ಹೆಚ್ಚುತ್ತಿರುವ ಅಪಘಾತಗಳತ್ತ ಗಾಂಭೀರ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವ ಆವಶ್ಯಕತೆ !

ಅಪಘಾತಗಳ ಕಾರಣಗಳು ಮತ್ತು ಪರಿಹಾರೋಪಾಯಗಳು

ಪ್ರಸ್ತುತ ವಿವಿಧ ರೀತಿಯ ಅಪಘಾತಗಳ ದೊಡ್ಡ ಸರಣಿಯೇ ಪ್ರಾರಂಭವಾಗಿದೆ. ಪ್ರತಿದಿನ ಸುದ್ದಿಪತ್ರಿಕೆ ತೆರೆದರೆ ಅಥವಾ ಯಾವುದೇ ಸುದ್ದಿವಾಹಿನಿ ನೋಡಿದರೆ, ಯಾವುದಾದರೂ ಅಪಘಾತದ ಸುದ್ದಿಯಂತೂ ಇದ್ದೇ ಇರುತ್ತದೆ. ಎಲ್ಲೋ ವಿಮಾನ ಪತನವಾಗುತ್ತದೆ, ಎಲ್ಲೋ ಹಡಗು ಮುಳುಗುತ್ತದೆ, ಮತ್ತೆಲ್ಲೋ ರೈಲು ಹಳಿ ತಪ್ಪುತ್ತದೆ ಅಥವಾ ಎರಡು ರೈಲುಗಳ ನಡುವೆ ಘರ್ಷಣೆ ನಡೆಯುತ್ತದೆ. ಹೆದ್ದಾರಿ ಗಳಲ್ಲಿ ನಾಲ್ಕು ಚಕ್ರದ ವಾಹನಗಳ ಅಪಘಾತಗಳ ಘಟನೆಗಳು ಈಗ ಪ್ರತಿದಿನದ ಸಂಗತಿಯಾಗಿವೆ. ಇಂತಹ ವಿವಿಧ ರೀತಿಯ ಅಪಘಾತಗಳ ಸರಣಿ ಪ್ರಸ್ತುತ ಕಂಡುಬರುತ್ತಿದೆ. ಇಂತಹ ಅಪಘಾತಗಳು ನಡೆದಾಗ, ಸರಕಾರ ಎಂದಿನಂತೆ ಔಪಚಾರಿಕತೆಗಾಗಿ ಮೃತಪಟ್ಟವರಿಗೆ ಕೆಲವು ಲಕ್ಷ ರೂಪಾಯಿಗಳು ಮತ್ತು ಗಾಯಗೊಂಡವರಿಗೆ ಕೆಲವು ಸಾವಿರ ರೂಪಾಯಿಗಳನ್ನು ನೀಡಿ ತಮ್ಮ ಕರ್ತವ್ಯ ನಿರ್ವಹಿಸಿದ ತೃಪ್ತಿಯನ್ನು ವ್ಯಕ್ತಪಡಿಸುತ್ತದೆ. ವರ್ಷದ ಯಾವುದಾದರೂ ಅಧಿವೇಶನದಲ್ಲಿ, ವರ್ಷದಲ್ಲಿ ಎಷ್ಟು ಅಪಘಾತಗಳಾದವು ? ಮತ್ತು ಅವುಗಳ ವಿವಿಧ ಕಾರಣಗಳ ಬಗ್ಗೆ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಓದಲಾಗು ತ್ತದೆ. ದೊಡ್ಡ ಕಾಳಜಿ ವ್ಯಕ್ತಪಡಿಸಿದಂತೆ ನಟಿಸಿ ಕಾನೂನುಗಳನ್ನು ಕಠಿಣಗೊಳಿಸುವ ಅಥವಾ ಸಾರ್ವಜನಿಕ ಜಾಗೃತಿ ಮೂಡಿಸುವ ತಾತ್ಕಾಲಿಕ ಉಪಾಯಗಳನ್ನು ಸೂಚಿಸಲಾಗುತ್ತದೆ ಮತ್ತು ವಿಷಯ ಅಲ್ಲಿಗೆ ಕೊನೆಗೊಳ್ಳುತ್ತದೆ. ಕಳೆದ ಅನೇಕ ವರ್ಷಗಳಿಂದ ಈ ಸಂಪ್ರದಾಯ ಮುಂದುವರಿದಿದೆ. ಈ ಸಮಸ್ಯೆಯ ಮೂಲಕ್ಕೆ ಹೋಗಿ ಯೋಚಿಸುವ ಇಚ್ಛಾಶಕ್ತಿ ಸರಕಾರಕ್ಕಿಲ್ಲ್ಲ. ಆದ್ದರಿಂದ ಈಗ ವಿವೇಕಿ ನಾಗರಿಕರು ತಮ್ಮ ಜೀವ ರಕ್ಷಣೆಗಾಗಿ ಈ ಸಮಸ್ಯೆಗೆ ತಮ್ಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು ಮತ್ತು ಸಮಾಜದ ಕಲ್ಯಾಣಕ್ಕಾಗಿ ಈ ಸಮಸ್ಯೆಯನ್ನು ದೂರ ಮಾಡಲು ಸರಕಾರದ ಮೇಲೆ ಒತ್ತಡ ಹೇರಬೇಕು.

೧. ಅಪಘಾತಗಳ ಕಾರಣಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಹಾರಗಳನ್ನು ಕಂಡುಹಿಡಿಯಬೇಕು.

ಸಾಮಾನ್ಯವಾಗಿ ಅಪಘಾತಗಳ ಕಾರಣವನ್ನು ಅಧ್ಯಯನ (ಅಭ್ಯಾಸ) ಮಾಡುವಾಗ ಸರಕಾರ ಮಾತ್ರವಲ್ಲ, ಯಾವುದೇ ವ್ಯಕ್ತಿ ಕೇವಲ ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿ ಮಾತ್ರ ವಿಚಾರ ಮಾಡುತ್ತಾನೆ, ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡುವ ಬಗ್ಗೆ ಯಾರೂ ವಿಚಾರಮಾಡುವುದಿಲ್ಲ. ಒಂದು ವೇಳೆ ಶಾರೀರಿಕ ಮತ್ತು ಮಾನಸಿಕ ಮಟ್ಟದಲ್ಲಿ ಯೋಚಿಸಿದರೂ, ಅದು ಮೇಲುಮೇಲಿನದು ಆಗಿರುವುದರಿಂದ ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಪರಿಹಾರ ಇಲ್ಲಿಯವರೆಗೆ ಸಿಕ್ಕಿಲ್ಲ. ಅಪಘಾತಗಳ ಸರಣಿ ನಿಲ್ಲುವ ಲಕ್ಷಣಗಳು ಕಾಣಿಸುವುದಿಲ್ಲ್ಲ. ಇಂದು ನಾವು ಈ ಲೇಖನದಲ್ಲಿ ಅಪಘಾತಗಳ ವಿವಿಧ ಕಾರಣಗಳು ಮತ್ತು ಅವುಗಳನ್ನು ದೂರ ಮಾಡಿ ಈ ಸಮಸ್ಯೆಯ ಮೇಲೆ ನಿಯಂತ್ರಣ ಪಡೆಯಲು ಮಾಡಬೇಕಾದ ಉಪಾಯಗಳ ಬಗ್ಗೆ ಸ್ವಲ್ಪ ವಿಚಾರ ಮಾಡೋಣ.

೨. ಅಪಘಾತಗಳ ಭೌತಿಕ ಕಾರಣಗಳು

ಅಪಘಾತವಾದ ಮೇಲೆ, ‘ರಸ್ತೆ ಕೆಟ್ಟಿದೆ, ವಾಹನ ದುರಸ್ತಿಗೆ ಬಂದಿದೆ, ರಸ್ತೆಯ ನಿರ್ಮಾಣವು ವಾಸ್ತುಶಿಲ್ಪ ಶಾಸ್ತ್ರದ ನಿಯಮಗಳ ಪ್ರಕಾರ ಆಗದೆ ತಪ್ಪಾದ ರೀತಿಯಲ್ಲಿ ಮಾಡಲಾಗಿದೆ, ವಾಹನ ಚಾಲಕರು ನಿಯಮಗಳನ್ನು ಪಾಲಿಸದಿರುವುದು’, ಇತ್ಯಾದಿ ಭೌತಿಕ ಕಾರಣಗಳು ಸಾಮಾನ್ಯವಾಗಿ ಎದುರಾಗುತ್ತವೆ.

ನ್ಯಾಯವಾದಿ ಯೋಗೇಶ ಜಲತಾರೆ

೩. ಅಪಘಾತಗಳ ಮಾನಸಿಕ ಕಾರಣಗಳು

ವಾಹನ ಚಾಲಕನ ಮನಸ್ಥಿತಿ ಸರಿಯಿಲ್ಲದಿರುವುದು, ವಾಹನ ಚಲಾಯಿಸುವಾಗ ಮದ್ಯ ಸೇವಿಸಿರುವುದು, ವಾಹನ ಚಲಾಯಿಸು ವಾಗ ಮೊಬೈಲ್‌ ಬಳಸುತ್ತಿರುವುದು ಅಥವಾ ಅದರಲ್ಲಿ ವಿಡಿಯೋ ನೋಡುತ್ತಿರುವುದು, ರಸ್ತೆಯಲ್ಲಿ ವಾಹನಗಳ ಮೇಲೆ ಕಸರತ್ತು, ಅಂದರೆ ಸ್ಟಂಟ್‌ ಮಾಡುವುದು, ಅತಿ ವೇಗವಾಗಿ ವಾಹನ ಚಲಾಯಿಸುವುದು ಇತ್ಯಾದಿ.

೪. ಅಪಘಾತಗಳ ಆಧ್ಯಾತ್ಮಿಕ ಕಾರಣಗಳು

ಪ್ರಯಾಣದ ಆರಂಭದಲ್ಲಿ ಪರಿಶೀಲಿಸಿದ್ದರೂ ವಾಹನದಲ್ಲಿ ಹಠಾತ್ತಾಗಿ ತಾಂತ್ರಿಕ ದೋಷ ಉಂಟಾಗುವುದು, ನಾವು ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಹಠಾತ್ತಾಗಿ ಮತ್ತೊಂದು ವಾಹನ ಬಂದು ನಮಗೆ ಡಿಕ್ಕಿ ಹೊಡೆಯುವುದು, ಫ್ಲೈಓವರ್‌ನ ಕೆಳಗಿನ ರಸ್ತೆಯಲ್ಲಿ ಹೋಗುತ್ತಿರುವಾಗ ಮೇಲಿನಿಂದ ವಾಹನ ನಮ್ಮ ಮೇಲೆ ಬೀಳುವುದು, ನಾವು ವಾಹನದ ನಿಯಮಗಳನ್ನು ಪಾಲಿಸುತ್ತಾ ವಾಹನ ಚಲಾಯಿಸುತ್ತಿದ್ದರೂ ಮತ್ತೊಂದು ವೇಗದ ವಾಹನ ಬಂದು ನಮಗೆ ಡಿಕ್ಕಿ ಹೊಡೆಯುವುದು ಇತ್ಯಾದಿ ಅಪಘಾತಗಳು ಆಧ್ಯಾತ್ಮಿಕ ಸ್ತರದ್ದಾಗಿರುತ್ತವೆ. ಈ ಘಟನೆಗಳ ಕಾರಣಗಳನ್ನು ನಮ್ಮ ಬುದ್ಧಿಯಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿದರೆ ನಮ್ಮ ಜಾತಕದಲ್ಲಿ ಅಪಘಾತದ ಯೋಗವಿರುವುದು, ಆ ಸಮಯದಲ್ಲಿ ಗ್ರಹಗಳ ಸ್ಥಿತಿ ಸರಿಯಿಲ್ಲದಿರುವುದು, ಅಪಘಾತ ನಡೆದ ಸ್ಥಳ ಆಧ್ಯಾತ್ಮಿಕವಾಗಿ ದೋಷಪೂರ್ಣವಾಗಿರುವುದು ಇಂತಹ ವಿಷಯಗಳಿಂದ ಅಪಘಾತಗಳಾಗಿವೆ ಎಂದು ಆಯಾ ಕ್ಷೇತ್ರದ ತಜ್ಞರು ನಮಗೆ ಹೇಳಬಹುದು.

ವಾಸ್ತವದಲ್ಲಿ, ರಸ್ತೆಗಳನ್ನು ನಿರ್ಮಿಸುವಾಗ ಆ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವ ಅಭಿಯಂತರು, ಗುತ್ತಿಗೆದಾರರು ಅಲ್ಲಿನ ಸ್ಥಾನದೇವತೆ ಮತ್ತು ವಾಸ್ತುದೇವತೆಗೆ ಪ್ರಾರ್ಥನೆ ಸಲ್ಲಿಸಿ, ಅವರ ಅನುಮತಿಯೊಂದಿಗೆ ರಸ್ತೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು; ಆದರೆ ಭಾರತ ಸರಕಾರವು ಜಾತ್ಯತೀತವಾಗಿರುವುದರಿಂದ ಇಂತಹ ವಿಷಯಗಳು ಆಗುವುದು ಹೆಚ್ಚಾಗಿ ಕಾಣಿಸುವುದಿಲ್ಲ. ಇದರ ಪರಿಣಾಮಗಳನ್ನು ಜನರು ಅನುಭವಿಸಬೇಕಾಗುತ್ತದೆ. ಕಳೆದ ವರ್ಷ ಹಿಮಾಚಲ ಪ್ರದೇಶದಲ್ಲಿ ಒಂದು ಸುರಂಗದ ಕೆಲಸ ನಡೆಯುತ್ತಿದ್ದಾಗ, ಭೂಕುಸಿತದಿಂದ ಕೆಲವು ಕಾರ್ಮಿಕರು ಒಳಗೆ ಸಿಕ್ಕಿಹಾಕಿಕೊಂಡಿದ್ದರು. ಆಗ ಸುರಂಗದ ಆರಂಭದಲ್ಲಿ ಇದ್ದ ನಾಗದೇವತೆಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರವೇ ಆ ಕಾರ್ಮಿಕರ ರಕ್ಷಣೆಯಾಗಿತ್ತು ಎಂಬುದನ್ನು ನಾವು ಮರೆಯಬಾರದು.

೫. ಅಪಘಾತಗಳನ್ನು ತಡೆಯಲು ಸರಕಾರ ಮಾಡುತ್ತಿರುವ ಮೇಲುಮೇಲಿನ ಉಪಾಯಗಳು !

ಸರಕಾರ ಈ ಅಪಘಾತಗಳನ್ನು ತಡೆಯಲು ವಾಹನಗಳ ವೇಗ ಕಡಿಮೆಯಾಗಬೇಕು, ಜನರು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂಬ ಕಾರಣಕ್ಕೆ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದು, ವೃತ್ತಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಸಂಚಾರ ಪೊಲೀಸರನ್ನು ನೇಮಿಸುವುದು; ಅಪಘಾತವಾದಾಗ ಅಪಘಾತಕ್ಕೊಳಗಾದವರಿಗೆ ಹೆಚ್ಚು ಹಾನಿಯಾಗದಿರಲು ದ್ವಿಚಕ್ರ ವಾಹನ ಚಾಲಕರಿಗೆ, ಶಿರಸ್ತ್ರಾಣ ಧರಿಸಲು ಅಥವಾ ನಾಲ್ಕು ಚಕ್ರದ ವಾಹನ ಚಾಲಕರಿಗೆ ಸೀಟ್‌ ಬೆಲ್ಟ್ ಹಾಕಲು ಆಗ್ರಹಿಸಲಾಗುತ್ತದೆ.

‘ಕುಡಿದು ವಾಹನ ಚಲಾಯಿಸಬೇಡಿ, ವಾಹನ ನಿಧಾನವಾಗಿ ಚಲಾಯಿಸಿ’, ಇಂತಹ ಅನೇಕ ಫಲಕಗಳನ್ನು ಸರಕಾರ ರಸ್ತೆಯ ಎರಡೂ ಬದಿಯಲ್ಲಿ ಹಾಕುತ್ತದೆ. ಈ ಫಲಕಗಳನ್ನು ಎಷ್ಟು ಜನರು ಓದುತ್ತಾರೆ ಎಂಬುದೂ ಒಂದು ಪ್ರಶ್ನೆಯೇ ಆಗಿದೆ ಮತ್ತು ಓದಿದರೂ ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ಆರ್ಥಿಕ ದಂಡ ವಿಧಿಸಿ ಈ ಘಟನೆಗಳಿಗೆ ಕಡಿವಾಣ ಹಾಕಲು ಸರಕಾರ ಪ್ರಯತ್ನಿಸುತ್ತಿರು ತ್ತದೆ. ಆದರೂ ಈ ಸಮಸ್ಯೆಗೆ ಬೇಕಾದಷ್ಟು ಪ್ರಮಾಣದಲ್ಲಿ ಸರಕಾರಕ್ಕೆ ಇನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ; ಏಕೆಂದರೆ ಜನರು ಕೂಡ ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಆದ್ದರಿಂದ ಜನರ ಜಾಗೃತಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ವಿವಿಧ ರೀತಿಯಲ್ಲಿ ಜನರಿಗೆ ತಿಳಿಸಲಾಗುತ್ತದೆ, ಅವರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತದೆ.

೬. ಸಂಚಾರದ ನಿಯಮಗಳನ್ನು ಉಲ್ಲಂಘಿಸಿದಾಗ ಕ್ರಮ ಕೈಗೊಳ್ಳುವಾಗ ಆಗುವ ರಾಜಕೀಯ ಹಸ್ತಕ್ಷೇಪ !

ಹೆಚ್ಚಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಶ್ರೀಮಂತರು ಅಥವಾ ರಾಜಕಾರಣಿಗಳ ಸಂಪರ್ಕದಲ್ಲಿರುವ ಜನರು ಇರುತ್ತಾರೆ. ಆದ್ದರಿಂದ ನಿಯಮಬಾಹಿರವಾಗಿ ವರ್ತಿಸುವ ವಾಹನ ಚಾಲಕರ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳುವಾಗ ಸಹಜವಾಗಿ ರಾಜಕಾರಣಿಗಳ ಹಸ್ತಕ್ಷೇಪ ಆಗುತ್ತದೆ. ರಾಜಕಾರಣಿ ಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಒಂದು ರಾಜ್ಯದ ಮುಖ್ಯಮಂತ್ರಿಯವರು ಹಿಂದೊಮ್ಮೆ ಬಹಿರಂಗವಾಗಿ ಹೇಳಿದ್ದರು ಮತ್ತು ತಮಗೆ ಕೂಡ ಪರಿಚಿತ ಜನರ ದೂರವಾಣಿ ಕರೆಗಳು ಬರುತ್ತಿದ್ದರೂ, ಅವರು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದರು. ಕೆಲವು ಬಾರಿ ರಾಜಕಾರಣಿಗಳಿಗೆ ಸಂಬಂಧಿಸಿದ ಜನರು ಸಂಚಾರ ಪೊಲೀಸರಿಗೆ ಬೆದರಿಕೆ ಹಾಕುತ್ತಾರೆ; ಸಂದರ್ಭ ಬಂದಾಗ ಹಲ್ಲೆಯನ್ನೂ ಮಾಡುತ್ತಾರೆ. ಇಂತಹ ಜನರ ಮೇಲೆ ರಾಜಕೀಯ ಪ್ರಭಾವವಿರುವುದರಿಂದ ಪೊಲೀಸರು ಕೂಡ ಬಗ್ಗಬೇಕಾಗುತ್ತದೆ. ರಾಜಕಾರಣಿ ಗಳು ಸಮಾಜದ ಹಿತಕ್ಕಾಗಿ ಇಂತಹ ವಿಷಯಗಳನ್ನು ತಪ್ಪಿಸಬೇಕು.

೭. ನಿಯಮಗಳನ್ನು ಕಾರ್ಯರೂಪಕ್ಕೆ ತರಲು ಕಠೋರತೆ ಬೇಕು !

ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಜನರು ಸಂಚಾರ ನಿಯಮಗಳನ್ನು ನಿರೀಕ್ಷಿತ ಸ್ತರದಲ್ಲಿ ಪಾಲಿಸುವುದಿಲ್ಲ ಮತ್ತು ವಾಹನಗಳ ಅಪಘಾತಗಳು ಕೂಡ ನಿಲ್ಲುವುದಿಲ್ಲ. ಆದ್ದರಿಂದ ಸರಕಾರ ನಿಯಮಗಳನ್ನು ಕಠೋರವಾಗಿ ಜಾರಿಗೆ ತರಬೇಕು. ನಿಯಮಗಳನ್ನು ಪಾಲಿಸದವರಿಗೆ ಮುಂದಿನ ಹಂತದ ಶಿಕ್ಷೆಗಳನ್ನು ವಿಧಿಸಬೇಕು. ಎಷ್ಟೋ ದೇಶಗಳಲ್ಲಿ ವಾಹನ ಚಲಾಯಿಸುವಾಗ ಒಮ್ಮೆ ತಪ್ಪು ಮಾಡಿದರೆ ದಂಡ, ಎರಡನೇ ಬಾರಿ ತಪ್ಪು ಮಾಡಿದರೆ ಪರವಾನಗಿಯನ್ನು, ಅಂದರೆ ‘ಲೈಸನ್ಸ್‌’ ಅನ್ನು ವಶಪಡಿಸಿಕೊಳ್ಳು ವುದು ಮತ್ತು ಮೂರನೇ ಬಾರಿ ತಪ್ಪು ಮಾಡಿದರೆ ವಾಹನವನ್ನು ವಶಪಡಿಸಿಕೊಂಡು ವಾಹನ ಚಲಾಯಿಸುವುದನ್ನು ಶಾಶ್ವತವಾಗಿ ನಿಷಿದ್ಧಗೊಳಿಸಲಾಗುತ್ತದೆ, ಇಂತಹ ವಿಷಯಗಳು ಓದಲು ಸಿಗುತ್ತವೆ. ಅಲ್ಲಿನ ಪ್ರಧಾನಮಂತ್ರಿ, ರಾಷ್ಟ್ರಾಧ್ಯಕ್ಷರು ಕೂಡ ಈ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಇಂತಹ ಕಠಿಣ ಕ್ರಮಗಳನ್ನು ಕೈಗೊಂಡರೆ ಉದ್ಧಟ ವಾಹನ ಚಾಲಕರ ಇಂತಹ ದುರಹಂಕಾರದ ವರ್ತನೆಯ ಮೇಲೆ ಖಂಡಿತ ನಿಯಂತ್ರಣ ಸಾಧಿಸಬಹುದು. ನಮ್ಮಲ್ಲಿ ಯಾರಾದರೂ ವೇಗವಾಗಿ ಮತ್ತು ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿದರೆ ಅಪಘಾತವಾದರೆ ‘ಬೇಜವಾಬ್ದಾರಿಯಿಂದ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು’ ಈ ಕಲಂನ ಅಡಿಯಲ್ಲಿ ಕೇಸ್‌ ದಾಖಲಾಗುತ್ತದೆ; ಆದರೆ ಕೆಲವು ದಿನಗಳಲ್ಲಿ ಅಪರಾಧಿಗೆ ಜಾಮೀನು ಸಿಗುತ್ತದೆ. ನಂತರ ಆ ಕೇಸ್‌ ನ್ಯಾಯಾಲಯದ ಸಮಯದ ಲಭ್ಯತೆಗನುಸಾರ ಅನೇಕ ವರ್ಷಗಳವರೆಗೆ ನಡೆಯುತ್ತಲೇ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಅನೇಕ ಲೋಪದೋಷಗಳು ಉಳಿಯುತ್ತವೆ. ಆದ್ದರಿಂದ ಶಿಕ್ಷೆಯಾಗುವ ಪ್ರಮಾಣ ಕೂಡ ಬಹಳ ಕಡಿಮೆ ಇದೆ. ಇದರಿಂದ ಜನರಿಗೆ ಯಾವುದೇ ಗಾಂಭೀರ್ಯ ಇರುವುದಿಲ್ಲ.

೮. ಸಮಾಜಹಿತದ ವಿಷಯಗಳನ್ನು ಶಾಲೆಯಿಂದಲೇ ಕಲಿಸಬೇಕು !

ಸರಕಾರಕ್ಕೆ ಈ ಸಮಸ್ಯೆಯನ್ನು ನಿಜವಾದ ಅರ್ಥದಲ್ಲಿ ಬಗೆಹರಿಸಬೇಕಿದ್ದರೆ, ಶಾಲೆಯ ಶಿಕ್ಷಣದಲ್ಲಿಯೇ ಸಮಾಜಹಿತದ ವಿಷಯಗಳನ್ನು ಕಲಿಸಿ ಆ ಸಂಸ್ಕಾರವನ್ನು ಜನಮಾನಸದ ಮೇಲೆ ಬಿಂಬಿಸಬೇಕು. ವಾಹನವನ್ನು ವೇಗವಾಗಿ ಅಥವಾ ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಾವು ನಮ್ಮನ್ನು ಮಾತ್ರವಲ್ಲ, ಇತರರಿಗೂ ಹಾನಿ ಮಾಡುತ್ತೇವೆ ಎಂಬ ಗಂಭೀರತೆಯನ್ನು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತುಂಬಬೇಕು. ತಂದೆ-ತಾಯಿ ಕೂಡ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳಾಗಲು ಪ್ರಯತ್ನಿಸಬೇಕು. ಮನಸ್ಸಿನ ಮೇಲಿನ ಅಯೋಗ್ಯ ಸಂಸ್ಕಾರಗಳನ್ನು ಅಳಿಸಲು ಮಕ್ಕಳಿಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಕಲಿಸಬೇಕು.

– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ.


ಅಪಘಾತಗಳಿಂದ ಆಗುವ ಹಾನಿಯನ್ನು ತಡೆಯಲು ಆಧ್ಯಾತ್ಮಿಕ ಉಪಾಯಗಳೂ ಆವಶ್ಯಕ !

ಸರಕಾರ ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿ ಎಷ್ಟು ಪರಿಹಾರಗಳನ್ನು ಮಾಡಿದರೂ, ‘ರಸ್ತೆಯಲ್ಲಿ ಸಾವಿರಾರು ಜನರು ಇರುವಾಗ ನಮಗೇ ಏಕೆ ಅಪಘಾತವಾಗುತ್ತದೆ ?’ ಎಂಬ ಪ್ರಶ್ನೆಗೆ ಉತ್ತರವನ್ನು ನಾವೇ ಹುಡುಕಬೇಕು. ಇದರ ಉತ್ತರವನ್ನು ಹೇಳುವ ಏಕೈಕ ಶಾಸ್ತ್ರ ಎಂದರೆ ಅಧ್ಯಾತ್ಮಶಾಸ್ತ್ರ. ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಕಾರಣಗಳಿಂದಲೇ ಇಂತಹ ಗಂಭೀರ ಸಂಕಟಗಳು ಬರುತ್ತವೆ. ಅವುಗಳನ್ನು ನಿವಾರಿಸಲು ಇರುವ ಏಕೈಕ ಉಪಾಯವೆಂದರೆ ಸಾಧನೆ ಮಾಡುವುದು. ಸಾಧನೆ ಮಾಡುವುದರಿಂದ ಈಶ್ವರನ ಆಶೀರ್ವಾದ ಮತ್ತು ಸಹಾಯ ಸಿಗುತ್ತದೆ. ಚಿಕ್ಕ-ಪುಟ್ಟ ಅಪಘಾತ ಗಳಿಂದ ದೇವರು ನಮ್ಮನ್ನು ರಕ್ಷಿಸುತ್ತಾನೆ. ಒಂದು ವೇಳೆ ನಮ್ಮ ಪ್ರಾರಬ್ಧದ ತೀವ್ರತೆ ಹೆಚ್ಚಿದ್ದರೆ ಮತ್ತು ಆ ಅಪಘಾತದಿಂದ ನಮ್ಮ ರಕ್ಷಣೆ ಆಗುವುದಿಲ್ಲವಾದರೆ, ದೇವರು ಆ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡುತ್ತಾನೆ ಅಥವಾ ಆ ಅಪಘಾತದ ಸಂಕಷ್ಟವನ್ನು ಎದುರಿಸಲು ನಮಗೆ ಶಕ್ತಿಯನ್ನು ನೀಡುತ್ತಾನೆ. ದೇವರ ಈ ಕೃಪೆಯ ಅನುಭವವನ್ನು ಇಲ್ಲಿಯವರೆಗೆ ಅನೇಕ ಜನರು ಪಡೆದಿದ್ದಾರೆ. ಆದ್ದರಿಂದ ವೈಯಕ್ತಿಕ ಮಟ್ಟದಲ್ಲಿ ಪ್ರತಿದಿನ ಕೆಲವು ವಿಷಯಗಳನ್ನು ನಾವು ನಿಯಮಿತವಾಗಿ ಮಾಡಬೇಕು, ಇದರಿಂದ ಅಪಘಾತಗಳಿಂದ ನಮ್ಮ ರಕ್ಷಣೆ ಆಗುತ್ತದೆ.

ಅ. ವಾಹನವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಊದುಬತ್ತಿಯಿಂದ ಬೆಳಗಿ ಶುದ್ಧೀಕರಿಸಬೇಕು.
ಆ. ವಾಹನವನ್ನು ಕೇವಲ ವಾಹನವೆಂದು ನೋಡದೆ ವಾಹನದೇವತೆಯಂತೆ ಅದು ಮಾಡುತ್ತಿರುವ ಸಹಾಯದ ಬಗ್ಗೆ ಕೃತಜ್ಞತಾಭಾವದಿಂದ ವಾಹನವನ್ನು ಚಲಾಯಿಸಬೇಕು.
ಇ. ವಾಹನಗಳ ಒಳಗೆ ನಾಲ್ಕೂ ಬದಿಗಳಲ್ಲಿ ದೇವತೆಗಳ ನಾಮಜಪದ ಪಟ್ಟಿಗಳನ್ನು ಅಂಟಿಸಬೇಕು.
ಈ. ಪ್ರತಿದಿನ ವಾಹನ ಚಲಾಯಿಸುವ ಮೊದಲು ಪ್ರಾರ್ಥಿಸಿರಿ ಮತ್ತು ವಾಹನ ಚಲಾಯಿಸುವಾಗ ನಾಮಜಪ ಮಾಡಿರಿ ಹಾಗೂ ವಾಹನ ಚಲಾಯಿಸಿದ ನಂತರ ದೇವರು ಸುರಕ್ಷಿತವಾಗಿ ಪ್ರಯಾಣ ಮಾಡಿಸಿದ್ದಾನೆ ಎಂದು ಕೃತಜ್ಞತೆ ವ್ಯಕ್ತಪಡಿಸಿ. ದೂರದ ಪ್ರಯಾಣಕ್ಕೆ ಹೊರಡುವ ಮೊದಲು ತೆಂಗಿನಕಾಯಿ ಅಥವಾ ನಿಂಬೆಯಿಂದ ವಾಹನದ ದೃಷ್ಟಿ ತೆಗೆಯಿರಿ.
ಉ. ರಸ್ತೆಯ ಮೇಲೆ ಕೆಲವು ಕಡೆ ಅಪಘಾತವಾಗುವ ಜಾಗ ಗಳಿರುತ್ತವೆ, ಆ ಜಾಗಗಳಲ್ಲಿ ಹೆಚ್ಚು ಅಪಘಾತಗಳಾಗುತ್ತಿರುತ್ತವೆ. ಇಂತಹ ಜಾಗಗಳ ಮೇಲಿನಿಂದ ಹೋಗುತ್ತಿರುವಾಗ ಆಧ್ಯಾತ್ಮಿಕ ತೊಂದರೆಯಾಗದಿರಲು ವಿಶೇಷ ಜಾಗರೂಕತೆಯಿಂದ, ಹಾಗೆಯೇ ಪ್ರಾರ್ಥನೆ ಮತ್ತು ನಾಮಜಪ ಮಾಡುತ್ತಾ ಆ ಜಾಗದಿಂದ ವಾಹನ ಚಲಾಯಿಸಿಕೊಂಡು ಹೋಗಬೇಕು.
ಊ. ಕೆಲವು ರಸ್ತೆಗಳಲ್ಲಿ ವಾಹನ ಚಾಲಕರು ಅಲ್ಲಿನ ಸ್ಥಾನದೇವತೆಗೆ ಅಥವಾ ಕ್ಷೇತ್ರಪಾಲ ದೇವತೆಗೆ ಊದುಬತ್ತಿ, ಹಾರ, ತೆಂಗಿನಕಾಯಿ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಇದರ ಉದ್ದೇಶ ಪ್ರಯಾಣದಲ್ಲಿ ಸಂಭಾವ್ಯ ಅಡೆತಡೆಗಳು ದೂರವಾಗಬೇಕು ಎಂಬುದೇ ಆಗಿರುತ್ತದೆ. ಹೀಗೆ ಮಾಡುವುದರಿಂದ ಅಲ್ಲಿನ ದೇವತೆಯ ಕೃಪೆಯಿಂದ ಪ್ರಯಾಣ ಸುರಕ್ಷಿತವಾಗಿ ಪೂರ್ಣಗೊಳ್ಳುತ್ತದೆ. ಇದು ನಿಯಮಿತವಾಗಿ ಎಲ್ಲೆಡೆ ಆಗಬೇಕು. ಇಂತಹ ವಿವಿಧ ಉಪಾಯಗಳಿಂದ ನಾವು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸನಾತನ ಸಂಸ್ಥೆಯ ಜಾಲತಾಣಗಳಿಗೆ ಭೇಟಿ ನೀಡಿರಿ ಅಥವಾ ಹತ್ತಿರದ ಸತ್ಸಂಗಕ್ಕೆ ಅಥವಾ ಮೊಬೈಲ್‌ ನಂ. 9058885610 ನ್ನು ಸಂಪರ್ಕಿಸಿರಿ.


ಅಪಘಾತಗಳನ್ನು ತಡೆಯಲೇ ಬೇಕು ಎಂಬ ಇಚ್ಛಾಶಕ್ತಿಯ ಕೊರತೆಯ ಹಿಂದೆ ಆಡಳಿತದ ಆರ್ಥಿಕ ಸಮೀಕರಣ ಇರಬಹುದೇ ?

ಕೆಲವೊಮ್ಮೆ, ವಿದೇಶಗಳಲ್ಲಿನ ಜನರಿಗೆ ಇದು ಸುಲಭವಾಗಿ ಸಾಧ್ಯವಿರುವಾಗ, ಭಾರತದಲ್ಲಿ ಏಕೆ ಸಾಧ್ಯವಿಲ್ಲ ? ಎಂದು ಅನಿಸುತ್ತದೆ. ಇಲ್ಲಿನ ಸರಕಾರಿ ವ್ಯವಸ್ಥೆಗಳಲ್ಲಿ ಅಪಘಾತಗಳನ್ನು ತಡೆಯುವ ಇಚ್ಛಾಶಕ್ತಿ ಕಡಿಮೆ ಏಕೆ ಇದೆ ? ಇದರ ಆರ್ಥಿಕ ದೃಷ್ಟಿಕೋನದಿಂದ ವಿಚಾರ ಮಾಡಿದರೆ ಈ ವಿಷಯದ ಮೇಲೆ ಸ್ವಲ್ಪ ಬೆಳಕು ಬೀಳುತ್ತದೆ. ಸರಕಾರ ಒಂದು ಕಡೆ ‘ಎಕ್ಸ್‌ಪ್ರೆಸ್‌ ಹೈವೇ’ (ಅತಿವೇಗದ ಹೆದ್ದಾರಿ) ನಿರ್ಮಿಸಿ ಪ್ರಯಾಣದ ಅವಧಿಯನ್ನು ಕಡಿಮೆ ಮಾಡೋಣ ಎಂದು ಹೇಳುತ್ತದೆ. ಈ ಹೆದ್ದಾರಿಯಲ್ಲಿ ಓಡಲು ನಂತರ ವಾಹನ ತಯಾರಿಕಾ ಕಂಪನಿಗಳು ‘ರೇಸಿಂಗ್‌ ಕಾರ್‌’ಗಳಂತೆ ಅತಿ ವೇಗದಲ್ಲಿ ಓಡುವಂತಹ ವಾಹನಗಳನ್ನು ತಯಾರಿಸುತ್ತವೆ. ಈ ವಾಹನಗಳ ದೊಡ್ಡ ಜಾಹೀರಾತು ಮಾಡಲಾಗುತ್ತದೆ. ನಂತರ ಈ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗತೊಡಗಿದಾಗ ಅವುಗಳನ್ನು ಕಡಿಮೆ ಮಾಡಲು ಜನರು ನಿಧಾನವಾಗಿ ವಾಹನ ಚಲಾಯಿಸಬೇಕು ಎಂದು ವಾಹನಗಳಿಗೆ ವೇಗದ ಮಿತಿಯನ್ನು ಹಾಕಲಾಗುತ್ತದೆ. ಅಂದರೆ, ಒಂದು ಕಡೆ ಕಂಪನಿಗಳಿಗೆ ಅತಿ ವೇಗದಲ್ಲಿ ಓಡುವಂತಹ ವಾಹನಗಳನ್ನು ತಯಾರಿಸಲು ಅನುಮತಿ ನೀಡುವುದು ಮತ್ತು ಮತ್ತೊಂದು ಕಡೆ ಹೆದ್ದಾರಿಗಳಲ್ಲಿ ಈ ವಾಹನಗಳು ವೇಗವಾಗಿ ಓಡಿದರೆ ಅವರಿಗೆ ದಂಡ ವಿಧಿಸುವುದು, ಅಂದರೆ ಅದರಿಂದಲೂ ಆದಾಯ ಸಂಗ್ರಹಿಸುವುದು. ಇದರಿಂದ ಸರಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವ ಇಚ್ಛೆ ಇಲ್ಲ ಎಂಬುದು ತಿಳಿಯುತ್ತದೆ; ಏಕೆಂದರೆ ಒಂದು ವೇಳೆ ವೇಗದಿಂದ ಅಪಘಾತಗಳಾಗುತ್ತಿದ್ದರೆ, ಪ್ರತಿ ವಾಹನಕ್ಕೆ ಒಂದು ನಿರ್ದಿಷ್ಟ ವೇಗದ ಮಿತಿಯನ್ನು ಹಾಕಿ ಏಕೆ ತಯಾರಿಸುವುದಿಲ್ಲ ? ಆ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಓಡದಿದ್ದರೆ, ಎಷ್ಟೋ ವಿಷಯಗಳಿಗೆ ತಾನಾಗಿಯೇ ಕಡಿವಾಣ ಹಾಕಬಹುದಲ್ಲವೇ ? ಆದರೆ ಸರಕಾರಕ್ಕೆ ಜನರು ನಿಯಮಗಳನ್ನು ಉಲ್ಲಂಘಿಸುವುದು ಬೇಕಾಗಿದೆ; ಏಕೆಂದರೆ ಅದರಿಂದ ಅವರಿಗೆ ಆದಾಯ ಸಿಗುತ್ತದೆ. ಅವರಿಗೆ ಜನರ ಜೀವದ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಿಮ್ಮಿಂದ ಕೋಟ್ಯಂತರ ರೂಪಾಯಿಗಳ ಆದಾಯ ಪಡೆದು ನಿಮಗೆ ಮರಣಾಂತರ ಕೆಲವು ಲಕ್ಷ ರೂಪಾಯಿಗಳನ್ನು ನೀಡುವುದು ಸರಕಾರಕ್ಕೆ ಯಾವುದೇ ಸಂದರ್ಭದಲ್ಲಿಯೂ ಲಾಭದಾಯಕವೇ ಆಗಿದೆ.