
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ : ‘ಸೀನು ಬರುವುದು’ ಒಂದು ಮುನ್ಸೂಚನೆಯೇ ? ವ್ಯಕ್ತಿಯು ಮಾತನಾಡುತ್ತಿರುವಾಗ ಅವನಿಗೆ ಅಥವಾ ಇತರರಿಗೆ ಸೀನು ಬಂದರೆ, ಅದರಿಂದ ಏನಾದರೂ ಪರಿಣಾಮ ಆಗುವುದೇ ?

೧. ಸೀನು ಬರುವ ಬಗ್ಗೆ ಜಾಲತಾಣದಲ್ಲಿನ ಮಾಹಿತಿ
‘ಸೀನು ಬರುವುದು ಎಂದರೆ, ಶ್ವಾಸಕೋಶದ ಮೂಲಕ ಮೂಗು ಮತ್ತು ಬಾಯಿಯ ಮಾರ್ಗವಾಗಿ ವ್ಯಕ್ತಿಯ ಶರೀರದಿಂದ ಹೊರಬರುವ ಒಂದು ರಭಸವಾದ ಗಾಳಿ. ಈ ಕ್ರಿಯೆಯು ಅನೈಚ್ಛಿಕವಾಗಿದೆ. ಸೀನು ಬರುವುದಕ್ಕೆ ಸಂಭವನೀಯ ಕಾರಣಗಳೆಂದರೆ ‘ಅಲರ್ಜಿ (ಧೂಳು, ಶಿಲೀಂಧ್ರ ಮತ್ತು ಸಾಕುಪ್ರಾಣಿಗಳ ಹೊಟ್ಟು), ವೈರಾಣು ಸೋಂಕು (ಫ್ಲೂ ಮತ್ತು ಸಾಮಾನ್ಯ ಶೀತ), ಶ್ವಾಸದ ಮೂಲಕ ಸೇವಿಸುವ ಕೆಲವು ಔಷಧಿ, ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದು, ಒತ್ತಡ ಮತ್ತು ಇತರ ತೀವ್ರ ಭಾವನೆಗಳು.’ (ಕೃಪೆ:https:// my.clevelandclinic.org/health/symptoms/sneezing)
೨. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ !
೨ ಅ. ಆಧ್ಯಾತ್ಮಿಕ ತೊಂದರೆ ಇರುವ ಸಾಧಕ : ಯಾವಾಗ ಅನಿಷ್ಟ ಶಕ್ತಿಯ ತೊಂದರೆ ಇರುವ ಸಾಧಕನು ಜಾಗೃತ ದೇವಸ್ಥಾನ, ಹೆಚ್ಚು ಚೈತನ್ಯವಿರುವ ಆಶ್ರಮ ಅಥವಾ ಸಂತರ ಸಂಪರ್ಕಕ್ಕೆ ಬರುತ್ತಾನೋ, ಆಗ ಅಲ್ಲಿನ ಚೈತನ್ಯದಿಂದ ಸಾಧಕನ ಶರೀರದ ಮೇಲೆ ಪರಿಣಾಮವಾಗುತ್ತದೆ. ಆ ಸಮಯದಲ್ಲಿ ಚೈತನ್ಯದಿಂದ ಆ ಸಾಧಕನಲ್ಲಿನ ತೊಂದರೆದಾಯಕ ಶಕ್ತಿಯು ದ್ರವಿಸಿ ಶ್ವಾಸಕೋಶದ ಮೂಲಕ ಶರೀರದಿಂದ ಹೊರಬರುತ್ತದೆ. ಪರಿಣಾಮವಾಗಿ ಅಂತಹ ಸಾಧಕನಿಗೆ ಅಕಸ್ಮಾತ್ತಾಗಿ ಸೀನುಗಳು ಬರುತ್ತವೆ.
೨ ಆ. ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕ : ಯಾವಾಗ ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕನು ರಜ-ತಮ ಪ್ರಧಾನವಾದ ಪರಿಸರಕ್ಕೆ ಹೋಗುತ್ತಾನೋ ಅಥವಾ ತೊಂದರೆ ಇರುವ ವ್ಯಕ್ತಿಯ ಸಂಪರ್ಕಕ್ಕೆ ಬರುತ್ತಾನೋ, ಆಗ ತೊಂದರೆದಾಯಕ ಶಕ್ತಿಯು ಅಂತಹ ಸಾಧಕನ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡುತ್ತದೆ. ಆ ಸಮಯದಲ್ಲಿ ಅಂತಹ ಸಾಧಕನ ಶರೀರದ ಮೂಲಕ ಸ್ವರಕ್ಷಣೆಗಾಗಿ ಈಶ್ವರಿ ಶಕ್ತಿಯು ಪ್ರಕಟವಾಗುತ್ತದೆ. ಈ ಈಶ್ವರಿ ಶಕ್ತಿಯ ಕಣಗಳು ಅಂತಹ ಸಾಧಕನ ಶ್ವಾಸಕೋಶದ ಮೂಲಕ ಶರೀರದಿಂದ ಹೊರಬರುತ್ತವೆ. ಆಗ ಆ ಸಾಧಕನಿಗೆ ಜೋರಾಗಿ ಸೀನು ಬರುತ್ತದೆ. ಈ ಪ್ರಕ್ರಿಯೆ ನಡೆದಾಗ ಸಾಧಕನ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಪ್ರಭಾವವು ಕಡಿಮೆಯಾಗಲು ಸಹಾಯವಾಗುತ್ತದೆ.
೨ ಇ. ಸಂತರು : ಸಂತರ ಮೇಲೆ ಸೂಕ್ಷ್ಮದಿಂದ ಅನಿಷ್ಟ ಶಕ್ತಿಗಳ ಆಕ್ರಮಣವಾದಾಗ, ಸಂತರ ಸೀನಿನ ಮೂಲಕ ವಾತಾವರಣದಲ್ಲಿ ಈಶ್ವರಿ ಶಕ್ತಿಯ ಅಸಂಖ್ಯಾತ ಕಣಗಳು ಪ್ರಕಟವಾಗುತ್ತವೆ. ಇದರಿಂದ ಸಂತರ ದೇಹವು ರಕ್ಷಿಸಲ್ಪಡುತ್ತದೆ, ಹಾಗೆಯೇ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತದೆ.
೨ ಈ. ಪರಾತ್ಪರ ಗುರು ಡಾ. ಆಠವಲೆ :
೨ ಈ ೧. ಪರಾತ್ಪರ ಗುರು ಡಾ. ಆಠವಲೆಯವರ ಸಹಸ್ರಾರ ಚಕ್ರದಲ್ಲಿರುವ ವಿಶ್ವಮಯಕೋಶದ ಮೇಲೆ ಜಗತ್ತಿನ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಪರಿಣಾಮವಾಗುವುದು : ಪ್ರತಿಯೊಬ್ಬ ವ್ಯಕ್ತಿಯಲ್ಲಿ ವಿವಿಧ ಸೂಕ್ಷ್ಮಕೋಶಗಳಿರುತ್ತವೆ, ಉದಾ. ಅನ್ನಕ್ಕೆ ಸಂಬಂಧಿಸಿದ ಅನ್ನಮಯಕೋಶ, ಪ್ರಾಣಕ್ಕೆ ಸಂಬಂಧಿಸಿದ ಪ್ರಾಣಮಯಕೋಶ, ಮನಸ್ಸಿಗೆ ಸಂಬಂಧಿಸಿದ ಮನೋಮಯಕೋಶ ಇತ್ಯಾದಿ. ಪರಾತ್ಪರ ಗುರು ಡಾಕ್ಟರರದ್ದು ಅವತಾರಿ ಕಾರ್ಯವಾಗಿರುವುದರಿಂದ ಅವರಿಗೆ ವಿಶ್ವಮಯಕೋಶವಿದೆ. ಈ ಕೋಶವು ವಿಶ್ವಕ್ಕೆ ಸಂಬಂಧಿಸಿದ್ದಾಗಿದ್ದು ಪರಾತ್ಪರ ಗುರು ಡಾಕ್ಟರರ ಸಹಸ್ರಾರಚಕ್ರಕ್ಕೆ ಸಂಬಂಧಿಸಿದೆ. ಆ ಸ್ಥಾನವನ್ನು ‘ಬ್ರಹ್ಮಸ್ಥಾನ’ ಎಂದೂ ಕರೆಯುತ್ತಾರೆ. ಜಗತ್ತಿನಲ್ಲಿ ನಡೆಯುವ ಒಳ್ಳೆಯ ಅಥವಾ ಕೆಟ್ಟ ಘಟನೆಗಳಿಂದ ಪರಾತ್ಪರ ಗುರು ಡಾಕ್ಟರರ ವಿಶ್ವಮಯಕೋಶದ ಮೇಲೆ ಪರಿಣಾಮವಾಗುತ್ತಿರುತ್ತದೆ.
೨ ಈ ೨. ಪರಾತ್ಪರ ಗುರು ಡಾ. ಆಠವಲೆ ಅವರಿಗೆ ಆಗುತ್ತಿರುವ ಶಾರೀರಿಕ ತೊಂದರೆಗಳು ಜಗತ್ತಿನಲ್ಲಿ ನಡೆಯುವ ವಿವಿಧ ನಕಾರಾತ್ಮಕ ಘಟನೆಗಳ ಪರಿಣಾಮವಾಗಿರುವುದು : ಜಗತ್ತಿನಲ್ಲಿ ಅಲ್ಲಲ್ಲಿ ಸಾಧಕರು ಮತ್ತು ಭಕ್ತರ ಮೇಲೆ, ಹಾಗೆಯೇ ಭಾರತದ ಮೇಲೆ ದೊಡ್ಡ ಆಘಾತಗಳಾದಾಗ, ಅದರ ಸೂಕ್ಷ್ಮದಲ್ಲಿನ ನಕಾರಾತ್ಮಕ ಪರಿಣಾಮವು ಪರಾತ್ಪರ ಗುರು ಡಾಕ್ಟರರ ವಿಶ್ವಮಯಕೋಶದ ಮೇಲೆ ಎಲ್ಲರಿಗಿಂತ ಮೊದಲು ಆಗುತ್ತದೆ. ಈ ಆಘಾತಗಳ ತೀವ್ರತೆಯು ಕಡಿಮೆಯಾಗಲು ಪರಾತ್ಪರ ಗುರು ಡಾ. ಆಠವಲೆ ಅವರಲ್ಲಿರುವ ಈಶ್ವರಿ ಶಕ್ತಿಯು ಕಾರ್ಯನಿರತವಾಗುತ್ತದೆ. ನಂತರ ಈ ಈಶ್ವರಿ ಶಕ್ತಿಯು ಜಗತ್ತಿನ ವಿವಿಧ ಆಘಾತಗಳನ್ನು ದೂರ ಮಾಡಲು ವೇಗವಾಗಿ ಪರಾತ್ಪರ ಗುರು ಡಾಕ್ಟರರ ಶರೀರದ ಮೂಲಕ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ. ಇದರ ಪರಿಣಾಮವೆಂದು ಪರಾತ್ಪರ ಗುರು ಡಾಕ್ಟರರಿಗೆ ‘ಆಯಾಸವಾಗುವುದು, ತಲೆಸುತ್ತು ಬರುವುದು, ಪ್ರಾಣಶಕ್ತಿ ಕಡಿಮೆಯಾಗುವುದು, ಗಂಟಲು ಒಣಗುವುದು, ಜ್ಞಾನ ತಪ್ಪಿದಂತಾಗುವುದು ಅಥವಾ ತೂಕಡಿಕೆ ಬರುವುದು ಮತ್ತು ಸೀನು ಬರುವುದು’ ಈ ಸ್ವರೂಪದಲ್ಲಿ ಆಗುತ್ತದೆ.
‘ಪರಾತ್ಪರ ಗುರು ಡಾ. ಆಠವಲೆ ಅವರಿಗೆ ಅಕಸ್ಮಾತ್ತಾಗಿ ಸೀನು ಬರುವುದು’, ಇದು ಸೂಕ್ಷ್ಮ ಯುದ್ಧ ಅಥವಾ ದೊಡ್ಡ ಸಂಕಟದ ಮುನ್ಸೂಚನೆಯೂ ಆಗಿರಬಹುದು.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೭.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !