
ಸೂರ್ಯೋದಯವಾದೊಡನೆ ಹೂವುಗಳು ಅರಳುತ್ತವೆ; ಆದರೆ ಸೂರ್ಯನು ‘ಇದನ್ನು ನಾನು ಮಾಡಿದೆ’ ಎಂದು ಹೇಳುವುದಿಲ್ಲ ! ಪರಾತ್ಪರ ಗುರು ಡಾ. ಜಯಂತ ಆಠವಲೆರೂಪಿ ಧರ್ಮಸೂರ್ಯನ ವಿಷಯದಲ್ಲಿಯೂ ಹೀಗೆಯೇ ಇದೆ ! ವಿವಿಧ ನಾಡಿಪಟ್ಟಿಗಳ ಮೂಲಕ ಮಹರ್ಷಿಗಳು ಮತ್ತು ಅನೇಕ ಸಂತರೂ, ‘ಭೂಮಿಯ ಮೇಲೆ ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನನವಾಗಿದ್ದು ಅವರ ಮೂಲಕವೇ ಆ ಕಾರ್ಯವಾಗಲಿದೆ’, ಎಂದು ಹೇಳಿದ್ದಾರೆ. ಅವರ ಸ್ಥೂಲದಲ್ಲಿನ ಕಾರ್ಯವು ಕೇವಲ ಶೇ. ೩೦ ರಷ್ಟಿದೆ, ಆದರೆ ಸೂಕ್ಷ್ಮದಲ್ಲಿನ ಕಾರ್ಯವು ಶೇ. ೭೦ ರಷ್ಟಿದೆ. ಪರಾತ್ಪರ ಗುರು ಡಾಕ್ಟರರಂತಹ ಅತ್ಯುಚ್ಚ ಕೋಟಿಯ ಸಂತರ ಅವ್ಯಕ್ತ ಸಂಕಲ್ಪ ಮತ್ತು ಅಸ್ತಿತ್ವದಿಂದ ಎಲ್ಲ ಕಾರ್ಯವೂ ತಾನಾಗಿಯೇ ನಡೆಯುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಸನಾತನದ ಸಂತರು ಮತ್ತು ಸಾಧಕರಿಗೂ ಹೆಜ್ಜೆ ಹೆಜ್ಜೆಗೂ ಇದರ ಅನುಭವವಾಗುತ್ತಿರುವುದರಿಂದ, ‘ಪರಾತ್ಪರ ಗುರು ಡಾಕ್ಟರರೇ ನಮ್ಮಿಂದ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಸಂತಸಂಘಟನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ’ ಎಂಬ ಭಾವ ವನ್ನು ಹೊಂದಿದ್ದಾರೆ. ಪರಾತ್ಪರ ಗುರು ಡಾಕ್ಟರರೂಪಿ ಧರ್ಮಸೂರ್ಯನಿಗೆ ಸೇವೆಯ ರೂಪದಲ್ಲಿ ಅರ್ಘ್ಯ ನೀಡುವ ಅವಕಾಶವನ್ನೂ ಅವರೇ ನೀಡುತ್ತಿದ್ದಾರೆ; ಆದ್ದರಿಂದ ಎಲ್ಲಾ ಸಾಧಕರು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಪರಾತ್ಪರ ಗುರು ಡಾಕ್ಟರರ ಚರಣ ಗಳಲ್ಲಿ ಕೋಟಿಶಃ ಕೃತಜ್ಞರಾಗಿದ್ದೇವೆ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !