ಭಾರತದಿಂದ ಕಳುವಾದ 3 ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಹಸ್ತಾಂತರಿಸಲಿರುವ ಆಸ್ಟ್ರೇಲಿಯಾ ಸರಕಾರ !

ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾ ಭಾರತದ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ 3 ಅತ್ಯಂತ ಮಹತ್ವದ ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಮರಳಿಸಲಿದೆ. ಇದರಲ್ಲಿ ಕಂಚಿನ ತ್ರಿಶೂಲ ಮತ್ತು ಅದರ ಮೇಲೆ ಶ್ರೀ ಭದ್ರಕಾಳಿದೇವಿಯ ಮೂರ್ತಿ, ಗ್ರಾನೈಟ್ ಕಲ್ಲಿನಿಂದ ಮಾಡಿದ ನಂದಿಯ ಮೂರ್ತಿ ಮತ್ತು ಕಪ್ಪು ಕಲ್ಲಿನ ಮೇಲೆ ಕೆತ್ತಲಾದ 6 ಮುಖಗಳಿರುವ ಭಗವಾನ ಕಾರ್ತಿಕೇಯನ ಅಪರೂಪದ ಮೂರ್ತಿಗಳು ಸೇರಿವೆ. ಈ ಎಲ್ಲಾ ಪ್ರಾಚೀನ ಕಲಾಕೃತಿಗಳನ್ನು ಹಲವು ವರ್ಷಗಳ ಹಿಂದೆ ತಮಿಳುನಾಡಿನ ಹಳೆಯ ದೇವಾಲಯಗಳಿಂದ ಕಳ್ಳತನ ಮಾಡಿ ಹೊರದೇಶಕ್ಕೆ ಸಾಗಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಆಸ್ಟ್ರೇಲಿಯಾ ಭೇಟಿಯ ನಂತರ ಆಸ್ಟ್ರೇಲಿಯಾ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

(ಚಿತ್ರದ ಮೇಲೆ ಕ್ಲಿಕ್ ಮಾಡಿ)

1. ವಿದೇಶಾಂಗ ಸಚಿವಾಲಯದ ಮಾಹಿತಿಯ ಅನುಸಾರ, ಈ ಕಲಾಕೃತಿಗಳು 11 ಮತ್ತು 12ನೇ ಶತಮಾನಕ್ಕೆ ಸೇರಿದ್ದು, ಇವು ಭಾರತದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯ ಪ್ರಮುಖ ಭಾಗವಾಗಿವೆ.

2. ಈ ಅಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸುವ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ರವರಿಗೆ ಧನ್ಯವಾದ ಅರ್ಪಿಸಿದರು.

3. ಸದ್ಯ ಈ ಮೂರೂ ಕಲಾಕೃತಿಗಳನ್ನು ಆಸ್ಟ್ರೇಲಿಯಾದ ‘ನ್ಯಾಷನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯಾ’ದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.