ಸಂತ ತುಳಸೀದಾಸರ ಜಯಂತಿ : ರಾಮದರ್ಶನಕ್ಕಾಗಿ ತುಲಸೀದಾಸರ ಬಯಕೆ

ಕೋಟಿ ಕೋಟಿ ನಮನಗಳು

ಶ್ರಾವಣ ಶುಕ್ಲ ಸಪ್ತಮಿ ( ೩೧.೭.೨೦೨೫ )

ಒಂದು ಬಾರಿ ತುಲಸೀದಾಸರಿಗೆ ಪಿಶಾಚಿಯೊಂದರ ಭೇಟಿಯಾಯಿತು. ಮತ್ತು ಅವನು ತುಲಸೀದಾಸರನ್ನು ನೋಡಿ ‘ನಿನಗೆ ಏನು ಬೇಕು ?’ ಎಂದು ಕೇಳಿದನು. ತುಳಸೀದಾಸರು ರಾಮನ ದರ್ಶನ ಮಾಡಿಸೆಂದು ಹೆಳಿದಾಗ, ಪಿಶಾಚಿ ಮುಂದೆ ಮುಂದೆ ಹೋಗಿ “ನೀನು ಪ್ರತಿದಿನ ರಾಮಕಥೆ ಹೇಳುವ ಜಾಗದಲ್ಲಿ ಒಬ್ಬ ವೃದ್ಧ ಬ್ರಾಹ್ಮಣ ಕೈಯಲ್ಲಿ ಲಾಠಿ ಹಿಡಿದು ಎಲ್ಲರಿಗಿಂತ ಮೊದಲು ಬಂದು ಕೂರುತ್ತಾನೆ. ಮತ್ತು ಎಲ್ಲರೂ ಹೋದ ಮೇಲೆ ಹೊರಡುತ್ತಾನೆ, ಅವನೇ ನಿನಗೆ ರಾಮನ ದರ್ಶನ ಮಾಡಿಸಬಹುದು, ಅವನು ವಾಸ್ತವದಲ್ಲಿ ಹನುಮಂತನಾಗಿದ್ದಾನೆ” ಎಂದು ಹೇಳಿ ಅದೃಶ್ಯವಾಯಿತು. ಮರುದಿನ, ಪುರಾಣ ಮುಗಿದು, ಬ್ರಾಹ್ಮಣನು ಹೊರಡುತ್ತಿದ್ದಾಗ ತುಲಸೀದಾಸನು ದಾರಿಯಲ್ಲಿ ಅವನನ್ನು ತಡೆದು ಅವನಿಗೆ ನಮಸ್ಕರಿಸಿದನು. ಬ್ರಾಹ್ಮಣನು, “ನಾನು ಬಡ ಬ್ರಾಹ್ಮಣ, ನಿನಗೆ ಕೊಡಲು ನನ್ನಲ್ಲಿ ಏನೂ ಇಲ್ಲ” ಎಂದು ಹೇಳಿದನು. ತುಲಸೀದಾಸನು, “ನೀನು ಹನುಮಾನ್. ನೀನು ಮಾತ್ರ ನನಗೆ ಶ್ರೀರಾಮನನ್ನು ತೋರಿಸಬಲ್ಲೆ” ಎಂದನು. ಹನುಮಂತನು ತುಲಸೀದಾಸರನ್ನು ವಾಲ್ಮೀಕಿಯ ಅವತಾರವೆಂದು ಗುರುತಿಸಿದನು. ಅವನು ತುಲಸೀದಾಸರನ್ನು ಪ್ರೀತಿಯಿಂದ ಅಪ್ಪಿಕೊಂಡನು. ಶೀಘ್ರದಲ್ಲೇ ರಾಮನ ದರ್ಶನ ಮಾಡಿಸುವುದಾಗಿ ಭರವಸೆ ನೀಡಿ ಕಣ್ಮರೆಯಾದನು. ಹನುಮಂತನು ಶ್ರೀ ರಾಮಚಂದ್ರನಿಗೆ, “ನಿಮ್ಮ ಆದೇಶದಂತೆ ವಾಲ್ಮೀಕಿ ತುಲಸೀದಾಸರ ರೂಪವನ್ನು ಪಡೆದಿದ್ದಾನೆ. ಅವನು ನಿನ್ನನ್ನು ನೋಡಲು ತುಂಬಾ ಕಾತುರನಾಗಿದ್ದಾನೆ” ಎಂದು ಹೇಳಿದನು. ಆಗ ಭಗವಾನ್ ಶ್ರೀ ರಾಮನು ವಾಲ್ಮೀಕಿ ವಿವರಿಸಿದ ರೂಪದಲ್ಲಿ ತುಲಸೀದಾಸರಿಗೆ ಕಾಣಿಸಿಕೊಂಡು ಅವರನ್ನು ಅಪ್ಪಿಕೊಂಡು ಹಣೆಯ ಮೇಲೆ ಕೈಯಿಟ್ಟು ಕಣ್ಮರೆಯಾದನು.