ಅಂಗಡಿಗಳನ್ನು ಒಡೆಯುತ್ತಿರುವ ವೀಡಿಯೊ ವೈರಲ್!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹಿಂದಿನ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ದೇಶದಿಂದ ಪಲಾಯನಗೈದ ನಂತರ, ಹಿಂದೂಗಳ ವಿರುದ್ಧ ನಡೆದ ದೇಶವ್ಯಾಪಿ ದಾಳಿಗಳಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿಂಸಾಚಾರದ ಸರಣಿ ಇನ್ನೂ ನಿಲ್ಲುವ ಚಿಹ್ನೆಗಳು ಕಾಣಿಸುತ್ತಿಲ್ಲ. ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾ ಜಿಲ್ಲೆಯ ನಾಸೀರ್ ನಗರ ಗ್ರಾಮದ ಕಶ್ಯೀಪಾರಾ ಪ್ರದೇಶದಲ್ಲಿ ಫಟಿಕ ದಾಸ, ಸುನಿಲ ದಾಸ ಮತ್ತು ಕೃಷ್ಣ ದಾಸ ಅವರಿಗೆ ಸೇರಿದ ಅಂಗಡಿಗಳನ್ನು ಕಬಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ, ಇದರಲ್ಲಿ ಕೆಲವು ಮುಸ್ಲಿಮರು ಅಂಗಡಿಗಳನ್ನು ಒಡೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. ‘ನ್ಯಾಷನಲ್ ಸಿಟಿಜನ್ ಪಾರ್ಟಿ’ಯ ರಾಜಕೀಯ ನಾಯಕ ಮಹಮ್ಮದ್ ನಜರುಲ್ ಇಸ್ಲಾಂ ಈ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡಗಳನ್ನು ಕೆಡವುತ್ತಿದ್ದಾರೆ ಎಂದು ‘ವಾಯ್ಸ್ ಫಾರ್ ಬಾಂಗ್ಲಾದೇಶಿ ಹಿಂದೂಸ್’ ಸಂಸ್ಥೆ ತನ್ನ ಎಕ್ಸ್ ಖಾತೆಯ ಮೂಲಕ ಮಾಹಿತಿ ನೀಡಿದೆ. ಈ ಘಟನೆಯ ಬಗ್ಗೆ ‘ಹಿಂದೂಗಳ ಭೂಮಿಯ ಹಕ್ಕುಗಳನ್ನು ತುಳಿದುಹಾಕುತ್ತಿರುವಾಗ, ಬಾಂಗ್ಲಾದೇಶ ಸರಕಾರ, ಆಡಳಿತ ಮತ್ತು ಅಂತರರಾಷ್ಟ್ರೀಯ ಸಮುದಾಯ ಏಕೆ ಮೌನವಾಗಿವೆ?’ ಎಂದು ಪ್ರಶ್ನಿಸಲಾಗಿದೆ.
🚨 Hindu land forcibly grabbed in Bangladesh!
NCP leader Mohammad Nazrul Islam has illegally occupied land owned by Fatik Das, Sunil Das & Krishna Das and started construction—against their will.
📍Kashipara, Nasirnagar, Brahmanbaria.
When will this injustice stop?… pic.twitter.com/aJeEN3UtKm— Satyaagrah (@satyaagrahindia) August 2, 2025
ಸಂಪಾದಕೀಯ ನಿಲುವುಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಅವರಿಗೆ ನ್ಯಾಯ ಸಿಗಬೇಕೆಂದು ಭಾರತೀಯ ಹಿಂದೂಗಳು ಏನನ್ನೂ ಮಾಡುತ್ತಿಲ್ಲ. ಕೆಲವು ವರ್ಷಗಳ ನಂತರ ಈ ಪರಿಸ್ಥಿತಿ ಭಾರತೀಯ ಹಿಂದೂಗಳ ಮೇಲೆ ಅಥವಾ ಅವರ ಮುಂದಿನ ಪೀಳಿಗೆಯ ಮೇಲೂ ಬರಬಹುದು ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid