ಅಮೇರಿಕಾ: ಟ್ರಂಪ್ ಅವರನ್ನು ಟೀಕಿಸಿದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್

ವಾಷಿಂಗ್ಟನ್ – ಅಮೇರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಕುರಿತಾದ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಜಾನ್ ಅವರು ಮಾತನಾಡಿ, ಟ್ರಂಪ್ ಅವರ ವಿನಾಶಕಾರಿ ಆಮದು ಸುಂಕ ನೀತಿಯಿಂದ ಅಮೇರಿಕಾ ಮತ್ತು ಭಾರತದ ನಡುವೆ ದಶಕಗಳಿಂದ ನಿರ್ಮಾಣವಾಗುತ್ತಿದ್ದ ನಿಲುವು ಮತ್ತು ಆರ್ಥಿಕ ಸಂಬಂಧಗಳು ಅಪಾಯದಲ್ಲಿವೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿದ್ದರ ಬಗ್ಗೆಯೂ ಬೋಲ್ಟನ್ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ, ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಒಟ್ಟಿಗೆ ನಗುತ್ತಿರುವ ಪ್ರಕಟಿತ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಬೋಲ್ಟನ್, “ಇದು ಅಮೇರಿಕಾಕ್ಕೆ ಒಂದು ರೀತಿಯ ಸಂದೇಶ” ಎಂದು ಎಚ್ಚರಿಕೆ ನೀಡಿದ್ದಾರೆ.
ಬೋಲ್ಟನ್ ಅವರು ‘ಸ್ಕೈ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು,
1. ಪಾಶ್ಚಿಮಾತ್ಯ ದೇಶಗಳು ಶೀತಲ ಯುದ್ಧದ ಸಮಯದಲ್ಲಿ ಭಾರತವನ್ನು ಸೋವಿಯತ್ ರಷ್ಯಾದ ಪ್ರಭಾವದಿಂದ ದೂರ ಇಡಲು ಬಹಳ ಪ್ರಯತ್ನಗಳನ್ನು ಮಾಡಿದ್ದವು; ಆದರೆ ಟ್ರಂಪ್ ಅವರ ವಿಫಲ ನೀತಿಗಳಿಂದಾಗಿ ಆ ಪ್ರಯತ್ನಗಳು ನಾಶವಾದವು.
2. ಟ್ರಂಪ್ ಅವರ ಅವಧಿಯಲ್ಲಿ ಭಾರತದೊಂದಿಗಿನ ವಿಶ್ವಾಸದ ಸೇತುವೆ ಮುರಿದುಹೋಯಿತು. ವಿಶೇಷವಾಗಿ ಟ್ರಂಪ್ ಭಾರತದ ಮೇಲೆ ಆಮದು ಸುಂಕ ವಿಧಿಸಿದ ಕಾರಣ ಭಾರತದಲ್ಲಿ ಅಸಮಾಧಾನ ಮೂಡಿತು ಮತ್ತು ಚೀನಾ ಇದರ ಲಾಭ ಪಡೆದು ಭಾರತದೊಂದಿಗೆ ನಿಕಟತೆ ಹೆಚ್ಚಿಸಿಕೊಂಡಿತು.
3. ಟ್ರಂಪ್ ಅವರ ಸಂಕುಚಿತ ಆರ್ಥಿಕ ದೃಷ್ಟಿಕೋನದಿಂದಾಗಿ ಅಮೇರಿಕಾ ತನ್ನ ಜಾಗತಿಕ ಪ್ರಭಾವವನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ.
ಟ್ರಂಪ್-ಪುಟಿನ್ ಭೇಟಿಯಿಂದ ಉಕ್ರೇನ್ ಯುದ್ಧ ಮತ್ತಷ್ಟು ಭುಗಿಲೆದ್ದಿದೆ!
ಜಾನ್ ಬೋಲ್ಟನ್ ಅವರು ಅಲಾಸ್ಕಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯನ್ನೂ ಟೀಕಿಸಿದ್ದಾರೆ. ಟ್ರಂಪ್-ಪುಟಿನ್ ಭೇಟಿ ತುಂಬಾ ಕೆಟ್ಟದಾಗಿತ್ತು ಮತ್ತು ಅದರಿಂದಾಗಿ ಉಕ್ರೇನ್ ನಲ್ಲಿ ಯುದ್ಧ ಮತ್ತಷ್ಟು ಭುಗಿಲೆದ್ದಿದೆ ಎಂದವರು ವಿವರಿಸಿದರು. ಈ ಸಭೆಯಿಂದ ಟ್ರಂಪ್ ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಉಕ್ರೇನ್ ಕುರಿತ ರಷ್ಯಾದ ನೀತಿಯಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಜಾನ್ ಬೋಲ್ಟನ್ ಅವರು ಇತ್ತೀಚೆಗೆ ಭಾರತಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರ ನೀತಿಗಳ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದರು. ಅದರ ನಂತರ ಅಮೇರಿಕಾದ ತನಿಖಾ ಸಂಸ್ಥೆ ಎಫ್.ಬಿ.ಐ. ಅವರ ಮನೆಯ ಮೇಲೆ ದಾಳಿ ನಡೆಸಿತ್ತು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು