
ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣ ಮಾಡುವುದೇ ‘ಕಾಲಾ’. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಆ ಖಾದ್ಯಪದಾರ್ಥಗಳ ‘ಕಾಲಾ’ ಮಾಡಿದನು ಮತ್ತು ಎಲ್ಲರೊಂದಿಗೆ ತಿಂದನು. ಈ ಕಥೆಗನುಸಾರ ಮುಂದೆ ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಮೊಸರು ಕುಡಿಕೆಯ ವೈಶಿಷ್ಟ್ಯಗಳು
ಅ. ಗೋಪಾಲಕಾಲಾ
ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲ ಅಷ್ಟಮಿಯ ನಂತರ ಮೊಸರು ಕುಡಿಕೆಯನ್ನು ಒಡೆದು ಗ್ರಹಿಸುವ ಪ್ರಸಾದ.
ಆ. ಗೋಪಾಲಕಾಲಾದ ಸವಿರುಚಿ
ಅವಲಕ್ಕಿ, ಹಾಲು, ಮೊಸರು, ಮಜ್ಜಿಗೆ ಮತ್ತು ಬೆಣ್ಣೆ ಈ ಐದು ಪದಾರ್ಥಗಳನ್ನು ಒಟ್ಟು ಮಾಡಿ ತಯಾರಿಸುವ ಪ್ರಸಾದಕ್ಕೆ ಒಂದು ಬಣ್ಣಿಸಲಾಗದ ದಿವ್ಯ ರುಚಿ ಇರುತ್ತದೆ.
ಇ. ಮೊಸರು ಕುಡಿಕೆ
ಮೊಸರು ಕುಡಿಕೆ ಅಂದರೆ ‘ಜೀವ’. ಮೊಸರು ಕುಡಿಕೆಯನ್ನು ಒಡೆಯುವುದು ಅಂದರೆ ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು. ಅದರ ನಂತರ ಸ್ವೀಕರಿಸುವ ಪ್ರಸಾದವು ಆನಂದದ ಪ್ರತೀಕವಾಗಿದೆ.
ಮೊಸರು ಕುಡಿಕೆಯ ಪಾವಿತ್ರ್ಯವನ್ನು ಉಳಿಸಲು ಮುಂದಿನ ಕೃತಿಗಳನ್ನು ತಡೆಯಿರಿ !
೧. ಲಕ್ಷಗಟ್ಟಲೆ ರೂಪಾಯಿಯ ಮೊಸರು ಕುಡಿಕೆ ಸ್ಪರ್ಧೆಗಳನ್ನು ಆಯೋಜಿಸಿ ಉತ್ಸವದ ವ್ಯಾಪಾರೀಕರಣ !
೨. ಉತ್ಸವದಲ್ಲಿ ತಂಬಾಕು, ಗುಟ್ಕಾ ಇತ್ಯಾದಿಗಳ ಜಾಹಿರಾತುಗಳನ್ನು ಪ್ರದರ್ಶನ ಅಥವಾ ಉತ್ಪಾದಕರನ್ನು ಪ್ರಾಯೋಜಕರೆಂದು ಕರೆತರುವುದು !
೩. ಈ ಸಂದರ್ಭದಲ್ಲಿ ನಡೆಯುವ ಮದ್ಯಪಾನ, ವಿಕೃತ ನೃತ್ಯ, ಮಹಿಳೆಯರ ಶೋಷಣೆ, ರಾಸಾಯನಿಕ ಬಣ್ಣದ ನೀರನ್ನು ಎರಚುವುದು !
೪. ೪೦ ಅಡಿ ಎತ್ತರದಲ್ಲಿ ಕಟ್ಟಿರುವ ಮೊಸರುಕುಡಿಕೆ, ಅದನ್ನು ಒಡೆಯುವ ಪೈಪೋಟಿಯಲ್ಲಿ ಅಪಾಯಕಾರಿ ಮಾನವ ಗೋಪುರ ತಯಾರಿಸುವುದು !
೫. ಮಹಿಳೆಯರ ‘ಗೋವಿಂದಾ’ ತಂಡಗಳ ಅಶಾಸ್ತ್ರೀಯ ರೂಢಿ !
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು