| ಉಚ್ಚ ಲೋಕದಿಂದ ಪೃಥ್ವಿಯ ಮೇಲೇ ಜನ್ಮತಾಳಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಕು. ವಿದ್ಯಾಶ್ರೀ ಮುಕುಂದ ಮೊಗೆರ ಇವಳು ಈ ಪೀಳಿಗೆಯಲ್ಲೊಬ್ಬಳು ! |
‘ಕು. ವಿದ್ಯಾಶ್ರೀ ಮೊಗೆರ ಇವಳ ತಾಯಿಗೆ ಗಮನಕ್ಕೆ ಬಂದ ಅವಳ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ವಯಸ್ಸು ೧ ರಿಂದ ೩ ತಿಂಗಳು
ಅ. ‘ವಿದ್ಯಾಶ್ರೀಯು ಒಂದು ತಿಂಗಳಿನವಳು ಇದ್ದಾಗಿನಿಂದ ಅವಳ ಮೈಮೇಲೆ ದೈವೀಕಣಗಳು ಕಾಣಿಸತೊಡಗಿದವು. ಅವಳು ಅನಾರೋಗ್ಯದಲ್ಲಿರುವಾಗ ದೈವೀ ಕಣಗಳು ಹೆಚ್ಚು ಕಾಣಿಸುತ್ತಿದ್ದವು.
ಆ. ವಿದ್ಯಾಶ್ರೀಯು ಕೈಗಳ ಮುದ್ರೆಯನ್ನು ಮಾಡಿ ಮಲಗುತ್ತಿದ್ದಳು.
ಇ. ಅವಳ ಜಾತಕವನ್ನು ಊರಿನಲ್ಲಿನ ಓರ್ವ ಮುಖ್ಯ ಆಚಾರ್ಯರಿಗೆ ತೋರಿಸಿದಾಗ ಅವರು ”ಮಗುವಿನ ಜನ್ಮ ಚಾಮುಂಡೇಶ್ವರಿ ಜಯಂತಿಯಂದು ಮಧ್ಯರಾತ್ರಿ ಆಗಿದೆ. ಆದ್ದರಿಂದ ಅವಳಲ್ಲಿ ದೇವಿಯಂತೆ ಕ್ಷಾತ್ರಭಾವವಿದೆ’’ ಎಂದು ಹೇಳಿದರು.
೨. ವಯಸ್ಸು ೯ ತಿಂಗಳಿಂದ ೧ ವರ್ಷ
೨ ಅ. ಸಾತ್ತ್ವಿಕ ವಿಷಯಗಳ ಬಗ್ಗೆ ಆಸಕ್ತಿ ಇರುವುದು
೧. ನಾವು ನಾಮಜಪದ ಯಂತ್ರದಲ್ಲಿ ನಾಮಜಪವನ್ನು ಹಾಕಿಟ್ಟರೆ, ಅವಳು ಕೇಳುತ್ತಿದ್ದಳು ಮತ್ತು ರಾತ್ರಿ ನಾಮಜಪ ಯಂತ್ರದ ಹತ್ತಿರ ಹೋಗಿ ಮಲಗುತ್ತಿದ್ದಳು.
೨. ನಾವು ಭಜನೆಗಳನ್ನು ಹಚ್ಚಿದಾಗ ಅವಳು ಆನಂದದಿಂದ ಕೇಳುತ್ತಿದ್ದಳು.
೩. ನಾನು ವಹಿಯಲ್ಲಿ ನಾಮಜಪವನ್ನು ಬರೆಯುತ್ತಿದ್ದೆನು. ವಿದ್ಯಾಶ್ರೀಯು ಯಾವಾಗಲೂ ನಾನು ಬರೆದಿರುವ ನಾಮಜಪದ ಕಡೆಗೆ ನೋಡುತ್ತಿದ್ದಳು.
೪. ಅವಳು ಯಾವಾಗಲೂ ದೇವರಿಗೆ ಮತ್ತು ಹಿರಿಯರಿಗೆ ನಮಸ್ಕಾರ ಮಾಡುತ್ತಾಳೆ.
೨ ಆ. ಗುರುಗಳ ಬಗೆಗಿನ ಭಾವ : ಒಮ್ಮೆ ನಾನು ಅವಳನ್ನು ಸೇವಾಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೆನು. ಆಗ ಅವಳು ಧ್ಯಾನಮಂದಿರದಲ್ಲಿ ಹೋಗಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದ ಮುಂದೆ ಮೊಣಕಾಲೂರಿ ಕುಳಿತುಕೊಂಡಳು ಮತ್ತು ಅವರಿಗೆ ‘ಬಾಬಾ’ ಎಂದು ಕರೆಯುತ್ತಿದ್ದಳು. ಅದನ್ನು ನೋಡಿ ನನಗೆ ಭಾವಜಾಗೃತಿ ಆಯಿತು.

೩. ವಯಸ್ಸು ೪ ರಿಂದ ೯ ವರ್ಷ
೩ ಅ. ಯಾವಾಗಲೂ ಅವಳು ಹಸನ್ಮುಖಿಯಾಗಿರುತ್ತಾಳೆ
೩ ಆ. ಅಚ್ಚುಕಟ್ಟುತನ : ಅವಳು ತನ್ನ ಎಲ್ಲ ವಸ್ತುಗಳನ್ನು ಆಯಾ ಜಾಗದಲ್ಲಿಯೇ ಸರಿಯಾಗಿ ಇಡುತ್ತಾಳೆ.
೩ ಇ. ಇತರರಿಗೆ ಸಹಾಯ ಮಾಡುವುದು : ಅವಳು ನನಗೆ ಮನೆಯಲ್ಲಿನ ಎಲ್ಲ ಕೆಲಸಗಳಲ್ಲಿ ಮತ್ತು ಸೇವೆಯಲ್ಲಿ ಸಹಾಯ ಮಾಡುತ್ತಾಳೆ.
೩ ಈ. ಸಾತ್ತ್ವಿಕ ಉಡುಪುಗಳನ್ನು ಧರಿಸುವುದು : ಒಮ್ಮೆ ವಿದ್ಯಾಶ್ರೀಗೆ ಅವಳ ಅಜ್ಜಿ (ವಿದ್ಯಾಶ್ರೀಯ ತಾಯಿಯ ತಾಯಿ, ಶ್ರೀಮತಿ ಲಕ್ಷ್ಮಿ ಕಾಳಿದಾಸ, ವಯಸ್ಸು ೬೪ ವರ್ಷ) ಪ್ಯಾಂಟ್-ಶರ್ಟಾನ್ನು ಧರಿಸಲು ಹೇಳಿದರು. ಆಗ ವಿದ್ಯಾಶ್ರೀಯು, ”ನನಗೆ ಹೆಣ್ಣುಮಕ್ಕಳು ಹಾಕಿಕೊಳ್ಳುವ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟವಾಗುತ್ತದೆ. ನನಗೆ ಗಂಡುಮಕ್ಕಳ ಬಟ್ಟೆಗಳನ್ನು ಹಾಕಿಕೊಳ್ಳಕಲು ಇಷ್ಟವಾಗುವುದಿಲ್ಲ’’ ಎಂದು ಹೇಳಿದಳು.
೩ ಉ. ತಪ್ಪುಗಳ ಬಗ್ಗೆ ಸಂವೇದನಾಶೀಲತೆ : ವಿದ್ಯಾಶ್ರೀಗೆ ಅವಳ ತಪ್ಪುಗಳನ್ನು ಹೇಳಿದರೆ, ಅವಳು ತಕ್ಷಣ ತಪ್ಪುಗಳನ್ನು ಸ್ವೀಕರಿಸುತ್ತಾಳೆ. ಆ ಸಮಯದಲ್ಲಿ ಅವಳ ಮೇಲೆ ಎಷ್ಟೇ ಸಿಟ್ಟು ಮಾಡಿದರೂ, ಅವಳು ಶಾಂತಿಯಿಂದ ಕೇಳುತ್ತಾಳೆ.
೩ ಊ. ಸೇವೆಯ ಸೆಳೆತ : ಅವಳಿಗೆ ಚಿಕ್ಕಂದಿನಿಂದಲೂ ಸೇವೆಯನ್ನು ಮಾಡಲು ತುಂಬಾ ಇಷ್ಟವಾಗುತ್ತದೆ. ಯಾವುದೇ ಸೇವೆಯನ್ನು ಮಾಡಿದರೂ, ಅವಳು ಮನಃಪೂರ್ವಕವಾಗಿ ಮಾಡುತ್ತಾಳೆ. ಕಳೆದ ೧ ವರ್ಷದಿಂದ ಅವಳು ‘ಆನ್‌ಲೈನ್’ ಬಾಲಸಂಸ್ಕಾರವರ್ಗದಲ್ಲಿ ಪಾಲ್ಗೊಂಡು ಅದರಂತೆ ಕೃತಿ ಮಾಡುತ್ತಿದ್ದಾಳೆ.
– ಸೌ. ಸೌಮ್ಯ ಮುಕುಂದ ಮೊಗೆರ (ಕು. ವಿದ್ಯಾಶ್ರೀಯ ತಾಯಿ), ಶಿವಮೊಗ್ಗ (೧೦.೬.೨೦೨೪)
ವ್ಯಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಮನ್ವಿತಾ ಪ್ರಕಾಶ (ವಯಸ್ಸು ೮ ವರ್ಷ) !
ದೈವೀ ಬಾಲಕರನ್ನು ರೂಪಿಸುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನ
ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಧಾರವಾಡದ ಚಿ. ಶ್ರೀಹರಿ ಬಸವರಾಜ ಗೋರವರ (ವಯಸ್ಸು ೫ ವರ್ಷ) !
ದೇಶದ ನಿಜವಾದ ಇತಿಹಾಸವನ್ನು ಮಂಡಿಸಲು ಅವಿರತವಾಗಿ ಶ್ರಮಿಸಿದ ಬೆಂಗಳೂರಿನ ‘ಪದ್ಮಭೂಷಣ’ ಹಾಗೂ ‘ಸರಸ್ವತಿ ಸಮ್ಮಾನಿತರ’ ಡಾ. ಪ್ರಾ. ಎಸ್.ಎಲ್. ಭೈರಪ್ಪ (ವಯಸ್ಸು ೯೪) !
೧೫.೯.೨೦೨೫, ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನ
೧೩.೯.೨೦೨೫, ಭಾದ್ರಪದ ಕೃಷ್ಣ ಷಷ್ಠಿ, ಜ್ಞಾನೇಶ್ವರಿ ಜಯಂತಿ