ಕೆನಡಾದಲ್ಲಿ 51 ಅಡಿ ಎತ್ತರದ ಶ್ರೀರಾಮನ ಮೂರ್ತಿಯ ಸ್ಥಾಪನೆ!

ಪಾಕಿಸ್ತಾನ ಮೂಲದ ಮುಸ್ಲಿಂ ಸಂಸದರ ಉಪಸ್ಥಿತಿ; ಕೆರಳಿದ ಪಾಕಿಸ್ತಾನಿ ಮುಸ್ಲಿಮರು

ಒಟ್ಟಾವಾ (ಕೆನಡಾ) / ಇಸ್ಲಾಮಾಬಾದ್ (ಪಾಕಿಸ್ತಾನ) – ಕೆನಡಾದ ಮಿಸಿಸಾಗಾ ನಗರದಲ್ಲಿ ಭಗವಾನ ಶ್ರೀರಾಮನ 51 ಅಡಿ ಎತ್ತರದ ಭವ್ಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಒಂಟಾರಿಯೊದಲ್ಲಿನ ‘ಹಿಂದೂ ಹೆರಿಟೇಜ್ ಸೆಂಟರ್’ನಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಕೆನಡಾ ಮಾತ್ರವಲ್ಲದೆ, ಉತ್ತರ ಅಮೇರಿಕಾದಲ್ಲಿಯೇ ಅತಿ ಎತ್ತರದ ಶ್ರೀರಾಮನ ಮೂರ್ತಿಯಾಗಿದೆ. ಈ ಮೂರ್ತಿಯು ಈಗ ಉತ್ತರ ಅಮೇರಿಕಾ ಖಂಡದಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತವಾಗಿದೆ. ಪ್ರಸ್ತುತ ಕೆನಡಾದಲ್ಲಿ 8 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ.

ಜಗತ್ತಿನಾದ್ಯಂತ ದೇವಸ್ಥಾನಗಳಾದರೆ, ಜನರು ಹಿಂದೂಗಳಾಗುತ್ತಾರೆ!

ಜಗತ್ತಿನಾದ್ಯಂತ ಜನರು ಹಿಂದೂಗಳಾದರೆ, ಸಮಾಜದಲ್ಲೀಗ ಕಣ್ಮರೆಯಾಗಿರುವ ಶಾಂತಿ ಮತ್ತು ನೈತಿಕತೆ ಪುನಃ ನೆಲೆಗೊಳ್ಳುತ್ತದೆ. ಇಸ್ಲಾಮಿಕ್ ದೇಶಗಳಲ್ಲಿ ಈ ಶಾಂತಿ ಮತ್ತು ನೈತಿಕತೆ ಎಳ್ಳಷ್ಟೂ ಕಾಣುವುದಿಲ್ಲ!

ಕೆನಡಾದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಸಂಸದ ಶಫಾಕತ್ ಅಲಿ ಅವರು ಈ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಿಂದ ಪಾಕಿಸ್ತಾನಿ ಮುಸ್ಲಿಮರು ಕೆಂಡಾಮಂಡಲಗೊಂಡಿದ್ದಾರೆ. ಪಾಕಿಸ್ತಾನದಿಂದ ಅನೇಕ ಜನರು ಅವರ ವಿರುದ್ಧ ದ್ವೇಷಪೂರಿತ ಮಾತುಗಳನ್ನಾಡಿದ್ದಾರೆ. ಈ ಕುರಿತ ವೀಡಿಯೋಗಳು ಪ್ರಸಾರವಾಗಿವೆ. ಒಬ್ಬ ಪಾಕಿಸ್ತಾನಿ ಹೇಳಿದಂತೆ, ‘ಜಗತ್ತಿನಾದ್ಯಂತ ದೇವಸ್ಥಾನಗಳಾದರೆ, ಜನರು ಹಿಂದೂಗಳಾಗುತ್ತಾರೆ. ಇದರಿಂದ ಮುಸ್ಲಿಮರೂ ದಾರಿತಪ್ಪಬಹುದು’. ಇನ್ನೊಬ್ಬ ‘ಅಲ್ಲಾ ಹೀಗೆ ಮಾಡದಿರಲಿ, ಹಿಂದೂ ದೇವಸ್ಥಾನಗಳು ಎಲ್ಲಿಯೂ ನಿರ್ಮಾಣವಾಗದಿರಲಿ. ಎಲ್ಲೆಡೆ ಇಸ್ಲಾಂ ಪ್ರಾಬಲ್ಯವಿರಬೇಕು’ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

‘ಹಿಂದೂ ಧರ್ಮವು ಸರ್ವಧರ್ಮ ಸಮಭಾವವನ್ನು ಕಲಿಸುತ್ತದೆ, ಆದರೆ ಇತರ ಧರ್ಮಗಳು ದ್ವೇಷವನ್ನು ಕಲಿಸುತ್ತವೆ’ ಎಂಬುದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ.