗಿ ಮಾಡುತ್ತಿರುವ ನಾಮಜಪಾದಿ ಉಪಾಯಗಳನ್ನು ಪೂರ್ಣಗೊಳಿಸಿದ ನಂತರವೇ ಮಹಾಪ್ರಸಾದ ಸೇವಿಸಲು ಬರುತ್ತಾರೆ. ಅದಕ್ಕೆ ಮೊದಲು ಅವರು ಮಹಾಪ್ರಸಾದ ಸೇವಿಸುವುದಿಲ್ಲ.

೫. ‘ನಾಮಜಪವು ಸತತವಾಗಿ ನಡೆಯಬೇಕು’, ಎಂಬ ತಳಮಳ : ಪೂ. ಕರ್ವೆಮಾಮಾ ಇವರು ಅಖಂಡ ಅನುಸಂಧಾನದಲ್ಲಿರುತ್ತಾರೆ. ಅವರ ನಾಮಜಪವು ಸದಾ ನಡೆದಿರುತ್ತದೆ. ‘ನಾಮಜಪದಲ್ಲಿ ಯಾವುದೇ ವ್ಯತ್ಯಯ ಬರಬಾರದೆಂದು ಅವರು ಬರುವಾಗ-ಹೋಗುವಾಗ ವೈಖರಿಯಿಂದ ನಾಮಜಪವನ್ನು ಮಾಡುತ್ತಾರೆ. ಇತರ ಸಮಯದಲ್ಲಿ ಅವರು ಕೈಯಲ್ಲಿ ಮಾಲೆ ಹಿಡಿದು ನಾಮಜಪವನ್ನು ಮಾಡುತ್ತಾರೆ. ‘ನಾಮಜಪವು ಸತತವಾಗಿ ನಡೆಯಬೇಕು’, ಎಂಬ ತಳಮಳ ಅವರಿಗಿರುತ್ತದೆ.
೬. ಅಹಂಶೂನ್ಯತೆ ಮತ್ತು ಸೇವಾಭಾವ : ಅವರು ಸೇವೆಗಾಗಿ ಬೇಕಾಗುವ ಎಲ್ಲ ಸಾಹಿತ್ಯಗಳನ್ನು ತಾವೇ ತೆಗೆದುಕೊಳ್ಳುತ್ತಾರೆ ಮತ್ತು ಸೇವೆ ಪೂರ್ಣಗೊಂಡ ನಂತರ ಎಲ್ಲವುಗಳನ್ನು ವ್ಯವಸ್ಥಿತವಾಗಿ ಇಡುತ್ತಾರೆ. ಅವರು ಡಬ್ಬಗಳಲ್ಲಿ ಕುಂಕುಮವನ್ನು ತುಂಬುವುದು ಮತ್ತು ಆ ಡಬ್ಬಗಳ ‘ಪ್ಯಾಕಿಂಗ್’ ಮಾಡುವುದು, ಇಂತಹ ಸೇವೆ ಮಾಡುತ್ತಾರೆ. ಆಗ ಅವರು ನೆಲದ ಮೇಲೆ ಕುಳಿತು ಸೇವೆ ಮಾಡುತ್ತಾರೆ.
೭. ಪೂ. ಮಾಮಾ ಇವರ ಮಾತುಗಳನ್ನು ಕೇಳಿ ಸಾಧಕಿಯು ಅಂತರ್ಮುಖಳಾಗುವುದು ಮತ್ತು ಸ್ವಭಾವದೋಷ ನಿರ್ಮೂಲನೆಯ ಮಹತ್ವವು ಅವಳ ಗಮನಕ್ಕೆ ಬರುವುದು : ಒಂದು ಬಾರಿ ನಾನು ಪೂ. ಮಾಮಾ ಇವರ ಜೊತೆಗೆ ಮಹಾಪ್ರಸಾದ ಸೇವಿಸಲು ಕುಳಿತಿದ್ದೆನು. ಆಗ ಭೋಜನದಲ್ಲಿರುವ ತರಕಾರಿ ನನಗೆ ಇಷ್ಟವಾಗದ ಕಾರಣ ನಾನು ಆ ತರಕಾರಿಯನ್ನು ತೆಗೆದುಕೊಂಡಿರಲಿಲ್ಲ. ಆಗ ನಾನು ಪೂ. ಮಾಮಾ ಇವರಿಗೆ, “ಇಂದಿಗೂ ನನ್ನ ತರಕಾರಿ ವಿಷಯದಲ್ಲಿ ಬೇಕು-ಬೇಡಗಳು ಹೋಗಿಲ್ಲ. ಇದಕ್ಕಾಗಿ ನಾನು ಹೇಗೆ ಪ್ರಯತ್ನಿಸಲಿ ?”, ಎಂದು ಕೇಳಿದೆನು.
ಆ ಸಮಯದಲ್ಲಿ ಪೂ. ಮಾಮಾ ಇವರು, ‘ಯಾರಾದರೊಬ್ಬ ವ್ಯಕ್ತಿಯು ಒಳ್ಳೆಯ ಬಟ್ಟೆಗಳನ್ನು ಧರಿಸಿ ಹೋಗುತ್ತಿರುವಾಗ ದಾರಿಯಲ್ಲಿ ಬಿದ್ದು ಅವನ ಬಟ್ಟೆಗಳು ಕೆಸರಿನಿಂದ ಕೊಳೆಯಾದರೆ, ಅವನಿಗೆ ‘ಯಾವಾಗ ನಾನು ಮನೆಗೆ ಹೋಗಿ ಬಟ್ಟೆಗಳನ್ನು ಬದಲಾಯಿಸುವೆನೋ’ ಎಂದು ಅನಿಸುತ್ತದೆ, ಹಾಗೆಯೇ ನಮಗೆ ನಮ್ಮ ಸ್ವಭಾವದೋಷಗಳ ಬಗ್ಗೆ ಅನಿಸಬೇಕು”, ಎಂದು ಹೇಳಿದರು. ಪೂ. ಮಾಮಾ ಇವರ ಮಾತುಗಳನ್ನು ಕೇಳಿ ನಾನು ಅಂತರ್ಮುಖಳಾದೆನು. ಅವರ ಮಾತುಗಳನ್ನು ಕೇಳಿದ ನಂತರ ‘ಸ್ವಭಾವದೋಷಗಳನ್ನು ದೂರ ಮಾಡಲು ನನ್ನಲ್ಲಿ ಎಷ್ಟು ತಳಮಳವಿದೆ ?’, ಎಂಬ ಬಗ್ಗೆ ನಾನು ಚಿಂತನೆ ಮಾಡಿದೆನು. ಆಗ ನನಗೆ ಸಂತರ ವಾಣಿಯಲ್ಲಿನ ಚೈತನ್ಯದ ಅನುಭವವಾಯಿತು.
೮. ಕೃತಜ್ಞತಾಭಾವ : ‘ಅವರು ಸದಾ ಕೃತಜ್ಞತಾಭಾವದಲ್ಲಿರುತ್ತಾರೆ’, ಎಂಬುದು ಗಮನಕ್ಕೆ ಬರುತ್ತದೆ. ಅವರು ಪ್ರಸಾದ ಮತ್ತು ಮಹಾಪ್ರಸಾದ ಸೇವಿಸುವ ಮೊದಲು ಪ್ರಾರ್ಥನೆ ಮಾಡುತ್ತಾರೆ. ಆಗ ಅವರ ಭಾಗಜಾಗೃತಿಯಾಗುತ್ತದೆ. ಅವರು ನಾಮಜಪಾದಿ ಉಪಾಯಗಳನ್ನು ಮಾಡುವ ಮೊದಲು ಪ್ರಾರ್ಥನೆ ಮಾಡುವಾಗ ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಕೃತಜ್ಞತೆ ವ್ಯಕ್ತ ಪಡಿಸುವಾಗಲೂ ಅವರ ಭಾವಜಾಗೃತಿಯಾಗುತ್ತದೆ.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಲೇ ನಮಗೆ ಪೂ. ಕರ್ವೆಮಾಮಾ ಇವರ ಸತ್ಸಂಗ ಲಭಿಸುತ್ತಿದೆ’, ಅದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಪೂ. ಕರ್ವೆಮಾಮಾ ಇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ.’
– ಸೌ. ಮಧುವಂತಿ ಪಿಂಗಳೆ, ಮಂಗಳೂರು. (೮.೯.೨೦೨೫)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು