ಶ್ರೀ ಶಾಕಂಭರಿದೇವಿಯ ಆಧ್ಯಾತ್ಮಿಕ ಮಹತ್ವ !

ಶ್ರೀ ಶಾಕಂಭರಿದೇವಿ

ಶ್ರೀ ಅನ್ನಪೂರ್ಣಾದೇವಿ

ಸದ್ಯ ನಡೆಯುತ್ತಿರುವ ನವರಾತ್ರ್ಯುತ್ಸವದ ನಿಮಿತ್ತ

‘ಮಹರ್ಷಿಗಳ ಆಜ್ಞೆಯಂತೆ ರಾಮನಾಥಿ (ಗೋವಾ)ಯ ಸನಾತನದ ಆಶ್ರಮದಲ್ಲಿ ಶಾರದೀಯ ನವರಾತ್ರಿಯಲ್ಲಿ ಮೊದಲ ೬ ದಿನಗಳಲ್ಲಿ ‘ಶ್ರೀ ಶಾಕಂಭರಿಯಾಗ’; ಸಪ್ತಮಿ, ಅಷ್ಟಮಿ ಮತ್ತು ನವಮಿ ಈ ದಿನಗಳಲ್ಲಿ ‘ಚಂಡಿಯಾಗ’ ಮತ್ತು ವಿಜಯದಶಮಿಯಂದು ‘ಮಹಾಮೃತ್ಯುಂಜಯ ಯಾಗ’ವನ್ನು ಮಾಡಲಾಯಿತು. ಅದರ ನಿಮಿತ್ತ ನಾವು ‘ಶ್ರೀ ಶಾಕಂಭರಿದೇವಿ‘ಯ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳೋಣ.

೧. ವಿವಿಧ ಯಾಗಗಳನ್ನು ಮಾಡುವುದರ ಹಿಂದಿನ ಉದ್ದೇಶ !

೧ ಅ. ಶಾಕಂಭರಿಯಾಗ : ಇದರಿಂದ ಆಪತ್ಕಾಲದಲ್ಲಿ ಸಾಧಕರಿಗೆ ಆಹಾರ ಮತ್ತು ನೀರು ಸಿಗುವ ಲಾಭವಾಗಲಿದೆ.

೧ ಆ. ಚಂಡಿಯಾಗ : ಈ ಯಾಗದಿಂದ ಶ್ರೀ ಚಂಡಿ, ಶ್ರೀ ಚಾಮುಂಡಿ, ಶ್ರೀ ಚಂಡಿಕಾ, ಶ್ರೀ ಚಂಡಮಾರಿ, ಶ್ರೀ ಚಾಮುಂಡೇಶ್ವರಿ ಮತ್ತು ರಕ್ತಚಾಮುಂಡಾ ಈ ದೇವಿಯರನ್ನು ಪ್ರಸನ್ನ ಗೊಳಿಸುವುದರಿಂದ ಅವರ ಕೃಪೆಗೆ ಪಾತ್ರ ರಾಗುತ್ತೇವೆ. ಇದರಿಂದ ಸಾಧಕರಿಗೆ ತೊಂದರೆ ಕೊಡುವ ಪಾತಾಳದಲ್ಲಿನ ದೊಡ್ಡ ಅನಿಷ್ಟ ಶಕ್ತಿ ಗಳನ್ನು ನಾಶ ಮಾಡಿ ಸಾಧಕರಿಗೆ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ದೂರವಾಗಲಿವೆ.

೧ ಇ. ಮಹಾಮೃತ್ಯುಂಜಯ ಯಾಗ : ಈ ಯಾಗದಿಂದ ಶಿವನನ್ನು ಪ್ರಸನ್ನಗೊಳಿಸಿ ಸಾಧಕರ ಅಕಾಲಿಕ ಮೃತ್ಯು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗ ವನ್ನು ತಪ್ಪಿಸಲಾಗುವುದು.

೨. ಶ್ರೀವಿಷ್ಣುವಿನ ಸಂಕಲ್ಪದಿಂದ ಮನುಷ್ಯನಿಗೆ ಹಿತಕರವಾಗಿರುವ ಮುಂದಿನ ದೇವದೇವತೆಗಳ ನಿರ್ಮಿತಿ ಆಯಿತು

ಸೃಷ್ಟಿಯ ನಿರ್ಮಿತಿಯ ಸಮಯದಲ್ಲಿ ಪ್ರಜಾಪತಿ ಮತ್ತು ಆದಿಶಕ್ತಿಯ ಸಂಯುಕ್ತ ತತ್ತ್ವಗಳಿಂದ ಪೂರ್ಣ ಸೃಷ್ಟಿ ನಿರ್ಮಾಣವಾಯಿತು. ಭೂದೇವಿಯಿಂದ ಭೂಮಿ, ವನಸ್ಪತಿ ಮತ್ತು ಪಶುಪಕ್ಷಿಗಳು ಸೃಷ್ಟಿಯಾದವು. ಬ್ರಹ್ಮಪುತ್ರ ಮನು ಮತ್ತು ಅವರ ಪತ್ನಿ ಶತರೂಪಾ ಇವರಿಂದ ಮಾನವನ ಸೃಷ್ಟಿಯಾಯಿತು. ಸೃಷ್ಟಿಯ ಸಂಚಾಲಕನಾದ ಶ್ರೀವಿಷ್ಣುವಿನ ಸಂಕಲ್ಪದಿಂದ ಮನುಷ್ಯನಿಗೆ ಹಿತಕರವಾದÀ ಮುಂದಿನ ದೇವತೆಗಳ ನಿರ್ಮಿತಿ ಆಯಿತು.

೨ ಅ. ಶ್ರೀ ಶತಾಕ್ಷಿದೇವಿ ಮತ್ತು ಶ್ರೀ ಶಾಕಂಭರಿದೇವಿಯ ನಿರ್ಮಿತಿ : ಪೃಥ್ವಿಯಲ್ಲಿ ಯಾವಾಗ ಭೀಕರ ಬರಗಾಲ ಬಿದ್ದಿತೋ ಮತ್ತು ಆಹಾರಧಾನ್ಯ ಬೆಳೆಯುತ್ತಿರಲಿಲ್ಲವೋ, ಆಗ ಎಲ್ಲ ತರಕಾರಿ-ಹಣ್ಣುಗಳ ಜಾತಿಗಳು ಲುಪ್ತವಾಗಿದ್ದವು. ಆಗ ಋಷಿಮುನಿಗಳು ಮತ್ತು ಎಲ್ಲ ದೇವತೆಗಳು ಈ ಸಂಕಟವನ್ನು ದೂರಗೊಳಿಸಲು ಶ್ರೀ ಆದಿಶಕ್ತಿಯನ್ನು ಆರಾಧಿಸಿದರು. ಅನಂತರ ಆದಿಶಕ್ತಿಯಿಂದ ಶ್ರೀ ಶತಾಕ್ಷಿದೇವಿ ಮತ್ತು ಶ್ರೀ ಶಾಕಂಭರಿದೇವಿಯ ನಿರ್ಮಿತಿ ಆಯಿತು.

೨ ಅ ೧. ಶ್ರೀ ಶತಾಕ್ಷಿದೇವಿ : ಮನುಷ್ಯನ ಮತ್ತು ಪಶುಪಕ್ಷಿಗಳ ‘ತೃಷ್ಣ್ಣಾ’, ಅಂದರೆ ಬಾಯಾರಿಕೆ ಯನ್ನು ನೀಗಿಸಲು ‘ಭೂದೇವಿ ಮತ್ತು ಶ್ರೀವಿಷ್ಣು’ ಇವರಿಂದ ಶತಾಕ್ಷಿದೇವಿಯ ನಿರ್ಮಿತಿ ಆಯಿತು. ಬಾಯಾರಿಕೆಯಿಂದ ಬಳಲಿದ ಜೀವಗಳನ್ನು ನೋಡಿ ಅವಳ ಕಣ್ಣುಗಳಿಂದ ಕಣ್ಣೀರು ಹರಿಯ ತೊಡಗಿದವು ಮತ್ತು ಅವುಗಳಿಂದ ವಿವಿಧ ನದಿಗಳು ನಿರ್ಮಾಣವಾದವು. ಆದ್ದರಿಂದ ಎಲ್ಲ ಜೀವಗಳ ಬಾಯಾರಿಕೆ ಶಾಂತವಾಯಿತು.

೨ ಆ. ಶ್ರೀ ಶಾಕಂಭರಿದೇವಿಯ ನಿರ್ಮಿತಿ : ಮನುಷ್ಯನ ‘ಕ್ಷುಧೆ’, ಅಂದರೆ ‘ಹಸಿವನ್ನು’ ಶಾಂತಗೊಳಿಸಲು ಮನುಷ್ಯನಿಗೆ ‘ಶಾಕ’ ಅಂದರೆ ತರಕಾರಿ (ಕಾಯಿಪಲ್ಲೆ ಮತ್ತು ಹಣ್ಣಿನ ತರಕಾರಿಗಳು)ಗಳನ್ನು ನೀಡುವ ಶ್ರೀ ಶಾಕಂಭರಿದೇವಿಯ ಸೃಷ್ಟಿಯು ‘ಭೂದೇವಿ ಮತ್ತು ಶ್ರೀವಿಷ್ಣು’ ಇವರಿಂದಾಯಿತು. ಇದರಿಂದ ಮನುಷ್ಯನ ಹಸಿವು ಶಾಂತವಾಯಿತು.

೨ ಆ ೧. ಶ್ರೀ ಶಾಕಂಭರಿದೇವಿಯ ಕಾರ್ಯ : ಮಾಂಸಹಾರಿ ಭೋಜನವು ರಜ-ತಮ ಪ್ರಧಾನವಾಗಿರುವುದರಿಂದ ಅದು ಅಸುರರಿಗೆ  ಪ್ರಿಯವಾಗಿರುತ್ತದೆ ಮತ್ತು ಶಾಕಾಹಾರಿ (ಸಸ್ಯಾಹಾರಿ) ಭೋಜನವು ಸತ್ವಪ್ರಧಾನವಾಗಿ ಇರುವುದರಿಂದ ಅದು ದೇವತೆಗಳಿಗೆ ಪ್ರಿಯ ವಾಗಿರುತ್ತದೆ. ಶ್ರೀ ಶಾಕಂಭರಿದೇವಿಯಿಂದ ಮನುಷ್ಯನಿಗೆ ಶಾಕಾಹಾರಿ ಭೋಜನ ಲಭಿಸಲು ಸಹಾಯವಾಗುತ್ತದೆ. ಇದರಿಂದ ಮನುಷ್ಯನ ಹಸಿವು ಶಾಂತವಾಗಿ, ಅವನ ಸಾತ್ತ್ವಿಕತೆ ಹೆಚ್ಚಾಗಲು ಸಹಾಯವಾಗುತ್ತದೆ.

೨ ಆ ೨. ಮುಂಬರುವ ಆಪತ್ಕಾಲದಲ್ಲಿ ಸಾಧಕರ ಮೇಲೆ ಶ್ರೀ ಶಾಕಂಭರಿದೇವಿಯ ಕೃಪೆಯಾಗಲಿದೆ : ಮುಂಬರುವ ಕೆಲವು ವರ್ಷಗಳಲ್ಲಿ ಪೃಥ್ವಿಯ ಮೇಲೆ ನೈಸರ್ಗಿಕ, ಹಾಗೆಯೇ ಮಾನವನಿರ್ಮಿತ ವಿಪತ್ತುಗಳು ಬಂದು ಭೀಕರ ಆಪತ್ಕಾಲ ಉದ್ಭವಿಸಲಿದೆ. ಆದ್ದರಿಂದ ಪೃಥ್ವಿಯ ಜೀವಗಳಿಗೆ ಆಹಾರ ಮತ್ತು ನೀರು ಸಹ ದೊರಕುವುದು ದುರ್ಲಭವಾಗಲಿದೆ. ಇಂತಹ ಸಮಯದಲ್ಲಿ ಸಾತ್ತ್ವಿಕ ಮನುಷ್ಯನಿಗಾಗಿ ಶ್ರೀ ಶತಾಕ್ಷಿದೇವಿಯ ಕೃಪೆಯಿಂದ ನೀರು ಮತ್ತು ಶ್ರೀ ಶಾಕಂಭರಿದೇವಿಯ ಕೃಪೆಯಿಂದ ತರಕಾರಿಗಳು ಲಭ್ಯವಾಗಲಿವೆ. ಈ ಇಬ್ಬರು ದೇವಿಯರ ಕೃಪೆಯಿಂದ ಸಾತ್ತ್ವಿಕ ಜೀವಗಳು ಆಪತ್ಕಾಲ ದಲ್ಲಿಯೂ ಜೀವಂತವಾಗಿರುವರು.

೨ ಇ. ಶ್ರೀ ಶಾಕಂಭರಿದೇವಿಗೆ ಸಹಾಯಕವಾಗಿರುವ ವಿವಿಧ ದೇವಿಯರು 

೨ ಇ ೧. ಶ್ರೀ ವನದುರ್ಗಾ : ಸಂಪೂರ್ಣ ವನಪ್ರದೇಶದ ಮೇಲೆ ಇವಳ ಅಧಿಕಾರವಿದೆ. ಆದ್ದರಿಂದ ಪೃಥ್ವಿಯ ಅಸಂಖ್ಯ ಜೀವಗಳು ವನ ಪ್ರದೇಶದಲ್ಲಿದ್ದು ಸುರಕ್ಷಿತವಾಗಿ ಬದುಕಬಹುದು. ಭೂದೇವಿ ಮತ್ತು ಶ್ರೀ ವನದುರ್ಗಾ ಇವರ ಸಂಯುಕ್ತ ತತ್ತ್ವಗಳಿಂದ ವಿವಿಧ ಹೂವುಗಳ, ಎಲೆಗಳ, ಬಳ್ಳಿ ಮತ್ತು ಮರಗಳ ನಿರ್ಮಿತಿ ಆಯಿತು.

೨ ಇ ೨. ಶ್ರೀ ಕಮಲಾ : ಭೂದೇವಿ ಮತ್ತು ಶ್ರೀ ಕಮಲಾದೇವಿಯ ಸಂಯುಕ್ತ ತತ್ತ್ವಗಳಿಂದ ವಿವಿಧ ಬಣ್ಣಗಳ, ಪರಿಮಳಗಳ ಮತ್ತು ಆಕಾರ ಇರುವ ಅಸಂಖ್ಯ ಹೂವುಗಳ ನಿರ್ಮಿತಿ ಆಯಿತು. ಆದ್ದರಿಂದ ಭೂದೇವಿಯು ಹೂವುಗಳಿಂದ ಅಲಂಕೃತಳಾಗಿ ಸುಂದರವಾಗಿ ಕಾಣಿಸುತ್ತಿದ್ದಾಳೆ.

೨ ಇ ೩. ಶ್ರೀ ವೃಂದಾದೇವಿ ಮತ್ತು ಧನ್ವಂತರಿದೇವರು : ವೃಂದಾದೇವಿ (ಭೂದೇವಿಯ ಅಂಶ) ಮತ್ತು ಧನ್ವಂತರಿ (ಶ್ರೀ ವಿಷ್ಣುವಿನ ಅಂಶ) ಇವರ ಸಂಯುಕ್ತ ತತ್ತ್ವಗಳಿಂದ ಪೃಥ್ವಿಯಲ್ಲಿ ತುಳಸಿ ಯಂತಹ ಅನೇಕ ಆಯುರ್ವೇದ ವನಸ್ಪತಿಗಳ ಸೃಷ್ಟಿಯಾಯಿತು. ಆದ್ದರಿಂದ ಮನುಷ್ಯನಿಗೆ ವಿವಿಧ ರೋಗಗಳಿಗÉ ಚಿಕಿತ್ಸೆ ಮಾಡಲು ಸತ್ತ್ವಪ್ರಧಾನ ಆಯುರ್ವೇದದ ಔಷಧಗಳು ಲಭ್ಯವಾಗಿವೆ.

೨ ಇ ೪. ಶ್ರೀ ಧಾನ್ಯಲಕ್ಷ್ಮಿ ಅಥವಾ ಶ್ರೀ ಧಾನ್ಯಮಾಲಿನಿ : ‘ಶ್ರೀ ಧಾನ್ಯಲಕ್ಷ್ಮಿ’ಯು ಅಷ್ಟಮಹಾಲಕ್ಷ್ಮಿಯರಲ್ಲಿ ಒಬ್ಬಳಾದ ಶ್ರೀ ಮಹಾಲಕ್ಷ್ಮಿಯ ಒಂದು ರೂಪವಾಗಿದೆ. ಅವಳ ಕೃಪೆಯಿಂದ ಮನುಷ್ಯನಿಗೆ ಕೃಷಿಯಲ್ಲಿ ವಿವಿಧ ರೀತಿಯ ಧಾನ್ಯಗಳು ಲಭ್ಯವಾಗಿವೆ. ಇದರಿಂದ ಮನುಷ್ಯನ ಉದರ ಪೋಷಣೆ ಆಗುತ್ತಿದೆ.

೨ ಇ ೫. ಶ್ರೀ ಅನ್ನಪೂರ್ಣಾ : ಈ ದೇವತೆ ಎಂದರೆ ಪಾರ್ವತಿಯ ಒಂದು ರೂಪವೇ ಆಗಿದ್ದು ಅವಳು ಕೇವಲ ಶಿವನಿಗೆ ಮಾತ್ರವಲ್ಲ, ಎಲ್ಲ ದೇವತೆಗಳಿಗೆ ಮತ್ತು ಮನುಷ್ಯರಿಗೆ ಆಹಾರವನ್ನು ಒದಗಿಸುತ್ತಾಳೆ.

೨ ಇ ೬. ಶ್ರೀ ವಿಶಾಲಾಕ್ಷಿ : ಶ್ರೀ ಅನ್ನ ಪೂರ್ಣೇಶ್ವರಿಯೇ ತನ್ನ ವಿಶಾಲ ನೇತ್ರಗಳಿಂದ ಯಾವಾಗ ಸೃಷ್ಟಿಯ ಹಸಿದ ಜೀವಗಳ ಬಗ್ಗೆ ಅವಲೋಕಿಸುತ್ತಾಳೆಯೋ, ಆಗ ಅವಳನ್ನು ‘ಶ್ರೀ ವಿಶಾಲಾಕ್ಷಿ’ ಎಂದು ಕರೆಯಲಾಗುತ್ತದೆ.

೨ ಇ ೭. ಶ್ರೀ ಮೀನಾಕ್ಷಿ ಅಥವಾ ಶ್ರೀ ಶ್ಯಾಮಲಾ : ದೇವಿಯ ಬಲಗೈಯಲ್ಲಿ ಕಮಲವಿದೆ ಮತ್ತು ಆ ಕಮಲದ ಮೇಲೆ ಒಂದು ಗಿಳಿ ಕುಳಿತಿದೆ. ಈ ಗಿಳಿಯು ಸತತವಾಗಿ ವೇದಮಂತ್ರಗಳನ್ನು ಹೇಳಿ ದೇವಿಯನ್ನು ಸ್ತುತಿಸುತ್ತದೆ ಮತ್ತು ಅವಳಿಗೆ ಭಕ್ತರ ಬಗ್ಗೆ ಹೇಳುತ್ತಿರುತ್ತದೆ. ಇವಳು ಸೃಷ್ಟಿಯ ದೇವಿಯಾಗಿದ್ದರೂ ಅವಳು ಶ್ರೀ ಶಾಕಂಭರಿ ದೇವಿ, ಶ್ರೀ ಅನ್ನಪೂರ್ಣಾದೇವಿ ಮತ್ತು ಇತರ ದೇವಿಯರಿಗೆ ಪೃಥ್ವಿಯ ಜೀವಗಳನ್ನು ರಕ್ಷಿಸಲು ಸಹಾಯ ಮಾಡುತ್ತಾಳೆ. – ಸುಶ್ರೀ (ಕು.) ಮಧುರಾ ಭೋಸಲೆ

೨ ಇ ೮. ಶ್ರೀ ಕಾಮಾಕ್ಷಿ : ಈ ದೇವಿಯ ಒಂದು ಕೈಯಲ್ಲಿ ಕಬ್ಬಿನ ಧನುಷ್ಯ ಮತ್ತು ಇನ್ನೊಂದು ಕೈಯಲ್ಲಿ ಹೂವುಗಳ ೫ ಬಾಣಗಳಿವೆ. ಇವಳು ತನ್ನ ಭಕ್ತರ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾಳೆ. ಅವಳ ಕೃಪೆಯಿಂದಲೇ ಶ್ರೀ ಮೀನಾಕ್ಷಿ, ಶ್ರೀ ವಿಶಾಲಾಕ್ಷಿ, ಶ್ರೀ ಅನ್ನಪೂರ್ಣಾ ಮೊದಲಾದ ದೇವಿಯರಿಗೆÉ ಕಾರ್ಯ ಮಾಡಲು ದೈವೀ ಶಕ್ತಿ ಪ್ರಾಪ್ತವಾಗುತ್ತದೆ.

ಟಿಪ್ಪಣಿ : ಶಾಕಂಭರಿದೇವಿಗೆ ಸಹಾಯ ಮಾಡುವ ವಿವಿಧ ದೇವತೆಗಳ ತತ್ತ್ವಗಳು ನವರಾತ್ರಿಯಲ್ಲಿನ ವಿವಿಧ ದಿನಗಳಲ್ಲಿ ಕಾರ್ಯನಿರತವಾಗಿರುತ್ತವೆ. ಈ ದೇವಿತತ್ತ್ವಗಳಿಂದ ಸಾಧಕರಿಗೆ ಲಾಭವಾಗಿ ಅವರ ಆಧ್ಯಾತ್ಮಿಕ ಉತ್ಕರ್ಷವಾಗಬೇಕೆಂದು ಮಹರ್ಷಿಗಳು ನವರಾತ್ರಿಯಲ್ಲಿ ಸಾಧಕರಿಗೆ ಪ್ರತಿಯೊಂದು ದಿನದ ದೇವಿತತ್ತ್ವಗಳ ಬಣ್ಣಕ್ಕನುಸಾರ ಉಡುಪುಗಳನ್ನು ಧರಿಸಲು ಹೇಳಿದ್ದಾರೆ.

೪. ಅನುಭೂತಿ

ಶಾಕಂಭರಿಯಾಗದ ಸೂಕ್ಷ್ಮ ಪರೀಕ್ಷಣೆ ಮಾಡುತ್ತಿರುವಾಗ ನನಗೆ ಮುಂದಿನ ಅನುಭೂತಿ ಬಂದಿತು. ‘ನನಗೆ ಸಾವಿರ ಎಸಳುಗಳಿರುವ ಒಂದು ದೊಡ್ಡ ಗುಲಾಬಿ ಬಣ್ಣದ ದಿವ್ಯ ಕಮಲದ ಹೂವು ಕಾಣಿಸಿತು. ಅದರ ಮಧ್ಯಭಾಗದಲ್ಲಿ ಕಾಂಚಿಪುರಮ್‌ದಲ್ಲಿನ ಶ್ರೀ ಕಾಮಾಕ್ಷಿ ದೇವಿಯು ವಿರಾಜಮಾನಳಾಗಿದ್ದಳು. ಅವಳ ಎಡಬದಿಗೆ ಕಾಶೀಪುರದ ಶ್ರೀ ವಿಶಾಲಾಕ್ಷಿ ಮತ್ತು ಬಲಬದಿಗೆ ಮಧುರೈಯಲ್ಲಿನ ಶ್ರೀ ಮೀನಾಕ್ಷಿದೇವಿ ಇವರು ಒಂದೊಂದು ಎಸಳಿನ ಮೇಲೆ ಕುಳಿತುಕೊಂಡಿರುವುದು ಕಾಣಿಸಿತು. ಈ ರೀತಿ ‘ಶ್ರೀ ಶಾಕಂಭರಿದೇವಿ, ಶ್ರೀ ಶತಾಕ್ಷಿದೇವಿ, ಶ್ರೀ ವನದುರ್ಗಾ, ಶ್ರೀ ಧಾನ್ಯಮಾಲಿನಿ, ಶ್ರೀ ಅನ್ನಪೂರ್ಣೆ, ಶ್ರೀ ಕಮಲಾ ಇತ್ಯಾದಿ ದೇವಿಯರು ಈ ವಿಶಾಲ ಕಮಲದ ವಿವಿಧ ಎಸಳುಗಳ ಮೇಲೆ ವಿರಾಜಮಾನರಾಗಿರುವುದು ಕಾಣಿಸಿತು. ಆಗ ನನಗೆ ನನ್ನ ತಲೆಯ ಮೇಲೆ ಈ ವಿಶಾಲ ಕಮಲವು ಸ್ಥಿರವಾಗಿದ್ದೂ ಅದರಿಂದ ಪ್ರಕ್ಷೇಪಿಸುತ್ತಿರುವ ಶೀತಲ ಚೈತನ್ಯವು ನನ್ನ ಸಹಸ್ರಾರಚಕ್ರದಿಂದ ದೇಹದಲ್ಲಿ ಇಳಿಯುತ್ತಿರುವುದನ್ನು ಅನುಭವಿಸಿದೆನು ಮತ್ತು ನನ್ನ ಸಂಪೂರ್ಣ ದೇಹವು ತಂಪಾಗಿ ನನ್ನ ಮನಸ್ಸು ಶಾಂತ ಮತ್ತು ಪ್ರಸನ್ನವಾಗಿರುವುದು ಅರಿವಾಯಿತು.

ಕೃತಜ್ಞತೆ : ‘ಶ್ರೀ ಗುರುಕೃಪೆಯಿಂದ ನನಗೆ ಶ್ರೀ ಶಾಕಂಭರಿದೇವಿ ಮತ್ತು ಇತರ ದೇವಿಯರ ಬಗೆಗಿನ ಜ್ಞಾನ ದೊರಕಿತು ಮತ್ತು ಅನುಭೂತಿ ಬಂದಿತು’, ಅದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.’

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದಸಮಯ, ಬೆರಳಚ್ಚು ಮಾಡಿದ ಸಮಯ ೫.೧೦.೨೦೨೪ ಬೆ.೮.೩೦ ರಿಂದ ೮.೪೫)