ದಲ್ಲಾಳಿಗಳಿಂದ ಪಾಸ್‌ಗಳ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮಾರಾಟ !

ನಾಸಿಕ್ – ಜಿಲ್ಲೆಯ ತ್ರಯಂಬಕೇಶ್ವರ ದೇವಾಲಯದಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಭಕ್ತರಿಗೆ ಒಂದು ಗಂಟೆಯಲ್ಲಿ ದರ್ಶನ ಪಡೆಯಲು ಟ್ರಸ್ಟ್ ಹೆಸರಿನಲ್ಲಿ ನಕಲಿ ಪಾಸ್‌ಗಳನ್ನು ಮೊಬೈಲ್‌ನಲ್ಲಿ ನೀಡಲಾಗುತ್ತಿದೆ. ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೆ 700 ರೂಪಾಯಿಗಳಿಗೆ ಈ ಪಾಸ್‌ಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ 30 ರಿಂದ 40 ದಲ್ಲಾಳಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ, ತ್ರಯಂಬಕೇಶ್ವರ ದೇವಾಲಯದಲ್ಲಿ ದರ್ಶನಕ್ಕಾಗಿ ದೇವಾಲಯದಿಂದ 200 ರೂಪಾಯಿಗಳಿಗೆ ಪಾಸ್ ಸಿಗುತ್ತದೆ. ದಲ್ಲಾಳಿಗಳಿಂದ ಗುರುತಿನ ಚೀಟಿ ಇಲ್ಲದೆ ನಕಲಿ ಪಾಸ್‌ಗಳನ್ನು ಪಡೆದವರನ್ನು ಸರದಿಯಲ್ಲಿ ಸೇರಿಸಿ ಒಂದು ಗಂಟೆಯಲ್ಲಿ ದರ್ಶನ ನೀಡಲಾಗುತ್ತದೆ. ದೇವಾಲಯದ ಹೊರಗಿನ ದಲ್ಲಾಳಿಗಳು 1 ಸಾವಿರದ 400 ರೂಪಾಯಿಗಳಿಗೆ ಯಾವುದೇ ಗುರುತಿನ ಚೀಟಿ ಇಲ್ಲದೆ ಪಾಸ್‌ಗಳನ್ನು ನೀಡುತ್ತಿದ್ದಾರೆ.
1. ಸದ್ಯ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದೆ. ಇದರಿಂದಾಗಿ ದೇಶಾದ್ಯಂತ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಇಲ್ಲಿ ಸರದಿಯಲ್ಲಿ ದರ್ಶನಕ್ಕಾಗಿ 8 ರಿಂದ 10 ಗಂಟೆಗಳು ಬೇಕಾಗುತ್ತವೆ. ಆದರೆ, 200 ರೂಪಾಯಿ ನೀಡಿ 5 ರಿಂದ 6 ಗಂಟೆಗಳ ಕಾಲ ಕಾಯ್ದು ದರ್ಶನ ಪಡೆಯಬಹುದು. ಇದರಿಂದಾಗಿ ನಕಲಿ ಪಾಸ್ ನೀಡುವ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.
2. ದಲಾಳಿಗಳು ಕೇವಲ ಲಾಭ ಗಳಿಸುವ ಸಲುವಾಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಯಾರ ಹೆಸರಿನ ಪಾಸ್‌ಗಳನ್ನೂ ಯಾರಿಗಾದರೂ ನೀಡಿ ದೇವಾಲಯದೊಳಗೆ ಬಿಡುತ್ತಿದ್ದಾರೆ; ಆದರೆ ಈ ರೀತಿಯಿಂದಾಗಿ ದೇವಾಲಯದೊಂದಿಗೆ ದೇಶಾದ್ಯಂತದಿಂದ ಬರುವ ಭಕ್ತರ ಸುರಕ್ಷತೆಯ ಗಂಭೀರ ಸಮಸ್ಯೆ ಉದ್ಭವಿಸಿದೆ.
3. ತ್ರಯಂಬಕೇಶ್ವರದಲ್ಲಿ ಪ್ರಸ್ತುತ 3 ದರ್ಶನ ಪಾಸ್ ಕೇಂದ್ರಗಳಿವೆ. ಮೂರೂ ಸೇರಿ ದಿನಕ್ಕೆ ಕೇವಲ 5 ಸಾವಿರ ಪಾಸ್‌ಗಳ ಕೋಟಾ ಇದೆ. ಅವುಗಳಲ್ಲಿ ಆನ್‌ಲೈನ್ ಪಾಸ್‌ಗಳನ್ನು ಹೊರತುಪಡಿಸಿ ಉಳಿದ ಕೆಲವೇ ಭಕ್ತರಿಗೆ ಪಾಸ್‌ಗಳು ಸಿಗುತ್ತವೆ. ನಂತರ ಕೇಂದ್ರವನ್ನು ಮುಚ್ಚುವುದರಿಂದ ದಲ್ಲಾಳಿಗಳ ಕಾಳಸಂತೆ ವ್ಯವಹಾರ ಪ್ರಾರಂಭವಾಗುತ್ತದೆ.
ಪೊಲೀಸರಲ್ಲಿ ದೂರು ನೀಡುವೆವು !
‘ಆನ್‌ಲೈನ್ ದರ್ಶನ ಪಾಸ್’ಗಳ ‘ಸ್ಕ್ರೀನ್‌ಶಾಟ್’ ತೆಗೆದುಕೊಂಡು ಈ ರೀತಿಯಾಗಿ ಭಕ್ತರಿಗೆ ಮೋಸ ನಡೆಯುತ್ತಿದೆ. ಹೀಗೆ ಮಾಡುವವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ. – ಕೈಲಾಸ್ ಘುಲೆ, ಕಾರ್ಯದರ್ಶಿ, ತ್ರಯಂಬಕ ದೇವಸ್ಥಾನ
ಸಂಪಾದಕೀಯ ನಿಲುವುದಲ್ಲಾಳಿಗಳು ಹಗಲಿನಲ್ಲೇ ಎಲ್ಲರ ಎದುರು ನಡೆಸುತ್ತಿರುವ ಅಕ್ರಮ ಮಾರಾಟವು ಪೊಲೀಸ್ ಆಡಳಿತಕ್ಕೆ ಕಾಣಿಸುತ್ತಿಲ್ಲವೇ? ಪೊಲೀಸರಿಗೆ ದಲ್ಲಾಳಿಗಳೊಂದಿಗೆ ಯಾವುದೇ ಸಂಬಂಧವಿದೆಯೇ? ಎಂದು ಭಕ್ತರು ಪ್ರಶ್ನಿಸಿದರೆ ತಪ್ಪೇನು? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ