ಜೀವಂತವಾಗಿರುವಾಗಲೇ ಸಕ್ಸೆಶನ್ ಸರ್ಟಿಫಿಕೇಟ್ (ಉತ್ತರಾಧಿಕಾರ ಪ್ರಮಾಣಪತ್ರ) ಏಕೆ ಸಿಗಬಾರದು ?

ಭಾರತೀಯ ಕಾನೂನಿನ ಪ್ರಕಾರ ವ್ಯಕ್ತಿಯು ಜೀವಂತ ಇರುವಾಗ ಮತ್ತು ಆತನ ಮರಣದ ನಂತರ ಕಾನೂನುಬದ್ಧವಾಗಿ ಅಗತ್ಯವಿರುವ ಅನೇಕ ಕಾಗದಪತ್ರಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಆತನ ಕುಟುಂಬದ ಸದಸ್ಯರ ಉಲ್ಲೇಖವಿರುತ್ತದೆ. ಕುಟುಂಬದ ಸದಸ್ಯರು ಎಂದರೆ ನಾವು ವಾರಸುದಾರರು ಎಂದು ಕರೆಯಬಹುದು. ಉದಾಹರಣೆಗೆ, ಯಾವುದೇ ವಾರಸುದಾರರ ಆಸ್ತಿಯು ಅವರ ಹೆಸರಿನಲ್ಲಿದ್ದರೆ, ಅಂದರೆ ಕಾನೂನುಬದ್ಧವಾಗಿ ಇವರೇ ನನ್ನ ವಾರಸುದಾರರು ಮತ್ತು ನನ್ನ ನಂತರ ಏನೇ ಇದ್ದರೂ, ಅದರ ಮಾಲೀಕರಾಗಿ ಇವರೇ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ, ಇಂತಹ ಸ್ವರೂಪದ ಕೆಲವು ದಾಖಲೆಗಳು ಅಥವಾ ಪ್ರಮಾಣಪತ್ರಗಳು ಇರುತ್ತವೆ. ಗೋವಾದಲ್ಲಿ ಮರಣಪತ್ರವನ್ನು ನೋಂದಾಯಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಮತ್ತು ಈ ನೋಂದಾಯಿತ ಮರಣಪತ್ರದಲ್ಲಿ ಯಾರ ಯಾರ ಹೆಸರುಗಳನ್ನು ನಮೂದಿಸಲಾಗಿದೆಯೋ, ಅವರಿಗೆ ಯಾವುದೇ ತೊಂದರೆಯಿಲ್ಲದೆ ಆಸ್ತಿ ಸಿಗುತ್ತದೆ ಮತ್ತು ಯಾವುದೇ ಅಡೆತಡೆಯಿಲ್ಲದೆ ಈ ಪ್ರಕ್ರಿಯೆ ಸುಲಭವಾಗುತ್ತದೆ.

೧. ಸಕ್ಸೆಶನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಉಂಟಾಗುವ ಸಮಸ್ಯೆಗಳು

ನೋಂದಾಯಿತ ಮರಣಪತ್ರ ಇಲ್ಲದಿದ್ದರೆ, ಯಾವ ದಾಖಲೆಗಳ ಮೇಲೆ ಮರಣಪತ್ರವನ್ನು ಮಾಡಲಾಗಿದೆಯೋ, ಅದು ಕೇವಲ ‘ನೋಟರೈಸ್ಡ್ ವಕೀಲರಿಂದ ನೋಟರಿ ಮಾಡಿಸಿದ್ದರೆ, ಅದನ್ನು ಗೋವಾದಲ್ಲಿ ಸ್ವೀಕರಿಸಲಾಗುವುದಿಲ್ಲ. ಈ ಸಂಬಂಧ ಉಚ್ಚ ನ್ಯಾಯಾಲಯದಿಂದ ಪ್ರೊಬೇಟ್ (ಮರಣಪತ್ರ ನಿಜವೆಂದು ನ್ಯಾಯಾಲಯದ ಪ್ರಮಾಣಪತ್ರ) ತನ್ನಿ ಎಂದು ಒತ್ತಾಯಿಸಲಾಗುತ್ತದೆ. ಪ್ರೊಬೇಟ್ ಎಂದರೆ ಅಸಲಿ ಮತ್ತು ನಿಜವಾದ ಎಂದು ದೃಢೀಕರಿಸುವ ಪತ್ರ. ಇದಕ್ಕೆ ಖರ್ಚು ಮಾತ್ರ ಹೆಚ್ಚಾಗುತ್ತದೆ. ಹಾಗಾಗಿ ಈ ತೊಂದರೆಯನ್ನು ತಪ್ಪಿಸಬೇಕಾದರೆ, ನೋಂದಾಯಿತ ಮರಣಪತ್ರ ಮಾಡಿಸುವುದು ಒಳ್ಳೆಯದು ಎಂದು ಜನರು ಮರಣಪತ್ರ ಮಾಡಿಸುತ್ತಾರೆ ಮತ್ತು ಅದು ಯಾವಾಗಲೂ ಉತ್ತಮ ! ದುರದೃಷ್ಟವಶಾತ್ ಯಾರಾದರೂ ಮರಣಪತ್ರ ಮಾಡಿಸದೆ ನಿಧನರಾದರೆ, ಅವರ ವಾರಸುದಾರರನ್ನು ದಾಖಲಿಸಲು ಡೀಡ್ ಆಫ್ ಸಕ್ಸೆಶನ್ನಂತಹ ಜಟಿಲ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ನೋಂದಣಿ ಕಚೇರಿಯಲ್ಲಿ ಡೀಡ್ ಆಫ್ ಸಕ್ಸೆಶನ್ ಮಾಡುತ್ತಾರೆ. ಇದರಲ್ಲಿ ನಿಮ್ಮನ್ನು ತಿಳಿದಿರುವ ೩ ತೃತೀಯ ವ್ಯಕ್ತಿಗಳು, ನಿಮ್ಮ ಮನೆಯ ಹತ್ತಿರ ವಾಸಿಸುವವರು ಹಾಗೂ ನಿಮ್ಮ ಗಂಡ/ಹೆಂಡತಿ, ಮಗ-ಸೊಸೆ, ಮಗಳು, ಅಳಿಯ ಇವರೆಲ್ಲರ ಜನ್ಮ ದೃಢೀಕರಣ ಪತ್ರ, ಆಧಾರ ಕಾರ್ಡ್ ಮತ್ತು ವಿವಾಹ ಪ್ರಮಾಣಪತ್ರ ಮುಂತಾದ ದಾಖಲೆಗಳು ಬೇಕಾಗುತ್ತವೆ. ಇದರಲ್ಲಿ ಒಂದೇ ಒಂದು ದಾಖಲೆ ಇಲ್ಲದಿದ್ದರೂ, ನೋಂದಣಿ ಕಚೇರಿಯಲ್ಲಿ ಕೆಲಸ ಆಗುವುದಿಲ್ಲ. ಬಹಳಷ್ಟು ಬಾರಿ ಹೆಸರಿನ ಸ್ಪೆಲ್ಲಿಂಗ್ನಲ್ಲಿ ತಪ್ಪುಗಳಿರುತ್ತವೆ. ಒಬ್ಬರಿಗೆ ಅನೇಕ ಹೆಸರುಗಳು ಮತ್ತು ಕುಟುಂಬದ ಹೆಸರುಗಳು (ಅಡ್ಡ ಹೆಸರು) ಇರುತ್ತವೆ. ಇದರಿಂದ ಕ್ವೆರಿ (ಸಂದೇಹ) ಉಂಟಾಗಿ ಸಮಯ ವ್ಯರ್ಥವಾಗುತ್ತದೆ. ಎಲ್ಲರೂ ಸಿಸ್ಟಮ್ನಿಂದ (ಯಂತ್ರದಿಂದ) ಬಂಧಿಸಲ್ಪಟ್ಟಿರುತ್ತಾರೆ ಮತ್ತು ಮರಣಹೊಂದಿದ ವ್ಯಕ್ತಿಯ ನಂತರ ಉಳಿದಿರುವ ವಾರಸುದಾರರು ನೋಂದಣಿಗಾಗಿ ಸಿಲುಕಿಕೊಂಡಿರುತ್ತಾರೆ. ಸಕ್ಸೆಶನ್ ಡೀಡ್ಗಾಗಿ ಒಂದು ದೊಡ್ಡ ತಂಡವೇ ಕೆಲಸ ಮಾಡಬೇಕಾಗುತ್ತದೆ. ಸಮಯ, ಶ್ರಮ, ಹಣ ಬಹಳಷ್ಟು ಖರ್ಚಾಗುತ್ತದೆ. ಅದು ಕೈಗೆ ಸಿಕ್ಕಾಗ, ಕಮ್ಯುನಿಯಂ ಆಫ್ ಅಸೆಟ್ (ಆಸ್ತಿಯ ಸಹಭಾಗಿತ್ವ) ತತ್ವದ ಪ್ರಕಾರ ಗೋವಾದಲ್ಲಿ ಆಸ್ತಿ ವಿಭಜನೆಯಾಗುತ್ತದೆ. ನೋಂದಣಿ ಕಚೇರಿಯಲ್ಲಿ ಯಾವುದೇ ಕಾರಣದಿಂದ ವಾರಸುದಾರರ ನೋಂದಣಿ ಆಗದಿದ್ದರೆ, ನ್ಯಾಯಾಲಯದಿಂದ ದಾಸ್ತಾನಿನ ಪಾಲು (ಇನ್ವೆಂಟರಿ ಶೇರ್) ಮಾಡಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಕಷ್ಟಕರ ಮತ್ತು ಜಟಿಲವಾಗಿವೆ.

ನ್ಯಾಯವಾದಿ ಶೈಲೇಶ ಕುಲಕರ್ಣಿ

೨. ಜೀವಂತವಾಗಿರುವಾಗಲೇ ಸಕ್ಸೆಶನ್ ಸರ್ಟಿಫಿಕೇಟ್ ಮಾಡಲು ಅನುಮತಿ ನೀಡುವ ಆವಶ್ಯಕತೆ !

ಇದರಿಂದ ನಮಗೆ ನ್ಯಾಯವಾದಿಗಳಿಗೆ, ಯಾವ ರೀತಿ ಒಬ್ಬ ವ್ಯಕ್ತಿಯು ಜೀವಂತವಾಗಿರುವಾಗ ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಆಧಾರ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಕಾರ್ಡ್ ಮಾಡಿಸುವಂತೆಯೇ, ತಾನು ಜೀವಂತವಾಗಿರುವಾಗಲೇ ಸಕ್ಸೆಶನ್ ಸರ್ಟಿಫಿಕೇಟ್ ಅನ್ನು ನೋಂದಾಯಿತವಾಗಿ ಏಕೆ ಮಾಡಿಸಲು ಸಾಧ್ಯವಿಲ್ಲ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ, ಜೀವಂತವಾಗಿರುವಾಗಲೇ ಕುಟುಂಬದ ಮುಖ್ಯಸ್ಥರು ನೋಂದಣಿ ಕಚೇರಿಯಲ್ಲಿ ವಾರಸುದಾರರ ಹೆಸರನ್ನು ದಾಖಲಿಸಿದರೆ, ಆಕ್ಷೇಪಣೆಗಳನ್ನು ದಾಖಲಿಸಿದರೆ, ಗೆಜೆಟ್ನಲ್ಲಿ ಪ್ರಕಟಿಸಿದರೆ, ಅಂದರೆ ಯಾವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೋ, ಅವೆಲ್ಲವನ್ನೂ ಮೊದಲೇ ಮಾಡಿದರೆ ಮತ್ತು ವಿಥ್ ಡ್ಯೂ ಪ್ರೋಸೆಸ್ ಆಫ್ ರಿಜಿಸ್ಟ್ರೇಷನ್ ಪ್ರಕಾರ ಸಾಕ್ಷಿದಾರರ ಸಮ್ಮುಖದಲ್ಲಿ ನೋಂದಣಿ ಅಧಿಕಾರಿಯ ಅಧೀನದಲ್ಲಿ ಈ ದಾಖಲೆಯನ್ನು ಮಾಡಿದರೆ, ಅದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ. ಗೋವಾದಲ್ಲಿ ಬಹಳಷ್ಟು ಜನರು ಶ್ರೀಮಂತರಾಗಿದ್ದಾರೆ. ಅನೇಕ ಹಿರಿಯ ನಾಗರಿಕರು ಅನೇಕ ಕಡೆಗಳಲ್ಲಿ ನಿಶ್ಚಿತ ಠೇವಣಿಗಳು, ಮ್ಯೂಚುವಲ್ ಫಂಡ್, ಅಂಚೆ ಕಚೇರಿ ಮತ್ತು ಇತರ ಕಡೆಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ಕೆಲವೊಮ್ಮೆ ಜಾಯಿಂಟ್ ಅಕೌಂಟ್ (ಸಂಯುಕ್ತ ಖಾತೆ) ಇರುತ್ತದೆ; ಆದರೆ ಸಂಗಾತಿ ಅಥವಾ ಅವರ ಮರಣದ ನಂತರ ಮತ್ತು ಅವರು ಮರಣಪತ್ರ ಮಾಡಿಸದಿದ್ದರೆ, ಈ ಎಲ್ಲಾ ಹಣವು ಸಿಲುಕಿಕೊಳ್ಳುತ್ತದೆ. ಅದು ಇದ್ದರೂ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಇಲ್ಲಿಂದ ಅನೇಕ ತೊಂದರೆಗಳು ಪ್ರಾರಂಭವಾಗುತ್ತವೆ. ನಾಮನಿರ್ದೇಶಿತ ವ್ಯಕ್ತಿ ಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ವಿವಿಧ ಬ್ಯಾಂಕುಗಳು/ಸಹಕಾರಿ ಸಂಘಗಳು ವಿವಿಧ ದಾಖಲೆಗಳನ್ನು ಕೇಳುತ್ತವೆ. ಹೇರ್ ಶಿಪ್ ಸರ್ಟಿಫಿಕೇಟ್ (ಉತ್ತರಾಧಿಕಾರ ಪ್ರಮಾಣಪತ್ರ) ತನ್ನಿ, ಇಲ್ಲದಿದ್ದರೆ ಸಕ್ಸೆಶನ್ ಡೀಡ್ ತನ್ನಿ, ಇಲ್ಲದಿದ್ದರೆ ಇನ್ವೆಂಟರಿ ಡಿಗ್ರಿ ತನ್ನಿ, ಹೀಗೆ ಅನೇಕ ನೆಪಗಳನ್ನು ನೀಡಲಾಗುತ್ತದೆ. ಇಲ್ಲಿ ಸರಕಾರದ ಜವಾಬ್ದಾರಿ ಬರುತ್ತದೆ. ವಾರಸು ಹಕ್ಕು ನೋಂದಣಿಗಾಗಿ ಸರಕಾರಿ ಆದೇಶ ಹೊರಡಿಸಿ ಎಲ್ಲಾ ಬ್ಯಾಂಕುಗಳು, ಸಹಕಾರಿ ಸಂಘಗಳಿಗೆ ಒಂದು ನಿಯಮಾವಳಿಯನ್ನು ರೂಪಿಸಿ ಕ್ರಮಬದ್ಧತೆ ತರಬೇಕು.

೩. ಸಕ್ಸೆಶನ್ ಸರ್ಟಿಫಿಕೇಟ್ಗಿ‌ಗಾ ಸರಕಾರ ಮುಂದಾಳತ್ವ ವಹಿಸುವುದು ಆವಶ್ಯಕ !

ಜೀವಂತವಾಗಿರುವಾಗಲೇ ಕೆಲವು ನೋಂದಾಯಿತ ದಾಖಲೆಗಳನ್ನು (ಸರ್ಟಿಫೈಡ್ ಡಾಕ್ಯುಮೆಂಟ) ಸಿದ್ಧಪಡಿಸಿದರೆ ಮತ್ತು ಅದರಲ್ಲಿ ವಾರಸುದಾರರ ಹೆಸರನ್ನು ವ್ಯವಸ್ಥಿತವಾಗಿ ದಾಖಲಿಸಿದರೆ ಮತ್ತು ಆ ದಾಖಲೆಗಳ ಬಳಕೆಯನ್ನು ಸೂಕ್ತ ಎಂದು ಪರಿಗಣಿಸಿದರೆ, ಸಾಮಾನ್ಯ ಜನರಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ. ಒಂದು ವೇಳೆ ಶಾಸನ ನಿಮ್ಮ ಬಾಗಿಲಿಗೆ ಬರದಿದ್ದರೂ ಪರವಾಗಿಲ್ಲ; ಆದರೆ ಸಕ್ಸೆಶನ್ ಸರ್ಟಿಫಿಕೇಟ್ ಅನ್ನು ಜೀವಂತವಾಗಿರುವಾಗಲೇ ಮಾಡುವುದನ್ನು ಪ್ರಾರಂಭಿಸಿದರೆ, ಜನರು ಸರಕಾರಕ್ಕೆ ತುಂಬು ಹೃದಯದಿಂದ ಹಾರೈಸುತ್ತಾರೆ ಮತ್ತು ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಒಂದು ವೇಳೆ ಭೂಮಿ/ಮನೆ/ಆಸ್ತಿಯನ್ನು ವಾರಸುದಾರರ ಹೆಸರಿಗೆ ವರ್ಗಾಯಿಸಲು ಸ್ವಲ್ಪ ಸಮಯ ತೆಗೆದುಕೊಂಡರೂ ಅದು ನಡೆಯುತ್ತದೆ, ಆದರೆ ಬ್ಯಾಂಕ್/ಸಹಕಾರಿ ಸಂಘಗಳಲ್ಲಿ ಸಿಲುಕಿಕೊಂಡಿರುವ ಆದರೆ ಹಿಂಪಡೆಯಲಾಗದ ಹಣವನ್ನು ಪಡೆಯಲು ಬಹಳಷ್ಟು ಕಷ್ಟಪಡಬೇಕಾಗುತ್ತದೆ, ಇದು ಸುಲಭವಾಗಬೇಕು. ಸರಕಾರವು ಈ ವಿಷಯದ ಬಗ್ಗೆ ಗಂಭೀರತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಸಕ್ಸೆಶನ್ ಸರ್ಟಿಫಿಕೇಟ್ಗಾಗಿ ಒಂದು ವ್ಯವಸ್ಥೆಯನ್ನು ಸಿದ್ಧಪಡಿಸಬೇಕು, ಅಫಿಡವಿಟ್ ತೆಗೆದುಕೊಳ್ಳಬೇಕು; ಎಲ್ಲರ ಹೆಸರುಗಳು, ಸಂಬಂಧಪಟ್ಟ ವಾರಸುದಾರರ ದಾಖಲೆಗಳನ್ನು ಸಂಗ್ರಹಿಸಬೇಕು, ಹೆಸರುಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ ಅವುಗಳನ್ನು ಸರಿಪಡಿಸಿ ಅದನ್ನು ಗೆಜೆಟ್ನಲ್ಲಿ ಪ್ರಕಟಿಸಬೇಕು, ಅದರ ಬಗ್ಗೆ ಯಾರಿಗಾದರೂ ದೂರುಗಳಿದ್ದರೆ ಅವುಗಳನ್ನು ಸಹ ಸ್ವೀಕರಿಸಬೇಕು ಮತ್ತು ನಂತರ ಸಕ್ಸೆಶನ್ ಸರ್ಟಿಫಿಕೇಟ್ ನೀಡಬೇಕು. ಇದು ಅತ್ಯಂತ ಪ್ರಮುಖವಾದ ದಾಖಲೆಯಾಗಿದ್ದು, ಅದು ಪ್ರತಿಯೊಂದು ಕುಟುಂಬಕ್ಕೂ ವರದಾನವಾಗಲಿದೆ.
– ನ್ಯಾಯವಾದಿ ಶೈಲೇಶ ಕುಲಕರ್ಣಿ, ಕುರ್ಟಿ, ಫೊಂಡಾ, ಗೋವಾ.