ಈ ವರ್ಷ ಆಗಸ್ಟ್ ೧೫ ರಂದು ಶ್ರೀಕೃಷ್ಣಜನ್ಮಾಷ್ಟಮಿ ಇದೆ….

ನಮ್ಮ ಉಪಾಸ್ಯ ದೇವತೆಯ ವೈಶಿಷ್ಟ್ಯಗಳು ಮತ್ತು ಉಪಾಸನೆಯ ಬಗ್ಗೆ ಅಧಾತ್ಮಶಾಸ್ತ್ರೀಯ ಮಾಹಿತಿ ತಿಳಿದರೆ ದೇವರ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ, ಅದರಿಂದ ಸಾಧನೆ ಉತ್ತಮವಾಗಲು ಸಹಾಯವಾಗುತ್ತದೆ. ಆ ದೃಷ್ಟಿಯಿಂದ ಶ್ರೀಕೃಷ್ಣನ ವಿಷಯದ ಮಾಹಿತಿ ಮುಂದೆ ನೀಡಲಾಗಿದೆ
೧. ಶ್ರೀಕೃಷ್ಣನ ಜನ್ಮ
ಶ್ರಾವಣ ಕೃಷ್ಣ ಅಷ್ಟಮಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ, ಚಂದ್ರನು ವೃಷಭ ರಾಶಿಯಲ್ಲಿದ್ದಾಗ ಭಗವಾನ ಶ್ರೀಕೃಷ್ಣನ ಜನ್ಮವಾಯಿತು. ಈ ವರ್ಷ ಆಗಸ್ಟ್ ೧೫ ರಂದು ಶ್ರೀಕೃಷ್ಣ ಜಯಂತಿ ಇದೆ.
೨. ಶ್ರೀಕೃಷ್ಣ ಜಯಂತಿಯ ವೈಶಿಷ್ಟ್ಯ
ಜನ್ಮಾಷ್ಟಮಿಯಂದು ಶ್ರೀಕೃಷ್ಣತತ್ತ್ವ ಎಂದಿಗಿಂತ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ‘ಓಂ ನಮೋ ಭಗವತೇ ವಾಸುದೇವಾಯ |’ ನಾಮಜಪ, ಹಾಗೆಯೇ ಶ್ರೀಕೃಷ್ಣನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಶ್ರೀಕೃಷ್ಣತತ್ತ್ವದ ಲಾಭವಾಗುತ್ತದೆ.
೩. ಉತ್ಸವವನ್ನು ಆಚರಿಸುವ ಪದ್ಧತಿ
ಈ ದಿನ ಹಗಲಿಡೀ ಉಪವಾಸ ಮಾಡಿ ರಾತ್ರಿ ಹನ್ನೆರಡು ಗಂಟೆಗೆ ಬಾಲಕೃಷ್ಣನನ್ನು ತೊಟ್ಟಿಲಿಗೆ ಹಾಕಿ ಜನ್ಮದಿನವನ್ನು ಆಚರಿಸುತ್ತಾರೆ. ಅನಂತರ ಪ್ರಸಾದವನ್ನು ಸೇವಿಸಿ ಉಪವಾಸವನ್ನು ಬಿಡುತ್ತಾರೆ ಅಥವಾ ಮರುದಿನ ಬೆಳಗ್ಗೆ ದಹೀಕಾಲಾದ ಪ್ರಸಾದವನ್ನು ಸೇವಿಸಿ ಉಪವಾಸವನ್ನು ಬಿಡುತ್ತಾರೆ.
೪. ದಹೀಕಾಲಾ
ವಿವಿಧ ಖಾದ್ಯಪದಾರ್ಥ, ಮೊಸರು, ಹಾಲು ಮತ್ತು ಬೆಣ್ಣೆಗಳ ಮಿಶ್ರಣಕ್ಕೆ ‘ಕಾಲಾ’ ಎನ್ನುತ್ತಾರೆ. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಹಸುಗಳನ್ನು ಮೇಯಿಸುತ್ತಿರುವಾಗ ತನ್ನ ಹಾಗೂ ಸಂಗಡಿಗರ ಬುತ್ತಿಗಳನ್ನು ಒಟ್ಟಿಗೆ ಸೇರಿಸಿ ಖಾದ್ಯಪದಾರ್ಥಗಳ ಮಿಶ್ರಣ ಮಾಡಿ, ಅಂದರೆ ಕಾಲಾ ಮಾಡಿ ಅದನ್ನು ಎಲ್ಲರೊಂದಿಗೆ ಸೇವಿಸಿದ್ದನು. ಈ ಕಥೆಗನುಸಾರ ಮುಂದೆ ಗೋಕುಲಾಷ್ಟಮಿಯ ಮರುದಿನ ‘ಕಾಲಾ’ ಮಾಡುವ ಮತ್ತು ಮೊಸರಿನ ಗಡಿಗೆಯನ್ನು ಒಡೆಯುವ ಪದ್ಧತಿಯು ರೂಢಿಗೆ ಬಂದಿತು.
ಶ್ರೀಕೃಷ್ಣನಿಗೆ ಎಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು ?
ಶ್ರೀಕೃಷ್ಣನಿಗೆ ಕಡಿಮೆಪಕ್ಷ ೩ ಅಥವಾ ೩ರ ಪಟ್ಟುಗಳಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು. ಪ್ರತಿ ಪ್ರದಕ್ಷಿಣೆಯ ನಂತರ ದೇವರಿಗೆ ನಮಸ್ಕರಿಸಿ, ನಂತರವೇ ಮುಂದಿನ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯಿಂದ ದೇವರಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯವು ಅಲ್ಪಾವಧಿಯಲ್ಲಿ ಇಡೀ ಶರೀರದಲ್ಲಿ ಹರಡುತ್ತದೆ.
ಶ್ರೀಕೃಷ್ಣನಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ?
ಶ್ರೀಕೃಷ್ಣನಿಗೆ ಕೃಷ್ಣಕಮಲದ ಹೂವುಗಳನ್ನು ಅರ್ಪಿಸಬೇಕು. ಏಕೆಂದರೆ ಈ ಹೂವುಗಳಲ್ಲಿ ಶ್ರೀಕೃಷ್ಣನ ಪವಿತ್ರಕಗಳನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಶ್ರೀಕೃಷ್ಣನಿಗೆ ಹೂವುಗಳನ್ನು ೩ ಅಥವಾ ೩ ರ ಪಟ್ಟುಗಳಲ್ಲಿ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಗಂಧದ ಸುಗಂಧದ್ರವ್ಯವನ್ನು ಹಚ್ಚಬೇಕು.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು