
‘ಸಂತಶ್ರೇಷ್ಠ ಜ್ಞಾನದೇವರು ೭೦೦ ವರ್ಷಗಳ ಹಿಂದೆ ವರ್ಣಿಸಿದ ಗಣೇಶನು ಭಾರತೀಯರ ಅತ್ಯಂತ ಪ್ರೀತಿಯ ದೇವನಾಗಿದ್ದಾನೆ. ಇಂದು ಪ್ರಚಲಿತ ಪರಂಪರೆಯಿಂದ ಬಂದ ‘ಏಕದನ್ತಂಮ್ ಶೂರ್ಪಕರ್ಣಂ ಗಜವಕ್‌ತ್ರಂ ಚತುರ್ಭುಜಮ್ | ಪಾಶಾಙõಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್ || (ಅರ್ಥ : ಯಾರ ಮುಖಕಮಲದಲ್ಲಿ ಒಂದೇ ದಂತವಿದೆ, ಕಿವಿಗಳು ಮೊರದಂತೆ ದೊಡ್ಡ ಅಗಲವಾಗಿವೆ, ಮುಖ ಆನೆಯಂತಿದೆ, ನಾಲ್ಕು ಕೈಗಳಿವೆ ಮತ್ತು
ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ, ಇಂತಹ ಶ್ರೀ ಸಿದ್ಧಿವಿನಾಯಕದೇವನನ್ನು ನಾನು (ಚಿಂತನೆ) ಧ್ಯಾನಿಸುತ್ತೇನೆ.)’, ಈ ರೀತಿ ಗಣೇಶನ ಮೂರ್ತಿಯಾಗಿದೆ; ಆದರೆ ಆಕಾರ ಮತ್ತು ಸ್ವರೂಪ ಇವುಗಳಲ್ಲಿನ ವೈವಿಧ್ಯತೆ ಗಣಪತಿಯ ಮೂರ್ತಿಯಷ್ಟು ಇತರ ಯಾವುದೇ ದೇವತೆಗಳ ಮೂರ್ತಿಗಳಲ್ಲಿ ಕಂಡುಬರುವುದಿಲ್ಲ. ಗಣೇಶನ ಮೂರ್ತಿಯ ಅಸಂಖ್ಯ ಆಕಾರ ಮತ್ತು ಪ್ರಕಾರಗಳು ಇವೆ.
ಗಣೇಶಮೂರ್ತಿಯಲ್ಲಿ ಮುಖ, ಕೈ, ಆಯುಧ, ವಾಹನ ಈ ಸಂದರ್ಭದಲ್ಲಿ ಅನೇಕ ಪ್ರಕಾರದ ರೂಢಿಗಳಿವೆ, ಹಾಗೆಯೇ ನೃತ್ಯಮೂರ್ತಿ, ನಿಂತಿರುವ ಮೂರ್ತಿ, ಕುಳಿತಿರುವ ಮೂರ್ತಿ ಬಹುಶಃ ಮಲಗಿದ ಗಣೇಶನ ಮೂರ್ತಿಯೂ ಲಭ್ಯವಿದೆ. ಪರ್ವತ, ವೃಕ್ಷ, ಹಣ್ಣುಗಳಲ್ಲಿಯೂ ಶ್ರೀ ಗಣೇಶನು ಕಾಣಿಸಿಕೊಂಡಿದ್ದಾನೆ. ಅರ್ಧನಾರಿ ಗಣೇಶ, ಮುರಳೀಧರ ಗಣೇಶನೂ ಇದ್ದಾನೆ. ಶುಭ್ರ ಬಣ್ಣದಿಂದ ಹಿಡಿದು ಗಾಢ ಕಪ್ಪು ಬಣ್ಣದ ವರೆಗೆ ವಿವಿಧ ಬಣ್ಣಗಳಲ್ಲಿನ ಶ್ರೀ ಗಣೇಶನ ವೈವಿಧ್ಯತೆ ನೋಡಲು ಸಿಗುತ್ತದೆ. ಅಂಬೆಗಾಲಿಡುವ ಬಾಲಗಣಪತಿಯ ಮೂರ್ತಿಯು ವೆಲ್ಲೋರ ಕೋಟೆಯಲ್ಲಿನ ‘ಜಲಗಂಧೇಶ್ವರ’ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿನ ಕಂಬದ ಮೇಲೆ ಕಂಡುಬರುತ್ತದೆ. ಶ್ರೀಶೈಲ ಮಲ್ಲಿಕಾರ್ಜುನನ ದೇವಸ್ಥಾನದಲ್ಲಿ ಶ್ರೀಕೃಷ್ಣನಂತೆ ಮುರಳಿಯನ್ನು ನುಡಿಸುವ ಮುರಳೀಧರ ಗಣೇಶ ಮತ್ತು ಹೈದರಾಬಾದಿನ ಸಾಲಾರಜಂಗ ವಸ್ತುಸಂಗ್ರಹಾಲಯದಲ್ಲಿ ಇಂತಹ ಮೂರ್ತಿಗಳಿವೆ.
೧. ಸ್ವಯಂಭೂ ಮೂರ್ತಿಗಳು
ಸ್ವಯಂಭೂ ಮೂರ್ತಿ, ಅಂದರೆ ತಾನೇ ಅಸ್ತಿತ್ವಕ್ಕೆ ಬಂದ, ಜಾಗೃತ ಮತ್ತು ವಿಶೇಷ ದೈವೀ ಶಕ್ತಿಯಿಂದ ತುಂಬಿರುವ ಮೂರ್ತಿ. ಈ ಸ್ವಯಂಭೂ ಮೂರ್ತಿಗಳು ಭಾರೀ ಶಿಲೆಯಂತೆ ಇರುತ್ತವೆ. ಅವು ನಿರಾಕಾರವಾಗಿರುತ್ತವೆ. ಅದರಲ್ಲಿ ಗಣೇಶನ ವೈಶಿಷ್ಟ್ಯವೆಂದರೆ, ಗಂಡಸ್ಥಳ, ಶುಂಡಾ, ಗಜಮಸ್ತಕ ಇವುಗಳ ಆಕಾರ ಭಾಸಮಾನವಾಗಿರುವುದನ್ನು ನೋಡಬಹುದು. ಉದಾಹರಣೆಗೆ ಕಾಶ್ಮೀರದಲ್ಲಿನ ಗಣೇಶಬಲ, ಹರಿಪರ್ವತ ಮತ್ತು ಗಣೇಶಘಾಟಿ ಇವು ೩ ಪುರಾಣಕ್ಕನುಸಾರ ಸ್ವಯಂಭೂ ಗಣೇಶನ ಕ್ಷೇತ್ರಗಳು ಸುಪ್ರಸಿದ್ಧವಾಗಿವೆ.
೨. ಮಾನವಮುಖದ ಗಣೇಶ
ತಮಿಳುನಾಡು ರಾಜ್ಯದ ತಿರುಚೆನ್ದಗಾಟ್ಟಂಗುಡಿಯಲ್ಲಿನ ಗಣಪತಿಯ ಮೂರ್ತಿಗೆ ಆನೆಯ ಮುಖದ ಬದಲು ಮನುಷ್ಯನ ಮುಖವಿದೆ. ಅವನ ಹೆಸರು ‘ವಿಘ್ನಾಂತಕ ಗಣಪತಿ’.
೩. ಮಾತೃಕೆಯರೊಂದಿಗೆ ಗಣೇಶ (ತಾಯಿಯೊಂದಿಗೆ ಗಣೇಶ)
ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವತಿ, ವಾರಾಹಿ, ಮಹೇಂದ್ರಿ ಮತ್ತು ಚಾಮುಂಡಿ ಇವರು ಸಪ್ತಮಾತೃಕೆಯರಾಗಿದ್ದಾರೆ. ಎಲ್ಲೋರಾದ ಗುಹೆಗಳಲ್ಲಿನ ಸಪ್ತಮಾತೃಕೆಯರ ಎಡಬದಿಗೆ ಆರಂಭದಲ್ಲಿ ಗಣೇಶನಿದ್ದಾನೆ. ಇದರ ಹೊರತು ಕುಂಭಕೋಣಮ್, ಬೇಲೂರು ಅಮರಕಂಟಕ, ಐಹೊಳೆ ಈ ಸ್ಥಳಗಳಲ್ಲಿ ಮಾತೃಕೆಯರ ಮೂರ್ತಿಗಳಿವೆ. ಪುಣೆಯ ಹತ್ತಿರದ ಯವತೇಶ್ವರ ಬೆಟ್ಟದ ಮೇಲೆ ಗುಹೆ ಇದೆ. ಅಲ್ಲಿ ಮಾತೃಕೆಯರ ಮೂರ್ತಿಗಳಿದ್ದು ಅವುಗಳಲ್ಲಿ ಎಂಟನೇ ಮಾತೃಕೆಯನ್ನು ‘ಗಣೇಶಿ’ ಅಥವಾ ‘ವಿನಾಯಕಿ’ ಎಂದು ತೋರಿಸಲಾಗಿದೆ. ಈ ಶಿಲ್ಪವು ಹದಿಮೂರನೇ ಶತಮಾನದ್ದಾಗಿದೆ ಎಂದು ನಂಬಲಾಗುತ್ತದೆ. ಮದುವೆ ಮುಂತಾದ ಶುಭಕಾರ್ಯಗಳಲ್ಲಿ ಮಾತೃಕೆಯ ಪೂಜೆಯ ಸಮಯದಲ್ಲಿ ಗಣೇಶನನ್ನೂ ಪೂಜಿಸಲಾಗುತ್ತದೆ.
೪. ನೃತ್ಯಗಣೇಶ
೮ ಕೈಗಳ ಈ ನೃತ್ಯಮೂರ್ತಿಯ ಕೈಗಳಲ್ಲಿನ ಆಯುಧ ಗಳೆಂದರೆ ಪಾಶ, ಅಂಕುಶ, ಅಪೂಪ ಅಂದರೆ ಕಡಬು, ಕೊಡಲಿ, ದಂತ, ವಲಯ, ಉಂಗುರ ಇವುಗಳಿವೆ ಮತ್ತು ಎಂಟನೇ ಕೈಯಲ್ಲಿ ನೃತ್ಯಮುದ್ರೆ ಮಾಡಲು ಬರಿಗೈಯಿದೆ. ಕರ್ನಾಟಕ ದಲ್ಲಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿ (ಹಳೇಬೀಡುದಲ್ಲಿ) ಇರುವ ನೃತ್ಯಮೂರ್ತಿಯು ಅತ್ಯಂತ ಸುಂದರವಾಗಿದೆ.
೫. ದ್ವಿಭುಜ ಗಣೇಶ

ಕಲಿಯುಗದಲ್ಲಿ ಯಾವಾಗ ಶ್ರೀ ಗಣೇಶನು ಅವತರಿಸುವನೋ, ಅವನು ದ್ವಿಭುಜರೂಪದಲ್ಲಿರುವನು; ಆದರೆ ಅದು ಕೊನೆಯ ಹಂತದಲ್ಲಿ. ಸದ್ಯ ಹಿಂದಿನ ಯುಗದಲ್ಲಿನ ಚತುರ್ಭುಜ ಗಣಪತಿಯೇ ಎಲ್ಲೆಡೆ ಪ್ರಚಲಿತವಾಗಿದ್ದಾನೆ. ಕಲಿಯುಗದಲ್ಲಿನ ಗಣೇಶನ ಮೂಲ ಸ್ವರೂಪವನ್ನು ತಿಳಿದುಕೊಂಡು ಕೆಲವರು ತಜ್ಞರಾದ ಕಲಾವಿದರು ದ್ವಿಭುಜ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ ಇವೆ. ಈ ಎಲ್ಲ ಮೂರ್ತಿಗಳು ಅತೀಪ್ರಾಚೀನವಾಗಿವೆ. ಚಂದ್ರಪುರ ಜಿಲ್ಲೆಯಲ್ಲಿನ ಭಾಂದಕ ಇದು ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಗರವಾಗಿದೆ. ಭಾಂದಕ-ಭದ್ರಾವತಿಯಲ್ಲಿನ ಒಂದು ಬೆಟ್ಟದ ಮೇಲೆ ದ್ವಿಭುಜ ಗಣೇಶನ ಅತೀಪ್ರಾಚೀನ ವಿಗ್ರಹವಿದೆ. ನಾಶಿಕ ಜಿಲ್ಲೆಯಲ್ಲಿ ಚಾಂದಗಡದಲ್ಲಿ ಅತೀಪ್ರಾಚೀನ ದ್ವಿಭುಜ ಗಣೇಶನಿದ್ದಾನೆ. ಸಿಂಧುದುರ್ಗ ಜಿಲ್ಲೆಯಲ್ಲಿನ ವೆಂಗುರ್ಲಾ ತಾಲೂಕಿನ ರೆಡಿಯಲ್ಲಿ ೧೯೭೬ ರಲ್ಲಿ ಸಿಕ್ಕಿದ ಅತೀಪ್ರಾಚೀನ ದ್ವಿಭುಜ ಗಣೇಶನ ದೊಡ್ಡ ವಿಗ್ರಹವಿದೆ. ದ್ವಿಭುಜ ವಿಗ್ರಹವು ಕರ್ನಾಟಕದಲ್ಲಿನ ಗೋಕರ್ಣ ಮತ್ತು ನಂತರ ಇಡಗುಂಜಿಯಲ್ಲಿರುವುದು ಅನೇಕರಿಗೆ ಗೊತ್ತಿದೆ. ದಕ್ಷಿಣದಲ್ಲಿ ಸುಂದರೇಶ್ವರನ ದೇವಸ್ಥಾನದಲ್ಲಿನ ಪ್ರವೇಶದ್ವಾರದ ಬಳಿ ದ್ವಾರಪಾಲಕರ ಹತ್ತಿರ ಒಂದು ದ್ವಿಭುಜ ಗಣೇಶನ ವಿಗ್ರಹವನ್ನು ಕೆತ್ತಲಾಗಿದೆ. ಎರಡು ಕೈಗಳ (ದ್ವಿಹಸ್ತ) ಗಣಪತಿಯ ಒಂದು ಲೋಹದ ವಿಗ್ರಹವು ಚೆನ್ನೈಯಲ್ಲಿನ ಸಂಗ್ರಹಾಲಯದಲ್ಲಿದೆ. ಇದರ ಹೊರತು ಕಂಬೋಡಿಯಾ, ಜಾವಾ, ಬಾಲಿ ಇತ್ಯಾದಿ ಭಾರತೇತರ ದೇಶಗಳಲ್ಲಿ ಎರಡು ಕೈಗಳ ಮೂರ್ತಿಗಳಿವೆ. ಜಪಾನಿನಲ್ಲಿ ಕಾಣುವ ಪ್ರಸಿದ್ಧ ಕಾಂಗಿತೇನವಿಗ್ರಹವು ದ್ವಿಹಸ್ತದಲ್ಲಿದೆ.
೬. ಚತುರ್ಭುಜ ಗಣೇಶ
೪ ಕೈಗಳ ಮೂರ್ತಿಗಳು ಭಾರತದಲ್ಲಿ ಎಲ್ಲೆಡೆ ಕಂಡುಬರುತ್ತವೆ. ಹೆಚ್ಚಿನ ಎಲ್ಲ ಗಣೇಶನ ಸ್ಥಳಗಳಲ್ಲಿನ ಮೂರ್ತಿಊಳಿಗೆ ೪ ಕೈಗಳಿರುವುದು ಕಾಣಿಸುತ್ತದೆ.
೭. ಷಡ್‌ಭುಜ ಗಣೇಶ
ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ‘ಜ್ಞಾನೇಶ್ವರಿ’ ಗ್ರಂಥದ ಆರಂಭದಲ್ಲಿ ಓಂಕಾರ ಗಣೇಶನನ್ನು ಸ್ತುತಿಸಿದ್ದಾರೆ. ಅದರಲ್ಲಿ ಗಣೇಶನಿಗೆ ೬ ಕೈಗಳಿದ್ದು ‘ಅವನ ಹಿಂದಿನ ಎರಡು ಕೈಗಳಲ್ಲಿ ಪರಶು ಮತ್ತು ಅಂಕುಶವಿದೆ. ಎಡಬದಿಯ ಒಂದು ಕೈಯಲ್ಲಿ ಮುರಿದ ದಂತ ಮತ್ತು ಇನ್ನೊಂದು ಕೈಯಲ್ಲಿ ಮೋದಕವಿದೆ. ಬಲಬದಿಯ ಎರಡು ಕೈಗಳಲ್ಲಿನ ಒಂದು ಕೈಯಲ್ಲಿ ಕಮಲ ಮತ್ತು ಇನ್ನೊಂದು ಕೈ ವರದ ಹಸ್ತವಾಗಿದೆ, ಎಂದು ವರ್ಣಿಸಿದ್ದಾರೆ. ಪಂಜಾಬನ ಕಾಕಡಾ ಜಿಲ್ಲೆಯಲ್ಲಿನ ವೈಜನಾಥ ದೇವಸ್ಥಾನದಲ್ಲಿ ಷಡ್‌ಭುಜ ಗಣೇಶನ ಮೂರ್ತಿ ಇದೆ.
೮. ಅಷ್ಟಭುಜ ಗಣೇಶ
ಅಷ್ಟಭುಜ ಮೂರ್ತಿಯು ತಂತ್ರಮಾರ್ಗದಿಂದ ಬಂದಿರ ಬಹುದು. ಭಿಂಗಾರ (ಅಹಿಲ್ಯಾನಗರ)ದಲ್ಲಿನ ಉತ್ಖನನದಲ್ಲಿ ದೊರಕಿದ ಅಷ್ಟಭುಜ ತಾಂಡವಮೂರ್ತಿಯು ಜಾರಣಮಾರಣ, ವಿದ್ಯೆಗೆ ಸಂಬಂಧಿಸಿರುವ ಉಲ್ಲೇಖವಿದೆ. ಗ್ವಾಲಿಯರ್ ಸಂಗ್ರಹಾಲಯದಲ್ಲಿ ೮ ಕೈಗಳ ಗಣೇಶಮೂರ್ತಿ ಇದ್ದು ಅದು ಸುಮಾರು ೩೫೦ ವರ್ಷಗಳ ಹಿಂದಿನ ಗೊಂಡರಾಣಿ ಹಿರಾಯಿ ಇವಳ ಕಾಲದಿಂದ ಬಂದಿದೆ. ಇದರ ಹೊರತು ಮಹಾರಾಷ್ಟ್ರದ ಭಾಳವಣಿ, ತಾಲುಕು ಪಂಢರಾಪುರ, ಸೊಲ್ಲಾಪುರ ಜಿಲ್ಲೆ; ಕೋರೆಗಾಂವ್, ಕರ್ಜತ್ ತಾಲೂಕು, ಅಹಿಲ್ಯಾನಗರ ಜಿಲ್ಲೆ ಮತ್ತು ಕಾರಂಜಾ ಬಹಿರಮ್, ಚಾಂದೂರಬಾರ ತಾಲೂಕು, ಅಮರಾವತಿ ಜಿಲ್ಲೆಯಲ್ಲಿಯೂ ಅಷ್ಟಭುಜ ಗಣಪತಿಗಳಿವೆ.
೯. ದಶಭುಜ ಗಣೇಶ
ಹೇರಂಬ, ಉಚ್ಛಿಷ್ಟ ಮತ್ತು ವಲ್ಲಭ ಈ ಗಣೇಶನ ಧ್ಯಾನಗಳು ೧೦ ಭುಜಗಳನ್ನು ಹೊಂದಿವೆ. ನೇಪಾಳದಲ್ಲಿನ ಹೆರಂಬವು ೧೦ ಕೈಗಳನ್ನು ಹೊಂದಿದೆ. ಮಹಾಗಣಪತಿಯು ಧ್ಯಾನಕ್ಕೆ ಕುಳಿತಿರುವ ದಶಭುಜ ಗಣಪತಿ ಸಿಕ್ಕಿದೆ. ಇದರಲ್ಲಿ ೪ ಕೈಗಳು ಗಣಪತಿಯ ಮತ್ತು ಉಳಿದ ೬ ಕೈಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರದ್ದಾಗಿವೆ, ಎಂದು ನಂಬಲಾಗುತ್ತದೆ. ಪುಣೆ ನಗರ ಮತ್ತು ಪರಿಸರದಲ್ಲಿ ೩ ದಶಭುಜ ಗಣಪತಿಗಳಿವೆ. ಪೌಡ ಫಾಟಾ, ಪುಣೆ ಮತ್ತು ಜಾಂಭೂಳಪಾಡಾದಲ್ಲಿ ಶಿಲೆಯ ಗಣಪತಿ ಇದೆ. ನಾಶಿಕದಲ್ಲಿ ಶ್ರೀ ದಶಭುಜ ಸಿದ್ಧಿವಿನಾಯಕನ ದೇವಸ್ಥಾನವಿದೆ.
೧೦. ಅರ್ಧನಾರಿ ನಟೇಶ್ವರನ ರೂಪ ಮತ್ತು ದಶಭುಜ ಗಣೇಶ
ಶ್ರೀ ಗಾಯತ್ರಿ ದೇವಸ್ಥಾನ, ಗೋರೆಗಾವ್, ರಾಯಗಡ ಜಿಲ್ಲೆಯಲ್ಲಿ ತಾಮ್ರದ ಅತೀ ಚಿಕ್ಕ ಗಣಪತಿಯ ವಿಗ್ರಹವಿದೆ. ಇದಕ್ಕೆ ‘ವಿದ್ಯಾಗಣೇಶ’ ಎಂದು ಕರೆಯುತ್ತಾರೆ. ಇದು ಪಂಚಲೋಹಗಳ, ಅರ್ಧನಾರಿ ನಟೇಶ್ವರನ ರೂಪದಲ್ಲಿ, ಅಂದರೆ ಅರ್ಧದೇಹವು ಸ್ತ್ರೀರೂಪದಲ್ಲಿ ಮತ್ತು ಅರ್ಧದೇಹವು ಪುರುಷ ರೂಪದಲ್ಲಿದೆ, ಎಂದು ತಿಳಿಯುತ್ತಾರೆ. ಈ ವಿಗ್ರಹವು ತುಂಬಾ ಚಿಕ್ಕದಾಗಿರುವುದರಿಂದ ಅದರ ೧೦ ಕೈಗಳು ಸರಿಯಾಗಿ ಕಾಣಿಸುವುದಿಲ್ಲ. ಎರಡೂ ಬದಿಗೆ ಮೇಲಿನ ೪ ಕೈಗಳು ಒಂದಕ್ಕೊಂದು ಜೋಡಿಸಿರುವುದರಿಂದ ಕೆಳಗೆ ಬಿಡಿಯಾದ ಒಂದೊಂದು ಕೈಗಳಿವೆ.
೧೧. ದ್ವಾದಶಭುಜ ಗಣೇಶ
೧೨ ಕೈಗಳಿರುವ ಗಣೇಶನ ವಿಗ್ರಹಗಳು ಅಪರೂಪಕ್ಕೆ ನೋಡಲು ಸಿಗುತ್ತವೆ. ಔರಂಗಾಬಾದ್‌ದಲ್ಲಿ ಹಿರಿಯ ಬಾಜಿರಾವರು ನೀಡಿದ ವಿಗ್ರಹವು ೧೨ ಕೈಗಳದ್ದು ಮತ್ತು ಬಲಸೊಂಡಿಲದ್ದಾಗಿದೆ. ಮಹಾಗಣಪತಿಯ ದೇವಸ್ಥಾನ, ಕಾಟಸ್ ಗಾರ್ಡನ್, ಬಡನೇರಾ, ಅಮರಾವತಿ ಜಿಲ್ಲೆಯಲ್ಲಿ ೩ ನೇತ್ರಗಳಿರುವ ಮತ್ತು ೧೨ ಕೈಗಳ ಗಣಪತಿಯ ಸಂಗಮರವರಿ (ಅಮೃತಶಿಲೆ) ಕಲ್ಲಿನ ವಿಗ್ರಹವಿದೆ. ಸಾತಾರಾದಲ್ಲಿ ದಾಂಡೇಕರ ಮನೆತನದ ದೇವರಕೋಣೆಯಲ್ಲಿ ೧೨ ಕೈಗಳ ತಾಮ್ರದ ಗಣಪತಿಯ ವಿಗ್ರಹವಿದೆ.
೧೨. ತ್ರಿಶುಂಡ ಗಣಪತಿ
ಈ ಏಕೈಕ ವಿಗ್ರಹ ಪುಣೆಯಲ್ಲಿದೆ. ಸಯಾಮಿ ಹಸ್ತಲಿಖಿತದಲ್ಲಿ ‘ಕೋಕಣಾನೇಶ್ವರ’ನ ಗಣೇಶಚಿತ್ರವೂ ತ್ರಿಶುಂಡ (೩ ಸೊಂಡಿಲುಗಳು) ಕಾಣಿಸುತ್ತವೆ; ಆದರೆ ಆ ಶುಂಡಗಳಂತೆ ೩ ಮುಖಗಳೂ ಇವೆ. ಪುಣೆಯಲ್ಲಿನ ತ್ರಿಶುಂಡ ಗಣಪತಿಗೆ ೩ ಶುಂಡಗಳಿದ್ದರೂ ಮುಖ ಮಾತ್ರ ಒಂದೇ ಇದೆ.
೧೩. ಸಿಂಹದ ಮೇಲೆ ಕುಳಿತಿರುವ ಗಣೇಶ

ಹಿಮಾಚಲಪ್ರದೇಶದ ಬಜೌರಾದಲ್ಲಿನ ಗಣೇಶಮೂರ್ತಿಯು ಎರಡು ಸಿಂಹಗಳ ಮೇಲೆ ಕುಳಿತುಕೊಂಡಿದ್ದಾನೆ. ಅವನಿಗೆ ೪ ಕೈಗಳಿದ್ದು ಅವನ ಕೈಗಳಲ್ಲಿ ಅನುಕ್ರಮವಾಗಿ ಪರಶು, ಒಂದು ಅಸ್ಪಷ್ಟವಸ್ತು, ದಂತ ಮತ್ತು ಮೋದಕದಿಂದ ತುಂಬಿದ ಪಾತ್ರೆ ಹೀಗೆ ವಸ್ತುಗಳಿವೆ.
(ಸೌಜನ್ಯ : ಮಾಸಿಕ ‘ವೇಧ ಗಣೇಶನ’)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?