ಆಗಸ್ಟ್ ೨೭ ರಂದು ಇರುವ ಗಣೇಶಚತುರ್ಥಿ ನಿಮಿತ್ತ…

‘೧೯ ರಿಂದ ೨೨ ಫೆಬ್ರುವರಿ ೨೦೨೫ ರ ಕಾಲಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡದ ಶ್ರೀ ಮಾಂದಾರ ಗಣೇಶನ ಭಗ್ನವಾಗಿರುವ ಹಳೆಯ ವಿಗ್ರಹವನ್ನು ಬದಲಾಯಿಸಿ ಹೊಸ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಮೇಲೆ ಕಳಶಾರೋಹಣವನ್ನು ಮಾಡಲಾಯಿತು. ಶ್ರೀ ಮಾಂದಾರ ಗಣೇಶನು (ಮಂದಿರ ಸ್ಥಾಪನೆ ಶಕೆ ೧೯೭೭ (ಕ್ರಿ.ಶ. ೧೮೫೫) ಮತ್ತು ಜೀರ್ಣೋದ್ಧಾರ ೨೦೧೫) ಪಟವರ್ಧನ ಸರಕಾರದ ಕುಟುಂಬದ ಜಾಗೃತ ಉಪಾಸ್ಯದೇವತೆಯಾಗಿದ್ದಾನೆ. ಈ ಸಮಾರಂಭದ ಬಗ್ಗೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಿಂದ ಸೂಕ್ಷ್ಮ ಜ್ಞಾನಪ್ರಾಪ್ತ್ತ ಮಾಡಿಕೊಳ್ಳುವ ಸಾಧಕ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡಲಾಗಿದೆ.

೧. ಶ್ರೀ ಮಾಂದಾರ ಗಣೇಶನ ಆಧ್ಯಾತ್ಮಿಕ ವೈಶಿಷ್ಟ್ಯಗಳು !
೧ ಅ. ತೇಜತತ್ತ್ವಪ್ರಧಾನ ಮತ್ತು ಸಂಕಟನಾಶಕ ದೇವತೆ : ಶ್ರೀ ಗಣಪತಿಯ ‘ಮಾಂದಾರ ಗಣೇಶ’ನ ರೂಪದಲ್ಲಿ ತೇಜತತ್ತ್ವ ಮತ್ತು ಸಂಕಟ ನಾಶಗೊಳಿಸುವ ಕ್ಷಮತೆಯು ಅವನ ಇತರ ರೂಪಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿರುತ್ತದೆ.
೧ ಆ. ಕ್ಷೇತ್ರದ ರಕ್ಷಣೆಯನ್ನು ಮಾಡುವ ದೇವತೆ : ಭಕ್ತರ ಭಕ್ತಿಭಾವದಿಂದ ಕೆಲವು ವಿಶೇಷ ಸ್ಥಳಗಳಲ್ಲಿನ ದೇವಸ್ಥಾನ ಗಳಲ್ಲಿ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತ ವಾಗಿರುತ್ತದೆ. ಸಮಾಜದ ವ್ಯಕ್ತಿಗಳಲ್ಲಿ ದೇವತೆಯ ಬಗೆಗಿನ ಭಾವ ಮತ್ತು ಶ್ರದ್ಧೆಯಿದ್ದರೆ ಆ ದೇವಸ್ಥಾನದಲ್ಲಿನ ದೇವತೆಯು ‘ಕ್ಷೇತ್ರದ ರಕ್ಷಕ ದೇವತೆ’ ಎಂದು ಕಾರ್ಯವನ್ನು ಮಾಡುತ್ತಾಳೆ. ಗ್ರಾಮದೇವತೆ ಇತ್ಯಾದಿ ದೇವತೆಗಳಿಗೆ ಯಾವ ಸಂಕಟಗಳನ್ನು ತಪ್ಪಿಸಲಾಗುವುದಿಲ್ಲವೋ, ಅಂತಹ ಕಠಿಣ ಸಂಕಟಗಳಿಂದಲೂ ಕ್ಷೇತ್ರದಲ್ಲಿನ ಜಾಗೃತ ದೇವತೆಗಳು ಅಲ್ಲಿನ ಸಮಾಜದ ರಕ್ಷಣೆ ಮಾಡುತ್ತಾರೆ. ಅದೇ ರೀತಿ ಕಾಗವಾಡದ ಶ್ರೀ ಮಾಂದಾರ ಗಣೇಶನ ಕಾರ್ಯವೂ ಆಗಿದೆ.
೧ ಇ. ಭಕ್ತರ ಅನಾಹತಚಕ್ರದಿಂದ ಅವರಿಗೆ ಚೈತನ್ಯ ಮತ್ತು ಪ್ರಾಣಶಕ್ತಿ ನೀಡುವ ದೇವತೆ : ಕಾಗವಾಡದ ಶ್ರೀ ಮಾಂದಾರ ಗಣೇಶನು ಜಾಗೃತ ದೇವತೆಯಾಗಿದ್ದಾನೆ. ಆದ್ದರಿಂದ ಅವನ ಭಾವಪೂರ್ಣ ದರ್ಶನದಿಂದ ಭಕ್ತನ ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣ ನಾಶವಾಗುತ್ತದೆ ಮತ್ತು ನೇರವಾಗಿ ಭಕ್ತನ ಅನಾಹತಚಕ್ರವು ಕಾರ್ಯನಿರತವಾಗಿ ಅವನಿಗೆ ಚೈತನ್ಯ ಮತ್ತು ಪ್ರಾಣಶಕ್ತಿಯ ಪ್ರಸಾದ ಸಿಗುತ್ತದೆ.

೨. ಶ್ರೀ ಮಾಂದಾರ ಗಣೇಶನು ಭಕ್ತರ ರಕ್ಷಣೆಗಾಗಿ ಸಮಷ್ಟಿ ತೊಂದರೆಗಳನ್ನು ಸಹಿಸಿಕೊಳ್ಳುವುದು
ಯಾವುದಾದರೊಂದು ಪರಿಸರದಲ್ಲಿ ಜಾಗೃತ ದೇವತೆಯಿದ್ದರೆ ಮತ್ತು ಆ ದೇವತೆಯ ನಿಯಮಿತ ಉಪಾಸನೆ (ಆರತಿ, ಪೂಜೆ, ಯಜ್ಞ ಇತ್ಯಾದಿ) ನಡೆಯುತ್ತಿದ್ದರೆ ಆ ಕ್ಷೇತ್ರದಲ್ಲಿ ನಿರಂತರ ಚೈತನ್ಯ ಪ್ರವಹಿಸುತ್ತಿರುತ್ತದೆ. ಇಂತಹ ಕ್ಷೇತ್ರಗಳಲ್ಲಿ ಕಾಲಮಹಾತ್ಮೆಯಿಂದ ಸಮಷ್ಟಿ ಪ್ರಾರಬ್ಧ ಹೆಚ್ಚಾಗಿ ಮಹಾಮಾರಿ ಅಥವಾ ರೋಗಗಳು ಹರಡಲಿದ್ದರೆ ಅಥವಾ ಆ ಕ್ಷೇತ್ರದಲ್ಲಿನ ಸಾತ್ತ್ವಿಕತೆಯನ್ನು ನಾಶಮಾಡಿ ಜನರಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳ ತೀವ್ರ ಆಕ್ರಮಣ ನಡೆಯುತ್ತಿದ್ದರೆ ಅದರ ಲಕ್ಷಣಗಳು ಆ ಕ್ಷೇತ್ರದಲ್ಲಿನ ಜಾಗೃತ ಮತ್ತು ರಕ್ಷಣೆ ಮಾಡುವ ದೇವತೆಗಳಲ್ಲಿ ಕಂಡುಬರುತ್ತವೆ. ಹಾಗೆಯೇ ಶ್ರೀ ಮಾಂದಾರ ಗಣೇಶ ದೇವತೆಯ ಸಂದರ್ಭದಲ್ಲಿಯೂ ಆಯಿತು.
ಕಳೆದ ೪-೫ ವರ್ಷಗಳಿಂದ ಸಂಪೂರ್ಣ ಪೃಥ್ವಿಯ ಮೇಲೆ ಸೂಕ್ಷ್ಮದಲ್ಲಿನ ಆಪತ್ಕಾಲ ನಡೆಯುತ್ತಿದ್ದು ಅದರಲ್ಲಿ ಉತ್ತರೋತ್ತರ ಹೆಚ್ಚಳವಾಗುತ್ತಿದೆ. ಈ ಆಪತ್ಕಾಲದ ಲಾಭವನ್ನು ಪಡೆದು ಕೆಟ್ಟ ಶಕ್ತಿಗಳು ಸಾತ್ತ್ವಿಕತೆ ಕಡಿಮೆ ಮಾಡಿ ಮತ್ತು ರಜ-ತಮವನ್ನು ಹರಡಿ ಮಾನವನ ಮೇಲೆ ವಿವಿಧ ಸ್ವರೂಪಗಳಲ್ಲಿನ ಮಾರಣಾಂತಿಕ ಸಂಕಟಗಳನ್ನು (ಮಹಾಮಾರಿ, ನೆರೆಹಾವಳಿ, ಗಲಭೆ ಇತ್ಯಾದಿ) ತರಲು ಪ್ರಯತ್ನಿಸುತ್ತಿವೆ. ಕೆಟ್ಟ ಶಕ್ತಿಗಳು ಕಾಗವಾಡ ಕ್ಷೇತ್ರದ ಸಂದರ್ಭದಲ್ಲಿ ಇದೇ ರೀತಿ ಮಾಡಲು ಪ್ರಯತ್ನಿಸಿದವು. ಈ ಆಕ್ರಮಣಗಳ ಶೇ. ೧೦ ರಷ್ಟು ಭಾಗ ಶ್ರೀ ಮಾಂದಾರ ಗಣೇಶನ ಹಳೆಯ ವಿಗ್ರಹವು ಆಕರ್ಷಿಸಿಕೊಳ್ಳಲು ಪ್ರಯತ್ನಿಸಿ ಅದು ಭಂಗವಾಯಿತು. ಈ ರೀತಿ ಶ್ರೀ ಮಾಂದಾರ ಗಣೇಶನ ಭಕ್ತರ ರಕ್ಷಣೆಗಾಗಿ ಸಮಷ್ಟಿ ತೊಂದರೆಗಳನ್ನು ಸಹಿಸಿಕೊಂಡು ಭಕ್ತರ ರಕ್ಷಣೆ ಮಾಡಿದ್ದಾನೆ.
೩. ಶ್ರೀ ಮಾಂದಾರ ಗಣೇಶಮೂರ್ತಿಯ ಮೂರು ದಿನಗಳ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಮಾಡಿದ ಸೂಕ್ಷ್ಮಪರೀಕ್ಷಣೆ !
೩ ಅ. ಮೊದಲನೇ ದಿನ (೧೯.೨.೨೦೨೫) – ತತ್ತ್ವನ್ಯಾಸ, ಅಘೋರ ಹೋಮ ಮತ್ತು ಹಳೆಯ ವಿಗ್ರಹದಲ್ಲಿನ ತತ್ತ್ವವನ್ನು ತೆಗೆದು ಕಲಶದಲ್ಲಿಡುವುದು
೩ ಅ ೧. ಕೆಟ್ಟ ಶಕ್ತಿಗಳು ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ನಿರ್ಮಾಣಮಾಡಿದ ಅಡತಡೆಗಳನ್ನು ದೂರಗೊಳಿಸಲು ಶ್ರೀ ಮಾಂದಾರ ಗಣೇಶನ ಮಾರಕ ತತ್ತ್ವ ಕಾರ್ಯನಿರತವಾಗುವುದು : ‘ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿನ ಮೊದಲನೇ ದಿನದ ವಿಧಿಗಳು ಪೂರ್ಣವಾಗಬಾರದು’, ಎಂದು ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ವಿವಿಧ ರೀತಿಯ ಅಡೆತಡೆಗಳನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದವು. ಈ ಸಮಯದಲ್ಲಿ ಕೆಟ್ಟ ಶಕ್ತಿಗಳ ಆಕ್ರಮಣಗಳ ತೀವ್ರತೆ ನಿತ್ಯದ ತುಲನೆಯಲ್ಲಿ ಶೇ. ೨೫ ರಷ್ಟು ಹೆಚ್ಚಿತ್ತು. ಆದ್ದರಿಂದ ವಿಧಿ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗದಿರುವುದು, ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಲು ಅಡೆತಡೆಗಳು ಬರುವುದು, ಪ್ರಾಣಪ್ರತಿಷ್ಠಾಪನೆಯ ವಿಧಿಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ವಿವಿಧ ದೈಹಿಕ ತೊಂದರೆಯಾಗುವುದು, ವಿಧಿಗಾಗಿ ಪರಸ್ಪರರಲ್ಲಿ ಸಮನ್ವಯದ ಅಭಾವ, (ಅನ್ಯೋನ್ಯತೆ ಇಲ್ಲದಿರುವುದು) ಅವ್ಯವಸ್ಥೆ, ಮುಂತಾದ ವಿವಿಧ ತೊಂದರೆಗಳು ಕೆಲವೊಂದು ಪ್ರಮಾಣದಲ್ಲಿ ಆದವು. ಹೀಗಿದ್ದರೂ, ಪ್ರಾಣಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆ ಯಲ್ಲಿ ಭಾಗವಹಿಸಿರುವ ಭಕ್ತರ ತೀವ್ರ ತಳಮಳದಿಂದ ಶ್ರೀ ಮಾಂದಾರ ಗಣೇಶನ ಮಾರಕ ತತ್ತ್ವವು ಕೆಟ್ಟ ಶಕ್ತಿಗಳೊಂದಿಗೆ ಹೋರಾಡಲು ಕಾರ್ಯನಿರತವಾಯಿತು. ಆದ್ದರಿಂದ ಆರಂಭದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಶೇ. ೧೦ ರಷ್ಟು ಅಡೆತಡೆಗಳು ಬಂದವು. ನಂತರ ಭಕ್ತರಿಗೆ ವಿವಿಧ ಅಡೆತಡೆಗಳನ್ನು ಪರಿಹರಿಸಲು ಸಾಧ್ಯವಾಯಿತು.
೩ ಅ ೨. ರಾಕ್ಷೋಘ್ನ ಹೋಮದಿಂದ ಪ್ರಕ್ಷೇಪಿಸಿದ ಮಾರಕ ಶಕ್ತಿಯಿಂದ ಕ್ಷೇತ್ರದಲ್ಲಿನ ತೊಂದರೆಯು ಶೇ. ೧೦ ರಷ್ಟು ಕಡಿಮೆಯಾಗುವುದು : ಪ್ರಾಣಪ್ರತಿಷ್ಠಾಪನೆಯ ವಿಧಿಯಲ್ಲಿಯೇ ಬರುವ ರಾಕ್ಷೋಘ್ನ ಹೋಮವನ್ನು ಮಾಡಲಾಯಿತು. ಈ ಹೋಮದಿಂದ ದೇವತೆಯ ಮಾರಕ ಶಕ್ತಿ ಪ್ರಕಟವಾಗಿ ಅದು ಸಂಪೂರ್ಣ ಕ್ಷೇತ್ರದಲ್ಲಿ ಪ್ರಕ್ಷೇಪಿಸಿತು. ಸಂಪೂರ್ಣ ಕ್ಷೇತ್ರವು ಆ ಮಾರಕ ಶಕ್ತಿಯಿಂದ ತುಂಬಿರುವುದರಿಂದ ಆ ಕ್ಷೇತ್ರದ ಮೇಲೆ ಸೂಕ್ಷ್ಮದಿಂದ ಅರೆಕೆಂಪು ಬಣ್ಣ ಕಾಣಿಸುತ್ತಿತ್ತು. ಈ ಮಾರಕ ಶಕ್ತಿಯಿಂದ ಸಂಪೂರ್ಣ ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೆಟ್ಟ ಶಕ್ತಿಗಳ ಪ್ರಾಬಲ್ಯವು ಕಡಿಮೆ ಆಯಿತು ಮತ್ತು ಸಂಪೂರ್ಣ ಕ್ಷೇತ್ರದಲ್ಲಿ ಹೆಚ್ಚಾಗಿರುವ ಆಧ್ಯಾತ್ಮಿಕ ತೊಂದರೆಯು ಶೇ. ೧೦ ರಷ್ಟು ಕಡಿಮೆ ಆಯಿತು.
೩ ಅ ೩. ಶ್ರೀ ಗಣಪತಿಯ ತಾರಕ ಶಕ್ತಿ ಕಾರ್ಯನಿರತವಾಗಿದ್ದರಿಂದ ಹಳೆಯ ವಿಗ್ರಹದಲ್ಲಿನ ಸಂಪೂರ್ಣ ತತ್ತ್ವವು ಕಲಶದಲ್ಲಿ ಪ್ರವಹಿಸುವುದು : ರಾಕ್ಷೋಘ್ನ ಹೋಮದಿಂದ ಕೆಟ್ಟ ಶಕ್ತಿಗಳ ಅಡೆತಡೆಗಳು ಇಲ್ಲವಾದವು. ಆದ್ದರಿಂದ ಹಳೆಯ ವಿಗ್ರಹದಲ್ಲಿನ ತತ್ತ್ವವು ಕಲಶದಲ್ಲಿ ಪ್ರವಹಿಸಲು ಆ ಸ್ಥಳದಲ್ಲಿ ಶ್ರೀ ಗಣಪತಿಯ ತಾರಕ ತತ್ತ್ವವು ಕಾರ್ಯನಿರತವಾಯಿತು. ಶ್ರೀ ಗಣಪತಿಯ ತಾರಕ ತತ್ತ್ವವು ಶ್ರೀ ಮಾಂದಾರ ಗಣೇಶನ ಹಳೆಯ ವಿಗ್ರಹದ ತಲೆಯ ಮೇಲೆ ಜಲಧಾರೆಯಂತೆ ಬೀಳುತ್ತಿತ್ತು. ಆದ್ದರಿಂದ ಹಳೆಯ ವಿಗ್ರಹದಲ್ಲಿ ಸುಪ್ತ ಸ್ವರೂಪದಲ್ಲಿರುವ ತತ್ತ್ವವು ಪ್ರಕಟವಾಗಿ ಅದು ವಿಧಿಯ ಮೂಲಕ ಸಹಜವಾಗಿ ಕಲಶದಲ್ಲಿ ಪ್ರವಹಿಸುತ್ತಿತ್ತು. ಈ ಸಂಪೂರ್ಣ ಪ್ರಕ್ರಿಯೆಯು ತಾರಕ ಶಕ್ತಿಯ ಬಲದಿಂದ ನಡೆಯುತ್ತಿದ್ದುದರಿಂದ ಆನಂದದ ಸ್ಪಂದನಗಳು ಪ್ರಕ್ಷೇಪಿಸುತ್ತಿದ್ದವು. ಆದ್ದರಿಂದ ವಾತಾವರಣದಲ್ಲಿ ಸೂಕ್ಷ್ಮದಿಂದ ಶೀತಲತೆಯ ಅರಿವಾಗುತ್ತಿತ್ತು.
೩ ಆ. ಎರಡನೇ ದಿನ (೨೦.೨.೨೦೨೫) – ಜಲಾಧಿವಾಸ, ಧಾನ್ಯಾದಿವಾಸ ಮತ್ತು ವಿಗ್ರಹದ ಮೆರವಣಿಗೆ !
೩ ಆ ೧. ‘ಜಲಾಧಿವಾಸ’ ಮತ್ತು ‘ಧಾನ್ಯಾದಿವಾಸ’ದಿಂದ ವಿಗ್ರಹದ ಶುದ್ಧಿಯಾಗಿ ಅದರಲ್ಲಿ ಪೊಳ್ಳು ನಿರ್ಮಾಣವಾಗುವುದು : ಮರುದಿನ ವಿಗ್ರಹದ ಮೇಲೆ ಪ್ರಾಣಪ್ರತಿಷ್ಠಾಪನೆಯ ವಿಧಿಗೆ ಸಂಬಂಧಪಟ್ಟಿದ ‘ಜಲಾಧಿವಾಸ’ ಮತ್ತು ‘ಧಾನ್ಯಾದಿವಾಸ’ ಈ ವಿಧಿಗಳನ್ನು ಮಾಡಲಾಯಿತು. ‘ಜಲಾಧಿವಾಸ’ ಈ ವಿಧಿಯಲ್ಲಿ ದೇವತೆಯ ಹೊಸ ವಿಗ್ರಹವನ್ನು ವಿವಿಧ ನದಿಗಳ ಪವಿತ್ರ ನೀರಿನಲ್ಲಿ ಇಡಲಾಗುತ್ತದೆ. ಆದ್ದರಿಂದ ವಿಗ್ರಹದಲ್ಲಿನ ಸಾತ್ತ್ವಿಕತೆಯಲ್ಲಿ ಹೆಚ್ಚಳವಾಗುತ್ತದೆ. ಇದೇ ರೀತಿ ‘ಧಾನ್ಯಾದಿವಸ’ ಈ ವಿಧಿಯಲ್ಲಿ ದೇವತೆಯ ಹೊಸ ವಿಗ್ರಹವನ್ನು ವಿವಿಧ ರೀತಿಯ ಧಾನ್ಯಗಳಲ್ಲಿ ಇಡಲಾಗುತ್ತದೆ. ಇದರಿಂದ ವಿಗ್ರಹದಲ್ಲಿ ಮಾತೃಕಾ ಶಕ್ತಿ ಕಾರ್ಯನಿರತವಾಗುತ್ತದೆ. ಈ ಎರಡೂ ವಿಧಿಗಳು ನಡೆಯುತ್ತಿದ್ದಾಗ ವಾಯುಮಂಡಲದಲ್ಲಿ ದೊಡ್ಡ ಪ್ರಮಾಣದಲ್ಲಿ ಶ್ರೀ ಗಣಪತಿಯ ತಾರಕ ತತ್ತ್ವ ಮತ್ತು ದೇವಿಯ ‘ಮಾತೃಕಾ’ ಶಕ್ತಿ ಕಾರ್ಯನಿರತವಾಗಿತ್ತು. ಈ ಎರಡೂ ವಿಧಿಗಳಿಂದ ವಿಗ್ರಹದ ಶುದ್ಧಿಯಾಗಿ ಅದರಲ್ಲಿ ಸೂಕ್ಷ್ಮ ಸ್ತರದಲ್ಲಿ ದೊಡ್ಡ ಟೊಳ್ಳು ನಿರ್ಮಾಣವಾಯಿತು. ‘ಜಲಾಧಿವಾಸ’ ಮತ್ತು ‘ಧಾನ್ಯಾದಿವಾಸ’ ಈ ವಿಧಿಗಳಿಂದ ದೇವತೆಯ ವಿಗ್ರಹದಲ್ಲಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಪೊಳ್ಳು ನಿರ್ಮಾಣ ವಾಗುತ್ತದೆಯೋ, ಅಷ್ಟು ಪ್ರಮಾಣದಲ್ಲಿ ದೇವತೆಯ ತತ್ತ್ವವು ವಿಗ್ರಹದಲ್ಲಿ ಆಕರ್ಷಿತವಾಗಲು ಸಹಾಯವಾಗುತ್ತದೆ.
೩ ಆ ೨. ಊರಲ್ಲಿ ದೇವತೆಯ ವಿಗ್ರಹದ ಮೆರವಣಿಗೆಯನ್ನು ತೆಗೆದಿದ್ದರಿಂದ ದೇವತೆಯ ತತ್ತ್ವವು ಸಮಷ್ಟಿ ಸ್ತರದಲ್ಲಿ ಕಾರ್ಯನಿರತ ವಾಗುವುದು : ಊರಲ್ಲಿ ಶ್ರೀ ಮಾಂದಾರ ಗಣೇಶನ ಹೊಸ ವಿಗ್ರಹದ ಮೆರವಣಿಗೆಯನ್ನು ತೆಗೆಯಲಾಯಿತು. ಆ ಸಮಯದಲ್ಲಿ ಊರಲ್ಲಿನ ಭಕ್ತರಿಗೆ ವಿಗ್ರಹದ ದರ್ಶನದಿಂದ ಭಾವ ಜಾಗೃತವಾಯಿತು. ಭಕ್ತರಲ್ಲಿನ ಈ ಸಮಷ್ಟಿ ಭಾವವನ್ನು ನೋಡಿ ಶ್ರೀ ಗಣೇಶನು ಭಕ್ತರ ಮೇಲೆ ಪ್ರಸನ್ನನಾದನು. ಆದ್ದರಿಂದ ಮೆರವಣಿಗೆಯ ಮಾಧ್ಯಮದಿಂದ ಆ ಕ್ಷೇತ್ರದಲ್ಲಿ ಶ್ರೀ ಗಣಪತಿ ತತ್ತ್ವವು ಹರಡಿರುವುದರಿಂದ ಸಂಪೂರ್ಣ ಕ್ಷೇತ್ರದಲ್ಲಿನ ಮಂದ ಪ್ರಾರಬ್ಧ ಮತ್ತು ಅದರಿಂದ ನಿರ್ಮಾಣವಾಗುವ ವಿವಿಧ ಅಡಚಣೆ ಗಳು ಕಡಿಮೆಯಾಗಲು ಸಹಾಯವಾಯಿತು.
೩ ಇ. ಮೂರನೇ ದಿನ (೨೧.೨.೨೦೨೫) – ಪ್ರತ್ಯಕ್ಷ ಪ್ರಾಣಪ್ರತಿಷ್ಠೆಯ ದಿನ
೩ ಇ ೧. ಪ್ರಾಣಪ್ರತಿಷ್ಠಾಪನೆಯ ವಿಧಿ ನಡೆಯುವ ಮೊದಲು ವಾಯುಮಂಡಲದಲ್ಲಿ ರಿದ್ಧಿಸಿದ್ಧಿಯರೊಂದಿಗೆ ಮಹಾಗಣಪತಿತತ್ತ್ವ ಕಾರ್ಯನಿರತವಾಗುವುದು : ಮೊದಲ ಎರಡು ದಿನಗಳಲ್ಲಿನ ವಿಧಿಗಳು ಭಾವಯುಕ್ತವಾಗಿರುವುದರಿಂದ ಮೂರನೇ ದಿನ ಪ್ರತ್ಯಕ್ಷ ವಿಧಿ ನಡೆಯುವ ಮೊದಲೇ ದೇವಸ್ಥಾನದ ಗರ್ಭಗುಡಿಯಲ್ಲಿ ಮತ್ತು ಸಂಪೂರ್ಣ ದೇವಸ್ಥಾನದಲ್ಲಿ ರಿದ್ಧಿಸಿದ್ಧಿಯರೊಂದಿಗೆ ಮಹಾಗಣಪತಿ ತತ್ತ್ವವು ಕಾರ್ಯನಿರತವಾಗಿತ್ತು. ಇದು ಈ ವಿಗ್ರಹದ ಪ್ರಾಣ ಪ್ರತಿಷ್ಠೆÉಗಾಗಿ ಸಗುಣ-ನಿರ್ಗುಣ ಸ್ತರದಲ್ಲಿ ದೇವರ ಕೃಪೆ ಯಾದುದರ ಸಂಕೇತವಾಗಿದೆ. ಇದರಿಂದ ಸೂಕ್ಷ್ಮದಿಂದ ಸಂಪೂರ್ಣ ದೇವಸ್ಥಾನವು ಅರೆಕೆಂಪು ಬಣ್ಣದಿಂದ (ಅಂದರೆ ಗಣಪತಿತತ್ತ್ವದಿಂದ) ಕೂಡಿದ್ದು ಕಾಣಿಸುತ್ತಿತ್ತು.
೩ ಇ ೨. ಪ್ರಾಣಪ್ರತಿಷ್ಠಾಪನೆಯ ವಿಧಿಯಿಂದ ಸೂರ್ಯನಂತೆ ತೇಜವಿರುವ ಶ್ರೀ ಮಾಂದಾರ ಗಣೇಶನ ತತ್ತ್ವವು ಹೊಸ ವಿಗ್ರಹದಲ್ಲಿ ಕಾರ್ಯನಿರತವಾಗುವುದು : ಪ್ರಾಣಪ್ರತಿಷ್ಠಾಪನೆಯ ವಿಧಿಯ ಸಮಯದಲ್ಲಿ ಸೂಕ್ಷ್ಮದಿಂದ ಶ್ರೀ ಮಾಂದಾರ ಗಣೇಶನ ತತ್ತ್ವವು ಪ್ರಕಟ ವಾಯಿತು. ಈ ತತ್ತ್ವವು ಸೂರ್ಯನಂತೆ ತೇಜಸ್ವಿಯಾಗಿತ್ತು. ಪ್ರಾಣಪ್ರತಿಷ್ಠಾಪನೆಯ ವಿಧಿ ನಡೆಯುತ್ತಿರುವಾಗ ವಿಗ್ರಹದಲ್ಲಿ ಶ್ರೀ ಮಾಂದಾರ ಗಣೇಶನ ತತ್ತ್ವವು ಹೆಚ್ಚಾಗುತ್ತಿತ್ತು. ಒಟ್ಟಾರೆ ಸೂಕ್ಷ್ಮದಿಂದ ಕಾಣುವ ಸಂಪೂರ್ಣ ತತ್ತ್ವವು ವಿಗ್ರಹದಲ್ಲಿ ಸೇರಿಕೊಂಡ ನಂತರ ವಿಗ್ರಹದ ಕಾಲುಗಳಿಂದ ಹಿಡಿದು ತಲೆಯವರೆಗೆ ಹಂತಹಂತದಲ್ಲಿ ವಿಗ್ರಹದಲ್ಲಿ ಸಜೀವತೆ ಬಂದು ಶ್ರೀ ಮಾಂದಾರ ಗಣೇಶನ ಹೊಸ ವಿಗ್ರಹವು ಜಾಗೃತವಾಯಿತು.
೩ ಇ ೩. ಹೊಸ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ವಿಧಿ ಮುಗಿದ ನಂತರ ಆ ವಿಗ್ರಹದಲ್ಲಿ ಅರಿವಾದ ಆಧ್ಯಾತ್ಮಿಕ ಬದಲಾವಣೆಗಳು !
೩ ಇ ಅ. ವಿಗ್ರಹದಲ್ಲಿನ ತೇಜತತ್ತ್ವದಲ್ಲಿ ಹೆಚ್ಚಳವಾಗುವುದು : ಹೊಸ ವಿಗ್ರಹವನ್ನು ಭಾವಪೂರ್ಣ ಮತ್ತು ವಿಧಿಪೂರ್ವಕ ಸ್ಥಾಪಿಸಿರುವುದರಿಂದ ಮೊದಲಿನ ವಿಗ್ರಹದ ತುಲನೆಯಲ್ಲಿ ಶೇ. ೧೦ ರಷ್ಟು ಹೆಚ್ಚು ಪ್ರಮಾಣದಲ್ಲಿ ತೇಜತತ್ತ್ವವು ಪ್ರಕ್ಷೇಪಿಸುತ್ತಿದೆ.
೩ ಇ ೩ ಆ. ವಿಗ್ರಹದಲ್ಲಿನ ಶ್ರೀ ಗಣೇಶತತ್ತ್ವದಲ್ಲಿ ಹೆಚ್ಚಳ ವಾಗಿರುವುದರಿಂದ ಭಕ್ತರಿಗೆ ಸಹಜವಾಗಿ ಅನುಭೂತಿ ಬರುವುದು : ಹೊಸ ವಿಗ್ರಹದಲ್ಲಿ ಮೊದಲಿನ ತುಲನೆಯಲ್ಲಿ ಶೇ. ೧೫ ರಷ್ಟು ಹೆಚ್ಚು ಪ್ರಮಾಣದಲ್ಲಿ ಶ್ರೀ ಗಣೇಶ ತತ್ತ್ವವು ಕಾರ್ಯನಿರತವಾಗಿದೆ. ಆದ್ದರಿಂದ ಭಕ್ತರು ಈ ವಿಗ್ರಹದ ಮುಂದೆ ಮಾಡಿದ ಹರಕೆ ಅಥವಾ ಮಾಡಿದ ಸಾಧನೆಯ ಬಗ್ಗೆ ಅವರಿಗೆ ಅಲ್ಪಾವಧಿಯಲ್ಲಿಯೇ ಶೀಘ್ರ ಫಲ ದೊರಕಲಿದೆ, ಹಾಗೆಯೇ ಭಕ್ತರಿಗೆ ಶ್ರೀ ಮಾಂದಾರ ಗಣೇಶನ ಸಂದರ್ಭದಲ್ಲಿನ ಅನುಭೂತಿಯೂ ಸಹಜವಾಗಿ ಬರುವುದು.
೩ ಇ ೩ ಇ. ಶ್ರೀ ಮಾಂದಾರ ಗಣೇಶನ ಭಾವಪೂರ್ಣ ದರ್ಶನದಿಂದ ತೊಂದರೆ ಕಡಿಮೆಯಾಗಿ ಪ್ರಾಣಶಕ್ತಿಯ ಪ್ರಸಾದ ದೊರಕುವುದು : ಪ್ರಾಣಪ್ರತಿಷ್ಠಾಪನೆಯ ವಿಧಿಯಿಂದ ಶ್ರೀ ಮಾಂದಾರ ಗಣೇಶನ ತತ್ತ್ವ ಮತ್ತು ಅವನ ತೇಜಸ್ಸು ಈ ಎರಡರಲ್ಲಿ ಹೆಚ್ಚಳವಾಗಿ ಈ ಹೊಸ ವಿಗ್ರಹದ ಚರಣಗಳಿಂದ ಸಗುಣ ಮತ್ತು ವಿಗ್ರಹದ ತಲೆಯ ಭಾಗದಿಂದ ಸಗುಣ-ನಿರ್ಗುಣ ಶಕ್ತಿ ಪ್ರಕ್ಷೇಪಿಸತೊಡಗಿದೆ. ಭಕ್ತರು ‘ಶ್ರೀ ಮಾಂದಾರ ಗಣೇಶನ ಚರಣಗಳಿಂದ ಹಿಡಿದು ತಲೆಯವರೆಗೆ’ ಈ ಕ್ರಮದಲ್ಲಿ ದರ್ಶನ ಪಡೆದ ನಂತರ ಅವರ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣ ನಾಶವಾಗಿ ಅವರ ಆಧ್ಯಾತ್ಮಿಕ ತೊಂದರೆಗಳು ಕಡಿಮೆ ಆಗುವುದು, ಹಾಗೆಯೇ ದೇಹಶುದ್ಧಿಯಾಗಿ ಅವರಿಗೆ ಶ್ರೀ ಮಾಂದಾರ ಗಣೇಶನಿಂದ ಪ್ರಕ್ಷೇಪಿಸುವ ಪ್ರಾಣಶಕ್ತಿಯ ಪ್ರಸಾದ ದೊರಕಿ ಅವರಿಗೆ ವಿವಿಧ ಕಾರ್ಯದಲ್ಲಿ ಯಶಸ್ಸು ಸಂಪಾದಿಸಲು ಸಾಧ್ಯವಾಗುವುದು.
೪. ಶ್ರೀ ಮಾಂದಾರ ಗಣೇಶನ ಹೊಸ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಭಾಗವಹಿಸಿದ ಜೀವಗಳ ಸಾಧನೆಯಾಗಿ ಅವರ ಮೇಲೆ ಶ್ರೀ ಗಣೇಶನ ಕೃಪೆಯಾಗುವುದು
ದೇವಸ್ಥಾನವು ಚೈತನ್ಯದ ಕೇಂದ್ರವಾಗಿದೆ. ಆದ್ದರಿಂದ ಸಮಷ್ಟಿ ಸಾಧನೆಗೆ ಪ್ರೋತ್ಸಾಹನ ಸಿಗುತ್ತದೆ. ಸಮಾಜದಲ್ಲಿನ ಯಾವ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿನ ದೇವಸ್ಥಾನಗಳ ಕಡೆಗೆ ದುರ್ಲಕ್ಷಿಸುತ್ತಾರೋ, ಆ ಸ್ಥಳದಲ್ಲಿನ ರಜ-ತಮದಲ್ಲಿ ಹೆಚ್ಚಳವಾಗಿ ಅಲ್ಲಿ ವಿವಿಧ ರೋಗಗಳು, ದಾರಿದ್ರ್ಯ (ಬಡತನ) ಮತ್ತು ಸಂಕಟಗಳು ಉತ್ಪನ್ನವಾಗುತ್ತವೆ. ಬದಲಾಗಿ ಸಮಾಜದಲ್ಲಿನ ಯಾವ ವ್ಯಕ್ತಿಗಳು ಸಂಘಟಿತರಾಗಿ ತಮ್ಮ ಕ್ಷೇತ್ರದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಾರೆಯೋ, ಹಾಗೆಯೇ ಅವರ ಕಾಳಜಿ ತೆಗೆದುಕೊಳ್ಳಲು ಅಗತ್ಯವಿದ್ದಷ್ಟು ಕೃತಿ ಮಾಡುತ್ತಾರೆಯೋ, ಆ ಸ್ಥಳದಲ್ಲಿ ಇಂತಹ ಕೃತಿಗಳಿಂದ ಸಮಾಜದಲ್ಲಿನ ವ್ಯಕ್ತಿಗಳಿಂದ ಸತ್‌ಗಾಗಿ ತ್ಯಾಗ ಮಾಡಿ ಅವರ ಸಾಧನೆ ಆಗಿರುವುದರಿಂದ ಅವರಿಗೆ ವಿವಿಧ ದೇವತೆಗಳ ಕೃಪಾಶೀರ್ವಾದ ಸಿಗುತ್ತದೆ. ಶ್ರೀ ಮಾಂದಾರ ಗಣೇಶನ ಭಗ್ನವಾಗಿರುವ ವಿಗ್ರಹದ ಸ್ಥಳದಲ್ಲಿ ಹೊಸ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಜೀವಗಳಿಂದ ತ್ಯಾಗಪೂರ್ಣ ಸಾಧನೆ ಆಗಿರುವುದರಿಂದ ಅವರು ಮತ್ತು ಅವರ ಕುಟುಂಬದವರ ಮೇಲೆ ಶ್ರೀ ಮಾಂದಾರ ಗಣೇಶನ ಕೃಪೆಯಾಗಿದೆ.’
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಫೋಂಡಾ, ಗೋವಾ. (ಜ್ಞಾನ ದೊರಕಿದ ಸಮಯ : ೧೯.೨.೨೦೨೫, ಮಧ್ಯಾಹ್ನ ೪.೩೦, ೨೦.೨.೨೦೨೫, ಮಧ್ಯಾಹ್ನ ೧.೧೫ ಮತ್ತು ೨೧.೨.೨೦೨೫, ಮಧ್ಯಾಹ್ನ ೨.೨೩)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !