ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ರಾಯಚೂರು ಜಿಲ್ಲೆಯ ಚಿ. ನೀಲಲೋಹಿತ ಮಾರುತಿ ನಾಯಕ (ವಯಸ್ಸು ೯ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನ್ಮತಾಳಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಚಿ. ನೀಲಲೋಹಿತ ನಾಯಕ ಇವಳು ಈ ಪೀಳಿಗೆಯಲ್ಲೊಬ್ಬ !
ಚಿ. ನೀಲಲೋಹಿತ ನಾಯಕ

೧. ಜನನದ ಮೊದಲು

‘ನೀಲಲೋಹಿತನ ತಾಯಿ (ಸೌ. ರಾಜೇಶ್ವರಿ ನಾಯಕ) ಇವಳು ಗರ್ಭಿಣಿ ಇದ್ದಾಗ ‘ಶ್ರೀಮದ್ಭಾಗವತ’ಅನ್ನು ಕೇಳುತ್ತಿದ್ದಳು. ಅವಳು ‘ಕುಲದೇವತೆ ಮತ್ತು ಶ್ರೀರಾಮ’ನ ನಾಮಜಪವನ್ನು ಬರೆಯುತ್ತಿದ್ದಳು.’

೨. ಜನಿಸಿದಾಗಿನಿಂದ ೯ ವರ್ಷ

೨ ಅ. ಚಿ. ನೀಲಲೋಹಿತನು ಅಳುತ್ತಿದ್ದಾಗ ಭಕ್ತಿಗೀತೆಗಳನ್ನು ಹಾಡಿದರೆ, ಅವನು ಶಾಂತನಾಗುತ್ತಿದ್ದನು.

೨ ಆ. ನಮ್ಮ ಮನೆಯಲ್ಲಿ ಹಸುಗಳು ಬಂದರೆ ನೀಲಲೋಹಿತನು ಅವುಗಳಿಗೆ ತಿನ್ನಲು ಕೊಡುತ್ತಿದ್ದನು ಮತ್ತು ಅವುಗಳೊಂದಿಗೆ ಆಟವಾಡುತ್ತಿದ್ದನು.

೨ ಇ. ಸೇವಾಭಾವ : ನೀಲಲೋಹಿತನು ತಾಯಿ-ತಂದೆಯವರೊಂದಿಗೆ ಸಮಷ್ಟಿ ಸೇವೆಯನ್ನು ಮಾಡುತ್ತಾನೆ. ಅವನು ಅಧ್ಯಾತ್ಮಪ್ರಸಾರದ ವಿವಿಧ ಸೇವೆಗಳನ್ನು ಮಾಡುತ್ತಾನೆ. ಅವನು ಸೇವೆಯನ್ನು ಮಾಡುವಾಗ ಆನಂದದಿಂದ ಇರುತ್ತಾನೆ.

ಶ್ರೀ. ಮಾರುತಿ ನಾಯಕ

೨ ಈ. ದೇವರು ಮತ್ತು ಗುರುಗಳ ಬಗೆಗಿನ ಭಾವ

೧. ನೀಲಲೋಹಿತನು ಯಾವಾಗಲೂ ಶ್ರೀಕೃಷ್ಣನ ಮೂರ್ತಿಯ ಪೂಜೆಯನ್ನು ಮಾಡುವುದು, ನೈವೇದ್ಯವನ್ನು ತೋರಿಸುವುದು ಮತ್ತು ಮೂರ್ತಿಯ ಮುಂದೆ ನೃತ್ಯವನ್ನು ಮಾಡುವುದು, ಇಂತಹ ಕೃತಿಗಳನ್ನು ಮಾಡುತ್ತಾನೆ. ಅವನು ಕೇವಲ ಕೃಷ್ಣನ ಅನುಸಂಧಾನದಲ್ಲಿರುತ್ತಾನೆ.

೨. ಅವನು ಪ.ಪೂ. ಗುರುದೇವರಿಗೆ (ಪರಾತ್ಪರ ಗುರು ಡಾ. ಆಠವಲೆಯವರಿಗೆ) ‘ಗೋವಿಂದ’, ಎಂದು ಕರೆಯುತ್ತಿದ್ದನು. ಅವನು ನನಗೆ ‘ಇತರರಿಗೆ ಪರಮ ಪೂಜ್ಯ ಗುರುದೇವರು ‘ಗೋವಿಂದ’ರಾಗಿದ್ದಾರೆ, ಎಂದು ಏಕೆ ತಿಳಿಯುವುದಿಲ್ಲ ?’, ಎಂದು ಕೇಳುತ್ತಿದ್ದನು.’ – ಶ್ರೀ. ಮಾರುತಿ ನಾಯಕ (ತಂದೆ), ರಾಯಚೂರು. (೧೭.೭.೨೦೨೪)