SANATAN PRABHAT EXCLUSIVE : ಬಾಂಗ್ಲಾದೇಶದಲ್ಲಿ ಒಂದು ವರ್ಷದಲ್ಲಿ ಹಿಂದೂಗಳ ಮೇಲೆ 2 ಸಾವಿರದ 447 ದಾಳಿಗಳು!

‘ಸನಾತನ ಪ್ರಭಾತ’ದಿಂದ ಒಂದು ವರ್ಷದ ಕಾಲಾವಧಿಯ ವಿಮರ್ಶೆ:

  • ಬಾಂಗ್ಲಾದೇಶದ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶವನ್ನು ತೊರೆದು ಒಂದು ವರ್ಷ ಪೂರ್ಣ !

  • ಮುಸಲ್ಮಾನರಿಂದ 157 ದೇವಸ್ಥಾನಗಳು ಧ್ವಂಸ

  • 47 ಹಿಂದೂಗಳ ಹತ್ಯೆ, 32 ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ

  • 52 ಹಿಂದೂ ಶಿಕ್ಷಕರನ್ನು ಬಲವಂತವಾಗಿ ಕೆಲಸದಿಂದ ವಜಾ

  • 100 ಕ್ಕಿಂತ ಹೆಚ್ಚು ಹಿಂದೂ ಪೊಲೀಸ್ ಅಧಿಕಾರಿಗಳನ್ನೂ ಕೆಲಸದಿಂದ ವಜಾ

ನವದೆಹಲಿ – ಬಾಂಗ್ಲಾದೇಶದ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಿಂದ ಅಲ್ಲಿನ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಸಮಯದಲ್ಲಿ ನಡೆದ ಹಿಂದೂಗಳ ನರಮೇಧದ ನಂತರ, ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿದೆ. ‘ಸನಾತನ ಪ್ರಭಾತ’ವು ಕಳೆದ ಒಂದು ವರ್ಷದ ಅವಧಿಯ ವಿಮರ್ಶೆಯನ್ನು ಮಾಡಿದಾಗ, ಭಯಾನಕ ಅಂಕಿಅಂಶಗಳು ಬೆಳಕಿಗೆ ಬಂದವು. ಢಾಕಾದ ‘ರಿಸರ್ಚ್ ಅಂಡ್ ಎಂಪವರ್‌ಮೆಂಟ್ ಆರ್ಗನೈಸೇಶನ್’ನ ಅಧ್ಯಕ್ಷರಾದ ಪ್ರೊಫೆಸರ್ ಚಂದನ ಸರಕಾರ ಅವರು ಈ ಕುರಿತು ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದು, ಆಗಸ್ಟ್ 8 ರಂದು ಮಹಮ್ಮದ್ ಯೂನಸ್ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದ ನಂತರ, 350 ದಿನಗಳಲ್ಲಿ ಹಿಂದೂಗಳ ಮೇಲೆ 2 ಸಾವಿರದ 447 ದಾಳಿಗಳು ನಡೆದಿವೆ. ಇದರ ಜೊತೆಗೆ 157 ದೇವಸ್ಥಾನಗಳನ್ನು ಕೆಡವಲಾಗಿದೆ, 47 ಹಿಂದೂಗಳ ಹತ್ಯೆ, 32 ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಮತ್ತು 52 ಹಿಂದೂ ಶಿಕ್ಷಕರನ್ನು ಬಲವಂತವಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೆ, 100 ಕ್ಕಿಂತ ಹೆಚ್ಚು ಹಿಂದೂ ಪೊಲೀಸ್ ಅಧಿಕಾರಿಗಳನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ ಒಂದು ವರ್ಷದಲ್ಲಿ, ‘ಸನಾತನ ಪ್ರಭಾತ’ವು ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಕನಿಷ್ಠ 150 ಸುದ್ದಿಗಳನ್ನು ಅಥವಾ ಲೇಖನಗಳನ್ನು ಪ್ರಕಟಿಸಿದೆ. ಅಂದರೆ, ಪ್ರತಿ ವಾರ 3 ಸುದ್ದಿಗಳನ್ನು ಪ್ರಕಟಿಸಲಾಗಿದೆ.

ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರನ್ನು ಬಾಂಗ್ಲಾದೇಶ ಬಂಧಿಸಿದೆ

ಪ್ರಾ. ಸರಕಾರ ಅವರು ಹೇಳಿದಂತೆ, ಇಸ್ಕಾನ್‌ ನ ಚಿನ್ಮಯ ದಾಸ್ ಪ್ರಭು ಅವರು ಹಿಂದೂಗಳ ರಕ್ಷಣೆಗಾಗಿ ‘ಬಂಗಭೂಮಿ’ಯ ಬೇಡಿಕೆ ಇಟ್ಟಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವರು ಇನ್ನೂ ಜೈಲಿನಲ್ಲಿದ್ದಾರೆ. ಇಲ್ಲಿನ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’, ‘ಜಮಾತ್-ಎ-ಇಸ್ಲಾಮಿ’, ಬಾಂಗ್ಲಾದೇಶದ ಸೇನೆ, ಮಧ್ಯಂತರ ಸರಕಾರ, ಪೊಲೀಸ್ ಇತ್ಯಾದಿ ಸಂಸ್ಥೆಗಳು ಒಟ್ಟಾಗಿ ಸೇರಿಕೊಂಡು ಹಿಂದೂಗಳ ಮೇಲೆ ದಾಳಿಗಳನ್ನು ನಡೆಸಿವೆ. ಶೇಖ್ ಹಸೀನಾ ಅವರ ‘ಅವಾಮಿ ಲೀಗ್’ ಪಕ್ಷವೂ ಸಹ ಹಿಂದೂಗಳ ಪರವಾಗಿಲ್ಲ, ಬದಲಾಗಿ ಅದು ಒಂದು ಕಟ್ಟರ್ ಇಸ್ಲಾಂವಾದಿ ಪಕ್ಷವಾಗಿದೆ.

ಶೇಖ್ ಹಸೀನಾ ಕಟ್ಟರ್ ಮುಸಲ್ಮಾನರು – ಅವರು ಎಂದಿಗೂ ಹಿಂದೂಗಳನ್ನು ರಕ್ಷಿಸಲಿಲ್ಲ, ಭಾರತದ ಬೆಂಬಲಿಗರೂ ಆಗಿರಲಿಲ್ಲ!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶದ ಒಬ್ಬ ಹಿಂದುತ್ವನಿಷ್ಠರು ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಷರತ್ತಿನ ಮೇಲೆ ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದು, ಭಾರತವು ಬಾಂಗ್ಲಾದೇಶಕ್ಕಾಗಿ ಬಹಳಷ್ಟು ಮಾಡಿದೆ; ಆದರೆ ಬಾಂಗ್ಲಾದೇಶವು ಭಾರತಕ್ಕಾಗಿ ಏನನ್ನೂ ಮಾಡಿಲ್ಲ. ಅಷ್ಟೇ ಅಲ್ಲ, ಸ್ವತಂತ್ರ ಬಾಂಗ್ಲಾದೇಶದ ಎಲ್ಲಾ ನಾಯಕರು ನಮ್ಮ ಹಿಂದೂಗಳಿಗೆ ಮೋಸವನ್ನೇ ಮಾಡಿದ್ದಾರೆ. ಶೇಖ್ ಹಸೀನಾ ಅವರು ಭಾರತದ ಬೆಂಬಲಿಗರಾಗಿಲಿಲ್ಲ, ಮತ್ತು ಅವರು ಎಂದಿಗೂ ಹಿಂದೂಗಳನ್ನು ರಕ್ಷಿಸಿಲ್ಲ. ಅವರು ಕಟ್ಟರ್ ಮುಸಲ್ಮಾನರಾಗಿದ್ದಾರೆ. 2009-10 ರಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಂಗ್ಲಾದೇಶದ ಸೇನೆಯು ಭಾರತದ 5 ಸೈನಿಕರನ್ನು ಕೊಂದುಹಾಕಿತ್ತು. ಈ ವಿಷಯಕ್ಕೆ ಪ್ರಧಾನಿ ಶೇಖ್ ಹಸೀನಾ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ಷಮೆಯನ್ನು ಕೋರಿದ್ದರು. ಆದರೆ, ವಾಸ್ತವದಲ್ಲಿ ಆ 5 ಸೈನಿಕರಿಗೆ ಬಾಂಗ್ಲಾದೇಶದಲ್ಲಿ ಸಾರ್ವಜನಿಕವಾಗಿ ಗೌರವಿಸಲಾಗಿತ್ತು. ಇದು ಬಹಿರಂಗ ಸತ್ಯ. ‘ಪ್ರಥಮ ಅಲೋ’ ನಂತಹ ಪ್ರತಿಷ್ಠಿತ ವೃತ್ತಪತ್ರಿಕೆಗಳಲ್ಲಿ ಇದರ ಸುದ್ದಿಗಳು ಪ್ರಕಟವಾಗಿದ್ದವು.

ಬಾಂಗ್ಲಾದೇಶ ಹಿಂದೂಗಳಿಗೆ ‘ಕಸಾಯಿಖಾನೆ’!

ಹಿಂದತ್ವನಿಷ್ಟರು ಮಾತು ಮುಂದುವರೆಸುತ್ತಾ, ಶೇಖ್ ಹಸೀನಾ ಅವರು ತಮ್ಮ ಆಡಳಿತಾವಧಿಯಲ್ಲಿ 560 ಮಸೀದಿಗಳನ್ನು ಕಟ್ಟಿಸಿದ್ದರು; ಆದರೆ ಹಿಂದೂಗಳಿಗಾಗಿ ಒಂದು ದೇವಸ್ಥಾನವನ್ನೂ ಕಟ್ಟಿಸಿಲ್ಲ. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶವು ಹಿಂದೂಗಳಿಗೆ ‘ಕಸಾಯಿಖಾನೆ’ಯಂತಾಗಿದೆ.

ಬಾಂಗ್ಲಾದೇಶದಲ್ಲಿಯೇ ಸ್ವತಂತ್ರ ‘ಬಂಗಭೂಮಿ’ಯ (ಹಿಂದೂ ರಾಜ್ಯದ) ಸ್ಥಾಪನೆಗೆ ಭಾರತವು ಮುಂದಾಗಬೇಕು! – ಬಾಂಗ್ಲಾದೇಶದ ಹಿಂದೂಗಳ ಬೇಡಿಕೆ

‘ಸನಾತನ ಪ್ರಭಾತ’ವು ಬಾಂಗ್ಲಾದೇಶದ ವಿವಿಧ ಕ್ಷೇತ್ರಗಳ ಹಿಂದೂಗಳೊಂದಿಗೆ ಚರ್ಚಿಸಿದಾಗ, ಎಲ್ಲರೂ ಹಿಂದೂಗಳ ರಕ್ಷಣೆಗಾಗಿ ‘ಸ್ವತಂತ್ರ ಬಂಗಭೂಮಿ (ಹಿಂದೂ ರಾಜ್ಯ) ಸ್ಥಾಪನೆ’ಯೇ ಏಕೈಕ ಪರಿಹಾರ ಎಂದು ಹೇಳಿದರು. ಹಿಂದೂಗಳು, ಬಾಂಗ್ಲಾದೇಶದ ಎರಡೂವರೆ ಕೋಟಿ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ. ಇದರ ಬದಲು, ಬಾಂಗ್ಲಾದೇಶದಲ್ಲಿಯೇ ಹಿಂದೂಗಳಿಗಾಗಿ ಸ್ವತಂತ್ರ ಭೂಮಿಯನ್ನು ಸ್ಥಾಪಿಸಿ, ಅದರಲ್ಲಿ ಅವರ ಪುನರ್ವಸತಿ ಮಾಡಬೇಕು. ಈ ಭೂಮಿಯ ಮಾಲೀಕತ್ವವನ್ನು ಭಾರತ ಸರಕಾರವು ತನ್ನಲ್ಲಿರಿಸಿಕೊಳ್ಳಬೇಕು. ಇದಕ್ಕಾಗಿ ಭಾರತವು ಬಾಂಗ್ಲಾದೇಶದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ಅವಶ್ಯಕವಾಗಿದೆ. ಭಾರತದ ‘ಚಿಕನ್ ನೆಕ್’ ಹತ್ತಿರವಿರುವ ಉತ್ತರ ಬಾಂಗ್ಲಾದೇಶದ ‘ಠಾಕೂರಗಾಂವ- ದಿನಾಜಪುರ-ರಂಗಪುರ ಜಿಲ್ಲೆಗಳ ಪಟ್ಟಿ’ ಅಥವಾ ದಕ್ಷಿಣ-ಪೂರ್ವ ಬಾಂಗ್ಲಾದೇಶದ ‘ಚಿತ್ತಗಾಂವ-ಕೊಮಿಲಾ ಪ್ರದೇಶ’ವನ್ನು ಹಿಂದೂಗಳ ಸ್ವತಂತ್ರ ರಾಜ್ಯಕ್ಕಾಗಿ ಆಯ್ದುಕೊಳ್ಳಬೇಕು.

ಸಂಪಾದಕೀಯ ನಿಲುವು

ಇದು ಎಲ್ಲಾ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಭಾರತದಾದ್ಯಂತ ಇರುವ ಹಿಂದೂಗಳು ಈಗಲಾದರೂ ಬಾಂಗ್ಲಾದೇಶದಲ್ಲಿರುವ ತಮ್ಮ ಬಂಧುಗಳಿಗಾಗಿ ಧ್ವನಿ ಎತ್ತಬೇಕು. ಇದಕ್ಕಾಗಿ, ಅವರು ತಮ್ಮ ಕ್ಷೇತ್ರದ ಶಾಸಕರು ಮತ್ತು ಸಂಸದರ ಮೇಲೆ ಒತ್ತಡ ಹೇರಿ, ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಬೇಕು!