‘ಲಕ್ಷ್ಮಿಮಾತೆಯ ಕೃಪೆಯಿಂದಲೇ ಮನುಷ್ಯನಿಗೆ ಧನ, ವೈಭವ ಮತ್ತು ಸುಖ-ಸಂಪತ್ತು ಪ್ರಾಪ್ತವಾಗುತ್ತದೆ. ಲಕ್ಷ್ಮಿಯ ೮ ವಿಭಿನ್ನ ರೂಪಗಳಿಗೆ ‘ಅಷ್ಟಲಕ್ಷ್ಮಿ’ ಎಂದು ಕರೆಯುತ್ತಾರೆ. ‘ಆದಿಲಕ್ಷ್ಮಿ’, ‘ಧನಲಕ್ಷ್ಮಿ’, ‘ವಿದ್ಯಾಲಕ್ಷ್ಮಿ’, ‘ಧಾನ್ಯಲಕ್ಷ್ಮಿ’, ‘ಧೈರ್ಯಲಕ್ಷ್ಮಿ’, ‘ಸಂತಾನಲಕ್ಷ್ಮಿ’, ‘ವಿಜಯಲಕ್ಷ್ಮಿ’ ಮತ್ತು ‘ರಾಜಲಕ್ಷ್ಮಿ’ ಇವರು ಅಷ್ಟಲಕ್ಷ್ಮಿಯರಾಗಿದ್ದಾರೆ. ಅಷ್ಟಲಕ್ಷ್ಮಿಯರ ಆರಾಧನೆಯಿಂದ ಮನುಷ್ಯನ ಎಲ್ಲಾ ಸಮಸ್ಯೆಗಳು ನಾಶವಾಗಿ ಸಮೃದ್ಧಿ, ಸಂಪತ್ತು, ಯಶಸ್ಸು, ಐಶ್ವರ್ಯ ಮತ್ತು ಸೌಭಾಗ್ಯ ಪ್ರಾಪ್ತವಾಗುತ್ತದೆ. ದಿನಾಂಕ ೨೬.೯.೨೦೨೪ ರ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅಷ್ಟಲಕ್ಷ್ಮಿಯರ ಮಹಿಮೆಯನ್ನು ವಿವರಿಸಿದರು; ಆದರೆ ಅಷ್ಟಲಕ್ಷ್ಮಿಯರ ಈ ಎಂಟು ರೂಪಗಳ ಆಧ್ಯಾತ್ಮಿಕ ರಹಸ್ಯ, ಹಾಗೆಯೇ ‘ಈ ಎಂಟು ತತ್ತ್ವಗಳು ಅವರಲ್ಲಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರಲ್ಲಿಯೇ) ಕಾರ್ಯನಿರತವಾಗಿರುವ ಅನುಭವವನ್ನು ನನಗೆ ಹೇಗೆ ಪಡೆಯಲು ಸಾಧ್ಯವಾಯಿತು?’, ಎನ್ನುವುದನ್ನು ನಾನು ಕೃತಜ್ಞತೆಯ ಭಾವದಿಂದ ಅವರ ಚರಣಕಮಲಗಳಲ್ಲಿ ಸಮರ್ಪಿಸುತ್ತಿದ್ದೇನೆ.

ಸೌ. ವೈಷ್ಣವಿ ಅಮೋಲ ಬಧಾಲೆ
ಈ ವರ್ಷದ ನವರಾತ್ರಿಯಲ್ಲಿ ೭.೧೦.೨೦೨೫ ರಂದು ಭಕ್ತಿಸತ್ಸಂಗಕ್ಕೆ ೮ ವರ್ಷಗಳು ಪೂರ್ಣವಾಗುತ್ತವೆ. ಆ ನಿಮಿತ್ತ ದಿವ್ಯ, ಮಧುರ, ಚೈತನ್ಯಮಯ ವಾಣಿಯ ಮೂಲಕ ಸಾಧಕರಿಗೆ ಪ್ರತಿವಾರ ಭಕ್ತಿಸತ್ಸಂಗ ರೂಪೀ ಭಕ್ತಿಪ್ರಸಾದವನ್ನು ಪ್ರದಾನಿಸುವ ಅಷ್ಟಲಕ್ಷ್ಮೀ ಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
೧. ಆದಿಲಕ್ಷ್ಮಿ
‘ನಾವು ಯಾರು ? ನಾವು ಈ ಭೂಮಿಗೆ ಏಕೆ ಬಂದಿದ್ದೇವೆ ? ಮರಣಾನಂತರ ನಾವು ಎಲ್ಲಿಗೆ ಹೋಗುತ್ತೇವೆ ? ಈ ರೀತಿ ನಮ್ಮ ಮೂಲ ಸ್ರೋತದ ಜ್ಞಾನವನ್ನು ಪಡೆಯುವುದೇ ‘ಆದಿಲಕ್ಷ್ಮಿ’. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮಾರ್ಗದರ್ಶನದ ಪ್ರಕಾರ ಗುರುಕೃಪಾಯೋಗದ ಪ್ರಕಾರ ಸಾಧನೆ ಮಾಡು ತ್ತಿರುವಾಗ, ಪ್ರತಿಯೊಬ್ಬ ಸಾಧಕನಿಗೂ ನಿರಂತರವಾಗಿ ಸಾಧನೆಯ ಕುರಿತು ಮಾರ್ಗದರ್ಶನ ನೀಡುವವರೇ ‘ಆದಿಲಕ್ಷ್ಮಿ’ ಸ್ವರೂಪಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ.
೨. ಧನಲಕ್ಷ್ಮಿ
ಮಹಾಲಕ್ಷ್ಮಿಯು ಧನಸಂಪತ್ತಿನ ದೇವಿಯಾಗಿದ್ದಾಳೆ; ಆದ್ದರಿಂದ ಅವಳಿಗೆ ‘ಧನಲಕ್ಷ್ಮಿ’ ಎಂದು ಕರೆಯತ್ತಾರೆ. ‘ನಮ್ಮಲ್ಲಿರುವ ಸಂಪತ್ತನ್ನು ‘ಧನಲಕ್ಷ್ಮಿ’ಯ ಪ್ರಸಾದ ಎಂಬ ಭಾವನೆಯಿಂದ ನಾವು ಅವಳಿಗೆ ಗೌರವ ಮತ್ತು ಧನದ ಸದುಪಯೋಗ ಮಾಡಿದರೆ ಮಾತ್ರ ಧನಲಕ್ಷ್ಮಿ ನಮ್ಮಲ್ಲಿ ಸ್ಥಿರವಾಗಿರುತ್ತಾಳೆ. ಮಾಯೆಯ ಶಾಶ್ವತವಲ್ಲದ ಸಂಪತ್ತಿನ ಆಸೆಗೆ ಸಿಲುಕಿಕೊಳ್ಳದೆ ಆಧ್ಯಾತ್ಮಿಕ ಗುಣರೂಪಿ ಸಂಪತ್ತನ್ನು ಗಳಿಸಲು ಕಲಿಸುವವಳೇ ‘ಧನಲಕ್ಷ್ಮಿ’, ಅಂದರೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಆಗಿದ್ದಾರೆ.
೩. ವಿದ್ಯಾಲಕ್ಷ್ಮಿ
ವಿದ್ಯೆ ಮತ್ತು ಜ್ಞಾನವನ್ನು ನೀಡುವ ಲಕ್ಷ್ಮಿಯ ರೂಪವೆಂದರೆ ‘ವಿದ್ಯಾಲಕ್ಷ್ಮಿ’! ವಿದ್ಯೆ ಮತ್ತು ಜ್ಞಾನದಿಂದಲೇ ಜೀವನದಲ್ಲಿ ಸ್ಥಿರತೆ ಬರುತ್ತದೆ. ಶಿಕ್ಷಣ ನಿಜವಾದ ವಿದ್ಯೆ ಅಲ್ಲ, ‘ನಾವು ಕಲಿತದ್ದನ್ನು ಆಚರಣೆಯಲ್ಲಿ ತರುವುದೇ ನಿಜವಾದ ವಿದ್ಯೆಯಾಗಿದೆ’. ಹಾಗೆ ಮಾಡಿದರೆ ಮಾತ್ರ ನಮಗೆ ‘ವಿದ್ಯಾಲಕ್ಷ್ಮಿ’ಯ ಆಶೀರ್ವಾದ ಸಿಗುತ್ತದೆ. ಮಹಾಲಕ್ಷ್ಮೀಸ್ವರೂಪಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ಎಲ್ಲಾ ಸಾಧಕರಿಗೆ ‘ಪ್ರತಿಯೊಂದು ಸೇವೆಯನ್ನು ಸರಿಯಾಗಿ ಮತ್ತು ಪರಿಪೂರ್ಣವಾಗಿ ಹೇಗೆ ಮಾಡಬೇಕು ?’ ಎಂದು ತಮ್ಮ ಸ್ವಂತ ಆಚರಣೆಯಿಂದ ಕಲಿಸುತ್ತಾರೆ. ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಮಾಡಿ ಅದನ್ನು ಗುರುಚರಣಗಳಿಗೆ ಸಮರ್ಪಿಸುವ ವಿದ್ಯೆ (ಆಶೀರ್ವಾದ) ಯಾರು ನಮಗೆ ನೀಡುತ್ತಾರೋ, ಅವರೇ ‘ವಿದ್ಯಾಲಕ್ಷ್ಮಿ’ ರೂಪದ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ !
೪. ಧಾನ್ಯಲಕ್ಷ್ಮಿ
ಧಾನ್ಯ ಅಂದರೆ ಆಹಾರ ! ನಮ್ಮಲ್ಲಿ ಧನವಿದೆ; ಆದರೆ ಧಾನ್ಯ ಇಲ್ಲದಿದ್ದರೆ ನಾವು ಹೇಗೆ ಬದುಕಲು ಸಾಧ್ಯ ? ಇದರಿಂದ ಜೀವನದಲ್ಲಿ ‘ಧಾನ್ಯಲಕ್ಷ್ಮಿ’ಯ ಅವಶ್ಯಕತೆ ನಮಗೆ ತಿಳಿದುಬರುತ್ತದೆ. ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇರುವಾಗ ಸಾಧಕರ ಆಧ್ಯಾತ್ಮಿಕ ಜೀವನದಲ್ಲಿ ಯಾವುದೇ ಕೊರತೆ ಇರುವುದಿಲ್ಲ’ ಎಂಬ ಪೂರ್ಣ ಶ್ರದ್ಧೆ ಸಾಧಕರಾದ ನಮಗೆಲ್ಲರಿಗಿದೆ.
೫. ಧೈರ್ಯಲಕ್ಷ್ಮಿ
ನಮ್ಮಲ್ಲಿ ಧನ, ಧಾನ್ಯ, ಸಂಪನ್ನತೆ ಇತ್ಯಾದಿ ಎಲ್ಲವೂ ಇದೆ; ಆದರೆ ಧೈರ್ಯ ಇಲ್ಲದಿದ್ದರೆ, ಜೀವನದ ಯಾವುದೇ ಪ್ರಸಂಗವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಇರುವುದಿಲ್ಲ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಜೀವನದಲ್ಲಿನ ಅನೇಕ ಕಷ್ಟಕರ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ಜಯಿಸಿದ್ದಾರೆ; ಆದ್ದರಿಂದಲೇ ಸಾಧಕರು ತಮ್ಮ ಸಾಧನೆಯ ತೊಂದರೆಗಳನ್ನು ಅವರ ಬಳಿ ತಂದಾಗ, ಅವರು ಸಾಧಕರಿಗೆ ಸರಿಯಾದ ದೃಷ್ಟಿಕೋನವನ್ನು ನೀಡುತ್ತಾರೆ ಮತ್ತು ಸ್ವಭಾವದೋಷ ಹಾಗೂ ಅಹಂಕಾರವನ್ನು ಧೈರ್ಯದಿಂದ ಜಯಿಸಲು ಕಲಿಸುತ್ತಾರೆ. ಈ ರೀತಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರ ರೂಪದಲ್ಲಿ ‘ಧೈರ್ಯಲಕ್ಷ್ಮಿ’ಯ ಅನುಭೂತಿಯನ್ನು ಪಡೆಯಬಹುದು.
೬. ಸಂತಾನಲಕ್ಷ್ಮಿ
ಯಾರ ಕೃಪೆಯಿಂದ ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ನೀಡುವ ಸಂತಾನ (ಮಗು) ಪ್ರಾಪ್ತವಾಗುತ್ತದೆಯೋ, ಅವಳೇ ‘ಸಂತಾನಲಕ್ಷ್ಮಿ’! ನಾವು ಕೂಡ ಆ ಲಕ್ಷ್ಮಿಯ ಸಂತಾನವೇ ಆಗಿದ್ದೇವೆ. ಸನಾತನದ ಪ್ರತಿಯೊಬ್ಬ ಸಾಧಕನನ್ನೂ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ಅಪಾರ ವಾತ್ಸಲ್ಯ, ಪ್ರೀತಿ ಮತ್ತು ಕರುಣೆಯಿಂದ ರಕ್ಷಿಸುತ್ತಾರೆ. ಸಾಧಕರಿಗೆ ಅವರು ತಮ್ಮ ತಾಯಿ ಮತ್ತು ಅಮ್ಮನಂತೆ ಅನಿಸುತ್ತಾರೆ; ಆದ್ದರಿಂದ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ನಮ್ಮ ‘ಸಂತಾನಲಕ್ಷ್ಮಿ’ ಆಗಿದ್ದಾರೆ.
೭. ವಿಜಯಲಕ್ಷ್ಮಿ
ಈಶ್ವರಪ್ರಾಪ್ತಿಯ ಮಹಾನ್ ಧ್ಯೇಯದ ಪ್ರಾಪ್ತಿ ಗಾಗಿಯೇ ನಮ್ಮೆಲ್ಲರ ಜನ್ಮವಾಗಿದೆÉ. ಈಶ್ವರನ ಅಧಿಷ್ಠಾನ ಇರುವಲ್ಲಿ ವಿಜಯ ಖಂಡಿತವಾಗಿಯೂ ಇರುತ್ತದೆ; ಏಕೆಂದರೆ ದೇವರ ಇನ್ನೊಂದು ಹೆಸರೇ ‘ಯಶಸ್ಸು’ ಅಥವಾ ‘ವಿಜಯ’ ಆಗಿದೆ. ಈಶ್ವರನ ಕಾರ್ಯಕ್ಕಾಗಿಯೇ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರ ಜನ್ಮ ಆಗಿರುವುದರಿಂದ, ಅವರ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಮತ್ತು ವಿಜಯವಿದೆ. ಇಂತಹ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ನಮಗೆ ‘ವಿಜಯಲಕ್ಷ್ಮಿ’ಯಾಗಿದ್ದಾರೆ.
೮. ರಾಜಲಕ್ಷ್ಮಿ
ರಾಜನು ಯಶಸ್ವಿಯಾಗಿ ರಾಜ್ಯವನ್ನು ನಡೆಸಲು ಅವನ ಬೆನ್ನಿಗೆ ‘ರಾಜಲಕ್ಷ್ಮಿ’ ಇರಬೇಕಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಆಧ್ಯಾತ್ಮಿಕ ಅಧಿಪತ್ಯ ಇಡೀ ವಿಶ್ವದ ಮೇಲೆ ಇದೆ, ಅಂದರೆ ಅವರು ವಿಶ್ವದ ಆಧ್ಯಾತ್ಮಿಕ ರಾಜರಾಗಿದ್ದಾರೆ ಮತ್ತು ಅವರ ಕಾರ್ಯಕ್ಕೆ ಸಹಕರಿಸಲು ಬಂದ ರಾಜಲಕ್ಷ್ಮಿಯೇ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ. ಯಾರ ಬಳಿ ಅಷ್ಟಲಕ್ಷ್ಮಿಯರು ಇಲ್ಲವೋ, ಅಂದರೆ ‘ಎಂಟು ಜನ ಲಕ್ಷ್ಮಿಯರು’ ಇಲ್ಲದಿದ್ದರೆ ಅವರಿಗೆ ‘ಅಷ್ಟ ದಾರಿದ್ರ್ಯ’ ಎಂದು ಹೇಳಲಾಗುತ್ತದೆ. ಸಾಧಕರ ಆಧ್ಯಾತ್ಮಿಕ ಜೀವನದಲ್ಲಿನ ‘ಅಷ್ಟ ದಾರಿದ್ರ್ಯ’ವನ್ನು ನಾಶ ಮಾಡಿ, ಅವರ ಮೇಲೆ ಕೃಪೆ ಮಾಡಲು ಈ ಅಷ್ಟಲಕ್ಷ್ಮಿಯರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ರೂಪದಲ್ಲಿ ಅವತರಿಸಿದ್ದಾರೆ.
ಸಾಧಕರೇ, ‘ನವರಾತ್ರಿಯ ಮೊದಲು ಸಾಕ್ಷಾತ್ ಅಷ್ಟಲಕ್ಷ್ಮಿಯೇ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ರೂಪದಲ್ಲಿ ನಮ್ಮೆಲ್ಲರಿಗಾಗಿ ಅವತರಿಸಿದ್ದಾರೆ’ ಎಂಬ ಭಾವನೆಯಿಂದ, ಅವರಲ್ಲಿರುವ ಅಷ್ಟಲಕ್ಷ್ಮಿ ತತ್ತ್ವಗಳಿಗೆ ಅನನ್ಯ ಭಾವದಿಂದ ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸಿ ಕೃತಜ್ಞತಾಭಾವದಲ್ಲಿರೋಣ !
– ಸೌ. ವೈಷ್ಣವಿ ಅಮೋಲ ಬಧಾಲೆ (ಆಧ್ಯಾತ್ಮಿಕ ಮಟ್ಟ ಶೇ. ೬೪) ಸನಾತನ ಆಶ್ರಮ, ರಾಮನಾಥಿ, ಗೋವಾ.

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !