ಕಾಂಗ್ರೆಸ್‌ನ ಹಿಂದೂ ವಿರೋಧಿ ನಾಯಕ ಪೃಥ್ವಿರಾಜ್ ಚವ್ಹಾಣ್ ಅವರು ‘ಸನಾತನಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಿದ ಪ್ರಕರಣ.

ಮುಂಬಯಿ – ‘ಭಗವಾ ಭಯೋತ್ಪಾದನೆ’ ಬದಲು ‘ಸನಾತನಿ’ ಭಯೋತ್ಪಾದನೆ ಅಥವಾ ‘ಹಿಂದುತ್ವವಾದಿ’ ಭಯೋತ್ಪಾದನೆ ಎಂದು ಹೇಳಿ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಶಿವಸೇನೆ ದಾದರ್ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಪ್ರತಿಭಟನೆ ನಡೆಸಿತು.

ದಾದರ್
ಈ ವೇಳೆ ಶಿವಸೇನೆಯ ನಾಯಕಿ ಶಾಯನಾ ಎನ್.ಸಿ., ಶಾಸಕಿ ಡಾ. ಮನೀಷಾ ಕಾಯಂದೆ ಮತ್ತು ನಾಯಕಿ ಶೀತಲ್ ಮಹಾತ್ರೆ ಸೇರಿದಂತೆ ಅಸಂಖ್ಯಾತ ಶಿವಸೇನೆ ಕಾರ್ಯಕರ್ತರು ಬೀದಿಗಿಳಿದರು. ಪೃಥ್ವಿರಾಜ್ ಚವ್ಹಾಣ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಶಿವಸೇನೆ ಕಾರ್ಯಕರ್ತರ ಈ ಮೆರವಣಿಗೆ ತಿಲಕ್ ಭವನದ ಹೊರಗೆ ತಲುಪಿದಾಗ, ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು. ಶಿವಸೇನೆ ಕಾರ್ಯಕರ್ತರು ಮನವಿ ಸಲ್ಲಿಸಲು ತಿಲಕ್ ಭವನಕ್ಕೆ ಹೋಗಲು ಪೊಲೀಸರಲ್ಲಿ ಅನುಮತಿ ಕೋರಿದರು; ಆದರೆ ಪೊಲೀಸರು ನಿರಾಕರಿಸಿದರು. ಇದರಿಂದಾಗಿ ತಿಲಕ್ ಭವನದ ಹೊರಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಜಾಲ್ನಾ
ಇಲ್ಲಿಯೂ ಶಿವಸೇನೆ ಪ್ರತಿಭಟನೆ ನಡೆಸಿ, ಚವ್ಹಾಣ್ ಅವರ ಭಾವಚಿತ್ರವಿರುವ ಪೋಸ್ಟರ್‌ಗೆ ಚಪ್ಪಲಿಗಳಿಂದ ಹೊಡೆದರು. ‘ಮುಂದಿನ ದಿನಗಳಲ್ಲಿ ಪೃಥ್ವಿರಾಜ್ ಚವ್ಹಾಣ್ ಜಾಲ್ನಾಗೆ ಬಂದರೆ, ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲಾಗುವುದು’ ಎಂದು ಶಿವಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಠಾಣೆ
‘ಹಿಂದೂ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ. ಪದೇ-ಪದೇ ಕಾಂಗ್ರೆಸ್‌ನಿಂದ ಸನಾತನ ಧರ್ಮವನ್ನು ಅವಮಾನಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಹಿಂದುತ್ವದ ವಿಷಯದಲ್ಲಿ ನಾವು ಇದನ್ನು ಸಹಿಸುವುದಿಲ್ಲ’ ಎಂದು ಹೇಳಿ ಶಿವಸೇನೆಯ ಯುವಸೇನೆ ಪ್ರತಿಭಟನೆ ನಡೆಸಿತು. ಯುವಸೇನೆಯ ಮಹಾರಾಷ್ಟ್ರ ಪ್ರದೇಶ ಕಾರ್ಯದರ್ಶಿ ಪೂರ್ವೇಶ್ ಸರ್ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯ ವೇಳೆ, ಕಾಂಗ್ರೆಸ್ ಮತ್ತು ಪೃಥ್ವಿರಾಜ್ ಚವ್ಹಾಣ್ ವಿರುದ್ಧ ಘೋಷಣೆಗಳನ್ನು ಕೂಗಿ, ಚವ್ಹಾಣ್ ಅವರ ಭಾವಚಿತ್ರಕ್ಕೆ ಚಪ್ಪಲಿಗಳಿಂದ ಹೊಡೆಯಲಾಯಿತು.
‘2008 मालेगांव बम ब्लास्ट’ मामले में कांग्रेस ने वोट की राजनीति के लिए ‘हिंदू टेरर’ और ‘भगवा आतंकवाद’ के नाम से षड्यंत्र रचा था। अब धीरे-धीरे कांग्रेस का षड्यंत्र जनता के सामने उजागर हो रहा है।
(नागपुर | 1-8-2025)#Maharashtra #Nagpur #MalegaonBlastCase pic.twitter.com/3xIksXkUS6
— Devendra Fadnavis (@Dev_Fadnavis) August 1, 2025
ಪೃಥ್ವಿರಾಜ್ ಚವ್ಹಾಣ್ ಹೇಳಿದ್ದೇನು?ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 7 ಹಿಂದೂಗಳ ನಿರ್ದೋಷಿ ಬಿಡುಗಡೆಯಾದ ನಂತರ ಹೀಗೆ ಹೇಳಿದ್ದರು: “ಬಿಜೆಪಿ ಜನರಿಗೆ ಅಥವಾ ಕಾಂಗ್ರೆಸ್ ಜನರಿಗೂ ನನ್ನ ವಿನಮ್ರ ವಿನಂತಿ ಏನೆಂದರೆ, ದಯವಿಟ್ಟು ‘ಭಗವಾ’ ಪದವನ್ನು ಬಳಸಬೇಡಿ. ಮಹಾರಾಷ್ಟ್ರದಲ್ಲಿ ನಮಗೆ ‘ಭಗವಾ’ ಒಂದು ಪವಿತ್ರ ಪದ. ಅದು ಸ್ವಾತಂತ್ರ್ಯ ಹೋರಾಟದ ಸಂಕೇತ. ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಧ್ವಜ ಭಗವಾ ಆಗಿದೆ. ಭಗವಾ ಬಣ್ಣವು ಜಗದ್ಗುರು ತುಕಾರಾಮ್ ಮಹಾರಾಜ್, ಸಂತಶ್ರೇಷ್ಠ ಜ್ಞಾನೇಶ್ವರ ಮತ್ತು ವಾರಕರಿ ಪಂಥದ ಬಣ್ಣ. ಇದು ಮಹಾರಾಷ್ಟ್ರಕ್ಕೆ ಪ್ರಿಯವಾಗಿದೆ. ಇದಕ್ಕೆ ಯಾರೂ ದಯವಿಟ್ಟು ರಾಜಕೀಯ ಲೇಬಲ್ ನೀಡಬೇಡಿ. ನಿಮಗೆ ಹೇಳಬೇಕಾದರೆ, ‘ಸನಾತನಿ ಭಯೋತ್ಪಾದನೆ’ ಅಥವಾ ‘ಹಿಂದುತ್ವವಾದಿ’ ಭಯೋತ್ಪಾದನೆ ಎಂದು ಹೇಳಿ; ಆದರೆ ಭಗವಾ ಎಂದು ಹೇಳಬೇಡಿ.” |
ಸಂಪಾದಕೀಯ ನಿಲುವು
|
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!