|
|
|
|
|
|
ತಮಿಳುನಾಡು
ಇಲ್ಲಿ ‘ಗೊಲೂ’ ಅಥವಾ ‘ಕೊಲೂ’ ಹೆಸರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಗೊಂಬೆಗಳನ್ನು ಅಲಂಕರಿಸಿಡುತ್ತಾರೆ. ಮನೆಯ ದೇವರ ಕೋಣೆಯಲ್ಲಿ ಮರದ ೫, ೭ ಅಥವಾ ೧೧ ಮೆಟ್ಟಿಲುಗಳನ್ನು ನಿರ್ಮಿಸಿ, ಅವುಗಳನ್ನು ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಿಸುತ್ತಾರೆ. ಇದನ್ನು ‘ಗೊಂಬೆ ಹಬ್ಬ’ ಎನ್ನುತ್ತಾರೆ. ಒಟ್ಟು ಒಂಬತ್ತು ಗೊಂಬೆಗಳನ್ನು ದೇವಿಯ ರೂಪದಲ್ಲಿ ಅಲಂಕರಿಸಿ, ಒಂಬತ್ತು ದಿನಗಳ ವರೆಗೆ ಪ್ರತಿ ದಿನ ಒಂದೊಂದು ಗೊಂಬೆಯನ್ನು ಒಂದೊಂದು ಮೆಟ್ಟಿಲಿನ ಮೇಲೆ ಇಡಲಾಗುತ್ತದೆ. ದೇವಿಯ ರೂಪದ ಈ ಗೊಂಬೆಗಳು ದುಷ್ಟ ಶಕ್ತಿಗಳನ್ನು ನಾಶ ಮಾಡುತ್ತವೆ ಎಂಬುದು ಇಲ್ಲಿನ ನಂಬಿಕೆಯಾಗಿದೆ.
ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಮಕ್ಕಳು ಹಿರಿಯರಿಗೆ ನಮಸ್ಕರಿಸಿ ಪರಸ್ಪರ ಶಮಿ ಎಲೆಗಳನ್ನು ಕೊಡುತ್ತಾರೆ. ಮಹಿಳೆಯರು ಈ ದಿನ ಗೌರಿಯ ಅರಿಶಿನ-ಕುಂಕುಮ ಮಾಡುತ್ತಾರೆ, ಇದನ್ನು ‘ಬೊಮ್ಯಲ ಕೊಲೆವು’ ಎನ್ನಲಾಗುತ್ತದೆ. ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿದ ತಟ್ಟೆಯಲ್ಲಿ ಅರಿಶಿಣದ ನಿಂತಿರುವ ಆಕಾರದ ಅಥವಾ ಕುಂಬಳಕಾಯಿ ಹೂವನ್ನು ಇಟ್ಟು ಪೂಜೆ ಮಾಡುತ್ತಾರೆ. ನಂತರ ಅದರ ಸುತ್ತ ನೃತ್ಯ ಮಾಡುತ್ತಾರೆ. ಮರುದಿನ ಇದನ್ನು ವಿಸಜಿಸುತ್ತಾರೆ.
ಆಸ್ಸಾಂ
ಇಲ್ಲಿನ ಜನರ ಪ್ರಕಾರ, ದಸರಾದ ದಿನ ಶಂಕರನ ಪತ್ನಿ ಉಮಾ ಮೊದಲ ಬಾರಿಗೆ ತವರಿಗೆ ಬಂದಳು. ಹಾಗಾಗಿ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ದಸರಾದ ದಿನ ತವರಿಗೆ ಕರೆಯುತ್ತಾರೆ. ಐತಿಹಾಸಿಕ ಆಧಾರಗಳ ಪ್ರಕಾರ, ಆಸ್ಸಾಂನ ರಾಜ ಪ್ರತಾಪ ಸಿಂಗ್ ಅವರು ಮೂರ್ತಿ ಕಲೆಯನ್ನು ಕಲಿಯಲು ಆಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ಕಲಾವಿದರನ್ನು ಕಳುಹಿಸಿದ್ದರು. ಹೀಗೆ ಆಸ್ಸಾಂನಲ್ಲಿ ದುರ್ಗಾಪೂಜೆ ಪ್ರಾರಂಭವಾಯಿತು. (ಕೃಪೆ : ದೈನಿಕ ‘ಸಕಾಳ’)
ಕೇರಳ
ಕೇರಳದ ಠಕ್ಕೆ ಗ್ರಾಮದ ಪ್ರಸಿದ್ಧ ದೇವಸ್ಥಾನದಲ್ಲಿ ಮೂರ್ತಿಯಿರುವುದಿಲ್ಲ. ಬದಲಿಗೆ ಒಂದು ದೊಡ್ಡ ಕನ್ನಡಿಯನ್ನು ಇಟ್ಟಿರುತ್ತಾರೆ. ದಸರಾದ ದಿನ ಜನರು ಅದರ ಮುಂದೆ ಬಾಗಿ ನಿಂತು ತಮ್ಮದೇ ಬಾಗಿದ ಪ್ರತಿಬಿಂಬವನ್ನು ನೋಡುತ್ತಾರೆ. ಇದರ ಅರ್ಥ ‘ದೇವರು ನಮ್ಮೊಳಗೂ ಇದ್ದಾನೆ’ ಎಂದು ನಂಬುತ್ತಾರೆ.ದಸರಾದ ಹಿಂದಿನ ದಿನ ಅಂದರೆ ನವಮಿಯಂದು ಮಕ್ಕಳು ದೇವಸ್ಥಾನ, ಮನೆ, ಶಾಲೆಗಳಲ್ಲಿ ಪುಸ್ತಕಗಳ ಪೂಜೆ ಮಾಡುತ್ತಾರೆ.
ವಿವಿಧ ರಾಜ್ಯಗಳಲ್ಲಿ ದಸರಾ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಿದರೂ, ಅದರ ಹಿಂದಿನ ಉದ್ದೇಶ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂದಿದೆ. (ಆಧಾರ : ದಿನಪತ್ರಿಕೆ ‘ಸಕಾಳ’)




‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !