ಶ್ರೀ ಗಣೇಶಚತುರ್ಥಿಯ ನಿಮಿತ್ತ ಸನಾತನವು ಪ್ರಕಟಿಸಿದ ಗಣಪತಿ ವಿಷಯದ ಬಗೆಗಿನ ಗ್ರಂಥಗಳು, ಕಿರುಗ್ರಂಥಗಳು, ಚಿತ್ರಗಳು ಮತ್ತು ನಾಮಜಪ-ಪಟ್ಟಿಗಳನ್ನು ಸಮಾಜದ ವರೆಗೆ ತಲುಪಿಸಲು ಪ್ರಯತ್ನಿಸಿ !

ಎಲ್ಲಡೆಯ ಸಾಧಕರಿಗೆ ಸೂಚನೆ !

‘೨೭.೮.೨೦೨೫ ರಂದು ಶ್ರೀ ಗಣೇಶಚತುರ್ಥಿ ಇದೆ. ಗಣೇಶೋತ್ಸವದ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಶ್ರೀ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. ಸನಾತನ ಸಂಸ್ಥೆಯು ಗಣಪತಿಯ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ಜ್ಞಾನವನ್ನು ನೀಡುವ ಗ್ರಂಥಗಳು, ಕಿರುಗ್ರಂಥಗಳು, ಹಾಗೆಯೇ ಗಣೇಶತತ್ತ್ವದ ಅನುಭೂತಿಗಳನ್ನು ನೀಡುವ ಗಣೇಶನ ಚಿತ್ರಗಳು ಮತ್ತು ನಾಮಜಪ-ಪಟ್ಟಿಗಳನ್ನು ತಯಾರಿಸಿದೆ. ಗಣೇಶೋತ್ಸವದಲ್ಲಿ ಗಣೇಶನ ಆರಾಧನೆಯು ಶಾಸ್ತ್ರಶುದ್ಧ ಪದ್ಧತಿಯಿಂದ ಮಾಡಿ ಗಣೇಶಭಕ್ತರಿಗೆ ಗಣೇಶತತ್ತ್ವದ ಲಾಭವಾಗಬೇಕು, ಎಂಬ ದೃಷ್ಟಿಕೋನದಿಂದ ಈ ಗ್ರಂಥಗಳನ್ನು ಮತ್ತು ಉತ್ಪಾದನೆಗಳನ್ನು ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ.

೧. ಸನಾತನವು ಪ್ರಕಾಶನ ಮಾಡಿದ ಗ್ರಂಥಗಳಲ್ಲಿನ ಅಮೂಲ್ಯ ಜ್ಞಾನ

೧ ಅ. ಗಣೇಶನ ಪೂಜೆಯ ಎಲ್ಲ ಮಾಹಿತಿಯನ್ನು ನೀಡುವ ಕಿರುಗ್ರಂಥ – ‘ಶ್ರೀ ಗಣೇಶ ಪೂಜಾವಿಧಿ’ : ಈ ಕಿರುಗ್ರಂಥದಲ್ಲಿ ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ ಮಾಡುವ ಪೂಜೆ, ಪೂಜೆಯ ವಿಧಿ ಮತ್ತು ಕೆಲವು ಮಂತ್ರಗಳನ್ನು ಅರ್ಥದೊಂದಿಗೆ ಕೊಡಲಾಗಿದೆ. ಅದೇ ರೀತಿ ‘ಶಾಸ್ತ್ರೋಕ್ತ ಪದ್ಧತಿಯಿಂದ ಶ್ರೀ ಗಣೇಶನ ಪೂಜೆಯನ್ನು ಹೇಗೆ ಮಾಡಬೇಕು ? ಪೂಜೆ ಮಾಡುವವರಿಗೆ ಗಣೇಶತತ್ತ್ವದ ಹೆಚ್ಚೆಚ್ಚು ಲಾಭವಾಗಲು ಏನು ಮಾಡಬೇಕು ?’ ಮುಂತಾದ ಮಾಹಿತಿಗಳನ್ನು ವಿವರವಾಗಿ ನೀಡಲಾಗಿದೆ.

೧ ಆ. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ : ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ ಈ ಸ್ತೋತ್ರಗಳು ಪ್ರಚಲಿತವಾಗಿದ್ದೂ ಅನೇಕ ಜನರು ಅವುಗಳನ್ನು ನಿಯಮಿತವಾಗಿ ಪಠಿಸುತ್ತಾರೆ. ಸ್ತೋತ್ರದ ಫಲಶೃತಿಯು ಉಚ್ಚಾರವನ್ನು ಅವಲಂಬಿಸಿರು ತ್ತದೆ. ಈ ಕಿರುಗ್ರಂಥದಲ್ಲಿ ಸ್ತೋತ್ರದಲ್ಲಿನ ಸಂಸ್ಕೃತ ಪದಗಳ ಸೂಕ್ತವಾದ ವಿಭಜನೆ ಮಾಡಲಾಗಿದೆ. ಆದ್ದರಿಂದ ಶಬ್ದಗಳ ಯೋಗ್ಯ ಉಚ್ಚರಣೆಯನ್ನು ಹೇಗೆ ಮಾಡಬೇಕು, ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಈ ಕಿರುಗ್ರಂಥ ಗಳ ವೈಶಿಷ್ಟ್ಯವೆಂದರೆ ಸ್ತೋತ್ರದ ಅರ್ಥವನ್ನು ಕನ್ನಡದಲ್ಲಿ ನೀಡಲಾಗಿದೆ. ಅರ್ಥವು ತಿಳಿಯುವುದರಿಂದ ಭಕ್ತರಿಗೆ ಶ್ರೀ ಗಣೇಶನ ಮೇಲೆ ಶ್ರದ್ಧೆ ಹೆಚ್ಚಾಗಲು ಸಹಾಯವಾಗುತ್ತದೆ.

೧ ಇ. ‘ಗಣಪತಿಯ ಉಪಾಸನೆ ಹೇಗೆ ಮಾಡಬೇಕು ?, ಎಂಬುದನ್ನು ವಿವರಿಸುವ ಗ್ರಂಥ – ‘ಶ್ರೀ ಗಣಪತಿ’ : ಇದರಲ್ಲಿ ಗಣಪತಿಯ ವಿವಿಧ ಹೆಸರುಗಳು, ಅವನ ಕಾರ್ಯ ಮತ್ತು ವೈಶಿಷ್ಟ್ಯಗಳು, ಮೂರ್ತಿಯ ಕೆಲವು ವೈಶಿಷ್ಟ್ಯಗಳ ಭಾವಾರ್ಥವನ್ನು ಕೊಡಲಾಗಿದೆ. ‘ಗಣಪತಿಯ ಉಪಾಸನೆ ಹೇಗೆ ಮಾಡಬೇಕು ?, ಸಾರ್ವಜನಿಕ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?’, ಎಂಬುದನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. (ಇದರ ಕಿರುಗ್ರಂಥವೂ ಲಭ್ಯವಿದೆ.)

೧ ಈ. ‘ಹಬ್ಬವನ್ನು ಆಚರಿಸುವ ಪದ್ಧತಿ ಮತ್ತು ಅದರ ಹಿಂದಿನ ಶಾಸ್ತ್ರ’, ಹಾಗೆಯೇ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ’ ಈ ಗ್ರಂಥಗಳೂ ಲಭ್ಯವಿದೆ. ವರ್ಷದಲ್ಲಿ ವಿವಿಧ ಹಬ್ಬಗಳನ್ನು ಆಚರಿಸುವಾಗ ಈ ಗ್ರಂಥಗಳ ಉಪಯೋಗವಾಗುವುದು.

೨. ಸನಾತನದ ಇತರ ಸಾತ್ತ್ವಿಕ ಉತ್ಪಾದನೆಗಳು

೨ ಅ. ಶ್ರೀ ಗಣೇಶನ ಚಿತ್ರ : ಈ ಗ್ರಂಥದಲ್ಲಿ ಶೇ. ೩೨ ರಷ್ಟು ಗಣೇಶತತ್ತ್ವವು ಆಕರ್ಷಿತವಾಗಿದೆ. (ಕಲಿಯುಗದಲ್ಲಿ ಮೂರ್ತಿ ಅಥವಾ ಚಿತ್ರದಲ್ಲಿ ಸರಾಸರಿ ಶೇ. ೩೦ ರಷ್ಟು ಮಾತ್ರ ದೇವತೆಯ ತತ್ತ್ವವು ಬರಲು ಸಾಧ್ಯ. ಬೇರೆಡೆ ಲಭ್ಯವಿರುವ ದೇವತೆಯ ಚಿತ್ರದಲ್ಲಿ ಈ ತತ್ತ್ವವು ಸರಾಸರಿ ಶೇ. ೨-೩ ರಷ್ಟು ಮಾತ್ರ ಇರುತ್ತದೆ.) ಈ ಚಿತ್ರದಲ್ಲಿ ಚಿಕ್ಕ, ಮಧ್ಯಮ ಮತ್ತು ದೊಡ್ಡ ಆಕಾರಗಳಲ್ಲಿ ಲಭ್ಯವಿದೆ, ಹಾಗೆಯೇ ‘ದತ್ತ-ಗಣಪತಿ’ ಈ ದೇವತೆಗಳ ಚಿತ್ರವಿರುವ ಪದಕಗಳೂ (ಲಾಕೆಟ್‌ಗಳೂ) ಲಭ್ಯವಿದೆ.

೨ ಆ. ನಾಮಪಟ್ಟಿ : ಅಕ್ಷರಗಳು ಸಾತ್ತ್ವಿಕವಾಗಿದ್ದರೆ ಅದರಲ್ಲಿ ಚೈತನ್ಯ ಬರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅದರ ಸುತ್ತಮುತ್ತಲಿನ ದೇವತೆಯ ತತ್ತ್ವಕ್ಕೆ ಅನುಗುಣವಾಗಿ ಚೌಕಟ್ಟಿನ ಅಧ್ಯಯನ ಮಾಡಿ ಸನಾತನವು ‘|| ಓಂ ಗಂ ಗಣಪತಯೇ ನಮಃ ||’ ಈ ನಾಮಜಪದ ಪಟ್ಟಿಯಿಂದ ಗಣಪತಿಯ ತತ್ತ್ವವು ಗ್ರಹಣವಾಗಬೇಕು, ಎಂಬ ದೃಷ್ಟಿಯಿಂದ ತಯಾರಿಸಲಾಗಿದೆ.

೩. ಆಕರ್ಷಕ ಉಡುಗೊರೆ-ಸೆಟ್‌ಗಳನ್ನು ಸಿದ್ಧಪಡಿಸಿ

ಅ. ಗಣೇಶೋತ್ಸವದ ನಿಮಿತ್ತ ತಮ್ಮ ಮನೆಗೆ ಬಂದಿರುವ ಸಂಬಂಧಿಕರರಿಗೆ ಉಡುಗೊರೆಯೆಂದು ಮೇಲಿನ ಗ್ರಂಥಗಳು, ಕಿರುಗ್ರಂಥಗಳು ಮತ್ತು ದೇವರ ಪೂಜೆಗಾಗಿ ಉಪಯುಕ್ತವಾಗಿರುವ ಸಾತ್ತ್ವಿಕ ಉತ್ಪಾದನೆಗಳು (ಊದುಬತ್ತಿ, ಅತ್ತರ, ಕರ್ಪೂರ, ಕುಂಕುಮ, ಅಷ್ಟಗಂಧ, ಧೂಪಬತ್ತಿ, ಬತ್ತಿ ಮುಂತಾದವುಗಳು) ಇವುಗಳ ಆಕರ್ಷಕ ಉಡುಗೊರೆ-ಸೆಟ್‌ಗಳನ್ನು ತಯಾರಿಸಿ ಕೊಡಬಹುದು.

ಆ. ಅನೇಕ ಉದ್ಯಮಿಗಳು ಮತ್ತು ಮಾರಾಟಗಾರರು ಗಣೇಶ ಚತುರ್ಥಿಯ ನಿಮಿತ್ತ ಇತರರಿಗೆ ಉಡುಗೊರೆಯನ್ನು ಕೊಡುತ್ತಾರೆ. ಅದಕ್ಕಾಗಿ ಗ್ರಂಥ, ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳ ಆಕರ್ಷಕ ಉಡುಗೊರೆ-ಸೆಟ್‌ಗಳನ್ನು ತಯಾರಿಸಿ ಅವರಿಗೆ ವಿತರಣೆ ಮಾಡಬಹುದು.’ (೨೯.೭.೨೦೨೫)