
(ಲಿವ್-ಇನ್ ರಿಲೇಶನ್‌ಶಿಪ್ ಎಂದರೆ ಮದುವೆಯಾಗದೆ ಪುರುಷ ಮತ್ತು ಸ್ತ್ರೀ ಒಟ್ಟಿಗೆ ವಾಸಿಸುವುದು)
ಪ್ರಯಾಗರಾಜ್ (ಉತ್ತರ ಪ್ರದೇಶ) – ಇಸ್ಲಾಮಿಕ್ ಕಾನೂನಿನ ಪ್ರಕಾರ, ಹಿಂದೂ ಮತ್ತು ಮುಸ್ಲಿಂ ಜೋಡಿ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ಇರುವುದು ‘ಹರಾಮ್’ (ನಿಷಿದ್ಧ, ಧರ್ಮವಿರೋಧಿ) ಅಗಿದೆ. ಇಂತಹ ಮತಾಂತರ-ವಿರೋಧಿ ಕಾನೂನು ಅಥವಾ ವೈಯಕ್ತಿಕ ಕಾನೂನುಗಳ ನೈತಿಕತೆಯಿಂದ ತಪ್ಪಿಸಿಕೊಳ್ಳಲು ಇಂತಹ ಸಂಬಂಧಗಳನ್ನು ಬಳಸಲಾಗುವುದಿಲ್ಲ. ಈ ವಿಷಯದಲ್ಲಿ ಮುಸ್ಲಿಂ ಪುರುಷ ಮತ್ತು ಹಿಂದೂ ದಲಿತ ಮಹಿಳೆ ವಾಸಿಸುತ್ತಿದ್ದ ಜೋಡಿಗೆ ಬಂಧನದಿಂದ ವಿನಾಯಿತಿ ನೀಡಲು ನ್ಯಾಯಾಲಯ ನಿರಾಕರಿಸಿದೆ. ಈ ಜೋಡಿಯು ತಾವು ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡು ಬಂಧನವನ್ನು ತಡೆಯಲು ವಿನಂತಿಸಿದ್ದರು.
೧. ಈ ಪ್ರಕರಣದಲ್ಲಿ, ಯುವತಿಯ ತಂದೆ ಭಾರತೀಯ ನ್ಯಾಯ ಸಂಹಿತೆ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ಜೋಡಿಯು ತಾವು ಲಿವ್-ಇನ್‌ನಲ್ಲಿ ವಾಸಿಸುತ್ತಿರುವುದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳನ್ನು ನೀಡಲು ವಿಫಲರಾದ ಕಾರಣ, ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿ, ಬಂಧನಕ್ಕೆ ತಡೆ ನೀಡಲು ನಿರಾಕರಿಸಿದೆ.
೨. ಅರ್ಜಿದಾರರು, “ನಾವು ಪರಸ್ಪರ ಪ್ರೀತಿಸುತ್ತೇವೆ, ಪ್ರಬುದ್ಧರಾಗಿದ್ದೇವೆ ಮತ್ತು ಯಾರೊಂದಿಗಾದರೂ ವಾಸಿಸುವ ಹಕ್ಕು ನಮಗಿದೆ” ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿ, ಒಟ್ಟಿಗೆ ವಾಸಿಸಲು ಉತ್ತರ ಪ್ರದೇಶದ ಮತಾಂತರ-ವಿರೋಧಿ ಕಾಯ್ದೆಯ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಹೇಳಿದೆ.
‘ಜಿನಾ’ದ ವ್ಯಾಖ್ಯೆ ಮತ್ತು ಶಿಕ್ಷೆ!
ನ್ಯಾಯಾಲಯದ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಹೊರತುಪಡಿಸಿ, ಬೇರೆ ಯಾವುದೇ ದೈಹಿಕ ಸಂಬಂಧವನ್ನು ‘ಜಿನಾ’ ಎಂದು ಪರಿಗಣಿಸಲಾಗುತ್ತದೆ. ಇಸ್ಲಾಮಿಕ್ ಕಾನೂನಿನ ಪ್ರಕಾರ, ‘ಜಿನಾ’ಗೆ 100 ಛಡಿ ಏಟುಗಳ ಶಿಕ್ಷೆ ಇದೆ. ಇಸ್ಲಾಂನಲ್ಲಿ, ಮದುವೆಗೆ ಮೊದಲು ಯಾವುದೇ ರೀತಿಯ ಚುಂಬನ, ಸ್ಪರ್ಶ ಅಥವಾ ಇಂತಹ ಲೈಂಗಿಕ ಚಟುವಟಿಕೆಗಳನ್ನು ‘ಹರಾಮ್’ ಎಂದು ಪರಿಗಣಿಸಲಾಗುತ್ತದೆ.
ಮತಾಂತರ-ವಿರೋಧಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಲಿವ್-ಇನ್ ದುರ್ಬಳಕೆ
೨೯ ಜುಲೈ ೨೦೨೫ರಂದು ನ್ಯಾಯಮೂರ್ತಿ ಸಂಗೀತಾ ಚಂದ್ರ ಮತ್ತು ನ್ಯಾಯಮೂರ್ತಿ ಬ್ರಿಜ ರಾಜ್ ಸಿಂಗ್ ಅವರ ವಿಭಾಗೀಯ ಪೀಠವು, ಬಲವಂತದ ಮತಾಂತರವನ್ನು ತಡೆಗಟ್ಟಲು ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಕಾನೂನಿನಿಂದ ತಪ್ಪಿಸಿಕೊಳ್ಳಲು ‘ಲಿವ್-ಇನ್’ ಅನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!