ಸಾಧಕರಿಗಾಗಿ ಸೂಚನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ಸನಾತನ ಸಂಸ್ಥೆಯು ಜುಲೈ ೨೦೨೫ ರ ವರೆಗೆ ಮರಾಠಿ ೩೪೭, ಕನ್ನಡ ೨೦೧, ಆಂಗ್ಲ ೨೦೧, ಹಿಂದಿ ೧೯೯, ಗುಜರಾತಿ ೭೦, ತೆಲುಗು ೫೪, ತಮಿಳು ೪೬, ಬಂಗಾಲಿ ೩೦, ಮಲ್ಯಾಳಂ ೨೫, ಒಡಿಯಾ ೨೨, ಪಂಜಾಬಿ ೧೩, ನೇಪಾಳಿ ೩ ಮತ್ತು ಅಸ್ಸಾಮಿ ೨ ಹೀಗೆ ೧೩ ಭಾಷೆಗಳಲ್ಲಿ ೧ ಕೋಟಿ ೮೪ ಸಾವಿರ ಪ್ರತಿಗಳನ್ನು ಪ್ರಕಟಿಸಿದೆ. ಸಂಸ್ಥೆಯ ವತಿಯಿಂದ ವಿವಿಧ ಸ್ಥಳಗಳಲ್ಲಿ ಪ್ರಾಸಂಗಿಕ, ನಿಯಮಿತ ಹಾಗೂ ಹಬ್ಬಗಳು ಮತ್ತು ಉತ್ಸವಗಳ ಸಮಯದಲ್ಲಿ ಗ್ರಂಥಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಲಭ್ಯವಿರುವ ಸ್ಥಳಾವಕಾಶದ ಪ್ರಕಾರ ಕೆಲವು ಗ್ರಂಥಗಳನ್ನು ಪ್ರದರ್ಶಿಸಲಾಗು ತ್ತದೆ; ಆದರೆ ಎಲ್ಲಾ ಗ್ರಂಥಗಳನ್ನು ಪ್ರದರ್ಶನದಲ್ಲಿ ಇಡುವುದಕ್ಕೆ ಮಿತಿಬರುತ್ತದೆ. ಆದ್ದರಿಂದ ಜಿಜ್ಞಾಸುಗಳಿಗೆ ಬೇಕಾದ ಗ್ರಂಥವು ಅಲ್ಲಿ ಲಭ್ಯವಿಲ್ಲದಿದ್ದರೆ, ಆ ಗ್ರಂಥವನ್ನು ಅಥವಾ ಅದಕ್ಕೆ ಪರ್ಯಾಯ ಗ್ರಂಥವನ್ನು ಲಭ್ಯವಾಗಿಸುವ ಬಗ್ಗೆ ನಮ್ರತೆಯಿಂದ ಕೇಳಿ. ಇದರ ಜೊತೆಗೆ, ‘ಸನಾತನದ ಗ್ರಂಥಭಂಡಾರವು ಬಹಳ ದೊಡ್ಡದಾಗಿದೆ’ ಎಂದು ಜಿಜ್ಞಾಸುಗಳಿಗೆ ತಿಳಿಸಲು ಸಾಧಕರು ಅವರಿಗೆ ಗ್ರಂಥಸೂಚಿಯನ್ನು ತೋರಿಸಬೇಕು. ಅದನ್ನು ನೋಡಿದ ನಂತರ ಜಿಜ್ಞಾಸುಗಳು ತಮಗೆ ಬೇಕಾದ ಗ್ರಂಥಗಳ ಬೇಡಿಕೆ ಮಾಡಬಹುದು. ಜಿಜ್ಞಾಸುಗಳು ಬೇಡಿಕೆ ನೀಡಿದ ಗ್ರಂಥಗಳನ್ನು ಅವರಿಗೆ ತಲುಪಿಸಲು ಈ ಕೆಳಗಿನ ವಿಧಾನಗಳನ್ನು ಬಳಸಬಹುದು.
೧. ಜಿಜ್ಞಾಸುಗಳ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಗ್ರಂಥದ ಬೇಡಿಕೆ ಇವುಗಳನ್ನು ದಾಖಲಿಸಿಕೊಳ್ಳಿ. ಜಿಜ್ಞಾಸುಗಳಿಗೆ ಆ ಗ್ರಂಥವನ್ನು ಅವರ ಮನೆ ಅಥವಾ ಕಚೇರಿ ವಿಳಾಸಕ್ಕೆ ತಲುಪಿಸಲು ಸಾಧ್ಯವಿದ್ದರೆ, ಅಲ್ಲಿಗೆ ತಲುಪಿಸಿ.
೨. ‘ಸನಾತನ ಶಾಪ್’, ಎಂಬ ಜಾಲತಾಣದಲ್ಲಿ ಸನಾತನದ ಕನ್ನಡ, ಮರಾಠಿ, ಹಿಂದಿ, ಆಂಗ್ಲ ಮತ್ತು ಗುಜರಾತಿ ಭಾಷೆಗಳ ಗ್ರಂಥಗಳು ಲಭ್ಯವಿದೆ. ಈ ಜಾಲತಾಣದಿಂದ ಜಿಜ್ಞಾಸುಗಳು ಗ್ರಂಥಗಳನ್ನು ಮನೆಗೆ ತಲುಪಿಸುವಂತೆ ಬೇಡಿಕೆ ಮಾಡಬಹುದು.
೩. ಯಾರಾದರೂ ಜಿಜ್ಞಾಸುಗಳು ಪರವೂರಿನಿಂದ ಬಂದಿದ್ದರೆ, ಅಲ್ಲಿನ ಜಿಲ್ಲೆ/ರಾಜ್ಯದ ವಿತರಕರ ಸಂಪರ್ಕ ಸಂಖ್ಯೆಯನ್ನು ಅವರಿಗೆ ನೀಡಿ. ಈ ಸಂಪರ್ಕ ಸಂಖ್ಯೆಗಳು ‘ಸನಾತನ ಶಾಪ್’ನಲ್ಲಿ ಲಭ್ಯವಿದೆ. ಶಾಪ್‌ನ ಜಾಲತಾಣದಲ್ಲಿರುವ ‘ಅಒಟಿಣಚಿಛಿಣ ಉಸ್’ ವಿಭಾಗದಲ್ಲಿ ಇದರ ಪಟ್ಟಿಯನ್ನು ಪಡೆಯಬಹುದು, ಹಾಗೂ ಆ ಜಿಜ್ಞಾಸುವಿನ ಸಂಪರ್ಕ ಸಂಖ್ಯೆಯನ್ನು ಪಡೆದು ಸಂಬಂಧಿತ ವಿತರಕರಿಗೆ ನೀಡಬಹುದು.
೪. ‘ಜಿಜ್ಞಾಸುಗಳಿಗೆ ಗ್ರಂಥವು ಸಿಕ್ಕಿದೆಯೇ ?’ ಎಂಬುದನ್ನು ಸಾಧಕರು ಖಚಿತಪಡಿಸಿಕೊಳ್ಳಬೇಕು.
‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೃಪೆಯಿಂದ ಆಪತ್ಕಾಲದಲ್ಲಿ ಜಿಜ್ಞಾಸುಗಳಿಗೆ ‘ಸಾಧನೆ, ರಾಷ್ಟ್ರ, ಧರ್ಮ, ಆಯುರ್ವೇದ, ದಿನಚರ್ಯೆ, ವ್ಯಕ್ತಿತ್ವ ವಿಕಾಸ’ ಇತ್ಯಾದಿ ವಿವಿಧ ವಿಷಯಗಳ ಗ್ರಂಥಗಳು ‘ಸಾಧನೆ ಹಾಗೂ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳಲ್ಲಿ’ ಮುಂದಿನ ಹಂತವನ್ನು ತಲುಪಲು ಸಹಾಯ ಮಾಡಬಹುದು’ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಜಿಜ್ಞಾಸುಗಳಿಗೆ ಬೇಕಾದ ಗ್ರಂಥವನ್ನು ಅವರಿಗೆ ತಲುಪಿಸಲು ತಳಮಳದಿಂದ ಸಾಧ್ಯವಿರುವಷ್ಟು ಪ್ರಯತ್ನಗಳನ್ನು ಮಾಡಬೇಕು.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೯.೭.೨೦೨೫)
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !