ನಗರ ನಕ್ಸಲೀಯರ ವಿಚಾರಗಳನ್ನು ಸೂಕ್ತ ಸಮಯದಲ್ಲಿ ವಿರೋಧಿಸುವುದೇ ಇಂದಿನ ಕಾಲದ ಅವಶ್ಯಕತೆ !

ಪ್ರಸ್ತುತ ಸ್ಥಿತಿಯಲ್ಲಿ ನಗರ ನಕ್ಸಲವಾದ ರಾಷ್ಟ್ರೀಯ, ಆದರೆ ದೇಶದ ಸುರಕ್ಷತೆಯ ದೃಷ್ಟಿಯಿಂದ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿಖರವಾಗಿ ಏನಿದೆ ? ಅದರ ಪರಿಹಾರಗಳು, ಕಾನೂನಿನ ಅವಶ್ಯಕತೆ, ನಾಗರಿಕರು ಎಚ್ಚರವಾಗಿರಲು ಯಾವ ಅಂಶ ಗಳನ್ನು ಪರಿಗಣಿಸಬೇಕು, ಇಂತಹ ಹಲವಾರು ವಿಷಯಗಳ ಕುರಿತು ಹಿಂದುತ್ವನಿಷ್ಠ ನ್ಯಾಯವಾದಿ ರೋಹನ ಮಾಳವದಕರ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಇಲ್ಲಿ ಲೇಖನ ರೂಪದಲ್ಲಿ ನೀಡುತ್ತಿದ್ದೇವೆ.

೧. ಸುಶಿಕ್ಷಿತ ವರ್ಗವನ್ನು ಸರಕಾರ ಮತ್ತು ದೇಶವಿರೋಧಿ ವಿಚಾರಗಳತ್ತ ಹೊರಳಿಸುವ ನಗರ ನಕ್ಸಲೀಯರು !

ನಕ್ಸಲವಾದವು ನಮ್ಮ ದೇಶಕ್ಕೆ ಒಂದು ಗಂಭೀರ ಸವಾಲಾಗಿದೆ. ದೇಶದೊಳಗಿನ ಅಸ್ಥಿರತೆ, ಗಲಭೆ, ಅರಾಜಕತೆ ಮತ್ತು ಸಮಾಜದಲ್ಲಿ ಒಡಕುಂಟು ಮಾಡುವ ಸಂಚುಗಳನ್ನು ನಕ್ಸಲ್‌ ಗುಂಪುಗಳು ನಿರಂತರವಾಗಿ ಮಾಡುತ್ತಿವೆ ಮತ್ತು ಮಾಡುತ್ತಲೂ ಇವೆ. ಮಾವೋವಾದಿ, ನಕ್ಸಲ್‌ ಚಳುವಳಿಯಿಂದ ಭಾರತದ ಸುರಕ್ಷತೆಗೆ ದೊಡ್ಡ ಅಪಾಯ ಉಂಟಾಗಿದೆ. ಇದರ ನೇರ ಲಾಭವನ್ನು ಭಾರತದ ಶತ್ರುಗಳಾದ ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳು ಪಡೆಯುತ್ತಿವೆ.

ನಗರ ನಕ್ಸಲವಾದ ಇದು ನಕ್ಸಲವಾದದ ಒಂದು ಭಾಗವಾಗಿದ್ದು, ಅದು ಬೇರೆ ಅಲ್ಲ. ಅರಣ್ಯದಲ್ಲಿರುವ ನಕ್ಸಲೀಯರು ಬಂದೂಕು ಹಿಡಿದು ಹೋರಾಡುತ್ತಾರೆ, ಆದರೆ ನಗರ ನಕ್ಸಲೀಯರು ನಗರಗಳಲ್ಲಿ ಇದ್ದುಕೊಂಡು ಶಸ್ತ್ರಾಸ್ತ್ರಗಳನ್ನು ಬಳಸದೆ ವಿಚಾರಧಾರೆಯ ಮೂಲಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಾರೆ. ಅವರು ವಿವಿಧ ಸಾಮಾಜಿಕ ಸಂಘಟನೆಗಳು, ಆಂದೋಲನಗಳು, ತಪ್ಪು ಇತಿಹಾಸ, ಅಪಪ್ರಚಾರಗಳ ಮೂಲಕ ಸರಕಾರ ಮತ್ತು ದೇಶವಿರೋಧಿ ವಿಚಾರಗಳನ್ನು ಹರಡುತ್ತಾರೆ. ನಗರ ನಕ್ಸಲವಾದ ವನ್ನು ಗುರುತಿಸುವುದು ಕಷ್ಟ; ಏಕೆಂದರೆ ಈ ಜನರು ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಪ್ರಾಧ್ಯಾಪಕರು, ನ್ಯಾಯವಾದಿಗಳು ಇಂತಹ ಪ್ರತಿಷ್ಠಿತ ಮುಖವಾಡಗಳ ಹಿಂದೆ ಇರುತ್ತಾರೆ. ಅವರು ತಮ್ಮ ವಿಚಾರಗಳ ಮೂಲಕ ಸುಶಿಕ್ಷಿತ ವರ್ಗವನ್ನು ಸರಕಾರ ಮತ್ತು ದೇಶವಿರೋಧಿ ವಿಚಾರಗಳತ್ತ ಹೊರಳಿಸುತ್ತಾರೆ. ಈ ವಿಚಾರಗಳಿಂದಲೇ ನಗರ ಮಾವೋವಾದ ಅಥವಾ ನಗರ ನಕ್ಸಲವಾದ ಹುಟ್ಟಿಕೊಂಡಿದೆ.

ನ್ಯಾಯವಾದಿ ರೋಹನ ಮಾಳವದಕರ

೨. ‘ನಗರ ನಕ್ಸಲವಾದ’ ಮತ್ತು ‘ಮಾವೋವಾದ’ಗಳ ಸಮಾನ ಉದ್ದೇಶ

‘ಅರ್ಬನ್’ (ನಗರ) ನಕ್ಸಲವಾದ ಮತ್ತು ಮಾವೋವಾದ ಈ ಹೆಸರುಗಳು ಬೇರೆಯಾಗಿದ್ದರೂ, ಅವುಗಳ ಏಕೈಕ ಮೂಲ ಉದ್ದೇಶವೆಂದರೆ, ‘ಭಾರತದಲ್ಲಿ ಅರಾಜಕತೆಯನ್ನು ಸೃಷ್ಟಿಸುವುದು ಮತ್ತು ದೇಶವನ್ನು ವಿಭಜಿಸು ವುದು.’ ಈ ವಿಚಾರಧಾರೆಯ ಜನರು ದೇಶದಲ್ಲಿ ಆಂತರಿಕ ಅಸ್ಥಿರತೆಯನ್ನು ನಿರ್ಮಿಸಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡುತ್ತಾರೆ. ಆದ್ದರಿಂದ ಈ ಹೆಸರುಗಳು ಭಿನ್ನವಾಗಿದ್ದರೂ, ಇಬ್ಬರ ಉದ್ದೇಶ ಮತ್ತು ಅಪಾಯ ಒಂದೇ ಆಗಿದೆ.

೩. ‘ತಥಾಕಥಿತ ಸುಧಾರಣಾವಾದಿಗಳು’ ದೇಶವಿರೋಧಿ ಮನಸ್ಥಿತಿಯನ್ನು ಪೋಷಿಸುವವರು !

ನಕ್ಸಲ್‌ವಾದಿಗಳು ಅಥವಾ ಮಾವೋವಾದಿ ವಿಚಾರಧಾರೆಯ ಜನರು ಸಾಮಾಜಿಕ ಕಾರ್ಯಕರ್ತರು, ಪ್ರಾಧ್ಯಾಪಕರು, ಲೇಖಕರು, ನ್ಯಾಯವಾದಿಗಳು ಮತ್ತು ಉನ್ನತ ವಿದ್ಯಾವಂತ ಚಿಂತಕರ ರೂಪದಲ್ಲಿ ಸಮಾಜದಲ್ಲಿ ಓಡಾಡುತ್ತಾರೆ. ಅವರ ಪ್ರತಿಷ್ಠೆಯು ಸಮಾಜದಲ್ಲಿ ಪ್ರತಿಷ್ಠಿತ ಎಂದು ಸ್ಥಾಪಿತವಾಗಿರುತ್ತದೆ. ಆದ್ದರಿಂದ ಸಾಮಾನ್ಯ ನಾಗರಿಕರು ಅವರ ವಿಚಾರಗಳನ್ನು ಸುಲಭವಾಗಿ ನಂಬುತ್ತಾರೆ. ಈ ಜನರು ಅಪಪ್ರಚಾರ, ತಪ್ಪು ಮಾಹಿತಿ, ಇತಿಹಾಸವನ್ನು ವಿಕೃತಗೊಳಿಸುವ ಮೂಲಕ ಸಮಾಜದಲ್ಲಿ ವಿಷವನ್ನು ಹರಡುತ್ತಾರೆ. ಅವರು ತಮ್ಮನ್ನು ‘ಮಾನವ ಹಕ್ಕುಗಳ ರಕ್ಷಕರು’ ಎಂದು ಕರೆದುಕೊಳ್ಳುತ್ತಾರೆ; ಆದರೆ ವಾಸ್ತವದಲ್ಲಿ ‘ದೇಶವಿರೋಧಿ ಮನಸ್ಥಿತಿಯನ್ನು’ ಪೋಷಿಸುತ್ತಿರುತ್ತಾರೆ.


ಅರ್ಬನ್‌ ನಕ್ಸಲಿಸಂ ಸಮಸ್ಯೆಯ ನಿಜವಾದ ಮೂಲ ಕಾಂಗ್ರೆಸ್‌ ! – ಮಾಧವ ಭಂಡಾರಿ, ಭಾಜಪ

೧೯೪೨ ರಲ್ಲಿ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಬಾರದೆಂದುಕಮ್ಯುನಿಸ್ಟರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು ಎಂಬುದನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ನಂತರ, ಸ್ವಾತಂತ್ರ್ಯದ ನಂತರ, ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅಂತಹ ಬ್ರಿಟಿಷ್‌ ಏಜೆಂಟ್‌ಗಳಿಗೆ ಗೌರವ ನೀಡಿದರು. ಅದು ಬಂಗಾಳದಲ್ಲಿ ನಕ್ಸಲಿಸಂ ಆಗಿರಲಿ ಅಥವಾ ಪಂಜಾಬ್‌ನಲ್ಲಿ ಖಲಿಸ್ತಾನಿ ಸಮಸ್ಯೆಯಾಗಿರಲಿ, ಕಾಂಗ್ರೆಸ್‌ ಎಂದಿಗೂ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ದೇಶ ಎದುರಿಸುತ್ತಿರುವ ಅರ್ಬನ್‌ ನಕ್ಸಲಿಸಂ ಸಮಸ್ಯೆಯ ನಿಜವಾದ ಮೂಲ ಕಾಂಗ್ರೆಸ್‌ ಎಂದು ಭಾಜಪ ಹಿರಿಯ ಮುಖಂಡ ಮತ್ತು ವಕ್ತಾರ ಶ್ರೀ. ಮಾಧವ ಭಂಡಾರಿ ಅಭಿಪ್ರಾಯಪಟ್ಟರು. ಪುಣೆಯ ತಿಲಕ್‌ ಸ್ಮಾರಕ ಮಂದಿರದಲ್ಲಿ ಆಗಸ್ಟ್ ೧೯ ರಂದು ‘ರಾಷ್ಟ್ರಭಕ್ತ ವಕೀಲರ ಸಮಿತಿ’ಯಿಂದ ‘ವಾರ್ಷಿಕ ಅರ್ಬನ್‌ ನಕ್ಸಲಿಸಂ ಮತ್ತು ಜನಸುರಕ್ಷಾ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಎಡಪಂಥೀಯರಿಗೆ ಭಾರತವು ಒಂದು ‘ದೇಶ’ ಎಂದು ಅನಿಸುವುದಿಲ್ಲ ! – ಮಾಧವ ಭಂಡಾರಿ

ಈ ಸಂದರ್ಭದಲ್ಲಿ ಶ್ರೀ. ವಿಕ್ರಮ ಭಾವೆ ಅವರು ಮಾತನಾಡಿ, ”ನಾನು ಜೈಲಿನಲ್ಲಿದ್ದಾಗ, ಕೋರೆಗಾಂವ್‌ ಭೀಮಾ ಪ್ರಕರಣದಲ್ಲಿ ಬಂಧಿತರಾಗಿದ್ದ ಒಬ್ಬ ನಕ್ಸಲ್‌ ಕಾರ್ಯಕರ್ತನ ಆರೋಪಪತ್ರ ವನ್ನು ನೋಡಿದೆ. ಈ ಆರೋಪಪತ್ರಕ್ಕೆ ಅವನ ಒಂದು ಸಣ್ಣ ನೋಟ್‌ಬುಕ್‌ ಜೋಡಿಸಲಾಗಿತ್ತು. ಈ ನೋಟ್‌ಬುಕ್‌ನಲ್ಲಿ ಕಾಡಿನಲ್ಲಿರುವ ನಕ್ಸಲರಿಗೆ ಎಷ್ಟು ಉಪಾಹಾರ, ಊಟ ನೀಡಬೇಕು ಎಂಬುದರಿಂದ ಹಿಡಿದು ‘ಬಾಬರಿ ಪತನವನ್ನು ವಿರೋಧದ ದಿನವನ್ನಾಗಿ ಆಚರಿಸಬೇಕು’ ಎಂಬ ಉಲ್ಲೇಖವಿತ್ತು. ಈ ಪುಸ್ತಕದಲ್ಲಿ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಅನೇಕ ಆಘಾತಕಾರಿ ವಿಷಯಗಳಿದ್ದವು. ಎಡಪಂಥೀಯರಿಗೆ ‘ಭಾರತ’ ಒಂದು ದೇಶ ಎಂದು ಅನಿಸುವುದಿಲ್ಲ, ಅಷ್ಟೊಂದು ಭೀಕರ ಪರಿಸ್ಥಿತಿ ಇದೆ’ ಎಂದರು.

೪. ದೇಶಕ್ಕೆ ಅಪಾಯವಾಗದಿರಲು ದೇಶದ್ರೋಹಿ ಜನರ ಮೇಲೆ ಕಠಿಣ ಕ್ರಮ ಜರುಗಿಸುವುದು ಮುಖ್ಯ !

ಯಾವುದೇ ವ್ಯಕ್ತಿಯನ್ನು ನಕ್ಸಲ್‌ ಎಂದು ಘೋಷಿಸಲು ಕಾನೂನುಬದ್ಧ ಪುರಾವೆಗಳು ಇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದಲ್ಲಿ ಯಾವುದೇ ವ್ಯಕ್ತಿ ಸರಕಾರ ವಿರೋಧಿಯಾಗಿ ಮಾತನಾಡುತ್ತಿದ್ದರೂ, ಅವನನ್ನು ನಕ್ಸಲ್‌ ಎಂದು ಘೋಷಿಸಲು ಸಾಧ್ಯವಿಲ್ಲ; ಆದರೆ ಆ ವ್ಯಕ್ತಿ ನಿಜವಾಗಿಯೂ ದೇಶವಿರೋಧಿ ಸಂಚುಗಳಲ್ಲಿ ಭಾಗಿಯಾಗಿದ್ದರೆ, ಶಸ್ತ್ರಸಜ್ಜಿತನಾಗಿದ್ದರೆ, ವಿದೇಶಿ ಶತ್ರುಗಳಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಿ ದ್ದರೆ, ಅವನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅರಣ್ಯದಲ್ಲಿ ಬಂದೂಕು ಹಿಡಿದು ಸೈನಿಕರ ಮೇಲೆ ಆಕ್ರಮಣ ಮಾಡುವ ನಕ್ಸಲರನ್ನು ಸುರಕ್ಷಾ ಪಡೆಗಳು ಸ್ಥಳದಲ್ಲೇ ಕೊಲ್ಲಬಹುದು. ನನ್ನ ಅಭಿಪ್ರಾಯದಲ್ಲಿ ಇಂತಹ ದೇಶದ್ರೋಹಿ ವಿಚಾರಗಳಿಂದ ತುಂಬಿರುವ ಜನರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ಇದರಿಂದ ಭವಿಷ್ಯದಲ್ಲಿ ದೇಶಕ್ಕೆ ಅಪಾಯ ಉಂಟಾಗುವುದಿಲ್ಲ.

೫. ಮಾಧ್ಯಮಗಳು ‘ಅರ್ಬನ್’ ನಕ್ಸಲವಾದವನ್ನು ಸಮರ್ಥಿಸುವುದಕ್ಕಿಂತ ಅದನ್ನು ಬಯಲಿಗೆಳೆಯಬೇಕು !

ಪ್ರಸ್ತುತ ಪರಿಸ್ಥಿತಿಯಲ್ಲಿ ಮಾಧ್ಯಮಗಳು ‘ಅರ್ಬನ್’ ನಕ್ಸಲವಾದದÀ ವಾಸ್ತವವನ್ನು ನಿರ್ಲಕ್ಷಿಸಿ ಹಲವು ಬಾರಿ ನಿಷ್ಪ್ರಯೋಜಕ ಚರ್ಚೆಗಳನ್ನು ಮಾಡಿವೆ. ಉದಾಹರಣೆಗೆ, ೩೧ ಡಿಸೆಂಬರ್‌ ೨೦೧೭ ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದ ‘ಎಲ್ಗಾರ್‌ ಪರಿಷತ್’ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣಗಳು, ದೇಶವಿರೋಧಿ ಘೋಷಣೆಗಳು ಮತ್ತು ಹಾಡುಗಳನ್ನು ಪ್ರದರ್ಶಿಸಲಾಯಿತು. ಇದರ ನಂತರವೇ ೧ ಜನವರಿ ೨೦೧೮ ರಂದು ಕೋರೆಗಾಂವ್‌ ಭೀಮಾದಲ್ಲಿ ಹಿಂಸಾಚಾರ ಭುಗಿಲೆದ್ದಿತು. – ನ್ಯಾಯವಾದಿ ರೋಹನ ಮಾಳವದಕರ ಈ ಪರಿಷತ್ತಿಗೆ ಮಾವೋವಾದಿ ಸಂಘಟನೆಗಳಿಂದ ಹಣ ಸಿಕ್ಕಿರುವುದು ಸ್ಪಷ್ಟವಾಗಿದೆ. ಪುಣೆ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಂಡರು; ಆದರೆ ಕೆಲವು ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರು ಈ ಕ್ರಮದ ವಿರುದ್ಧ ಧ್ವನಿ ಎತ್ತಿ ಪೊಲೀಸರನ್ನು ಟೀಕಿಸಿದರು ಹಾಗೂ ಈ ನಕ್ಸಲ್‌ ಮತ್ತು ಮಾವೋವಾದಿ ವಿಚಾರಧಾರೆಯ ವ್ಯಕ್ತಿಗಳೇ ರಾಷ್ಟ್ರಹಿತಕಾರಿ ಎಂದು ವಾದಿಸಿದರು. ಇದು ‘ಅರ್ಬನ್’ ನಕ್ಸಲವಾದದ ನಿಜವಾದ ಸ್ವರೂಪವನ್ನು ತೋರಿಸುವ ಪ್ರಮುಖ ಉದಾಹರಣೆಯಾಗಿದೆ.

೬. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆಯ ಮೇಲೆ ನಕ್ಸಲವಾದದಿಂದಾದ ಪರಿಣಾಮ

ನಕ್ಸಲವಾದದಿಂದ ಭಾರತದ ಆಂತರಿಕ ಭದ್ರತೆಗೆÉ ಗಂಭೀರ ಪರಿಣಾಮ ಉಂಟಾಗಿದೆ. ಅನೇಕ ರಾಜ್ಯಗಳಲ್ಲಿ ನಕ್ಸಲ್‌ ಆಕ್ರಮಣಗಳಲ್ಲಿ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಲ ಕಾಲಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ. ಕೇಂದ್ರ ಗೃಹಸಚಿವ ಅಮಿತ ಶಾ ಅವರು ೨೦೨೬ ರ ವರೆಗೆ ನಕ್ಸಲವಾದವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವುದಾಗಿ ಘೋಷಿಸಿದ್ದಾರೆ. ಹೀಗಿದ್ದರೂ, ನಗರ ನಕ್ಸಲೀಯರು ಇನ್ನೂ ವಿಷವನ್ನು ಹರಡುತ್ತಿದ್ದಾರೆ. ಸುಶಿಕ್ಷಿತ ಜನರಲ್ಲಿ ದೇಶವಿರೋಧಿ ವಿಚಾರಗಳನ್ನು ಹರಡುವ ಪ್ರಯತ್ನಗಳಾಗುತ್ತಿವೆ. ಸಾರ್ವಜನಿಕರು ಜಾಗರೂಕರಾಗಿ ಈ ವಿಚಾರಗಳನ್ನು ವಿರೋಧಿಸುವುದು ಅವಶ್ಯಕವಾಗಿದೆ.


ನಕ್ಸಲವಾದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳು


ಅ. ನಕ್ಸಲರು ಮತ್ತು ಮಾವೋವಾದಿಗಳು ಯಾವಾಗಲೂ ಹೇಳುತ್ತಾರೆ, ‘ಅವರು ಆದಿವಾಸಿಗಳ ನ್ಯಾಯಯುತ ಹಕ್ಕುಗಳಿಗಾಗಿ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದ್ದಾರೆ’; ಆದರೆ ವಾಸ್ತವ ಬೇರೆ ಯಾಗಿದೆ. ಈ ಜನರು ವಾಸ್ತವದಲ್ಲಿ ‘ಆದಿವಾಸಿಗಳ ನ್ಯಾಯಯುತ ಹಕ್ಕುಗಳಿಗಾಗಿ ಅಲ್ಲ, ಬದಲಾಗಿ ಭಾರತದಲ್ಲಿ ಮಾವೋವಾದಿ ಸರ್ವಾಧಿಕಾರ ಹೇಗೆ ಬರುತ್ತದೆ’ ಎಂಬುದಕ್ಕಾಗಿ ಹೋರಾಡುತ್ತಿದ್ದಾರೆ.

ಆ. ಮಾವೋವಾದಿಗಳು ಆದಿವಾಸಿ ಬಾಹುಳ್ಯ ಪ್ರದೇಶಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಲಾಭಮಾಡಿಕೊಂಡರು. ಈ ಪರಿಸ್ಥಿತಿಯನ್ನು ಮೂಲತಃ ಮಾವೋವಾದಿಗಳು ನಿರ್ಮಿಸಿಲ್ಲ; ಆದರೆ ಅವರಿಗೆ ತಮ್ಮ ಯೋಜನೆಗಳಿಗಾಗಿ ಅದು ಲಾಭದಾಯಕವೆಂದು ಅನಿಸಿತು. ಅವರು ಆರಂಭದಲ್ಲಿ ಮಾವೋವಾದದ ಚಿತ್ರಣವನ್ನು ಬಡ, ದುರ್ಬಲ, ಆದಿವಾಸಿ ಘಟಕಗಳ ನ್ಯಾಯಕ್ಕಾಗಿ ಹೋರಾಡುವ ಚಳುವಳಿ ಎಂದು ಬಿಂಬಿಸಿದರು. ‘ಆದಿವಾಸಿಗಳಿಗೆ ಅವರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಕ್ಕು ಸಿಗಬೇಕು, ಇದಕ್ಕಾಗಿ ಅವರು ಕಾರ್ಯ ಮಾಡುತ್ತಾರೆ’ ಎಂಬ ಭ್ರಮೆಯನ್ನು ಸೃಷ್ಟಿಸಲಾಯಿತು; ಆದರೆ ಇದು ಕೇವಲ ಸಾರ್ವಜನಿಕರ ಮುಂದೆ ಮುಖವಾಡ ಧರಿಸಲು ಇತ್ತು. ಅವರ ನಿಜವಾದ ಉದ್ದೇಶ ‘ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವುದು, ದೇಶವನ್ನು ವಿಭಜಿಸುವುದು ಮತ್ತು ಸಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉರುಳಿಸುವುದು’ ಎಂದಾಗಿತ್ತು. ಈ ಸಂಘಟನೆಗಳ ವಿಚಾರಧಾರೆ ಅತ್ಯಂತ ಅಪಾಯಕಾರಿಯಾಗಿದ್ದು, ಅವುಗಳ ಉದ್ದೇಶ ಭಾರತದ ಏಕತೆ ಮತ್ತು ಅಖಂಡತೆಯನ್ನು ನಾಶ ಮಾಡುವುದಾಗಿದೆ

ಇ. ಇಂದು ನಕ್ಸಲವಾದ ಮತ್ತು ಮಾವೋವಾದವು ಕೇವಲ ಆಂತರಿಕ ಸುರಕ್ಷತೆಗೆ ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೂ ದೊಡ್ಡ ಸವಾಲಾಗಿವೆ. ಈ ವಿಚಾರಗಳಿರುವ ಜನರ ಉದ್ದೇಶ ಹಿಂಸಾಚಾರದ ಮೂಲಕ ದೇಶದ ಅಧಿಕಾರವನ್ನು ವಶಪಡಿಸಿ ಕೊಳ್ಳುವುದು ಮತ್ತು ಕೆಂಪುಕೋಟೆಯ ‘ತ್ರಿವರ್ಣ ಧ್ವಜ’ದ ಬದಲಾಗಿ ಮಾವೋವಾದಿ ಸರ್ವಾಧಿಕಾರದ ‘ಕೆಂಪು ಬಾವುಟ’ ಹಾರಿಸುವುದು.

ಈ. ಈ ಚಳುವಳಿ ಆದಿವಾಸಿ ಸಮಾಜದ ಹಿತಕ್ಕಾಗಿ ಅವರ ನಾಯಕತ್ವದಲ್ಲಿ ಕಾನೂನುಬದ್ಧ ಮಾರ್ಗದಲ್ಲಿ ನಡೆಯುತ್ತಿಲ್ಲ. ಬದಲಾಗಿ ಇದು ಮಾವೋವಾದಿ ವಿಚಾರಧಾರೆಯಿಂದ ಪ್ರೇರಿತವಾದ ನಗರದ ಸುಖಭೋಗವನ್ನು ಅನುಭವಿಸುವ ಜನರು ನಡೆಸುತ್ತಿರುವ ಚಳುವಳಿ. ಇದು ಹಿಂಸಾತ್ಮಕ, ಹಾಗೆಯೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವಿರೋಧಿ ಆಗಿದೆ.

ಉ. ೨೦೧೪ ರ ಮೊದಲು ದೇಶದ ಸುಮಾರು ೧೫೦ ಜಿಲ್ಲೆಗಳು ನಕ್ಸಲ್‌ ಪೀಡಿತವಾಗಿದ್ದವು. ೨೦೨೦ ರ ಹೊತ್ತಿಗೆ ಈ ಸಂಖ್ಯೆ ಇಳಿದು ೯೦ ಜಿಲ್ಲೆಗಳಿಗೆ ಬಂದಿದೆ. ಈ ೯೦ ಜಿಲ್ಲೆಗಳಲ್ಲಿ ೭ ಜಿಲ್ಲೆಗಳು ಅತಿ ಹೆಚ್ಚು ಪ್ರಭಾವಿತ, ೩೭ ಜಿಲ್ಲೆಗಳು ಮಧ್ಯಮ ಪ್ರಮಾಣದಲ್ಲಿ ಮತ್ತು ೪೬ ಜಿಲ್ಲೆಗಳು ಅಲ್ಪ ಪ್ರಮಾಣದಲ್ಲಿ ಪ್ರಭಾವಿತವಾಗಿವೆ. ಈ ಜಿಲ್ಲೆಗಳಲ್ಲಿ ಜಾರ್ಖಂಡ್‌ (೧೯), ಬಿಹಾರ (೧೬), ಒಡಿಶಾ (೧೫), ಛತ್ತೀಸಗಢ (೧೪), ತೆಲಂಗಾಣ (೮), ಆಂಧ್ರಪ್ರದೇಶ (೬), ಮಹಾರಾಷ್ಟ್ರ, ಕೇರಳ ಮತ್ತು ಉತ್ತರಪ್ರದೇಶ (ತಲಾ ೩), ಮಧ್ಯಪ್ರದೇಶ (೨) ಮತ್ತು ಬಂಗಾಳ (೧) ರಾಜ್ಯಗಳು ಸೇರಿವೆ.
– ನ್ಯಾಯವಾದಿ ರೋಹನ ಮಾಳವದಕರ

೭. ಪರಿಹಾರಗಳು

ಅ. ನಕ್ಸಲವಾದದ ವಿರುದ್ಧ ಜನಜಾಗೃತಿ ಮೂಡಿಸುವುದು, ಯಾರಿಗೂ ಭಯಪಡದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಜನರಲ್ಲಿ ಜಾಗೃತಿ ಮೂಡಿಸುವುದು.

ಆ. ಕಾನೂನಿನ ಪರಿಣಾಮಕಾರಿ ಕಾರ್ಯಚಟುವಟಿಕೆ ನಡೆಸಿ ಕ್ರಮ ಕೈಗೊಳ್ಳುವುದು.

ಇ. ಮಾಧ್ಯಮಗಳು ಜವಾಬ್ದಾರ ಪಾತ್ರವನ್ನು ವಹಿಸುವುದು ಮುಖ್ಯ, ಇದರಿಂದ ಸಮಾಜಕ್ಕೆ ಸತ್ಯ ಮತ್ತು ನಿಖರ ಮಾಹಿತಿ ಸಿಗುತ್ತದೆ.

ಈ. ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರನಿಷ್ಠ ಶಿಕ್ಷಣಕ್ಕೆ ಒತ್ತು ನೀಡುವುದು.

ಉ. ಆದಿವಾಸಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಅಭಿವೃದ್ಧಿ ಮಾಡಿ ಈ ಮಾರ್ಗದ ಮೂಲಕ ನಕ್ಸಲೀಯರ ಮತ್ತು ಸಾಮ್ಯವಾದಿ ವಿಚಾರಧಾರೆಯ ಪ್ರಭಾವವನ್ನು ಕಡಿಮೆ ಮಾಡುವುದು.

ಊ. ದೇಶವಿರೋಧಿ ವಿಚಾರ ಮಾಡುವ ವ್ಯಕ್ತಿಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಿ ಅವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವುದು.

ಎ. ಸಮಾಜದಲ್ಲಿ ವಿವೇಚನಾಶೀಲ ಮತ್ತು ರಾಷ್ಟ್ರಹಿತಕ್ಕೆ ಒಲವುಳ್ಳ, ಸತ್ಯ ಮಾಹಿತಿ ಇರುವ ಮತ್ತು ನಿರ್ಭೀತ ವೈಚಾರಿಕ ನಾಯಕತ್ವವನ್ನು ಸಿದ್ಧಪಡಿಸುವುದು.

ಐ. ನಗರ ಪ್ರದೇಶಗಳಲ್ಲಿ ಹರಡುತ್ತಿರುವ ಚಿಂತಕರ ನೆಪದಲ್ಲಾಗುತ್ತಿರುವ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರುವುದು ಮತ್ತು ಹಾಗೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದು.

ಒ. ಪ್ರತಿಯೊಬ್ಬ ನಾಗರಿಕನು ಜಾಗರೂಕನಾಗಿರುವುದು ಮತ್ತು ಸಂದೇಹಾಸ್ಪದ ವ್ಯಕ್ತಿಗಳ ಬಗ್ಗೆ ಆಡಳಿತಕ್ಕೆ, ಹಾಗೆಯೇ ಸೂಕ್ತ ವ್ಯಕ್ತಿಗೆ ಪುರಾವೆಗಳೊಂದಿಗೆ ಮಾಹಿತಿ ನೀಡುವುದು.

೮. ಪ್ರತಿಯೊಬ್ಬರೂ ಸಾಮ್ಯವಾದಿ ವಿಚಾರಗಳ ಬಗ್ಗೆ ಜಾಗರೂಕರಾಗುವುದು ಮುಖ್ಯ !

ಇವೆಲ್ಲವನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ನಕ್ಸಲವಾದವನ್ನು ಕೊನೆಗೊಳಿಸಲು ಪರಿಣಾಮಕಾರಿ ಪ್ರಯತ್ನಿಸಿವೆ ಎಂದು ತಿಳಿಯುತ್ತದೆ. ೨೦೧೮ ರಲ್ಲಿ ನಕ್ಸಲ್‌ ಪೀಡಿತ ಜಿಲ್ಲೆಗಳ ಪಟ್ಟಿಯಿಂದ ಸುಮಾರು ೪೦ ಜಿಲ್ಲೆಗಳನ್ನು ತೆಗೆದುಹಾಕಲಾಗಿದೆ, ಇದು ಯಶಸ್ಸಿನ ಸೂಚಕವಾಗಿದೆ; ಆದರೆ ಇನ್ನೂ ಅಪಾಯ ಸಂಪೂರ್ಣವಾಗಿ ತಪ್ಪಿಲ್ಲ. ದೇಶದ ಏಕತೆ, ಅಖಂಡತೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ, ಇದು ಕೇವಲ ಆಡಳಿತಗಾರರು, ನ್ಯಾಯವ್ಯವಸ್ಥೆ ಮತ್ತು ಸುರಕ್ಷಾ ಪಡೆಗಳ ಕೆಲಸವಲ್ಲ. ಪ್ರತಿಯೊಬ್ಬ ಭಾರತೀಯ ನಾಗರಿಕನು ಈ ಬಗ್ಗೆ ಜಾಗರೂಕರಾಗಿರುವುದು, ನಗರ ಸಾಮ್ಯವಾದಿ ವಿಚಾರಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ವಿರೋಧಿಸುವುದು, ಇದುವೇ ಕಾಲದ ಅವಶ್ಯಕತೆ. – ನ್ಯಾಯವಾದಿ ರೋಹನ ಮಾಳವದಕರ, ಪುಣೆ. (೧೬.೭.೨೦೨೫)