ಮುಂಬಯಿ ಮೇಲಿನ 26/11 ದಾಳಿಯ ನಂತರ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಲು ಕಾಂಗ್ರೆಸ್ ಸರಕಾರ ಒಪ್ಪಿಗೆ ನೀಡಲಿಲ್ಲ! Chidambaram Admits Congress Blocked

  • ಕಾಂಗ್ರೆಸ್ಸಿನ ಅಂದಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ 17 ವರ್ಷಗಳ ನಂತರ ಬಹಿರಂಗಪಡಿಸಿದ ಮಾಹಿತಿ

  • ದಾಳಿ ಮಾಡದಂತೆ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿತ್ತು

ನವದೆಹಲಿ – ಪಾಕಿಸ್ತಾನಿ ಭಯೋತ್ಪಾದಕರು ನವೆಂಬರ್ 26, 2008 (26/11) ರಂದು ಮುಂಬಯಿ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ನಂತರ ಭಾರತವು ಪ್ರತಿದಾಳಿ ನಡೆಸಬೇಕಿತ್ತು ಎಂದು ನನ್ನ ಮನಸ್ಸಿಗೆ ಬಂದಿತ್ತು. ಈ ಸಂಬಂಧ ನಾನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೆ; ಆದರೆ ಕಾಂಗ್ರೆಸ್ ನಾಯಕತ್ವವು ಪಾಕಿಸ್ತಾನಕ್ಕೆ ನೇರವಾಗಿ ಪ್ರತ್ಯುತ್ತರ ನೀಡಲು ಒಪ್ಪಿಗೆ ನೀಡಲಿಲ್ಲ, ಎಂದು ಕಾಂಗ್ರೆಸ್ ಸರಕಾರದ ಆಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು 17 ವರ್ಷಗಳ ನಂತರ ಮಾಹಿತಿಯನ್ನು ಬಹಿರಂಗಪಡಿಸಿದರು. ಅವರು ಒಂದು ವಾರ್ತಾವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಸಂದರ್ಶನದಲ್ಲಿ ಚಿದಂಬರಂ ಮಾತು ಮುಂದುವರೆಸಿ,

೧. ನನಗೆ ಖಚಿತವಾಗಿ ಗೊತ್ತಿಲ್ಲ, ನಾನು ಕೇವಲ ಊಹಿಸಬಹುದು. ಈ ತೀರ್ಮಾನವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಿದೇಶಾಂಗ ಸೇವೆಯ ಅಭಿಪ್ರಾಯಗಳನ್ನು ಆಧರಿಸಿತ್ತು. ನಾವು ನೇರವಾಗಿ ಪ್ರತಿಕ್ರಿಯೆ ನೀಡದೆ ರಾಜತಾಂತ್ರಿಕ ಮಾರ್ಗವನ್ನು ಆರಿಸಬೇಕು ಎಂದು ಅವರು ಹೇಳಿದರು. ಆ ಸಮಯದಲ್ಲಿ ಇದೇ ತೀರ್ಮಾನಕ್ಕೆ ಬರಲಾಯಿತು.

೨. ಆ ಸಮಯದಲ್ಲಿ ಇಡೀ ಜಗತ್ತು ಭಾರತಕ್ಕೆ ಯುದ್ಧ ಮಾಡದಂತೆ ಹೇಳಿತ್ತು.

೩. ಆ ಅವಧಿಯಲ್ಲಿ ಅಮೆರಿಕಾದ ಅಂದಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಜಾ ರೈಸ್ ಭಾರತಕ್ಕೆ ಬಂದಿದ್ದರು. ಅವರು ಕೂಡ ಪ್ರಧಾನಮಂತ್ರಿಯವರಿಗೆ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡದಂತೆ ಸಲಹೆ ನೀಡಿದರು. (ಇದರಿಂದ ‘ಮುಂಬಯಿಯ ಮೇಲಿನ ಆಕ್ರಮಣದ ಹಿಂದೆ ಅಮೆರಿಕಾದ ಕೈವಾಡವಿತ್ತು’ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಅಮೆರಿಕಾವನ್ನು ಈಗಲಾದರೂ ಸರಕಾರ ಪ್ರಶ್ನಿಸಬೇಕು. ಇದರೊಂದಿಗೆ, ದೇಶಹಿತವನ್ನು ಬಲಿಕೊಟ್ಟು ಅಮೆರಿಕಾದ ತಾಳಕ್ಕೆ ಕುಣಿಯುವ ಕಾಂಗ್ರೆಸ್ಸನ್ನು ಸಹ ಜನರು ಪ್ರಶ್ನಿಸಬೇಕು ಮತ್ತು ಕಾಂಗ್ರೆಸ್ಸಿನ ರಾಜಕೀಯ ಅಸ್ತಿತ್ವವನ್ನು ಕೊನೆಗೊಳಿಸಬೇಕು! – ಸಂಪಾದಕರು)

ಏನಾಗಿತ್ತು?

೨೦೦೮ ರ ನವೆಂಬರ್ ೨೬ ರಂದು ಮುಂಬಯಿ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ೧೦ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬಯಿ ಪ್ರವೇಶಿಸಿ ಅನೇಕ ಸ್ಥಳಗಳಲ್ಲಿ ಗುಂಡು ಹಾರಿಸಿ ಸ್ಫೋಟಗಳನ್ನು ನಡೆಸಿದರು. ಈ ಆಕ್ರಮಣದಲ್ಲಿ ೧೬೬ ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇದರಲ್ಲಿ ವಿದೇಶಿ ನಾಗರಿಕರೂ ಸೇರಿದ್ದರು. ಆ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (UPA) ಸರಕಾರವಿತ್ತು ಮತ್ತು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದರು.

ಸಂಪಾದಕೀಯ ನಿಲುವು

  • ಕಾಂಗ್ರೆಸ್ಸಿನ ಈ ಸ್ವಾಭಿಮಾನರಹಿತ ಮತ್ತು ಸೋಲಿನ ಮಾನಸಿಕತೆಯಿಂದಾಗಿಯೇ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬೆಳೆಯಿತು ಮತ್ತು ಭಾರತಕ್ಕೆ ಭರಿಸಲಾರದಷ್ಟು ಹಾನಿಯಾಯಿತು!
  • ಈ ಸತ್ಯವನ್ನು ಬಹಿರಂಗಪಡಿಸಲು ಚಿದಂಬರಂ 17 ವರ್ಷಗಳನ್ನು ಏಕೆ ತೆಗೆದುಕೊಂಡರು? ಇದಕ್ಕಾಗಿ ಅವರನ್ನು ಸಹ ಜೀವಾವಧಿ ಕಾರಾಗೃಹದಲ್ಲಿರಿಸಬೇಕು!
  • ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಸದಾ ಸಿದ್ಧವಾಗಿರುವ ಕಾಂಗ್ರೆಸ್, ಪಾಕಿಸ್ತಾನಿ ಭಯೋತ್ಪಾದಕರನ್ನು ಸಮರ್ಥಿಸುತ್ತದೆ ಎಂಬುದನ್ನು ಗಮನಿಸಬೇಕು!
  • ಇಂದು 17 ವರ್ಷಗಳ ನಂತರವೂ ಮುಂಬಯಿ ದಾಳಿಯ ಭಯೋತ್ಪಾದಕರು ಸೆರೆ ಸಿಗದಿರುವುದು ಭದ್ರತಾ ಸಂಸ್ಥೆಗಳಿಗೆ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಪಾಕಿಸ್ತಾನವನ್ನು ನಾಶಪಡಿಸಿಯೇ ಈ ದಾಳಿಯ ಸೇಡು ತೀರಿಸಿಕೊಳ್ಳಬಹುದು. ಸರಕಾರ ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದೇ?