ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮುನ್ನಡೆಯಲು ಯುರೋಪ್‌ನ ಪ್ರಯತ್ನ

ಯುರೋಪ್ – ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾದೊಂದಿಗೆ ಸ್ಪರ್ಧಿಸಲು ಯುರೋಪ್ ‘ಜುಪಿಟರ್’ ಎಂಬ ಹೆಸರಿನ ಅತ್ಯಂತ ವೇಗದ ಕಂಪ್ಯೂಟರ್ (ಸೂಪರ್‌ಕಂಪ್ಯೂಟರ್) ಅನ್ನು ನಿರ್ಮಿಸಿದೆ. ಇದು ಇತರ ಕಂಪ್ಯೂಟರ್‌ಗಳಿಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದು, ಇದನ್ನು ನಿರ್ಮಿಸಲು 500 ದಶಲಕ್ಷ ಯುರೋ (51 ಸಾವಿರ ಕೋಟಿ ರೂಪಾಯಿ) ಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ.
ಯುರೋಪಿನ ದೇಶವಾದ ಜರ್ಮನಿಯಲ್ಲಿ ಈ ಅತ್ಯಂತ ವೇಗದ ‘ಜುಪಿಟರ್’ ಕಂಪ್ಯೂಟರ್ ಅನ್ನು ಉದ್ಘಾಟಿಸಲಾಯಿತು. ಇದು ಯುರೋಪ್‌ನ ಮೊದಲ ದೊಡ್ಡ ಮತ್ತು ವೇಗದ ಕಂಪ್ಯೂಟರ್ ಆಗಿದ್ದು, ಮುಂದಿನ 10 ವರ್ಷಗಳ ಹವಾಮಾನ ಮುನ್ಸೂಚನೆಗಳನ್ನು ನೀಡುವಲ್ಲಿ ಸಮರ್ಥವಾಗಿದೆ. ಜೊತೆಗೆ, ಮರೆವು ರೋಗದಂತಹ ಕಾಯಿಲೆಗಳ ಸಂಶೋಧನೆಯಲ್ಲೂ ‘ಜುಪಿಟರ್’ ಅನ್ನು ಬಳಸಬಹುದು. ಜರ್ಮನಿಯ ಚಾನ್ಸಲರ್ ಫ್ರೆಡೆರಿಕ್ ಮೆರ್ಜ್ ಅವರು, ಈ ‘ಸೂಪರ್‌ಕಂಪ್ಯೂಟರ್’ ಯುರೋಪ್ ಅನ್ನು ಅಮೆರಿಕ ಮತ್ತು ಚೀನಾದಂತೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು