

೧. ಸೂಕ್ಷ್ಮ ಜ್ಞಾನದ ಚಿತ್ರದಲ್ಲಿನ ಸ್ಪಂದನಗಳ ಬಗ್ಗೆ ಓರ್ವ ಸಂತರು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಅರಿವಾದ ಪ್ರಮಾಣ

ಟಿಪ್ಪಣಿ : ಸನಾತನದ ಕೆಲವು ಸದ್ಗುರುಗಳು, ಸಂತರು ಮತ್ತು ಸಾಧಕರು ಸೂಕ್ಷ್ಮದ ಜ್ಞಾನವನ್ನು ಪಡೆಯುತ್ತಾರೆ. ಸೂಕ್ಷ್ಮ ಜ್ಞಾನದ ಚಿತ್ರದ ತಖ್ತೆಯಲ್ಲಿ ಅಧೋರೇಖಿತ ಸ್ಪಂದನಗಳ ಪ್ರಮಾಣವು ಸಾಧಕರ ಮಟ್ಟ, ಕಾಲ, ಸೂಕ್ಷ್ಮದಲ್ಲಿ ಹೋಗುವ ಕ್ಷಮತೆ ಇತ್ಯಾದಿ ಘಟಕಗಳನ್ನು ಅವಲಂಬಿಸಿರುತ್ತದೆ. ಸಾಧಕರ, ಸಂತರ ಮತ್ತು ಸದ್ಗುರುಗಳ ಸೂಕ್ಷ್ಮದಲ್ಲಿ ಹೋಗುವ ಕ್ಷಮತೆಯು ಕ್ರಮವಾಗಿ ಹೆಚ್ಚುತ್ತ ಹೋಗುತ್ತದೆ. ಆದ್ದರಿಂದ ಸಾಧಕರು, ಸಂತರು ಮತ್ತು ಸದ್ಗುರುಗಳು ಗುರುತಿಸಿದ ಯಾವುದಾದರೊಂದು ಸೂಕ್ಷ್ಮದಲ್ಲಿನ ಸ್ಪಂದನಗಳ ಶೇಕಡಾ ವಾರಿನಲ್ಲಿ ವ್ಯತ್ಯಾಸವಿರುತ್ತದೆ.

೧ ಅ. ಗುರುತತ್ತ್ವ
೧ ಅ ೧. ಗುರುತತ್ತ್ವದ ಕಣಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಕಡೆಗೆ ಪ್ರವಹಿಸುತ್ತವೆ : ಏಕೆಂದರೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಆಶೀರ್ವಾದ ಲಭಿಸಿದ್ದು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಮಾರ್ಗದರ್ಶನ ಮಾಡಿ ಸಹಾಯ ಮಾಡಲು ಅವರಿಗೆ ಜ್ಞಾನ ಸಿಗುತ್ತದೆ.
೧ ಅ ೨. ಗುರುತತ್ತ್ವದ ಕಣಗಳ ರೂಪದಲ್ಲಿನ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಹಸ್ರಾರಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗಿದೆ : ‘ಈಶ್ವರೀ ರಾಜ್ಯದ ಸ್ಥಾಪನೆ’ಯು ಪರಾತ್ಪರ ಗುರು ಡಾ. ಆಠವಲೆಯವರ ಧ್ಯೇಯವಾಗಿದೆ, ಅದನ್ನು ಸಾಧಿಸಲು ಅವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಆಶೀರ್ವಾದವನ್ನು ನೀಡಿದ್ದಾರೆ. ಆದ್ದರಿಂದ ಹೀಗಿದೆ.
೧ ಅ ೩. ಗುರುತತ್ತ್ವದ ಕಣಗಳ ರೂಪದಲ್ಲಿನ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಆಜ್ಞಾಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗಿದೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಿಂದ ಮಾರ್ಗದರ್ಶನ ಮಾಡುತ್ತಿರುವುದರಿಂದ ಹೀಗಾಗಿದೆ.
೧ ಆ. ದೇವಿತತ್ತ್ವ (ಪ್ರಸಂಗಕ್ಕನುಸಾರ ಆವಶ್ಯಕ ತಾರಕ ಅಥವಾ ಮಾರಕ)
೧ ಆ ೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೇಹದ ಸುತ್ತಲೂ ದೇವಿತತ್ತ್ವ ಇದೆ : ಏಕೆಂದರೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ದೇವಿ ಸ್ವರೂಪರಾಗಿದ್ದು ಪ್ರಸಂಗಕ್ಕನುಸಾರ ಅವರಲ್ಲಿ ಮಾರಕ ಅಥವಾ ತಾರಕ ದೇವಿತತ್ತ್ವವು ಕಾರ್ಯನಿರತವಾಗುತ್ತದೆ, ಉದಾ. ಯಾವಾಗ ‘ಯಾವುದಾದರೊಬ್ಬ ಸಾಧಕನ ಅಹಂ ಕಡಿಮೆಯಾಗಬೇಕು’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರಿಗೆ ಅನಿಸುತ್ತದೆಯೋ, ಆಗ ಆ ಸಾಧಕನೊಂದಿಗೆ ಮಾತನಾಡುವಾಗ ಅವರಲ್ಲಿ ಮಾರಕ ತತ್ತ್ವ ಮತ್ತು ಯಾವಾಗ ಒಬ್ಬ ಸಾಧಕನ ಸಾಧನೆಯ ಪ್ರಯತ್ನಗಳು ಒಳ್ಳೆಯದಾಗುತ್ತಿದ್ದು ಅವನಿಗೆ ಪ್ರೋತ್ಸಾಹ ನೀಡಲಿಕ್ಕಿದ್ದರೆ, ಅವನೊಂದಿಗೆ ಮಾತನಾಡುವಾಗ ತಾರಕತತ್ತ್ವ ಕಾರ್ಯನಿರತವಾಗುತ್ತದೆ.
೧ ಇ. ಸಮಷ್ಟಿ ಭಾವ
೧ ಇ ೧. ಸಮಷ್ಟಿ ಭಾವದ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅನಾಹತಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗಿದೆ : ‘ಸಮಷ್ಟಿ ಭಾವ’ ಇದು ಅವರ ಸ್ಥಾಯಿಭಾವವಾಗಿದೆ.
೧ ಇ ೨. ಸಮಷ್ಟಿ ಭಾವದ ಕಣಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕಡೆಯಿಂದ ಸಾಧಕರ ಕಡೆಗೆ ಪ್ರಕ್ಷೇಪಿಸುತ್ತಿವೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿ ಪ್ರೀತಿ (ನಿರಪೇಕ್ಷ ಪ್ರೇಮ) ಇರುವುದರಿಂದ ಹಾಗೆ ಆಗುತ್ತದೆ. ಅವರಲ್ಲಿನ ಸಮಷ್ಟಿ ಭಾವದಿಂದ ಅವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಯಾವಾಗಲೂ ಸಹಾಯ ಮಾಡುತ್ತಾರೆ.
೧ ಈ. ಪ್ರೀತಿ : ಪ್ರೀತಿಯ ವಲಯವು ಶ್ರೀಸತ್‌ಶಕ್ತಿ ಸಿಂಗಬಾಳರ ಅನಾಹತ ಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗಿದೆ.
೧ ಉ. ಚೈತನ್ಯ
೧ ಉ ೧. ಚೈತನ್ಯದ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸುತ್ತಲೂ ಕಾರ್ಯನಿರತವಾಗಿದೆ
೧ ಉ ೨. ಚೈತನ್ಯದ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ವ್ಯಾಪಕ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ : ಅವರು ಹೋದಲ್ಲೆಲ್ಲ ಅವರಲ್ಲಿನ ಚೈತನ್ಯವು ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ.
೧ ಊ. ಆನಂದ
೧ ಊ ೧. ಆನಂದದ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮುಖದ ಸುತ್ತಲೂ ಪ್ರಕಾಶಮಾನ ಸ್ವರೂಪದಲ್ಲಿ ಕಾರ್ಯನಿರತವಾಗಿದೆ
೧ ಊ. ೨. ಆನಂದದ ವಲಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ವ್ಯಾಪಕ ಸ್ವರೂಪದಲ್ಲಿ ಪ್ರಕ್ಷೇಪಿಸುತ್ತದೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಉಚ್ಚ ಆಧ್ಯಾತ್ಮಿಕ ಮಟ್ಟದವರಾಗಿರುವುದರಿಂದ ಹೀಗಾಗುತ್ತದೆ.
೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಅರಿವಾದ ಇತರ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಅ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿ ಅನೇಕ ಒಳ್ಳೆಯ ಗುಣಗಳಿದ್ದು ಸಾಧನೆಯ ಪ್ರತಿಯೊಂದು ಹಂತದಲ್ಲಿ ಅವರಲ್ಲಿ ಒಳ್ಳೆಯ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವ ಕ್ಷಮತೆಯಿದೆ. ಹಾಗಾಗಿ ಸಾಧಕರಿಗೂ ಅವರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಯೋಗ್ಯ ಮಾರ್ಗದರ್ಶನ ಮಾಡುತ್ತಾರೆ.
ಆ. ಅವರಲ್ಲಿ ಸಾಧನೆಯ ತೀವ್ರ ತಳಮಳವಿದೆ. ಅವರು ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞಾಪಾಲನೆ ಮಾಡಿ ಅವರಿಗೆ ಅಪೇಕ್ಷಿತ ಸಾಧನೆ ಮಾಡುತ್ತಾರೆ.
ಇ. ಅವರಲ್ಲಿ ‘ಎಲ್ಲವೂ ಪರಾತ್ಪರ ಗುರು ಡಾಕ್ಟರರೇ ಮಾಡಿಸಿಕೊಳ್ಳುತ್ತಾರೆ’, ಎಂಬ ಭಾವವಿದೆ. ಅವರಲ್ಲಿನ ಈ ಭಾವ ದಿಂದ ಅವರು ನಿರಂತರ ಆನಂದಾವಸ್ಥೆಯಲ್ಲಿರುತ್ತಾರೆ.
ಈ. ಆಶ್ರಮದಲ್ಲಿ ಘಟಿಸಿದ ಪ್ರತಿಯೊಂದು ತಪ್ಪು ಅವರ ಗಮನ ದಲ್ಲಿರುತ್ತದೆ ಮತ್ತು ಆ ತಪ್ಪು ಪುನಃ ಆಗಬಾರದೆಂದು ಅವರು ಸತತ ಪ್ರಯತ್ನಿಸುತ್ತಾರೆ.
ಉ. ಯಾವಾಗ ಸಾಧಕರು ಸಾಧನೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಳಿ ತೆಗೆದುಕೊಂಡು ಹೋಗುತ್ತಾರೆಯೋ, ಆಗ ‘ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಈ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ’, ಎಂಬ ವಿಚಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಮನಸ್ಸಿನಲ್ಲಿ ಬರುತ್ತದೆ ಮತ್ತು ಇದೇ ವಿಚಾರದಿಂದ ಅವರು ಎಲ್ಲ ಅಡಚಣೆ ಅಥವಾ ಸಮಸ್ಯೆ ಗಳನ್ನು ಬಗೆಹರಿಸುತ್ತಾರೆ.
ಊ. ಅವರು ನಿರಂತರ ಶ್ರೀಕೃಷ್ಣನ ಮತ್ತು ಪರಾತ್ಪರ ಗುರು ಆಠವಲೆಯವರ ಅನುಸಂಧಾನದಲ್ಲಿರುತ್ತಾರೆ. ಸಾಧಕರಿಗೆ ಸಾಧನೆಯಲ್ಲಿ ಬರುವ ಅಡಚಣೆಗಳನ್ನು ಬಗೆಹರಿಸಲು ಅವರಿಂದ ಸಹಜವಾಗಿ ಉತ್ತರಗಳು ಸಿಗುತ್ತವೆ.
ಎ. ಅವರಲ್ಲಿ ಕ್ಷಾತ್ರತೇಜ ಮತ್ತು ಸಾಕ್ಷಿಭಾವವಿದ್ದು ಅವರು ಯಾವಾಗಲೂ ಸ್ಥಿರವಾಗಿರುತ್ತಾರೆ.
ಐ. ಅವರಲ್ಲಿ ಸಾಧಕರ ಬಗ್ಗೆ ಎಷ್ಟೊಂದು ಪ್ರೀತಿಯಿದೆ ಅಂದರೆ, ಸಾಧಕರಿಂದ ಸಾಧನೆಯಲ್ಲಿ ಒಳ್ಳೆಯ ಪ್ರಯತ್ನಗಳಾದರೆ ಅಥವಾ ಸಾಧಕರು ಯಾವುದಾದರೊಂದು ಸೇವೆಯ ಬಗ್ಗೆ ಒಳ್ಳೆಯ ಅಭ್ಯಾಸ ಮಾಡಿ ಮಂಡಿಸಿದರೆ ಅವರಿಗೆ ತುಂಬಾ ಆನಂದವಾಗುತ್ತದೆ.
ಓ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನಕ್ಕಾಗ ಅವರ ಕಣ್ಣುಗಳಲ್ಲಿ ಪ್ರೀತಿ ಕಾಣಿಸುತ್ತದೆ ಹಾಗೂ ಅವರ ನಗು ನೋಡಿ ಸಾಧಕರಿಗೂ ಆನಂದವಾಗುತ್ತದೆ.
ಔ. ಅವರಲ್ಲಿ ಕಲಿಯವ ವೃತ್ತಿ ಒಳ್ಳೆಯದಾಗಿದ್ದು ಅವರಲ್ಲಿನ ಭಾವ ಮತ್ತು ತಳಮಳದಿಂದಾಗಿ ಅವರು ತಮ್ಮಲ್ಲಿ ಶೀಘ್ರಗತಿಯಿಂದ ಬದಲಾವಣೆ ಮಾಡಿಕೊಂಡಿದ್ದಾರೆ.
ಅಂ. ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ಕೃತಜ್ಞತೆ ಅನಿಸುತ್ತದೆ.
ಕ. ಯಾವಾಗ ಸಾಧಕರು ಅವರೊಂದಿಗೆ ಮಾತನಾಡಲು ಬರುತ್ತಾರೆಯೋ, ಆಗ ಅವರು ಶರಣಾಗತಭಾವದಿಂದ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಪ್ರಾರ್ಥನೆ ಮಾಡುತ್ತಾರೆ, ಆ ಸಮಯದಲ್ಲಿ ಅವರು ತಮ್ಮನ್ನು ತಾವೇ ಸಂಪೂರ್ಣ ಮರೆತು ಬಿಡುತ್ತಾರೆ ಮತ್ತು ಸಾಧಕರ ಮಾತುಗಳನ್ನು ಶಾಂತ ರೀತಿಯಲ್ಲಿ ಕೇಳುತ್ತಾರೆ. ಆಗ ಅವರು ಓರ್ವ ತಾಯಿಯಂತೆ ಸಾಧಕರೊಂದಿಗೆ ಮಾತನಾಡಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ.
ಖ. ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಅವರ ಅಂತಃಕರಣ ಪ್ರೀತಿಯಿಂದ ತುಂಬಿರುತ್ತದೆ ಹಾಗೂ ಸಾಧಕರಿಗೆ ಅವರು ಸರಳ ಭಾಷೆಯಲ್ಲಿ ಮಾರ್ಗದರ್ಶನ ಮಾಡುತ್ತಾರೆ.’
– ಓರ್ವ ಸಂತರು (೨೧.೫.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !