ನನ್ನ ಹೃದಯದಲ್ಲಿ ಕಾಬಾ ಮತ್ತು ಕಣ್ಣುಗಳಲ್ಲಿ ಮದೀನಾ ಇದೆ (ಅಂತೆ) – TMC Leader Madan Mitra

  • ಬಂಗಾಳದ ದುರ್ಗಾಪೂಜಾ ಮಂಟಪದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ ಮಿತ್ರಾ ಹಾಡು ಹಾಡಿದರು!

  • ಉಪಸ್ತಿತರಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಪ್ಪಾಳೆ ತಟ್ಟಿದರು!

ಕೋಲಕಾತಾ (ಬಂಗಾಳ) – ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರರಾದ ಕಂಚನ ಗುಪ್ತಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಒಂದು ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ. ಕೋಲಕಾತಾ ನಗರದ ಒಂದು ದುರ್ಗಾಪೂಜಾ ಮಂಟಪದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ ಮಿತ್ರಾ ಅವರು ‘ನನ್ನ ಹೃದಯದಲ್ಲಿ ಕಾಬಾ ಇದೆ ಮತ್ತು ಕಣ್ಣುಗಳಲ್ಲಿ ಮದೀನಾ ಇದೆ’ ಎಂಬ ಹಾಡನ್ನು ಹಾಡುತ್ತಿರುವುದು ಮತ್ತು ಅಲ್ಲಿ ಉಪಸ್ತಿತರಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಪ್ಪಾಳೆ ತಟ್ಟುತ್ತಿರುವುದು ಈ ವೀಡಿಯೊದಲ್ಲಿ ಕಾಣಿಸಿದೆ.

ಈ ಬಗ್ಗೆ ಗುಪ್ತಾ ಅವರು ಹೇಳಿದ್ದೇನೆಂದರೆ, ಬಂಗಾಳದಲ್ಲಿ ಸನಾತನ ಧರ್ಮ ಮತ್ತು ಸನಾತನ ಸಂಪ್ರದಾಯಗಳನ್ನು ಈ ರೀತಿ ನೋಯಿಸಲಾಗುತ್ತಿದೆ; ಆದರೆ ಅದಕ್ಕೆ ಯಾವುದೇ ವಿರೋಧ ವ್ಯಕ್ತವಾಗುತ್ತಿಲ್ಲ.

ಪಿತ್ರಪಕ್ಷದಲ್ಲಿ ಮಮತಾ ಬ್ಯಾನರ್ಜಿ ದುರ್ಗಾಪೂಜಾ ಮಂಟಪವನ್ನು ಉದ್ಘಾಟಿಸಿದರು!

ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಅಮಿತ ಮಾಳವೀಯ ಅವರು ಸಹ ಈ ವೀಡಿಯೊವನ್ನು ‘ಎಕ್ಸ್’ ಮೂಲಕ ಪ್ರಸಾರ ಮಾಡಿದರು. ಮಮತಾ ಬ್ಯಾನರ್ಜಿ ಅವರು ಪಿತ್ರಪಕ್ಷದ ಸಮಯದಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ) ಧರಿಸಿ ಅನೇಕ ಪೂಜಾ ಮಂಟಪಗಳನ್ನು ಉದ್ಘಾಟಿಸಿದ್ದಾರೆ ಮತ್ತು ನಂತರ ಅವರ ಸಹೋದ್ಯೋಗಿ ಮದನ ಮಿತ್ರಾ ಅವರು ಕೋಲಕಾತಾದ ಒಂದು ದುರ್ಗಾಪೂಜಾ ಮಂಟಪದಲ್ಲಿ ಇಂತಹ ಹಾಡನ್ನು ಹಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಿಂದು ಧರ್ಮದ ಶಕ್ತಿಯ ಮೇಲಿನ ಆಕ್ರಮಣ! – ಭಾಜಪ

ಭಾಜಪ ರಾಷ್ಟ್ರೀಯ ವಕ್ತಾರರು ಮತ್ತು ಸಂಸದ ಸುಧಾಂಶು ತ್ರಿವೇದಿ ಅವರು, “ಮಾರ್ಚ್ 2014 ರಲ್ಲಿ ರಾಹುಲ ಗಾಂಧಿಯವರು, ತಮಗೆ ‘ಹಿಂದೂ ಧರ್ಮದ ಶಕ್ತಿಯೊಂದಿಗೆ ಹೋರಾಡಬೇಕಾಗಿದೆ’ ಎಂದು ಹೇಳಿದ್ದರು. ಈಗ ಈ ನವರಾತ್ರಿಯಲ್ಲಿ ಆ ‘ಶಕ್ತಿ’ಯ ಮೇಲೆ ದಾಳಿ ಪ್ರಾರಂಭವಾಗಿದೆ ಎಂದು ತೋರುತ್ತಿದೆ. ಇತ್ತೀಚೆಗೆ ಕರ್ನಾಟಕ ಸರಕಾರವು ಬಾನು ಮುಷ್ತಾಕ ಅವರನ್ನು ದಸರಾ ಉತ್ಸವವನ್ನು ಉದ್ಘಾಟಿಸಲು ಆಹ್ವಾನಿಸಿತು. ಇಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಂದು ದುರ್ಗಾಪೂಜಾ ಮಂಟಪದಲ್ಲಿ ಚಪ್ಪಾಳೆ ತಟ್ಟುತ್ತಾ ‘ಹೃದಯದಲ್ಲಿ ಕಾಬಾ, ಕಣ್ಣುಗಳಲ್ಲಿ ಮದೀನಾ’ ಹಾಡನ್ನು ಕೇಳಿದರು. ಇದರಲ್ಲಿ ಯಾವುದೇ ತೊಂದರೆ ಇಲ್ಲ; ಆದರೆ ನವರಾತ್ರಿಯ ಸಮಯದಲ್ಲಿ ಅವರ ಉಪಸ್ಥಿತಿಯಲ್ಲಿ ಶಾಸಕರು ಈ ಹಾಡನ್ನು ಏಕೆ ಹಾಡುತ್ತಿದ್ದಾರೆ? ಇದು ಹಿಂದೂ ಧರ್ಮದ ಶಕ್ತಿಯೊಂದಿಗೆ ಹೋರಾಡುವುದು ಮತ್ತು ಆ ಶಕ್ತಿಯ ಮೇಲೆ ಆಕ್ರಮಣ ಮಾಡುವ ಒಂದು ರೀತಿಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪೂಜೆಯ ಸಮಯದಲ್ಲಿ ಇನ್ನೊಂದು ಧರ್ಮದ ಹಾಡನ್ನು ಹಾಡುವುದು, ಇದು ಅವರಿಗೆ ಜಾತ್ಯತೀತವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮುಸ್ಲಿಮರ ಧಾರ್ಮಿಕ ಉತ್ಸವಕ್ಕೆ ಹೋಗಿ, ‘ನನ್ನ ಹೃದಯದಲ್ಲಿ ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣ ಇದ್ದಾರೆ’ ಎಂದು ಹಾಡನ್ನು ಹಾಡುವ ಧೈರ್ಯವನ್ನು ತೃಣಮೂಲ ಕಾಂಗ್ರೆಸ್‌ನ ನಾಯಕರು ಎಂದಾದರೂ ಮಾಡಲು ಸಾಧ್ಯವೇ?
  • ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರದಲ್ಲಿ ಇರಲು, ತೃಣಮೂಲ ಕಾಂಗ್ರೆಸ್ ನಾಯಕರು ಈಗ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಮಾತ್ರ ಬಾಕಿ ಇದೆ. ಇಂತಹವರನ್ನು ಆರಿಸಿ ಅಧಿಕಾರದಲ್ಲಿ ಕೂರಿಸುವ ಬಂಗಾಳದ ಹಿಂದೂಗಳಿಗೆ ಇದು ಲಜ್ಜಿಗೇಡಿನ ವಿಷಯ!