![]() ‘೨೦೨೨ ರಲ್ಲಿ ‘ ಕು. ಚರಣದಾಸ ರಮಾನಂದ ಗೌಡ ಇವನು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿದೆ’, ಎಂದು ಘೋಷಿಸಲಾಗಿತ್ತು. ೨೦೨೫ ರಲ್ಲಿ ಅವನ ಆಧ್ಯಾತ್ಮಿಕ ಮಟ್ಟ ಶೇ. ೫೮ ರಷ್ಟಾಗಿದೆ. ಅವನ ಮೇಲೆ ಪಾಲಕರು ಮಾಡಿದ ಯೋಗ್ಯ ಸಂಸ್ಕಾರ, ಅವನ ಸಾಧನೆಯ ತಳಮಳ ಮತ್ತು ಅವನಲ್ಲಿನ ಭಾವದಿಂದಾಗಿ ಈಗ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೯.೮.೨೦೨೫) |
ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಕು. ಚರಣದಾಸ ರಮಾನಂದ ಗೌಡ ಇವನು ಈ ಪೀಳಿಗೆಯಲ್ಲೊಬ್ಬನು !


ಕು. ಚರಣದಾಸ ಗೌಡ (ವಯಸ್ಸು ೧೦ ವರ್ಷ) ಇವನ ಬಗ್ಗೆ ಇವನ ತಾಯಿ ಮತ್ತು ಸಾಧಕರಿಗೆ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
೧ ಅ. ನಮ್ರತೆ : ‘ಕು. ಚರಣದಾಸನು ಪ್ರತಿಯೊಬ್ಬ ಸಾಧಕರೊಂದಿಗೆ ನಮ್ರತೆಯಿಂದ ಮಾತನಾಡುತ್ತಾನೆ. ಎಲ್ಲ ಸಾಧಕರೊಂದಿಗೆ ಅವನು ತಕ್ಷಣ ಆತ್ಮೀಯತೆ ಬೆಳೆಸುತ್ತಾನೆ.
೧ ಆ. ವಿವೇಕಬುದ್ಧಿ : ಒಮ್ಮೆ ಚರಣದಾಸನಿಗೆ ತುಂಬಾ ತೊಂದರೆಯಾಗುತ್ತಿತ್ತು. ಅವನು ಕೂಗಾಡುತ್ತ ಮತ್ತು ಸಿಟ್ಟು ಮಾಡುತ್ತಿದ್ದನು. ಆಗ ಅವನಿಗೆ ನಾನು ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಶಾಂತಿಯಿಂದ ಕುಳಿತುಕೊಳ್ಳಲು ಹೇಳಿದೆನು. ಅವನಿಗೆ ಶಾಂತವೆನಿಸಿದ ನಂತರ ಅವನು ಧ್ಯಾನಮಂದಿರದಿಂದ ಹೊರಗೆ ಬಂದನು. ಆಗ ಅವನು ನನಗೆ, ”ಇಂದು ಅಮಾವಾಸ್ಯೆ ಇರುವುದರಿಂದ ನನಗೆ ತೊಂದರೆ ಆಗುತ್ತಿತ್ತು,’’ ಎಂದು ಹೇಳಿದನು. ‘ಯಾವುದೇ ಪ್ರಸಂಗ ಘಟಿಸಿದರೆ ಅದರ ಬಗ್ಗೆ ಅವನು ಅಂತರ್ಮುಖತೆಯಿಂದ ವಿಚಾರ ಮಾಡುತ್ತಾನೆ’, ಎಂದು ನನ್ನ ಗಮನಕ್ಕೆ ಬಂದಿತು.
೧ ಇ. ಕೇಳುವ ವೃತ್ತಿ : ಚರಣದಾಸನಿಗೆ ಕೆಲವೊಮ್ಮೆ ಆಡಬೇಕು, ಎಂದೆನಿಸುತ್ತದೆ. ಆ ಸಮಯದಲ್ಲಿ ನಾನು ಅವನಿಗೆ ನಾಮಜಪ ಮಾಡಲು ಹೇಳಿದ ನಂತರ ಅವನು ಆಡದೇ ನಾಮಜಪ ಮಾಡುತ್ತಾನೆ.
೧ ಈ. ಪ್ರತಿಯೊಂದು ಕೃತಿಯನ್ನು ಸಾಧನೆಗೆ ಜೋಡಿಸುವುದು : ಚರಣದಾಸನು ಆಡುವಾಗ ವಾಹನ ಗಳನ್ನು ಜೋಡಿಸಿ ಅದರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರ, ದೇವತೆಗಳ ವಿಗ್ರಹಗಳನ್ನು ಇಡುತ್ತಾನೆ ಮತ್ತು ಅವುಗಳ ಮೆರವಣಿಗೆ ಯನ್ನು ತೆಗೆಯುತ್ತಾನೆ. ಗುರುದೇವರ ಜನ್ಮೋತ್ಸವದ ನಿಮಿತ್ತ ಹಿಂದೂ ಏಕತೆ ಮೆರವಣಿಗೆಯನ್ನು ಆಯೋಜಿಸಿರುವು ದನ್ನು ನೋಡಿ ಅವನು ಅದೇ ರೀತಿಯಲ್ಲಿ ಆಯೋಜನೆ ಮಾಡಿ ಆಡುತ್ತಾನೆ.
೧ ಉ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗೆಗಿನ ಭಾವ : ಒಮ್ಮೆ ಅವನ ವಾರ್ಷಿಕ ಪರೀಕ್ಷೆ ನಡೆದಿತ್ತು. ನಾನು ಅವನಿಗೆ, ”ಅಧ್ಯಯನ ಮಾಡುವಾಗ ಮತ್ತು ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುವಾಗ ಸಾಕ್ಷಾತ್ ಗುರುದೇವರು, ಶ್ರೀ ಸರಸ್ವತಿದೇವಿ, ಶ್ರೀ ಗಣೇಶನು ನಮ್ಮ ಜೊತೆಯಲ್ಲಿದ್ದಾರೆ’, ಎಂಬ ಭಾವವನ್ನು ಇಡಬೇಕು,’’ ಎಂದು ಹೇಳಿದೆನು. ಒಮ್ಮೆ ಪರೀಕ್ಷೆಯಿಂದ ಬಂದ ನಂತರ ಅವನು ನನಗೆ, ”ನೀನು ಹೇಳಿದಂತೆ ಪ್ರಾರ್ಥನೆ ಮಾಡಿ ನಾನು ಪರೀಕ್ಷೆ ಕೊಟ್ಟೆನು. ಗುರುದೇವರ ಕೃಪೆಯಿಂದ ನನಗೆ ಎಲ್ಲ ಪ್ರಶ್ನೆಗಳ ಉತ್ತರಗಳು ನೆನಪಾದವು. ಆ ಸಮಯದಲ್ಲಿ ಗುರುದೇವರು ನನ್ನ ಜೊತೆಯಲ್ಲಿದ್ದರು,’’ ಎಂದು ಹೇಳಿದನು.
೨. ಮಂಗಳೂರಿನ ಸಾಧಕರು
೨ ಅ. ತಪ್ಪುಗಳ ಬಗ್ಗೆ ಸಂವೇದನಾಶೀಲತೆ : ‘ಚರಣದಾಸನು ತನ್ನಿಂದಾದ ತಪ್ಪು ಫಲಕದ ಮೇಲೆ ಬರೆಯುತ್ತಾನೆ. ಅವನು ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಾನೆ ಮತ್ತು ಸಂಬಂಧಿಸಿದ ಸಾಧಕರಲ್ಲಿ ಕ್ಷಮೆಯನ್ನೂ ಕೇಳುತ್ತಾನೆ.
೨ ಆ. ಬುದ್ಧಿಯ ಪ್ರಗಲ್ಭತೆ : ಅವನ ಮಾತುಗಳು ಮತ್ತು ವಿಚಾರಗಳು ಸಾಧನೆಯ ದೃಷ್ಟಿಯಲ್ಲಿ ತುಂಬಾ ಪ್ರಗಲ್ಭತೆ ಇರುತ್ತದೆÉ.’
೨ ಇ. ಸಂತರ ಬಗೆಗಿನ ಭಾವ : ‘ಚರಣದಾಸನ ತಂದೆ (ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡರು) ಇವರು ಅವನಿಗೆ ಏನಾದರೂ ಹೇಳಿದರೆ, ಅವನು ತಕ್ಷಣ ಅವರು ಹೇಳಿದಂತೆ ಕೃತಿ ಮಾಡುತ್ತಾನೆ.
೨ ಈ. ಪ.ಪೂ. ಗುರುದೇವರ ಬಗೆಗಿನ ಭಾವ
೧. ಒಮ್ಮೆ ಅವನಿಗೆ ಪೂ. ಅಣ್ಣನವರು (ಚರಣದಾಸನ ತಂದೆ) ಪ್ರಸಾದವನ್ನು ಕೊಟ್ಟರು. ಆಗ ಅವನು ಮೊದಲು ಗುರುದೇವರ ಛಾಯಾಚಿತ್ರದ ಮುಂದೆ ಇಟ್ಟನು ಮತ್ತು ನಂತರ ಸೇವಿಸಿದನು.
೨. ಅವನು ಗುರುಪರಂಪರೆ, ಪ.ಪೂ. ಭಕ್ತರಾಜ ಮಹಾರಾಜರ, ಪ.ಪೂ. ಗುರುದೇವರ, (ಪರಾತ್ಪರ ಗುರು ಡಾ. ಆಠವಲೆ) ಮತ್ತು ನಿಸರ್ಗದ ಚಿತ್ರಗಳನ್ನು ಬಿಡಿಸಿದ ನಂತರ ಗುರುದೇವರ ಛಾಯಾಚಿತ್ರದ ಮುಂದೆ ಇಡುತ್ತಾನೆ.
೩. ‘ಇದೆಲ್ಲವು ಗುರುದೇವರ ಚೈತನ್ಯದ ಲಾಭವನ್ನು ಪಡೆಯಲು ಮಾಡಬೇಕು’, ಎಂದು ಅವನು ಹೇಳುತ್ತಾನೆ.’
– ಸೌ. ಮಂಜುಳಾ ಗೌಡ (ಕು. ಚರಣದಾಸನ ತಾಯಿ, ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೩ ವರ್ಷ), ಮಂಗಳೂರು
ಎಲ್ಲ ಅಂಶಗಳ ದಿನಾಂಕ : (೧೦.೬.೨೦೨೪)

ವ್ಯಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಮನ್ವಿತಾ ಪ್ರಕಾಶ (ವಯಸ್ಸು ೮ ವರ್ಷ) !
ದೈವೀ ಬಾಲಕರನ್ನು ರೂಪಿಸುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನ
ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಧಾರವಾಡದ ಚಿ. ಶ್ರೀಹರಿ ಬಸವರಾಜ ಗೋರವರ (ವಯಸ್ಸು ೫ ವರ್ಷ) !
ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶಿವಮೊಗ್ಗದ ಕು. ವಿದ್ಯಾಶ್ರೀ ಮುಕುಂದ ಮೊಗೆರ (ವಯಸ್ಸು ೯ ವರ್ಷ) !
ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ರಾಯಚೂರು ಜಿಲ್ಲೆಯ ಚಿ. ನೀಲಲೋಹಿತ ಮಾರುತಿ ನಾಯಕ (ವಯಸ್ಸು ೯ ವರ್ಷ) !
ಭಾದ್ರಪದ ಹುಣ್ಣಿಮೆಯಂದು (೭.೯.೨೦೨೫) ಇರುವ ಖಗ್ರಾಸ ಚಂದ್ರಗ್ರಹಣದ ಮಾಹಿತಿ !