ಯಜ್ಞಯಾಗ ಮತ್ತು ಪೂಜೆಗಳ ಮಹತ್ವವನ್ನು ತಿಳಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ !

ದೇವದನ (ಪನವೇಲ) ಸನಾತನದ ಆಶ್ರಮದಲ್ಲಿ ಮಾಡಿದ ‘ದಶದಿಕ್ಪಾಲ ಪೂಜೆ’ ಮತ್ತು ‘ಮೇಧಾ-ದಕ್ಷಿಣಾಮೂರ್ತಿ ಯಾಗ’ ಇವುಗಳ ಸಂದರ್ಭದಲ್ಲಿ ಮಾಡಿದ ಸಂಶೋಧನೆ !

‘ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿದ ಆಜ್ಞೆಗನುಸಾರ ದೇವದ (ಪನವೇಲ, (ಮುಂಬಯಿ)) ನಲ್ಲಿನ ಸನಾತನದ ಆಶ್ರಮದಲ್ಲಿ ೧೬.೩.೨೦೨೪ ರಂದು ‘ದಶದಿಕ್ಪಾಲ ಪೂಜೆ’ ಮತ್ತು ೧೭.೩.೨೦೨೪ ರಂದು ಭಗವಾನ ಶಿವನ ಗುರುರೂಪವಾಗಿರುವ ಶ್ರೀ ದಕ್ಷಿಣಾಮೂರ್ತಿ ಈ ದೇವತೆಯ ಕೃಪೆಗಾಗಿ ‘ಮೇಧಾ-ದಕ್ಷಿಣಾಮೂರ್ತಿ ಯಾಗ’ವನ್ನು ಮಾಡಲಾಯಿತು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಹಾಮೃತ್ಯುಯೋಗ ತಪ್ಪಿ ಅವರಿಗೆ ದೀರ್ಘಾಯುಷ್ಯ ಪ್ರಾಪ್ತವಾಗಬೇಕು, ಹಿಂದೂ ರಾಷ್ಟ್ರದ ನಿರ್ಮಿತಿಯಲ್ಲಿನ ಅಡತಡೆಗಳು ದೂರವಾಗಿ ಆದಷ್ಟು ಬೇಗನೇ ಹಿಂದೂ ರಾಷ್ಟ್ರ ಸ್ಥಾಪನೆ ಯಾಗಬೇಕು, ಹಾಗೆಯೇ ಸನಾತನದ ಸದ್ಗುರುಗಳು, ಸಂತರು ಮತ್ತು ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಅವರ ರಕ್ಷಣೆಯಾಗಬೇಕು’, ಈ ಉದ್ದೇಶದಿಂದ ಈ ಯಾಗವಿಧಿಯನ್ನು ಮಾಡಲಾಯಿತು. ‘ದಶದಿಕ್ಪಾಲ ಪೂಜೆ’ ಮತ್ತು ‘ಮೇಧಾ-ದಕ್ಷಿಣಾಮೂರ್ತಿ ಯಾಗ’ ಇವುಗಳಿಗೆ ಸಂಬಂಧಿಸಿದಂತೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
‘ದಶದಿಕ್ಪಾಲ ಪೂಜೆ’ ಮತ್ತು ‘ಮೇಧಾ-ದಕ್ಷಿಣಾಮೂರ್ತಿ ಯಾಗ’ ಇವುಗಳಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಯಾಗದಲ್ಲಿನ ಘಟಕಗಳು ಮತ್ತು ಅಲ್ಲಿನ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನಕ್ಕಾಗಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಉಪಕರಣದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಲು ಬರುತ್ತದೆ.

೧. ಪರೀಕ್ಷಣೆಯಲ್ಲಿನ ನೊಂದಣಿಯ ವಿವೇಚನೆ

ಮೊದಲನೇ ದಿನ (೧೬.೩.೨೦೨೪ ರಂದು) ಪೂಜೆಯಲ್ಲಿನ ಕಲಶ, ಮಹರ್ಷಿಗಳ ಚಿತ್ರ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಛಾಯಾಚಿತ್ರ ಮತ್ತು ಪುರೋಹಿತರು ಇವರೆಲ್ಲರ ಛಾಯಾಚಿತ್ರಗಳನ್ನು ವಿಧಿಯ ಮೊದಲು ಮತ್ತು ವಿಧಿಯಾದ ನಂತರ ತೆಗೆಯಲಾಯಿತು. ಮರುದಿನ (೧೭.೩.೨೦೨೪ ರಂದು) ಯಾಗದಲ್ಲಿನ ಪೂಜೆಯ ಮಂಡಣೆ, ಪೂಜೆಯಲ್ಲಿನ ಕಲಶ, ಶ್ರೀ ದಕ್ಷಿಣಾಮೂರ್ತಿ ದೇವತೆಯ ಚಿತ್ರ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಛಾಯಾಚಿತ್ರ, ಯಜ್ಞಸ್ಥಳದ ಮಣ್ಣು, ನೀರು ಮತ್ತು ವಾಯು ಇವುಗಳ ಮಾದರಿ, ಹಾಗೆಯೇ ಯಾಗದ ಪುರೋಹಿತರು ಇವರೆಲ್ಲರ ಛಾಯಾಚಿತ್ರಗಳನ್ನು ಯಾಗದ ಮೊದಲು ಮತ್ತು ಯಾಗದ ನಂತರ ತೆಗೆಯಲಾಯಿತು. ಈ ಎಲ್ಲ ಛಾಯಾಚಿತ್ರಗಳನ್ನು ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ ಈ ಉಪಕರಣದಿಂದ ಪರೀಕ್ಷಣೆ ಮಾಡಲಾಯಿತು. ಈ ನೊಂದಣಿ ಮುಂದೆ ಕೊಡಲಾಗಿದೆ.

೧ ಅ. ದಶದಿಕ್ಪಾಲ ಪೂಜೆಯಿಂದ ಪ್ರಕ್ಷೇಪಿಸಿದ ಚೈತನ್ಯದಿಂದ ಪೂಜೆಯ ಘಟಕಗಳ ಮೇಲಾದ ಸಕಾರಾತ್ಮಕ ಪರಿಣಾಮ : ಪೂಜೆಯ ನಂತರ ಪುರೋಹಿತರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು. ಇತರ ಘಟಕಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ ಮತ್ತು ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಅನೇಕ ಪಟ್ಟು ಹೆಚ್ಚಾಯಿತು. ಇದು ಮುಂದಿನ ನೊಂದಣಿಯಿಂದ ಗಮನಕ್ಕೆ ಬರುತ್ತದೆ.

೧ ಆ. ಮೇಧಾ-ದಕ್ಷಿಣಾಮೂರ್ತಿ ಯಾಗದಿಂದ ಪ್ರಕ್ಷೇಪಿಸಿದ ಚೈತನ್ಯದಿಂದ ಯಾಗದಲ್ಲಿನ ಘಟಕಗಳ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮವಾಯಿತು : ಯಾಗದ ನಂತರ ಘಟಕಗಳಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ಇದು ಮುಂದೆ ಕೊಟ್ಟಿರುವ ನೊಂದಣಿಯಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯ ನೊಂದಣಿಗಳ ಆಧ್ಯಾತ್ಮಿಕ ವಿಶ್ಲೇಷಣೆ

ಅ. ಪುರೋಹಿತರು ದಶದಿಕ್ಪಾಲ ಪೂಜೆ ಮತ್ತು ಮೇಧಾ-ದಕ್ಷಿಣಾಮೂರ್ತಿ ಯಾಗಗಳನ್ನು ಭಾವಪೂರ್ಣವಾಗಿ ಮಾಡಿ ದರು. ಆದ್ದರಿಂದ ಪೂಜೆಯಲ್ಲಿನ ಕಲಶ, ಮಹರ್ಷಿಗಳ ಚಿತ್ರ, ಪೂಜೆಯಲ್ಲಿನ ದಕ್ಷಿಣಾಮೂರ್ತಿ ದೇವತೆಯ ಚಿತ್ರ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಛಾಯಾಚಿತ್ರದಲ್ಲಿನ ಚೈತನ್ಯ ಕಾರ್ಯನಿರತವಾಗಿ ಅದು ವಾತಾವರಣದಲ್ಲಿ ಪ್ರಕ್ಷೇಪಿಸಿತು. ಆದ್ದರಿಂದ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಪ್ರಮಾಣದಲ್ಲಿ ಹೆಚ್ಚಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು. ಇದರಿಂದ ಯಜ್ಞಯಾಗಗಳನ್ನು ಭಾವಪೂರ್ಣವಾಗಿ ಮಾಡುವುದರ ಮಹತ್ವವು ಗಮನಕ್ಕೆ ಬರುತ್ತದೆ.

ಆ. ಪುರೋಹಿತರು ಅವರ ಭಾವಕ್ಕನುಸಾರ ದಶದಿಕ್ಪಾಲ ಪೂಜೆ ಮತ್ತು ಮೇಧಾ-ದಕ್ಷಿಣಾಮೂರ್ತಿ ಯಾಗದಲ್ಲಿನ ಚೈತನ್ಯವನ್ನು ಗ್ರಹಣ ಮಾಡಿದರು. ಆದ್ದರಿಂದ ಅವರ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

ಇ. ಯಾಗದಲ್ಲಿನ ಚೈತನ್ಯದ ಸಕಾರಾತ್ಮಕ ಪರಿಣಾಮವು ಅಲ್ಲಿನ ವಾತಾವರಣದ ಮೇಲಾಯಿತು. ಆದ್ದರಿಂದ ಅಲ್ಲಿನ ಮಣ್ಣು, ನೀರು ಮತ್ತು ವಾಯುಮಂಡಲ ಇವುಗಳಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿ ಅವುಗಳಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಿರುವುದು ಅಥವಾ ಅದರಲ್ಲಿ ಹೆಚ್ಚಾಗಿರುವುದು ಕಂಡುಬಂದಿತು. ಇದರಿಂದ ‘ಯಜ್ಞಯಾಗಗಳಿಂದ ವಾತಾವರಣದ ಶುದ್ಧಿಯಾಗಿ ಅದು ಚೈತನ್ಯಮಯವಾಗುತ್ತದೆ’ ಎಂದು ತಿಳಿಯುತ್ತದೆ.

೩. ಸನಾತನದ ಆಶ್ರಮಗಳಲ್ಲಿ ಮಾಡುವ ಯಜ್ಞಗಳ ಮಹತ್ವ

ಸಪ್ತರ್ಷಿಗಳ ಆಜ್ಞೆಯಿಂದ ಮಾಡಿದ ಪೂಜಾವಿಧಿ ಮತ್ತು ಯಜ್ಞಯಾಗಗಳಲ್ಲಿ ಅವರ ಸಂಕಲ್ಪ ಮತ್ತು ಆಶೀರ್ವಾದ ಕಾರ್ಯನಿರತವಿರುತ್ತದೆ. ಈ ಯಜ್ಞಯಾಗಗಳನ್ನು ಸಾತ್ತ್ವಿಕ ಸ್ಥಳಗಳಲ್ಲಿ ಮತ್ತು ಸಮಷ್ಟಿ ಕಲ್ಯಾಣಕ್ಕಾಗಿ ಮಾಡಲಾಗುತ್ತವೆ. ಯಜ್ಞಯಾಗಗಳಿಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಸಾಧಕರು ಸೇವಾಭಾವದಿಂದ ಮಾಡುತ್ತಾರೆ. ಈ ಯಜ್ಞಯಾಗಗಳಿಗೆ ಸನಾತನದ ಸಂತರು ಮತ್ತು ಸದ್ಗುರುಗಳ ವಂದನೀಯ ಉಪಸ್ಥಿತಿ ಇರುತ್ತದೆ. ಸನಾತನದ ಪುರೋಹಿತರು ಯಜ್ಞಯಾಗಗಳನ್ನು ಭಾವಪೂರ್ಣವಾಗಿ ಮಾಡು ತ್ತಾರೆ. ಹಾಗಾಗಿ ಈ ಯಾಗಗಳಿಂದ ಉತ್ತಮ ಫಲಶೃತಿ ಸಿಗುತ್ತದೆ, ಹಾಗೂ ಅವುಗಳ ಹಿಂದಿನ ಉದ್ದೇಶವೂ ಸಫಲವಾಗುತ್ತದೆ, ಎಂದು ಕಂಡುಬಂದಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೭.೨೦೨೪)

ವಿ-ಅಂಚೆ : [email protected]