ಸಾಧಕರೇ, ನೀವು ಗೆದ್ದಿರಿ, ನಾನು ಸೋತೆನು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧಕರೇ, ಈಶ್ವರಪ್ರಾಪ್ತಿಗೆ ನಾನು ನಿಮಗೆ ದಾರಿ ತೋರಿಸಿದೆ |
ಆದರೆ ದಾರಿಯಲ್ಲಿ ಬಹಳಷ್ಟು ಮುಳ್ಳುಗಳಿವೆ ಎಂದು ನನಗೆ ತಿಳಿದಿರಲಿಲ್ಲ || ೧ ||

ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯನ್ನು ಹೇಳಿದೆ |
ಆದರೆ ಇದರಿಂದ ನಿಮಗೆ ಸಮಾಜದ ವಿರೋಧವನ್ನು ಎದುರಿಸಬೇಕಾಯಿತು || ೨ ||

ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಸಾಧಕರು ದೇವಯಾನ (ಟಿಪ್ಪಣಿ ೧) ಮಾರ್ಗದಿಂದ ಮೋಕ್ಷಕ್ಕೆ ಹೋದರು |
ಆದರೆ ಕಲಿಯುಗದಲ್ಲಿ ಪಿತೃಯಾನ (ಟಿಪ್ಪಣಿ ೨) ಮಾರ್ಗದಿಂದ ಹೋಗಬೇಕಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ || ೩ ||
ಪಿತೃಯಾನ ಮಾರ್ಗವು ಪಾತಾಳದ ಮೂಲಕ ಹೋಗುತ್ತದೆ |

ಆದ್ದರಿಂದ ೨೦೦೧ ರಿಂದ ನಿಮಗೆ ಬಹಳಷ್ಟು ತೊಂದರೆಗಳನ್ನು ಸಹಿಸಬೇಕಾಗುತ್ತಿದೆ || ೪ ||
ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ |
ಹೀಗೆ ನೀವು ವಿವಿಧ ಅಸಹನೀಯ ತೊಂದರೆಗಳನ್ನು ಭೋಗಿಸುತ್ತಿರುವಿರಿ || ೫ ||

ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಬಂದ ಕುರುಡುತನ, ಪ್ರಜ್ಞಾಹೀನತೆ |
ಎಲ್ಲವನ್ನೂ ನೀವು ನಗುಮೊಗದಿಂದ ಸ್ವೀಕರಿಸುತ್ತಿರುವಿರಿ || ೬ ||

ನಿಮ್ಮಲ್ಲಿ ಕೆಲವರಿಗೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಯಿತು |
ಅವು ನಿಮಗೆ ನಿಮ್ಮ ಜೀವನವನ್ನು ಬದುಕಲು ಬಿಡುವುದಿಲ್ಲ || ೭ ||

ನಿಮ್ಮ ಜಾಗದಲ್ಲಿ ನಾನಿದ್ದರೆ | ಸನಾತನವನ್ನು ಬಿಟ್ಟುಬಿಡುತ್ತಿದ್ದೆ || ೮ ||

ಅಸಹನೀಯ ತೊಂದರೆಗಳಿದ್ದರೂ, ರಾತ್ರಿಯನ್ನು ಹಗಲು ಮಾಡಿ |
ಪ್ರಜ್ಞಾಹೀನ ಸ್ಥಿತಿಯಲ್ಲೂ ನೀವು ಸೂಕ್ಷ್ಮ ಜ್ಞಾನವನ್ನು ಪಡೆದಿದ್ದೀರಿ || ೯ ||

ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿದರೂ, ನೀವು ಹಿಂದೂ ಧರ್ಮದ ಮಹತ್ವವನ್ನು ತೋರಿಸಿದಿರಿ |
ಹಿಂದೂ ಧರ್ಮದ ರೂಢಿ-ಪರಂಪರೆಗಳ ಸೂಕ್ಷ್ಮ ಪರೀಕ್ಷೆಗಳನ್ನು ರಾತ್ರಿ-ಹಗಲು ಮಾಡಿದಿರಿ || ೧೦ ||

ನಿರಂತರವಾಗಿ ದೊಡ್ಡ ದೊಡ್ಡ ಆಕ್ರಮಣಗಳನ್ನು ಮಾಡುವ ಕೆಟ್ಟ ಶಕ್ತಿಗಳು ಸೋತವು |
ಮತ್ತು ಸಾಧಕರೇ, ನೀವು ಗೆದ್ದಿರಿ || ೧೧ ||

ಕಲಿಯುಗದಲ್ಲಿ ಪಿತೃಯಾನ ಮಾರ್ಗದ ಮೊದಲ ಪ್ರವಾಸಿಗರು ನಾವು |
ನಾವು ಸಪ್ತಪಾತಾಳಗಳನ್ನು ಭೇದಿಸಿಕೊಂಡು ಮುಂದೆ ಹೋಗಬೇಕಾಗಿದೆ || ೧೨ ||

ಮಾರ್ಗದರ್ಶನವಿಲ್ಲ, ಆಧಾರಕ್ಕಾಗಿ ಗ್ರಂಥಗಳಿಲ್ಲ |
ಈಶ್ವರನ ಮೇಲಿನ ಶ್ರದ್ಧೆಯಿಂದಲೇ ಮುಂದೆ ಹೋಗಬೇಕಾಗಿದೆ || ೧೩ ||

ಕುರುಡರು, ಕಿವುಡರು, ಮೂಕರು, ಅಂಗವಿಕಲರಾದ ಸಾಧಕರನ್ನು ಕರೆದುಕೊಂಡು |
ಸ್ಥೂಲ ಮತ್ತು ಸೂಕ್ಷ್ಮದ ಮೂಲಕ ಹೋರಾಡಿ ಮುಂದೆ ಹೋಗಬೇಕಾಗಿದೆ || ೧೪ ||

ಐದನೇ ಪಾತಾಳದವರೆಗೆ ನಾವು ಯುದ್ಧವನ್ನು ಗೆಲ್ಲುತ್ತಾ ಬಂದಿದ್ದೇವೆ |
ಆದರೆ ೨೦೨೩ ರವರೆಗಿನ ಯುದ್ಧಗಳು ಹೆಚ್ಚು ಭೀಕರವಾಗಿವೆ || ೧೫ ||

ಶ್ರೀರಾಮನು ಮತ್ತು ಪಾಂಡವರು ವನವಾಸವನ್ನು ಭೋಗಿಸಬೇಕಾಯಿತು |
ನಮ್ಮ ಪಾಲಿಗೆ ೨೦೧೯ ರಿಂದ ೨೦೨೩ ರವರೆಗೆ ವನವಾಸವಿದೆ || ೧೬ ||

ಬೇಗ ಅವತಾರ ತಾಳುವಂತೆ ಈಶ್ವರನಲ್ಲಿ ಪ್ರಾರ್ಥಿಸೋಣ |
ಜನತೆಗೆ ಈಶ್ವರಿ ರಾಜ್ಯವನ್ನು ಮತ್ತು ಸಾಧಕರಿಗೆ ಮೋಕ್ಷವನ್ನು ನೀಡಲು || ೧೭ ||

ಗುರುಬಲದ ಮೇಲೆ (ಟಿಪ್ಪಣಿ ೩) ನಾನು ಹೋರಾಡುತ್ತೇನೆ |
ಸೂಕ್ಷ್ಮವಾದ ಗುರುತತ್ತ್ವದ ಬಲದಲ್ಲಿ ನೀವು ಹೋರಾಡುತ್ತೀರಿ || ೧೮ ||

ನಿಮ್ಮನ್ನು ರಕ್ಷಿಸುವ ಸಾಮರ್ಥ್ಯ ನನಗಿಲ್ಲ |
ಆದರೂ ನೀವು ನನ್ನ ಮೇಲೆ ಶ್ರದ್ಧೆ ಇಟ್ಟಿರುವಿರಿ || ೧೯ ||

ನನ್ನ ಜಾಗದಲ್ಲಿ ನೀವಿದ್ದಿದ್ದರೆ ಮತ್ತು ನಿಮ್ಮ ಜಾಗದಲ್ಲಿ ನಾನಿದ್ದರೆ |
ನಾನು ನಿಮ್ಮ ಮೇಲೆ ಶ್ರದ್ಧೆ ಇಡುತ್ತಿರಲಿಲ್ಲ || ೨೦ ||

ಸಾಧಕರೇ, ನೀವು ಗೆದ್ದಿರಿ |
ನಾನು ಸೋತೆನು || ೨೧ || (ಟಿಪ್ಪಣಿ ೪)

ಟಿಪ್ಪಣಿ ೧ – ಸಪ್ತಲೋಕಗಳ ಮೂಲಕ ಈಶ್ವರನ ಕಡೆಗೆ ಹೋಗುವ ಮಾರ್ಗ,
ಟಿಪ್ಪಣಿ ೨ – ಸಪ್ತಪಾತಾಳಗಳ ಮೂಲಕ ಈಶ್ವರನ ಕಡೆಗೆ ಹೋಗುವ ಮಾರ್ಗ,
ಟಿಪ್ಪಣಿ ೩ – ಪ.ಪೂ. ಭಕ್ತರಾಜ ಮಹಾರಾಜರ ಬಲದ ಮೇಲೆ,
ಟಿಪ್ಪಣಿ ೪ – ಹನುಮಂತನಂತೆ ಸಮರ್ಪಣಾ ಭಾವ ಇರುವವರಿಗೆ ಮಾತ್ರ ಪ.ಪೂ. ಡಾಕ್ಟರರು ಹೇಳುತ್ತಾರೆ, ‘ಸಾಧಕರೇ, ನೀವು ಗೆದ್ದಿರಿ, ನಾನು ಸೋತೆನು !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ (೧೮.೬.೨೦೦೬)