‘ಅಸುರಕ್ಷಿತ ಭಾವನೆ’ಯನ್ನು ನಿವಾರಿಸಲು ಮುಂಬಯಿಯ ಖ್ಯಾತ ಸಲಹೆಗಾರ್ತಿ ಸಾಧಕಿ ಡಾ. ಮೀನೂ ರತನ್‌ ಇವರು ಹೇಳಿರುವ ‘ಸೇಫ್‌ ಪ್ಲೇಸ್‌ ರೆಮೆಡಿ’ ಪರಿಣಾಮಕಾರಿ ಮಾರ್ಗವಾಗಿದೆ !

ಡಾ. ಮೀನೂ ರತನ್‌

೧. ವ್ಯಕ್ತಿಯ ಮನಸ್ಸಿನಲ್ಲಿ ಅಸುರಕ್ಷಿತ ಭಾವನೆ ದೂರಗೊಳಿಸಲು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಜೊತೆಗೆ ಡಾ. ಮೀನೂ ರತನ್‌ ಇವರು ಹೇಳಿರುವ ‘ಸೇಫ್‌ ಪ್ಲೇಸ್‌ ರೆಮೆಡಿ’ ತುಂಬಾ ಉಪಯುಕ್ತವಾಗಿದೆ

‘ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದಲ್ಲೊಂದು ಸಮಯದಲ್ಲಿ ತನ್ನನ್ನು ತಾನು ಅಸುರಕ್ಷಿತನೆಂದು ಭಾವಿಸುತ್ತಾನೆ, ಅಂದರೆ ಅಂತಹ ಭಾವನೆ ಅವನ ಮನಸ್ಸಿನಲ್ಲಿ ಮೂಡುತ್ತದೆ. ಕೆಲವರಿಗೆ ‘ಪರೀಕ್ಷೆಯ ಸಮಯದಲ್ಲಿ ಉತ್ತರಪತ್ರಿಕೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಬಹುದೇ ?’, ಎಂಬ ಭಯ ವಿರುತ್ತದೆ. ಕೆಲವರಿಗೆ ಪ್ರಯಾಣದ ಭಯ ಮತ್ತು ಕೆಲವರಿಗೆ ನೌಕರಿ ನಿಮಿತ್ತ ಸಂದರ್ಶನಕ್ಕೆ ಹೋಗುವಾಗ ‘ನಾವು ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುತ್ತದೆಯೇ ?’ ಎಂಬ ಭಯವಿರುತ್ತದೆ. ಕೆಲವರಿಗೆ ತಮ್ಮ ಅಧಿಕಾರಿಗಳ ಮುಂದೆ ಮಾತನಾಡಲು ಭಯವಿರುತ್ತದೆ. ಇದರಿಂದಾಗಿ ಇಂತಹ ವ್ಯಕ್ತಿಗಳಿಗೆ ಸಭೆಗಳಲ್ಲಿ ತಮ್ಮ ವಿಚಾರಗಳನ್ನು ವ್ಯವಸ್ಥಿತವಾಗಿ ಮಂಡಿಸಲು ಸಾಧ್ಯವಾಗುವುದಿಲ್ಲ. ಇಂತಹ ಅನೇಕ ಕಾರಣಗಳಿಂದ ವ್ಯಕ್ತಿಯ ಮನಸ್ಸು ಅಸುರಕ್ಷಿತವಾಗಿರುತ್ತದೆ. ಈ ಅಸುರಕ್ಷಿತತೆಯ ಭಾವನೆಯಿಂದ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾಗಿ ಸ್ವಲ್ಪ ಸಮಯದ ನಂತರ ತಪ್ಪು ಇಲ್ಲದಿರುವಾಗಲೂ ವ್ಯಕ್ತಿಯು ರಕ್ಷಣಾತ್ಮಕ ಮನೋಭಾವದಲ್ಲಿ (‘ಡಿಫೆನ್ಸಿವ್‌ ಮೂಡ್‌’ನಲ್ಲಿ), ಅಂದರೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸ್ವಭಾವದೋಷವನ್ನು ಹೋಗಲಾಡಿಸಲು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಉಪಯುಕ್ತವಾಗಿದೆ; ಆದರೆ ಕೆಲವರಿಗೆ ಇದನ್ನು ತಕ್ಷಣವೇ ನಿವಾರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಮುಂಬಯಿಯ ಖ್ಯಾತ ಸಲಹೆಗಾರ್ತಿ ಡಾ. ಮೀನೂ ರತನ್‌ರು ಹೇಳಿದ ‘ಸೇಫ್‌ ಪ್ಲೇಸ್‌ ರೆಮೆಡಿ’ ಎಲ್ಲರಿಗೂ ಖಂಡಿತವಾಗಿಯೂ ಉಪಯುಕ್ತವಾಗುತ್ತದೆ’, ಎಂದು ನನಗೆ ಅನಿಸುತ್ತದೆ.

ನ್ಯಾಯವಾದಿ ಯೋಗೇಶ ಜಲತಾರೆ

೨. ವ್ಯಕ್ತಿಗೆ ಅಸುರಕ್ಷಿತ ಅನಿಸಿದಾಗ ಯಾವ ಸ್ಥಳದಲ್ಲಿ ಅವನಿಗೆ ಮೊದಲು ನಿರ್ಭಯ ಮತ್ತು ಶಾಂತ ಸ್ಥಿತಿಯ ಅನುಭವವಾಗಿತ್ತೋ, ಅಂತಹ ಸ್ಥಳಕ್ಕೆ ಮನಸ್ಸಿನಿಂದ ಹೋಗಿ ಅವನು ನಾಮಜಪ, ಧ್ಯಾನ ಇತ್ಯಾದಿ ಮಾಡಬೇಕು !

ಡಾ. ಮೀನೂಅಕ್ಕ ಇವರು, ‘ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲೋ ಒಂದು ಕಡೆ, ತಾನು ಸಂಪೂರ್ಣವಾಗಿ ನಿಶ್ಚಿಂತ, ನಿರ್ಭಯ ಮತ್ತು ಶಾಂತ ಸ್ಥಿತಿಯನ್ನು ಅನುಭವಿಸಿರುವ ಸ್ಥಳದಲ್ಲಿ ತಿರುಗಾಡಿರುತ್ತಾನೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿನ ಇಂತಹ ಒಂದು ಸ್ಥಳವನ್ನು ಹುಡುಕಬೇಕು. ಮನಸ್ಸಿನಲ್ಲಿ ಅಸುರಕ್ಷಿತ ಭಾವನೆ ಮೂಡಿದಾಗ, ಆ ಸ್ಥಳಕ್ಕೆ ಮನಸ್ಸಿನಿಂದ ಹೋಗಿ ಕುಳಿತುಕೊಳ್ಳಬೇಕು ಮತ್ತು ಅಲ್ಲಿ ಉದಾ, ನಾಮಜಪ, ಧ್ಯಾನ, ಉಸಿರಾಟದ ಮೇಲೆ ಗಮನವನ್ನು ಕೇಂದ್ರಿಕರಿಸಿ ಶಾಂತ ವಾಗಿ ಕುಳಿತುಕೊಳ್ಳುವುದು, ಮುಂತಾದವುಗಳನ್ನು ಮಾಡಿ ಅಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಬೇಕು. ಅನಂತರ ನಿಮ್ಮ ಮನಸ್ಸಿನ ಅಸುರಕ್ಷಿತತೆಯ ಭಾವನೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ, ಎಂಬುದರಲ್ಲಿ ಸಂದೇಹವಿಲ್ಲ”, ಎಂದು ಹೇಳುತ್ತಾರೆ.

೩. ಸಾಧಕನಿಗೆ ತನ್ನ ಮನಸ್ಸು ಅಸುರಕ್ಷಿತ ಮತ್ತು ಅಸ್ವಸ್ಥವೆನಿಸಿದಾಗ, ಅವನು ಮನಸ್ಸಿನಿಂದ ಸುರಕ್ಷಿತ ಸ್ಥಳಕ್ಕೆ ಹೋಗಿ ಅಲ್ಲಿ ನಾಮಜಪ ಮಾಡಿದ ನಂತರ ಅಸುರಕ್ಷಿತತೆ ಕಡಿಮೆಯಾಗುವುದನ್ನು ಅನುಭವಿಸುವುದು

ನನಗೂ ನನ್ನ ಜೀವನದಲ್ಲಿ ಪರೀಕ್ಷೆಯ ಬಗ್ಗೆ ಯಾವಾಗಲೂ ಒತ್ತಡವಿರುತ್ತಿತ್ತು. ಈಗಲೂ ಕೆಲವು ಹೊಸ ಸೇವೆಗಳು ಬಂದರೆ ಅಥವಾ ಕೆಲವು ದೊಡ್ಡ ಸವಾಲುಗಳು ಎದುರಾದಾಗ ನನಗೆ ಅಸುರಕ್ಷಿತ ಮತ್ತು ಅಸ್ವಸ್ಥ ಕೂಡ ಅನಿಸುತ್ತದೆ. ಇದಕ್ಕೆ ಉಪಾಯವೆಂದು ನಾನು ಮೀನೂಅಕ್ಕನವರ ಮಾರ್ಗದರ್ಶನದಂತೆ ಪ್ರಯೋಗ ಮಾಡಿದೆ. ನನ್ನ ಜೀವನದಲ್ಲಿ ನಾನು ಅತ್ಯಂತ ಸುರಕ್ಷಿತ ಎಂದು ಅನುಭವಿಸಿದ್ದ ಸ್ಥಳಕ್ಕೆ ಸ್ವಲ್ಪ ಸಮಯ ಮನಸ್ಸಿನಿಂದ ಹೋಗುವ ಪ್ರಯೋಗ ಮಾಡಿದೆ ಮತ್ತು ನಿಜವಾಗಿಯೂ ‘ಅಲ್ಲಿಗೆ ಹೋಗಿ ನಾಮಜಪ ಮಾಡಿದ ನಂತರ ನನ್ನ ಅಸುರಕ್ಷಿತತೆ ಕಡಿಮೆಯಾಯಿತು.’

– ಶ್ರೀ. ಯೋಗೇಶ ಜಲತಾರೆ (ಸನಾತನ ಪ್ರಭಾತ, ಸಮೂಹ ಸಂಪಾದಕರು), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧.೨೦೨೪)