ಕೇಂದ್ರ ಗೃಹ ಸಚಿವ ಅಮಿತ್ ಶಹಾ ಇವರಿಂದ ರಾಜ್ಯಸಭೆಯಲ್ಲಿ ಸ್ಪಷ್ಟನೆ !

ನವದೆಹಲಿ – ಯಾವುದೇ ಹಿಂದೂ ಭಯೋತ್ಪಾದಕ ಆಗಲು ಸಾಧ್ಯವಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರು ಜುಲೈ 30 ರಂದು ರಾಜ್ಯಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
हिन्दू कभी आतंकी नहीं हो सकता…कांग्रेस ने वोटबैंक के लिए भगवा आतंकवाद के झूठे केस बनाये। pic.twitter.com/4zajrEhO9u
— Amit Shah (@AmitShah) July 30, 2025
ಅಮಿತ್ ಶಹಾ ಮಂಡಿಸಿದ ಅಂಶಗಳು
1. ವಿರೋಧ ಪಕ್ಷಗಳು ಮತಗಳಿಗಾಗಿ ಭಯೋತ್ಪಾದನೆಗೆ ಧಾರ್ಮಿಕ ಬಣ್ಣ ನೀಡಲು ಪ್ರಯತ್ನಿಸಿದವು; ಆದರೆ ಭಾರತದ ಜನರು ಈ ಸುಳ್ಳನ್ನು ತಿರಸ್ಕರಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದನ್ನು ಉತ್ತೇಜಿಸಿದವರಲ್ಲಿ ಒಬ್ಬರಾಗಿದ್ದರು.
2. ನವೆಂಬರ್ 26, 2008 ರ ಮುಂಬಯಿ ದಾಳಿಯ ಕುರಿತು ಮಾತನಾಡಿದ ಶಹಾ, ಈ ಭಯೋತ್ಪಾದಕ ದಾಳಿಗೆ ಹಿಂದೂ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಲು ಕೆಲವು ಪಕ್ಷಗಳು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಂಡರು. ಇದೆಲ್ಲವನ್ನೂ ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ. ನಿರಪರಾಧಿಗಳನ್ನು ಜೈಲಿಗೆ ಹಾಕಲಾಯಿತು, ಹಿಂಸಿಸಲಾಯಿತು ಮತ್ತು ಕಳಂಕಿತ ಮಾಡಲಾಯಿತು. ನ್ಯಾಯಕ್ಕಾಗಿ ಅಲ್ಲ, ಚುನಾವಣಾ ಉದ್ದೇಶಕ್ಕಾಗಿ ಪಿತೂರಿ ಮಾಡಲು ಇದೆಲ್ಲವನ್ನೂ ಮಾಡಲಾಯಿತು.
3. ಈ ದೇಶದಲ್ಲಿ ಭಯೋತ್ಪಾದನೆ ಹರಡಲು ಏಕೈಕ ಕಾರಣ ಕಾಂಗ್ರೆಸ್‌ನ ಮತ ರಾಜಕೀಯ. ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಗೆ ತಪ್ಪಿತಸ್ಥನಾಗಿದ್ದ ಮೊಹಮ್ಮದ್ ಅಫ್ಜಲ್‌ನ ಮರಣದಂಡನೆಯನ್ನು ಪಿ. ಚಿದಂಬರಂ ಗೃಹ ಸಚಿವರಾಗಿದ್ದಾಗ ಹಲವು ವರ್ಷಗಳ ಕಾಲ ಜಾರಿಗೊಳಿಸಲು ಸಾಧ್ಯವಾಗಲಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!