ಇಸ್ರೇಲ್ ದೇಶದ ಓರ್ವ ಹಿರಿಯ ಅಧಿಕಾರಿಯ ಹೇಳಿಕೆ

ಟೆಲ್ ಅವೀವ್ (ಇಸ್ರೇಲ್) – ಕಳೆದ ತಿಂಗಳು ಅಮೇರಿಕಾ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರವೂ, ಇರಾನ್ ನ ಅಣುಶಕ್ತಿ ಕೇಂದ್ರಗಳು ಸಂಪೂರ್ಣವಾಗಿ ನಾಶವಾಗಿಲ್ಲ ಮತ್ತು ಇರಾನ್ ಇನ್ನೂ ಯುರೇನಿಯಂ ಶುದ್ಧೀಕರಣ ಸಾಮರ್ಥ್ಯವನ್ನು ಪಡೆಯಬಹುದು ಎಂದು ಇಸ್ರೇಲ್ ನ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯು, “ಅಮೇರಿಕಾದ ದಾಳಿಯಿಂದ ಇರಾನ್ ನ ಅಣುಶಕ್ತಿ ಕೇಂದ್ರಗಳು ನಾಶವಾಗಿವೆ ಮತ್ತು ಇರಾನ್ ಗೆ ಯುರೇನಿಯಂ ಶುದ್ಧೀಕರಣ ಸಾಮರ್ಥ್ಯವನ್ನು ಮರಳಿ ಪಡೆಯಲು ಹಲವು ವರ್ಷಗಳು ಬೇಕಾಗುತ್ತವೆ” ಎಂಬ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಅಲ್ಲಗಳೆಯುತ್ತದೆ.
1. ‘ಬಂಕರ್ ಬಸ್ಟರ್ ಬಾಂಬ್’ಗಳನ್ನು ತಯಾರಿಸುವ ಅಮೇರಿಕನ್ ಕಂಪನಿ ಕೂಡ, ಈ ಬಾಂಬ್ ಗಳು ವಾಸ್ತವವಾಗಿ ಗುರಿಯನ್ನು ಭೇದಿಸಿರುವ ಕುರಿತು ಪ್ರಸ್ತುತ ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದೆ.
2. ಇಸ್ರೇಲ್ ನ ಅಧಿಕಾರಿಯ ಪ್ರಕಾರ, ಇರಾನ್ ತನ್ನಲ್ಲಿರುವ ಯುರೇನಿಯಂ ಸಂಗ್ರಹವನ್ನು ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಅಣುಶಕ್ತಿ ಕೇಂದ್ರಗಳಲ್ಲಿ ಸಂಗ್ರಹಿಸಿತ್ತು ಮತ್ತು ಅಮೇರಿಕಾದ ದಾಳಿಗೆ ಮುನ್ನ ಅದನ್ನು ಸ್ಥಳಾಂತರಿಸಿರಲಿಲ್ಲ. ಆದರೂ, ಕೆಲವು ತಜ್ಞರ ಪ್ರಕಾರ, ಈ ಸಂಗ್ರಹಕ್ಕೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

3. ಇರಾನ್ ನ ಹೊಸ ಅಧ್ಯಕ್ಷ ಮಸೂದ್ ಪೇಜೆಶ್ಕಿಯಾನ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ, ಅಮೇರಿಕಾದ ವೈಮಾನಿಕ ದಾಳಿಯಿಂದ ಇರಾನ್ ನ ಅಣುಶಕ್ತಿ ಕೇಂದ್ರಗಳು ಎಷ್ಟು ನಾಶವಾಗಿವೆ ಎಂದರೆ, ಅಧಿಕಾರಿಗಳಿಗೆ ಇನ್ನೂ ನಷ್ಟದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಅಮೇರಿಕಾ ಇರಾನಿನ ಅಣುಶಕ್ತಿ ಕೇಂದ್ರಗಳನ್ನು ನಾಶಪಡಿಸಿದೆ ಎಂದು ಕೇವಲ ಜಂಬ ಕೊಚ್ಚಿಕೊಂಡಿದೆಯೆಂದು ತಿಳಿಯಬಹುದೇ? |
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump