ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ ಇವರ ಅನಾರೋಗ್ಯದಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ

ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ

ಪರಾತ್ಪರ ಗುರು ಡಾ. ಆಠವಲೆಯವರು ಮನುಷ್ಯನಿಗೆ ರೋಗಗಳನ್ನು ಪರಿಹರಿಸಲು ಪ್ರಾಣಶಕ್ತಿವಹನದಲ್ಲಿನ ಅಡತಡೆಗಳನ್ನು ಹುಡುಕುವುದು ಮತ್ತು ಕೈ ಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಮಾಡುವುದು, ಇದನ್ನು ಕಲಿಸುವ ಉಪಾಯಪದ್ಧತಿಯನ್ನು ಹುಡುಕಿದರು. ಪೂ. (ಶ್ರೀಮತಿ) ನಿರ್ಮಲಾ ದಾತೆ ಇವರು ಸದ್ಯ ಗಂಭೀರ ಅನಾರೋಗ್ಯ (ಪ್ರಜ್ಞಾಹೀನ) ದಲ್ಲಿದ್ದು ಅವರ ಮೇಲೆ ಆಧುನಿಕ ವೈದ್ಯರು ಔಷಧೋಪಚಾರವನ್ನು ಮಾಡುತ್ತಿದ್ದಾರೆ. ಇದರೊಂದಿಗೆ ತಮ್ಮ ಪ್ರಾಣಶಕ್ತಿಯು ಅತ್ಯಲ್ಪವಾಗಿದ್ದರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. ಅಜ್ಜಿಯವರಿಗಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಟ್ಟರು, ಹಾಗೆಯೇ ಇತರ ಸಾಧಕರಿಗೆ ಉಪಾಯಗಳನ್ನು ಹೇಳಿ ಅವರಿಂದ ಉಪಾಯವನ್ನು ಮಾಡಿಸಿಕೊಂಡರು. ಈ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಟ್ಟಿದ್ದೇವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಪ್ರಾಣಶಕ್ತಿವಹನ ಪದ್ಧತಿಗನುಸಾರ ಮತ್ತು ಪೂ. ದಾತೆಅಜ್ಜಿ ಇವರಿಗಾಗಿ ಉಪಾಯ ಇವುಗಳಲ್ಲಿನ ವ್ಯತ್ಯಾಸ !

ಪ್ರಶ್ನೆ : ಪ್ರಾಣಶಕ್ತಿವಹನ ಪದ್ಧತಿಗನುಸಾರ ಹುಡುಕಿದ ಉಪಾಯ ಮತ್ತು ಸದ್ಯ ಪೂ. ದಾತೆಅಜ್ಜಿ ಇವರಿಗಾಗಿ ಮಾಡುತ್ತಿರುವ ನಾಮಜಪಾದಿ ಉಪಾಯಗಳು ಎಲ್ಲರಿಗೂ ಅನ್ವಯಿಸುತ್ತವೆಯೇ ?

ಪ.ಪೂ. ಡಾಕ್ಟರ : ಇಲ್ಲ. ಈ ಉಪಾಯಗಳು ಎಲ್ಲರಿಗಾಗಿ ಇಲ್ಲ

ಪ್ರಶ್ನೆ : ಪ್ರಾಣಶಕ್ತಿವಹನ ಪದ್ಧತಿಗನುಸಾರ ಉಪಾಯವನ್ನು ಹುಡುಕುವಾಗ (ಹೆಬ್ಬೆರಳನ್ನು ಬಿಟ್ಟು ಕೈಯ ಉಳಿದ ಬೆರಳುಗಳನ್ನು ಅಡೆತಡೆಗಳಿರುವ ಸ್ಥಾನದಿಂದ ದೇಹದಿಂದ ೧-೨ ಸೆಂ.ಮೀ. ದೂರದಲ್ಲಿ) ಮುದ್ರೆಯನ್ನು ಮಾಡಿ ಸ್ವಾಧಿಷ್ಠಾನಚಕ್ರದಿಂದ ಆರಂಭ ಮಾಡಿ ಮೇಲಿನ ಚಕ್ರಗಳ ದಿಶೆಯಲ್ಲಿ ಒಯ್ಯುತ್ತೇವೆ; ಆದರೆ ತಾವು ಪೂ. ದಾತೆಅಜ್ಜಿಯವರ ಚರಣಗಳಿಂದ ಆರಂಭಿಸಲು ಹೇಳಿದ್ದೀರಿ. ಈ ಎರಡರಲ್ಲಿನ ವ್ಯತ್ಯಾಸವೇನು ?

ಸೌ. ಜ್ಯೋತಿ ದಾತೆ

ಪ.ಪೂ. ಡಾಕ್ಟರ್‌ : ಪ್ರಾಣಶಕ್ತಿವಹನ ಪದ್ಧತಿಯಲ್ಲಿ ಅಡಚಣೆಗಳು ಇರುತ್ತವೆ

ಅವು ಪಾದ, ಮೊಣಕಾಲು ಅಥವಾ ತೊಡೆ, ಹೀಗೆ ಎಲ್ಲಿಯೂ ಇರಬಹುದು. ಈಗ ಹೇಳಿದ ಈ ಉಪಾಯವು ಕಲಿಯಲು ಮತ್ತು ಆ ಅಡಚಣೆಗಳನ್ನು ದೂರಗೊಳಿಸಲಿಕ್ಕಿದೆ. ಆ ಅಡೆÀತಡೆ ದೂರವಾದ ನಂತರ ಪ್ರಾಣಶಕ್ತಿವಹನವು ಸರಾಗವಾಗುವುದು. ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳನ್ನು ಮಾಡುವಾಗ ಈಶ್ವರನಿಂದ ಸ್ವಲ್ಪ ಪ್ರಮಾಣದಲ್ಲಿ ಚೈತನ್ಯ (ಪೂ. ದಾತೆಅಜ್ಜಿಯವರ ಶರೀರದಲ್ಲಿ) ಹೋಗುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಪೂ. ಅಜ್ಜಿಯವರಿಂದ ಚೈತನ್ಯ ಪ್ರಕ್ಷೇಪಿಸುತ್ತದೆ. ಆದ್ದರಿಂದ ಅಡೆÀತಡೆಗಳ ಸ್ಥಾನವು ಮೇಲಿನ ದಿಶೆಯಿಂದ ಹೋಗತೊಡಗುತ್ತದೆ.

೨. ನಾಮಜಪಾದಿ ಉಪಾಯಗಳನ್ನು ಮಾಡುವವರ ಮಟ್ಟವು ಎಷ್ಟಿರಬೇಕು ?

ಪ್ರಶ್ನೆ : ಯಾರಿಗಾಗಿ ಉಪಾಯವನ್ನು ಮಾಡುತ್ತೇವೆಯೋ (ರೋಗಿ) ಆ ವ್ಯಕ್ತಿ ಮತ್ತು ಉಪಾಯವನ್ನು ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಎಷ್ಟಿರಬೇಕು ?

ಪ.ಪೂ. ಡಾಕ್ಟರ್‌ : ಇಬ್ಬರೂ ಸಂತರ ಮಟ್ಟದಲ್ಲಿರಬೇಕು, ಅಂದರೆ ಇಬ್ಬರ ಆಧ್ಯಾತ್ಮಿಕ ಮಟ್ಟ ಕನಿಷ್ಠಪಕ್ಷ ಶೇ. ೭೦ ರಷ್ಟಿರಬೇಕು.

ಪ್ರಶ್ನೆ : ಆಪತ್ಕಾಲದಲ್ಲಿ ಈ ರೀತಿಯ ಸಂತರು ಇನ್ನೊಬ್ಬ ಸಂತರಿಗಾಗಿ ಉಪಾಯವನ್ನು ಮಾಡಬಹುದೇ ? ಹಾಗೆಯೇ ಈ ಉಪಾಯವನ್ನು ಕೇವಲ ಸಮಷ್ಟಿ ಸಂತರ ಮೇಲೆ ಮಾಡಬಹುದೇ ಅಥವಾ ವ್ಯಷ್ಟಿ ಸಂತರ ಮೇಲೆಯೂ ಮಾಡಬಹುದೋ ?

ಪ.ಪೂ. ಡಾಕ್ಟರ್‌ : ಈ ಉಪಾಯವನ್ನು ಕೇವಲ ಒಬ್ಬ ಸಂತರು ಇನ್ನೊಬ್ಬ ಸಂತರ ಮೇಲೆ ಮಾಡಬಹುದು. ವ್ಯಷ್ಟಿ ಸಂತರು ಅಥವಾ ಸಮಷ್ಟಿ ಸಂತರು ಇದಕ್ಕಿಂತ ಅವರ ಆಧ್ಯಾತ್ಮಿಕ ಮಟ್ಟವು (ಕನಿಷ್ಠ ಶೇ. ೭೦ ರಷ್ಟು ಇರುವುದು) ಮಹತ್ವದ್ದಾಗಿದೆ.

೩. ಹೆಚ್ಚು ಪರಿಣಾಮಕಾರಿಯಾಗಲು ಯಾವ ಭಾಷೆಯಲ್ಲಿ ಜಪವನ್ನು ಮಾಡಬೇಕು !

ಪ್ರಶ್ನೆ : ಕೆಲವು ಸಾಧಕರು ಇತರ ಭಾಷೆ ಅಥವಾ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ಅಂತಹ ಸಮಯದಲ್ಲಿ ನಾಮಜಪಾದಿ ಉಪಾಯಗಳಿಗಾಗಿ ಅಂಕಗಳ ಜಪ ಬಂದಿದ್ದರೆ, ಉದಾ. ೧೦ ಮತ್ತು ಅವರು ಮರಾಠಿಯಲ್ಲಿ ‘ದಹಾ (ಹತ್ತು)’ ಎಂಬ ನಾಮಜಪವನ್ನು ಮಾಡುವುದು ಪರಿಣಾಮಕಾರಿಯಾಗಿದೆಯೇ ಅಥವಾ ಆಂಗ್ಲಭಾಷೆಯಲ್ಲಿ ‘ಟೆನ್’ (೧೦) ಅಂದರೂ ಅದರ ಪರಿಣಾಮ ಅಷ್ಟೇ ಆಗುತ್ತದೆಯೇ ?

ಪ.ಪೂ. ಡಾಕ್ಟರ್‌ : ಸಂಸ್ಕೃತ ಭಾಷೆಯು ಅತ್ಯಧಿಕ ಸಾತ್ತ್ವಿಕವಾಗಿದೆ. ಮರಾಠಿ ಭಾಷೆಯು ಸಂಸ್ಕೃತದಿಂದ ಉತ್ಪನ್ನವಾಗಿದೆ. ಆದ್ದರಿಂದ ಆಂಗ್ಲದಲ್ಲಿನ ‘ಟೆನ್‌’ನ (೧೦) ತುಲನೆಯಲ್ಲಿ ಮರಾಠಿಯಲ್ಲಿನ ‘ದಹಾ (ಹತ್ತು)’ ಹೆಚ್ಚು ಪರಿಣಾಮಕಾರಿಯಾಗುವುದು.

– ಸೌ. ಜ್ಯೋತಿ ದಾತೆ (ಪೂ. ಅಜ್ಜಿಯವರ ಸೊಸೆ, ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೬೦ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೭.೨೦೨೪)